Login or Register ಅತ್ಯುತ್ತಮ CarDekho experience ಗೆ
Login

Audi Q6 e-tron ಅನಾವರಣ: 625 ಕಿಮೀ ರೇಂಜ್‌ ಹೊಂದಿರುವ ಎಲ್ಲಾ-ಹೊಸ ಎಲೆಕ್ಟ್ರಿಕ್ ಎಸ್‌ಯುವಿ, ಹೊಸ ಇಂಟಿರೀಯರ್‌ ಸಹ ಸೇರ್ಪಡೆ

published on ಮಾರ್ಚ್‌ 20, 2024 08:22 pm by ansh for ಬಿಎಂಡವೋ ix1

ಆಡಿ Q6 e-ಟ್ರಾನ್ ಎಲೆಕ್ಟ್ರಿಕ್ ವಾಹನವಾಗಿದ್ದು, ಪೋರ್ಷೆಯ ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ. ಇದು 94.9 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ.

  • ಆಡಿಯ ಹೊಸ ಎಲೆಕ್ಟ್ರಿಕ್ SUV, Q8 e-ಟ್ರಾನ್, ಅದರ ಎಲೆಕ್ಟ್ರಿಕ್ ವಾಹನ ಶ್ರೇಣಿಯ Q8 e-ಟ್ರಾನ್‌ಗಿಂತ ಕೆಳಗಿನ ಹಂತದಲ್ಲಿದೆ.
  • ಇದು ಎರಡು ವೇರಿಯಂಟ್ ಗಳಲ್ಲಿ ಪದಾರ್ಪಣೆಯನ್ನು ಮಾಡುತ್ತಿದೆ: Q6 e-ಟ್ರಾನ್ ಕ್ವಾಟ್ರೊ ಮತ್ತು SQ6 e-ಟ್ರಾನ್.
  • ಕ್ಯಾಬಿನ್‌ನ ಹೊಸ ಡಿಸೈನ್ ಡ್ಯಾಶ್‌ಬೋರ್ಡ್‌ನಲ್ಲಿ ಇಂಟಿಗ್ರೇಟ್ ಮಾಡಿರುವ ಕರ್ವ್ ಆಗಿರುವ ಸ್ಕ್ರೀನ್ ಗಳನ್ನು ಮತ್ತು ಮುಂಭಾಗದಲ್ಲಿ ಕುಳಿತವರಿಗೆ ಪ್ರತ್ಯೇಕ ಟಚ್‌ಸ್ಕ್ರೀನ್ ಅನ್ನು ನೀಡಲಾಗಿದೆ.
  • ಇದು 94.9 kWh ಬ್ಯಾಟರಿ ಪ್ಯಾಕ್‌ನೊಂದಿಗೆ WLTP-ಕ್ಲೇಮ್ ಮಾಡಿರುವ 625 ಕಿಮೀ ರೇಂಜ್ ಅನ್ನು ನೀಡುತ್ತದೆ.
  • ಭಾರತದ ಮಾರುಕಟ್ಟೆಗೆ 2025 ರಲ್ಲಿ ಬರುವ ಸಾಧ್ಯತೆಯಿದೆ; ಸಂಪೂರ್ಣವಾಗಿ ಲೋಡ್ ಮಾಡಲಾದ ಕ್ವಾಟ್ರೊ ವರ್ಷನ್ ಬೆಲೆಯು ರೂ 80 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋರೂಂ).

Q6 e-ಟ್ರಾನ್ ಎಂಬ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರನ್ನು ಆಡಿ ಇದೀಗ ಬಹಿರಂಗಪಡಿಸಿದೆ. ಇದು ಫೋಕ್ಸ್‌ವ್ಯಾಗನ್ ಗ್ರೂಪ್‌ನ ಹೊಸ PPE (ಪ್ರೀಮಿಯಂ ಪ್ಲಾಟ್‌ಫಾರ್ಮ್ ಎಲೆಕ್ಟ್ರಿಕ್) ಆರ್ಕಿಟೆಕ್ಚರ್ ಅನ್ನು ಆಧರಿಸಿದೆ ಮತ್ತು ಐಷಾರಾಮಿ ಕಾರಿನ ಶ್ರೇಣಿಯಲ್ಲಿ Q8 e-ಟ್ರಾನ್‌ನ ಕೆಳಗೆ ಇದನ್ನು ಇರಿಸಲಾಗಿದೆ.

