Maruti Wagon R Waltz ಎಡಿಷನ್ ಬಿಡುಗಡೆ, ಬೆಲೆಗಳು 5.65 ಲಕ್ಷ ರೂ.ನಿಂದ ಪ್ರಾರಂಭ
ಮಾರುತಿ ವ್ಯಾಗನ್ ಆರ್ ಗಾಗಿ dipan ಮೂಲಕ ಸೆಪ್ಟೆಂಬರ್ 20, 2024 06:17 pm ರಂದು ಪ್ರಕಟಿಸಲಾಗಿದೆ
- 49 Views
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್ ಟಾಪ್-ಸ್ಪೆಕ್ ಝೆಡ್‌ಎಕ್ಸ್‌ಐ ಆವೃತ್ತಿಯಲ್ಲಿ ನೀಡಲಾಗುವ ಕೆಲವು ಫೀಚರ್‌ಗಳೊಂದಿಗೆ ಮತ್ತು ಕೆಲವು ಹೆಚ್ಚುವರಿ ಎಕ್ಸಸ್ಸರಿಗಳೊಂದಿಗೆ ಬರುತ್ತದೆ
-
ಹೊಸ ಮಾರುತಿ ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್‌ನ ಬೆಲೆಗಳು 5.65 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ.
-
ಇದನ್ನು ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ.
-
ಇದು ಫಾಗ್ ಲ್ಯಾಂಪ್‌ಗಳು ಮತ್ತು ಗ್ರಿಲ್‌ಗಾಗಿ ಕ್ರೋಮ್ ಇನ್‌ಸರ್ಟ್‌ಗಳಂತಹ ಹೊಸ ಆಕ್ಸಸ್ಸರಿಗಳನ್ನು ಒಳಗೊಂಡಿದೆ.
-
ಇಂಟಿರಿಯರ್‌ನ ಆಪ್‌ಡೇಟ್‌ಗಳಲ್ಲಿ ಸೀಟ್ ಕವರ್‌ಗಳು, ಟಚ್‌ಸ್ಕ್ರೀನ್ ಮತ್ತು ನಾಲ್ಕು-ಸ್ಪೀಕರ್‌ನ ಹೊಸ ಸೌಂಡ್ ಸಿಸ್ಟಮ್ ಸೇರಿವೆ.
-
ಎಂಜಿನ್ ಆಯ್ಕೆಗಳಲ್ಲಿ 1-ಲೀಟರ್ (67 ಪಿಎಸ್) ಮತ್ತು 1.2-ಲೀಟರ್ (90 ಪಿಎಸ್) ಸೇರಿವೆ, ಜೊತೆಗೆ ಸಿಎನ್‌ಜಿ ಆವೃತ್ತಿಯು 57 ಪಿಎಸ್‌ಅನ್ನು ಉತ್ಪಾದಿಸುತ್ತದೆ.
ಹೊಸ ಮಾರುತಿ ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದೆ, ಇದರ ಬೆಲೆ ರೂ 5.65 ಲಕ್ಷದಿಂದ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಪ್ರಾರಂಭವಾಗುತ್ತದೆ. ಈ ಲಿಮಿಟೆಡ್ ಎಡಿಷನ್‌ನ ಪೂರ್ಣ ವೇರಿಯಂಟ್-ವಾರು ಬೆಲೆ ಪಟ್ಟಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಇದು Lxi, Vxi ಮತ್ತು Zxi ಆವೃತ್ತಿಗಳಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್‌ನೊಂದಿಗೆ ಹೊಸದೇನಿದೆ ಎಂಬುದರ ಒಂದು ಕ್ವಿಕ್ ರೌಂಡ್‌ಅಪ್ ಇಲ್ಲಿದೆ:
