Login or Register ಅತ್ಯುತ್ತಮ CarDekho experience ಗೆ
Login

2019 ಮಾರುತಿ ಸುಜುಕಿ ಆಲ್ಟೊ ವೇರಿಯೆಂಟ್ ಗಳ ವಿವರಣೆ: Std, LXi & VXi

published on ಜುಲೈ 31, 2019 11:38 am by sonny for ಮಾರುತಿ ಆಲ್ಟೊ 800

ಆಲ್ಟೊವನ್ನು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಸೌಕರ್ಯಗಳೊಂದಿಗೆ ನವೀಕರಿಸಲಾಗಿದೆ. ಈಗ ನಿಮಗೆ ಸೂಕ್ತವಾದ ರೂಪಾಂತರ ಯಾವುದು?

ಮಾರುತಿ ಸುಜುಕಿ ಯವರು ನವೀಕರಣಗೊಂಡ 2019 ಆವೃತ್ತಿಯ ಅದರ ಹೆಚ್ಚು ಮಾರಾಟವಾಗುವ ಹ್ಯಾಚ್ ಬ್ಯಾಕ್, ಆಲ್ಟೊ ವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಈಗ ಹೆಚ್ಚು ಫೀಚರ್ ಗಳನ್ನು ಹಿಂದಿಗಿಂತ ಹೆಚ್ಚಾಗಿ ಸ್ಟ್ಯಾಂಡರ್ಡ್ ಆಗಿ ಪಡೆಯುತ್ತಿದೆ ಮತ್ತು ಬಾಡಿ ಯಲ್ಲೂ ಸಹ ಬಹಳಷ್ಟು ನವೀಕರಣಗಳನ್ನು ಮಾಡಲಾಗಿದ್ದು ಅದು ಮುಂಬರಲಿರುವ ಮುಂದ್ವರಿದ ಸುರಕ್ಷತೆ ಹಾಗು ಕ್ರ್ಯಾಶ್ ಟೆಸ್ಟ್ ನಾರ್ಮ್ಸ್ ಗೆ ಅನುಗುಣವಾಗಿದೆ. ಇದರಲ್ಲಿರುವ 0.8-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಈಗಾಗಲೇ ಏಪ್ರಿಲ್ 2020 BS 6 ನಿಂದ ಅನ್ವ್ಯಯವಾಗುವ ನಾರ್ಮ್ಸ್ ಗೆ ಸರಿಹೊಂದುವಂತೆ ಮಾಡಲಾಗಿದೆ. ಆದರೆ, ಸದ್ಯದಲ್ಲಿ 2019 ಆಲ್ಟೊ ನಲ್ಲಿ CNG ವೇರಿಯೆಂಟ್ ಇಲ್ಲ.

ಈ ನವೀಕರಣಗಳಿಂದಾಗಿ ಆಲ್ಟೊ ದ ಎಲ್ಲ ವೇರಿಯೆಂಟ್ ಗಳ ಬೆಲೆ ಕೂಡ ಹೆಚ್ಚಾಗಿದೆ. ಆದರೆ, ಯಾವ ವೇರಿಯೆಂಟ್ ಹಣಕ್ಕೆ ಹೆಚ್ಚು ಮೌಲ್ಯ ಕೊಡುತ್ತದೆ? ನಾವು ನೋಡೋಣ:

ಬಣ್ಣಗಳ ಆಯ್ಕೆಗಳು

  • ಅಪ್ ಟೌನ್ ರೆಡ್ (ಹೊಸ )
  • ಮೊಜಿಟೋ ಗ್ರೀನ್
  • ಸೆರುಲೀನ್ ಬ್ಲೂ
  • ಸುಪೀರಿಯರ್ ವೈಟ್
  • ಸಿಲ್ಕಿ ಸಿಲ್ವರ್
  • ಗ್ರಾನೈಟ್ ಗ್ರೇ

ಗಮನಿಸಿ: ವೈಟ್ ಮತ್ತು ಸಿಲ್ವರ್ ಬಣ್ಣಗಳ ಆಯ್ಕೆಗಳು ಕೇವಲ ಆರಂಭಿಕ ಹಂತದ Std ಮತ್ತು Std(O) ವೇರಿಯೆಂಟ್ ಗಳಲ್ಲಿ ಲಭ್ಯವಿದೆ. ಹಾಗು, ವೈಟ್ ಒಂದು ನಾನ್ ಮೆಟಾಲಿಕ್ ಫಿನಿಷ್ ಹೊಂದಿದೆ.