ಅತ್ಯಂತ ಆಕರ್ಷಕವಾದ ಲುಕ್

Q6 e-ಟ್ರಾನ್ ಅದರ ದೊಡ್ಡ ಗ್ರಿಲ್ ಮತ್ತು ಸ್ಪ್ಲಿಟ್ ಲೈಟ್‌ನಿಂದಾಗಿ ಆಕರ್ಷಕವಾಗಿ ಕಾಣುತ್ತದೆ. LED ಡೇಟೈಮ್ ರನ್ನಿಂಗ್ ಲೈಟ್‌ಗಳು ಮುಂಭಾಗದ ಮೇಲ್ಭಾಗದಲ್ಲಿವೆ. ಗ್ರಾಹಕರು ತಮ್ಮ Q6 e-ಟ್ರಾನ್‌ನಲ್ಲಿ ಮ್ಯಾಟ್ರಿಕ್ಸ್ LED ಹೆಡ್‌ಲೈಟ್‌ಗಳಿಗಾಗಿ ಎಂಟು ವಿಭಿನ್ನ ಲೈಟಿಂಗ್ ಶೈಲಿಗಳನ್ನು ಆಯ್ಕೆ ಮಾಡಬಹುದು.

ಸೈಡ್ ನಿಂದ ನೋಡಿದಾಗ, Q6 e-ಟ್ರಾನ್ ಆಡಿ SUV ಯ ಆಕಾರವನ್ನು ಹೊಂದಿದೆ ಮತ್ತು ಇದು ಆಕರ್ಷಕವಾದ ಅಲೊಯ್ ವೀಲ್ಸ್ ನೊಂದಿಗೆ ಬರುತ್ತದೆ. ಹಿಂಭಾಗದಲ್ಲಿ ನೋಡಿದರೆ, ಇದು ಆರು OLED ಪ್ಯಾನೆಲ್‌ಗಳನ್ನು ಹೊಂದಿರುವ ಕನೆಕ್ಟೆಡ್ OLED ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ, ಇದು ಪ್ರತಿ 10 ಮಿಲಿಸೆಕೆಂಡ್‌ಗಳಿಗೆ ಹೊಸ ಅನಿಮೇಶನ್ ಅನ್ನು ರಚಿಸಲು ಒಟ್ಟು 360 ಸೆಗ್ಮೆಂಟ್ ಗಳನ್ನು ಒಳಗೊಂಡಿದೆ. ಆಡಿಯು Q6 e-ಟ್ರಾನ್‌ನ ಹಿಂಭಾಗದ ಲೈಟ್ ಗಳನ್ನು ಹೆಚ್ಚು ಉಪಯುಕ್ತವಾಗಿಸಿದೆ. ಇದನ್ನು ಅದರ ಹಿಂದೆ ಬರುವ ಕಾರುಗಳಿಗೆ ಸನ್ನೆ ನೀಡಲು ಬಳಸಬಹುದು. ಪ್ರಮುಖ ವಾರ್ನಿಂಗ್ ಚಿಹ್ನೆಗಳನ್ನು ಪ್ರದರ್ಶಿಸುವ ಮೂಲಕ ಇದು ಟ್ರಾಫಿಕ್ ನಲ್ಲಿ ಅಥವಾ ಮುಂದೆ ಸಂಭವಿಸುವ ಅಪಘಾತಗಳ ಕುರಿತು ಹಿಂದೆ ಬರುತ್ತಿರುವ ಕಾರನ್ನು ಎಚ್ಚರಿಸುತ್ತದೆ.

Q6 e-ಟ್ರಾನ್ ಅನ್ನು ಅದರ ಸ್ವಲ್ಪ ಸ್ಪೋರ್ಟಿಯರ್ ವರ್ಷನ್ ಆದ SQ6 e-ಟ್ರಾನ್ ಜೊತೆಗೆ ಬಹಿರಂಗಪಡಿಸಲಾಯಿತು. SQ6 e-ಟ್ರಾನ್ ಹೆಚ್ಚು ಅಥ್ಲೆಟಿಕ್ ಲುಕ್ ಗಾಗಿ ಬ್ಲ್ಯಾಕ್-ಔಟ್ ಎಲಿಮೆಂಟ್ ಗಳು ಮತ್ತು ವಿಭಿನ್ನವಾದ ಅಲೊಯ್ ವೀಲ್ಸ್ ಅನ್ನು ಹೊಂದಿದೆ.