ಆಕ್ಸೆಸರಿ-ಭರಿತ ಎಕ್ಸ್‌ಟಿರಿಯರ್
ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್‌ನ ಹೊರಭಾಗದ ವಿನ್ಯಾಸವು ಹೆಚ್ಚಾಗಿ ಬದಲಾಗದೆ ಉಳಿದಿದೆ, ಆದರೆ ಇದು ಕೆಲವು ಹೊಸ ಆಕ್ಸಸ್ಸರಿಗಳನ್ನು ಒಳಗೊಂಡಿದೆ:
-
ಮುಂಭಾಗದ ಫಾಗ್ ಲ್ಯಾಂಪ್‌ಗಳು
-
ವೀಲ್ ಆರ್ಚ್ ಕ್ಲಾಡಿಂಗ್
-
ಬಂಪರ್ ಪ್ರೊಟೆಕ್ಟರ್
-
ಸೈಡ್ ಸ್ಕರ್ಟ್
-
ಬಾಡಿ ಸೈಡ್ ಮೋಲ್ಡಿಂಗ್
-
ಕ್ರೋಮ್ ಗ್ರಿಲ್ ಇನ್ಸರ್ಟ್
-
ಡೋರ್ ವೈಸರ್
ವ್ಯಾಗನ್ ಆರ್ ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳೊಂದಿಗೆ ಟಾಲ್‌ಬಾಯ್ ವಿನ್ಯಾಸವನ್ನು ಹೊಂದಿದೆ, ಜೊತೆಗೆ ಅಲಾಯ್ ವೀಲ್‌ಗಳು (ಝೆಡ್‌ಎಕ್ಸ್‌ಐ ಪ್ಲಸ್ ಆವೃತ್ತಿಯಲ್ಲಿ ಮಾತ್ರ, ಇತರ ಆವೃತ್ತಿಗಳು ಸ್ಟೀಲ್ ಚಕ್ರಗಳನ್ನು ಪಡೆಯುತ್ತವೆ) ಮತ್ತು ಹ್ಯಾಲೊಜೆನ್ ಟೈಲ್ ಲೈಟ್‌ಗಳನ್ನು ಹೊಂದಿದೆ.
ಅದೇ ಇಂಟಿರಿಯರ್, ಆದರೆ ವಿಭಿನ್ನ ಮೆಟಿರಿಯಲ್
ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್‌ನ ಇಂಟಿರಿಯರ್ ರೆಗುಲರ್ ಮೊಡೆಲ್‌ನಂತೆಯೇ ಇದ್ದು, ಆದರೆ ಹೊಸ ಸೀಟ್ ಕವರ್‌ಗಳನ್ನು ಪಡೆಯುತ್ತದೆ. ಇದು ವಿಎಕ್ಸ್‌ಐ ಮತ್ತು ಝೆಡ್‌ಎಕ್ಸ್‌ಐ ಆವೃತ್ತಿಗಳಿಗೆ ನೀಲಿ ನೆಲದ ಮ್ಯಾಟ್ ಮತ್ತು ಮತ್ತು ಸ್ಟೀರಿಂಗ್ ವೀಲ್ ಕವರ್ ಅನ್ನು ಒಳಗೊಂಡಿದೆ. ಹೆಚ್ಚುವರಿ ಸೌಕರ್ಯಗಳಲ್ಲಿ ಡೋರ್ ಸಿಲ್ ಗಾರ್ಡ್, ಟಿಶ್ಯೂ ಬಾಕ್ಸ್ ಮತ್ತು ಎರಡು-ಪೋರ್ಟ್ ಸ್ಪೀಡ್ ಸ್ಮಾರ್ಟ್‌ಫೋನ್ ಚಾರ್ಜರ್ ಸೇರಿವೆ. ಹೋಲಿಕೆಯಲ್ಲಿ, ಸಾಮಾನ್ಯ ವ್ಯಾಗನ್ ಆರ್ ಬಿಳಿ ಮತ್ತು ಕಪ್ಪು ಡ್ಯುಯಲ್-ಟೋನ್ ಸೀಟ್ ಕವರ್ ಅನ್ನು ಹೊಂದಿದೆ. ಇದಲ್ಲದೆ, ರೆಗುಲರ್ ವ್ಯಾಗನ್ ಆರ್‌ನ ಎಲ್ಲಾ ಫೀಚರ್‌ಗಳನ್ನು ವಾಲ್ಟ್ಜ್ ಎಡಿಷನ್ ಉಳಿಸಿಕೊಂಡಿದೆ.
ಇದನ್ನೂ ಓದಿ: ಹೊಸ ವೇರಿಯೆಂಟ್ ಮತ್ತು ಫೀಚರ್‌ಗಳನ್ನು ಪಡೆಯಲಿರುವ Tata Punch, ಬೆಲೆಯಲ್ಲಿಯೂ ಕೊಂಚ ಏರಿಕೆ !