ಹೊಸ PPE ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಮೊದಲ ಆಡಿ ಮಾಡೆಲ್ ಆಗಿರುವ ಇದು, ಈ ಬ್ರ್ಯಾಂಡ್‌ನ ಪ್ರಸ್ತುತ ಟಾಪ್ ಎಲೆಕ್ಟ್ರಿಕ್ SUV ಗೆ ಹೋಲಿಸಿದರೆ ಸೈಜ್ ಹೇಗಿದೆ ಎಂಬುದರ ವಿವರ ಇಲ್ಲಿದೆ:

ಡೈಮೆನ್ಷನ್

ಆಡಿ Q6 e-ಟ್ರಾನ್

ಆಡಿ Q8 e-ಟ್ರಾನ್

ಉದ್ದ

4771 ಮಿ.ಮೀ

4915 ಮಿ.ಮೀ

ಅಗಲ

1993 ಮಿ.ಮೀ

1976 ಮಿ.ಮೀ

ಎತ್ತರ

1648 ಮಿ.ಮೀ

1632 ಮಿ.ಮೀ

ವೀಲ್ ಬೇಸ್

2899 ಮಿ.ಮೀ

2928 ಮಿ.ಮೀ

Q6 e-ಟ್ರಾನ್ Q8 e-ಟ್ರಾನ್ ಗಿಂತ ಅಗಲ ಮತ್ತು ಎತ್ತರವಾಗಿದ್ದರೂ ಕೂಡ, Q8 e-ಟ್ರಾನ್ ಒಟ್ಟಾರೆಯಾಗಿ ಉದ್ದವಾಗಿದೆ ಮತ್ತು ಉದ್ದವಾದ ವೀಲ್‌ಬೇಸ್ ಅನ್ನು ಹೊಂದಿದೆ. ದೊಡ್ಡದಾಗಿರುವ ಕಾರಣದಿಂದ, Q8 e-ಟ್ರಾನ್ ಕ್ಯಾಬಿನ್‌ನೊಳಗೆ ಹೆಚ್ಚು ಲೆಗ್‌ರೂಮ್ ಅನ್ನು ಹೊಂದಿದೆ.

ಹೊಚ್ಚ ಹೊಸ ಆಡಿ ಇಂಟೀರಿಯರ್

ಹೊಸ Q6 e-ಟ್ರಾನ್ ಆಡಿಯ ಹೊಸ ಒಳಭಾಗದ ಡಿಸೈನ್ ಶೈಲಿಯನ್ನು ಪರಿಚಯಿಸುತ್ತದೆ, ಇದನ್ನು ನಾವು ಮುಂಬರುವ ಮಾಡೆಲ್ ಗಳಲ್ಲಿ ಕೂಡ ನೋಡಬಹುದು. ಡ್ರೈವರ್ ಮತ್ತು ಸೆಂಟರ್‌ಗಾಗಿ ಕರ್ವ್ ಆಗಿರುವ ಸ್ಕ್ರೀನ್ ನೊಂದಿಗೆ ಹೆಚ್ಚಿನ ಡಿಜಿಟಲ್ ಫೀಚರ್ ಗಳಿರುವ ಡ್ಯಾಶ್‌ಬೋರ್ಡ್ ಅನ್ನು ಈಗ ನೀಡಲಾಗಿದೆ. ಇದು ಮೂರು ಸ್ಕ್ರೀನ್ ಗಳನ್ನು ಹೊಂದಿದೆ - ಡ್ರೈವರ್‌ಗಾಗಿ 11.9-ಇಂಚಿನ ಡಿಜಿಟಲ್ ಡಿಸ್ಪ್ಲೇ, ಇನ್ಫೋಟೈನ್‌ಮೆಂಟ್‌ಗಾಗಿ ದೊಡ್ಡ 14.5-ಇಂಚಿನ ಸ್ಕ್ರೀನ್ ಮತ್ತು ಮುಂದೆ ಕುಳಿತುಕೊಳ್ಳುವವರಿಗೆ 10.9-ಇಂಚಿನ ಸ್ಕ್ರೀನ್. ಇನ್ನು ಮುಂದೆ ಕ್ಲೈಮೇಟ್ ಕಂಟ್ರೋಲ್ ಗಾಗಿ ಪ್ರತ್ಯೇಕವಾಗಿ ಕನ್ಸೋಲ್‌ನಲ್ಲಿ ಟಚ್‌ಸ್ಕ್ರೀನ್ ಇಂಟರ್ಫೇಸ್ ಇರುವುದಿಲ್ಲ, ಅದನ್ನು ಸೆಂಟ್ರಲ್ ಡಿಸ್ಪ್ಲೇ ಜೊತೆಗೆ ಸೇರಿಸಲಾಗಿದೆ. ಸಹ-ಪ್ರಯಾಣಿಕರ ಸ್ಕ್ರೀನ್ 'ಆಕ್ಟಿವ್ ಪ್ರೈವಸಿ ಮೋಡ್' ಅನ್ನು ಹೊಂದಿದೆ, ಇದು ಡ್ರೈವರ್ ಗೆ ಯಾವುದೇ ಗೊಂದಲವಿಲ್ಲದೆ ಸುಲಭವಾಗಿ ಡ್ರೈವರ್ ಮಾಡಲು ಸಹಾಯ ಮಾಡುತ್ತದೆ.

ಸ್ಪೀಡ್, ಟ್ರಾಫಿಕ್ ಸಿಗ್ನಲ್ ಗಳು ಮತ್ತು ನ್ಯಾವಿಗೇಷನ್ ಸಂಕೇತಗಳಂತಹ ಮಾಹಿತಿಯನ್ನು ತೋರಿಸಲು Q6 e-ಟ್ರಾನ್ ಒಪ್ಶನಲ್ ಆಗಿರುವ ಆಗ್ಮೆಂಟೆಡ್ ರಿಯಾಲಿಟಿ-ಆಧಾರಿತ ಹೆಡ್ಸ್-ಅಪ್ ಡಿಸ್ಪ್ಲೇಯನ್ನು ಕೂಡ ಪಡೆಯುತ್ತದೆ. ಆಡಿ ತನ್ನ 'ಆಡಿ ಅಸಿಸ್ಟ್' ಎಂದು ಕರೆಯಲಾಗುವ ವಾಯ್ಸ್ ಅಸಿಸ್ಟೆಂಟ್ ಫೀಚರ್ ಅನ್ನು ಸುಧಾರಿಸಿದೆ, ಇದನ್ನು 800 ಕ್ಕೂ ಹೆಚ್ಚು ವಾಯ್ಸ್ ಕಮಾಂಡ್ ಗಳನ್ನು ಅರ್ಥಮಾಡಿಕೊಳ್ಳಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (A.I.) ಜೊತೆಗೆ ಸಂಯೋಜಿಸಲಾಗಿದೆ. ನೀವು ಅದನ್ನು ಹೇಗೆ ಬಳಸುತ್ತೀರಿ ಎಂಬುದರ ಆಧಾರದ ಮೇಲೆ ಇದು ಕಲಿಯುತ್ತಲೇ ಇರುತ್ತದೆ, ಆ ಮೂಲಕ ನೀವು ಡ್ರೈವ್ ಮಾಡುವಾಗ ಅದು ನಿಮಗೆ ಉತ್ತಮವಾಗಿ ಸಹಾಯ ಮಾಡುತ್ತದೆ.