ಕೆಲವು ಫೀಚರ್‌ಗಳ ಸೇರ್ಪಡೆ
ಮಾರುತಿ ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್ ಮೊದಲಿನಂತೆ ವೇರಿಯೆಂಟ್-ನಿರ್ದಿಷ್ಟವಾದ ಫೀಚರ್‌ಗಳನ್ನು ಪಡೆಯುತ್ತದೆ ಮತ್ತು ಕೆಲವು ಫೀಚರ್‌ಗಳ ಸೇರ್ಪಡೆಗಳೊಂದಿಗೆ ಬರುತ್ತದೆ. ಇದು ಈ ಕೆಳಗಿನವುಗಳನ್ನು ಪಡೆಯುತ್ತದೆ:
-
ಟಚ್‌ಸ್ಕ್ರೀನ್
-
ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ
-
ಮಲ್ಟಿ-ಸ್ಪೀಕರ್ ಸೌಂಡ್ ಸಿಸ್ಟಮ್
ಈ ಎಲ್ಲಾ ಫೀಚರ್‌ಗಳು ಸಂಪೂರ್ಣವಾಗಿ ಲೋಡ್ ಆಗಿರುವ ಝೆಡ್‌ಎಕ್ಸ್‌ಐ ಪ್ಲಸ್ ಆವೃತ್ತಿಯೊಂದಿಗೆ ಈಗಾಗಲೇ ಲಭ್ಯವಿದೆ. Lxi, Vxi ಮತ್ತು Zxi ಆವೃತ್ತಿಗಳ ಆಕ್ಸಸ್ಸರಿಗಳ ಪಟ್ಟಿಗೆ ಬೇರೆ ಯಾವುದೇ ಫೀಚರ್‌ಗಳ ಬದಲಾವಣೆಗಳನ್ನು ಮಾಡಲಾಗಿಲ್ಲ.
ಪವರ್‌ಟ್ರೈನ್ ಆಯ್ಕೆಗಳು
ವ್ಯಾಗನ್ ಆರ್ ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯನ್ನು ನೀಡುತ್ತದೆ: 1-ಲೀಟರ್ ಎಂಜಿನ್ (67 ಪಿಎಸ್ ಮತ್ತು 89 ಎನ್‌ಎಮ್), 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಮ್‌ಟಿ (ಆಟೋಮೆಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ಮತ್ತು 1.2-ಲೀಟರ್ ಎಂಜಿನ್ (90 ಪಿಎಸ್ ಮತ್ತು 113 ಎನ್‌ಎಮ್), 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಮ್‌ಟಿ ಆಯ್ಕೆಯೊಂದಿಗೆ ಲಭ್ಯವಿದೆ.
ಸಿಎನ್‌ಜಿ ಆವೃತ್ತಿಯು 1-ಲೀಟರ್ ಎಂಜಿನ್ (57 ಪಿಎಸ್ ಮತ್ತು 82 ಎನ್‌ಎಮ್) ನೊಂದಿಗೆ ಬರುತ್ತದೆ ಮತ್ತು ಇದು ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಮಾತ್ರ ಹೊಂದಿದೆ.
ಪ್ರತಿಸ್ಪರ್ಧಿಗಳು
ವ್ಯಾಗನ್ ಆರ್ ಬೆಲೆಗಳು 5.54 ಲಕ್ಷ ರೂ.ನಿಂದ 7.33 ಲಕ್ಷ ರೂ.ವರೆಗೆ(ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ. ಇದು ಮಾರುತಿ ಸೆಲೆರಿಯೊ, ಟಾಟಾ ಟಿಯಾಗೊ ಮತ್ತು ಸಿಟ್ರೊಯೆನ್ C3 ಗೆ ಪ್ರತಿಸ್ಪರ್ಧಿಯಾಗಿದೆ.
ಹೆಚ್ಚಿನ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡುವುದನ್ನು ಮಿಸ್‌ಮಾಡ್ಬೇಡಿ
ಇನ್ನಷ್ಟು ಓದಿ : ಮಾರುತಿ ವ್ಯಾಗನ್ ಆರ್ ಆನ್‌ರೋಡ್ ಬೆಲೆ