ಡ್ಯಾಶ್‌ಬೋರ್ಡ್‌ನ ಮೇಲ್ಭಾಗದಲ್ಲಿ ಎಡಬದಿಯ ಡೋರ್ ನಿಂದ ಬಲಭಾಗದವರೆಗೆ ಲೈಟ್ ಬಾರ್ ಕೂಡ ಇದೆ. ಇದು ಮೂರು ಕೆಲಸಗಳನ್ನು ಮಾಡುತ್ತದೆ: ಮೊದಲನೆಯದಾಗಿ, ನೀವು ಕಾರಿನ ಒಳಗೆ ಬಂದಾಗ ಅದು ನಿಮ್ಮನ್ನು ಸ್ವಾಗತಿಸುತ್ತದೆ ಮತ್ತು ಕಾರನ್ನು ಲಾಕ್ ಮಾಡಿದಾಗ ಅಥವಾ ಅನ್ಲಾಕ್ ಮಾಡಿದಾಗ ಅದು ಸೂಚನೆ ನೀಡುತ್ತದೆ. ಎರಡನೆಯದಾಗಿ, ಇದು ಡಿಜಿಟಲ್ ಕ್ಲಸ್ಟರ್‌ನಲ್ಲಿನ ಸಾಂಪ್ರದಾಯಿಕ ಟರ್ನ್ ಸಿಗ್ನಲ್ ಚಿಹ್ನೆಗಳನ್ನು ಬದಲಾಯಿಸದೆ ಡೈನಾಮಿಕ್ ಟರ್ನ್ ಇಂಡಿಕೇಟರ್ ಲೈಟ್‌ಗಳನ್ನು ಸೂಚಿಸುತ್ತದೆ. ಕೊನೆಯದಾಗಿ, ಇದು ಚಾರ್ಜ್ ಲೆವೆಲ್ ಮತ್ತು ಚಾರ್ಜಿಂಗ್ ಪ್ರಕ್ರಿಯೆಯನ್ನು ಕೂಡ ತೋರಿಸುತ್ತದೆ.

ಕಾರಿನಲ್ಲಿರುವ ಇತರ ಉಪಕರಣಗಳಲ್ಲಿ 30W 20-ಸ್ಪೀಕರ್ ಬ್ಯಾಂಗ್ ಮತ್ತು ಒಲುಫ್‌ಸೆನ್ 3D ಸೌಂಡ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಅನ್ನು ಒಳಗೊಂಡಿದೆ.

Q6 e-ಟ್ರಾನ್ ಸಾಮಾನ್ಯವಾಗಿ ಡಾರ್ಕ್ ಕ್ಯಾಬಿನ್ ಅನ್ನು ಹೊಂದಿದ್ದರೂ ಕೂಡ, ಇದು ಕ್ರೋಮ್ ಅಕ್ಸೆಂಟ್ ಗಳೊಂದಿಗೆ ಡ್ಯುಯಲ್-ಟೋನ್ ಥೀಮ್ ಅನ್ನು ಹೊಂದಿದೆ ಆದರೆ SQ6 e-ಟ್ರಾನ್ ಆಲ್ ಬ್ಲಾಕ್ ಕ್ಯಾಬಿನ್ ಅನ್ನು ಹೊಂದಿದೆ.

ಇದನ್ನು ಕೂಡ ನೋಡಿ: ಟಾಟಾ ಪಂಚ್ EV ವಿಂಡೋವನ್ನು ಮುರಿದ WPL ಕ್ರಿಕೆಟರ್ ಎಲ್ಲಿಸ್ ಪೆರ್ರಿ, ಅದೇ ಮುರಿದ ಗಾಜು ಉಡುಗೊರೆಯಾಗಿ ಪಡೆದಿದ್ದಾರೆ

ಇದರ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳ ವಿವರಗಳು

ಆಡಿಯು ತನ್ನ ಗ್ಲೋಬಲ್-ಸ್ಪೆಕ್ Q6 e-ಟ್ರಾನ್ ಅನ್ನು ಮೊದಲಿಗೆ ಎರಡು ವೇರಿಯಂಟ್ ಗಳಲ್ಲಿ ನೀಡುತ್ತಿದೆ: Q6 eಟ್ರಾನ್ ಕ್ವಾಟ್ರೋ ಮತ್ತು SQ6 e-ಟ್ರಾನ್, ಇವೆರಡರ ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ವಿವರಿಸಲಾಗಿದೆ.

ಸ್ಪೆಸಿಫಿಕೇಷನ್

Q6 eಟ್ರಾನ್ ಕ್ವಾಟ್ರೋ

SQ6 e-ಟ್ರಾನ್

ಬ್ಯಾಟರಿ ಪ್ಯಾಕ್

94.9 kWh

94.9 kWh

ಎಲೆಕ್ಟ್ರಿಕ್ ಮೋಟಾರುಗಳ ಸಂಖ್ಯೆ

2

2

WLTP-ಕ್ಲೇಮ್ ಮಾಡಿರುವ ರೇಂಜ್

625 ಕಿ.ಮೀ

598 ಕಿ.ಮೀ

0-100 ಕಿ.ಮೀ ಗಂಟೆಗೆ

5.9 ಸೆಕೆಂಡುಗಳು

4.3 ಸೆಕೆಂಡುಗಳು

ಎರಡೂ ಕಾರುಗಳು ಆಲ್-ವೀಲ್-ಡ್ರೈವ್ (AWD) ಸೆಟಪ್ ಅನ್ನು ಹೊಂದಿದ್ದರೂ ಕೂಡ, ಆಡಿ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ EV ಯ ರಿಯರ್-ವೀಲ್-ಡ್ರೈವ್ (RWD) ವರ್ಷನ್ ಗಳನ್ನು ನಂತರ ಪರಿಚಯಿಸಲಿದೆ. ಸಣ್ಣ 83 kWh ಬ್ಯಾಟರಿ ಪ್ಯಾಕ್‌ನೊಂದಿಗೆ Q6 e-ಟ್ರಾನ್‌ನ RWD ವರ್ಷನ್ ಕೂಡ ಇರುತ್ತದೆ, ಆದರೆ ಅದನ್ನು ನಂತರ ಬಹಿರಂಗಪಡಿಸಲಾಗುತ್ತದೆ.

ದೊಡ್ಡದಾದ 100 kWh ಬ್ಯಾಟರಿ (ಒಟ್ಟು ಗಾತ್ರ) 800-ವೋಲ್ಟ್ ಎಲೆಕ್ಟ್ರಿಕ್ ಸಿಸ್ಟಮ್‌ನೊಂದಿಗೆ ಕೆಲಸ ಮಾಡುತ್ತದೆ, ಆದ್ದರಿಂದ ಇದರಲ್ಲಿ 270 kW ವರೆಗೆ ಫಾಸ್ಟ್ ಚಾರ್ಜ್ ಅನ್ನು ಮಾಡಬಹುದು. ನೀವು ಕೇವಲ 21 ನಿಮಿಷಗಳಲ್ಲಿ 10% ರಿಂದ 80% ವರೆಗೆ ಚಾರ್ಜ್ ಮಾಡಬಹುದು. ಆಡಿ ನಿಮಗೆ 11 kW AC ಚಾರ್ಜರ್ ಅನ್ನು ಸ್ಟ್ಯಾಂಡರ್ಡ್ ಆಗಿ ಇದರ ಜೊತೆಗೆ ನೀಡುತ್ತದೆ, ಇದು ಬ್ಯಾಟರಿಯನ್ನು ರಾತ್ರಿಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಈ ಜರ್ಮನ್ ಕಾರು ತಯಾರಕರು ತಮ್ಮ ಗ್ರಾಹಕರಿಗೆ ನಂತರದ ಹಂತದಲ್ಲಿ ಫಾಸ್ಟ್ ಆಗಿರುವ 22 kW AC ಚಾರ್ಜಿಂಗ್ ಆಯ್ಕೆಯನ್ನು ಕೂಡ ನೀಡಲಿದ್ದಾರೆ.

400-ವೋಲ್ಟ್ ತಂತ್ರಜ್ಞಾನವನ್ನು ಮಾತ್ರ ಸಪೋರ್ಟ್ ಮಾಡುವ ಸ್ಟೇಷನ್ ಗಳಿಗೆ ಸ್ಮಾರ್ಟ್ ಆಗಿರುವ ಹೊಸ ಫಾಸ್ಟ್ ಚಾರ್ಜಿಂಗ್ ಆಯ್ಕೆಯೂ ಇದೆ. ಈ ಸಂದರ್ಭದಲ್ಲಿ, Q6 e-ಟ್ರಾನ್ ತನ್ನ 800-ವೋಲ್ಟ್ ಬ್ಯಾಟರಿಯನ್ನು ಸಮಾನಾಂತರ ಚಾರ್ಜಿಂಗ್‌ಗಾಗಿ ಎರಡು ಸಮಾನ ಭಾಗಗಳಾಗಿ ವಿಭಜಿಸುತ್ತದೆ, ಇದು 400-ವೋಲ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುವ ಸ್ಟೇಷನ್ ಗಳಲ್ಲಿಯೂ ಕೂಡ 150 kW ವರೆಗೆ ಚಾರ್ಜ್ ಮಾಡಲು ನೆರವಾಗುತ್ತದೆ. ಈ ತಂತ್ರಜ್ಞಾನವನ್ನು ನೀವು ದೊಡ್ಡ ಬ್ಯಾಟರಿಗಳೊಂದಿಗೆ ಬರುವ ಆಧುನಿಕ ಸ್ಮಾರ್ಟ್ ಫೋನ್ ಗಳಲ್ಲಿ ನೋಡಬಹುದು. ಇದು ಉತ್ತಮವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ ಮತ್ತು ಬ್ಯಾಟರಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನು ಕೂಡ ಓದಿ: ಎಲೆಕ್ಟ್ರಿಕ್ ವಾಹನಗಳಿಗೆ ಆಮದು ಸುಂಕವನ್ನು ಕಡಿಮೆ ಮಾಡುವ ಹೊಸ ನೀತಿಯಿಂದಾಗಿ ಭಾರತೀಯ ಮಾರುಕಟ್ಟೆಗೆ ಟೆಸ್ಲಾ ಪ್ರವೇಶವು ವೇಗವನ್ನು ಪಡೆದುಕೊಂಡಿದೆ

ಭಾರತದಲ್ಲಿ ಯಾವಾಗ ಲಾಂಚ್ ಆಗಲಿದೆ ಮತ್ತು ಬೆಲೆ

ಸದ್ಯಕ್ಕೆ Q6 e-ಟ್ರಾನ್ ಜರ್ಮನಿ ಮತ್ತು ಯುರೋಪ್‌ನ ಕೆಲವು ಭಾಗಗಳಲ್ಲಿ ಮಾತ್ರ ಬಿಡುಗಡೆಯಲಿದೆ ಎಂದು ಆಡಿ ಹೇಳಿದ್ದರೂ ಕೂಡ, ಇದು SQ6 e-ಟ್ರಾನ್ ಜೊತೆಗೆ 2025 ರ ವೇಳೆಗೆ ಭಾರತಕ್ಕೆ ಬರಬಹುದು ಎಂದು ನಾವು ಭಾವಿಸುತ್ತೇವೆ. ಸಂಪೂರ್ಣವಾಗಿ ಲೋಡ್ ಮಾಡಲಾದ ಕ್ವಾಟ್ರೊ ವರ್ಷನ್ ಬೆಲೆಯು ರೂ 80 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋರೂಂ) ಎಂಬುದು ನಮ್ಮ ನಿರೀಕ್ಷೆಯಾಗಿದೆ. ಇದು ವೋಲ್ವೋ C40 ರೀಚಾರ್ಜ್, ಕಿಯಾ EV6 ಮತ್ತು ಹ್ಯುಂಡೈ ಐಯೋನಿಕ್ 5 ಗೆ ಪ್ರೀಮಿಯಂ ಆಗಿರುವ ಪರ್ಯಾಯ ಆಯ್ಕೆಯಾಗಲಿದೆ.

ಇನ್ನಷ್ಟು ಓದಿ: e-ಟ್ರಾನ್ ಆಟೋಮ್ಯಾಟಿಕ್

a
ಅವರಿಂದ ಪ್ರಕಟಿಸಲಾಗಿದೆ

ansh

  • 39 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಬಿಎಂಡವೋ ix1

Read Full News

explore similar ಕಾರುಗಳು

ಬಿಎಂಡವೋ ಎಕ್ಸ4

ಡೀಸಲ್12 ಕೆಎಂಪಿಎಲ್
ಪೆಟ್ರೋಲ್12 ಕೆಎಂಪಿಎಲ್
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಬಿಎಂಡವೋ ಎಕ್ಸ1

ಡೀಸಲ್20.37 ಕೆಎಂಪಿಎಲ್
ಪೆಟ್ರೋಲ್20.37 ಕೆಎಂಪಿಎಲ್
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಬಿಎಂಡವೋ ಎಕ್ಸ7

ಡೀಸಲ್14.31 ಕೆಎಂಪಿಎಲ್
ಪೆಟ್ರೋಲ್11.29 ಕೆಎಂಪಿಎಲ್
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