ಸ್ಟ್ಯಾಂಡರ್ಡ್ ಸುರಕ್ಷತೆ ಫೀಚರ್ ಗಳು

  • ಡ್ರೈವರ್ ಏರ್ಬ್ಯಾಗ್
  • ರೆವೆರ್ಸೆ ಪಾರ್ಕಿಂಗ್ ಸೆನ್ಸಾರ್
  • ABS ಜೊತೆಗೆ EBD
  • ಡ್ರೈವರ್ ಮತ್ತು ಮುಂಬದಿಯ ಪ್ಯಾಸೆಂಜರ್ ಸೀಟ್ ಬೆಲ್ಟ್ ರಿಮೈಂಡರ್
  • ಸ್ಪೀಡ್ ಅಲರ್ಟ್

ಗಮನಿಸಿ: ಮೇಲೆ ಹೇಳಿರುವ ಎಲ್ಲ ಬೆಲೆಗಳು ಎಕ್ಸ್ ಶೋ ರೂಮ್ ದೆಹಲಿ .

2019 ಮಾರುತಿ ಸುಜುಕಿ ಆಲ್ಟೊ Std: ಬರಿಯ ಮೂಳೆಯ ವೇರಿಯೆಂಟ್ , ಈ ಕಾರ್ ಮಾತ್ರ ಪ್ಯಾಸೆಂಜರ್ ಏರ್ಬ್ಯಾಗ್ ಅನ್ನು ಆಯ್ಕೆಯಾಗಿ ಪಡೆಯುತ್ತದೆ ಬೇಸ್ ವೇರಿಯೆಂಟ್ ನಲ್ಲಿ.

Price

Std

Rs 2.94 lakh

Std (O) (adds passenger airbag)

Rs 2.97 lakh (+Rs 3000)

ಫೀಚರ್ ಗಳು

ಬಾಹ್ಯ: ವೀಲ್ ಗಳಿಗೆ ಸೆಂಟರ್ ಕ್ಯಾಪ್ ಗಳು

ಆಂತರಿಕಗಳು: ಡುಯಲ್ ಟೋನ್ ಆಂತರಿಕಗಳು (ಕಪ್ಪು ಮತ್ತು ಬಿಜ್ ), ವಿನೈಲ್ ಸೀಟ್ ಮೇಲ್ಪದರಗಳು

ಅನುಕೂಲತೆಗಳು: ಡ್ರೈವರ್ ಬದಿಯ ಸನ್ ವೈಸರ್ , ಮುಂಬದಿಯ ಮತ್ತು ಹಿಂಬದಿಯ ಬಾಟಲ್ ಹೋಲ್ಡರ್

ಆಡಿಯೋ: NA

ನೀವು ಒಂದು ಕೊಳ್ಳಬಹುದಾಗಿದೆಯೇ?

ಇದು ಒಂದು ಬಾರಿಯ ಮೂಳೆಯ ಆಲ್ಟೊ ಆವೃತ್ತಿಯಾಗಿದೆ ಮತ್ತು ನೀವು ಅನಾವಶ್ಯಕವಾಗಿ ಹೆಚ್ಚು ಖರ್ಚು ಮಾಡಲು ಇಷ್ಟಪಡದಿದ್ದರೆ , ನಾವು ನಿಮಗೆ ಈ ವೇರಿಯೆಂಟ್ ಅನ್ನು ಶಿಫಾರಸು ಮಾಡುವುದಿಲ್ಲ, ಅದಕ್ಕೆ ಬೇಸಿಕ್ ಕಂಫರ್ಟ್ ಫೀಚರ್ ಗಳಾದ AC ಅಥವಾ ಪವರ್ ಸ್ಟಿಯರಿಂಗ್ ಇಲ್ಲದಿರುವುದು ಸಹ ಕಾರಣವಾಗಿದೆ. ಇದರಲ್ಲಿ ಹಿಂಬದಿಯ ಡೋರ್ ಲಾಕ್ ಗಳಿಗೆ ಚೈಲ್ಡ್ ಲಾಕ್ ಇಲ್ಲದಿರುವುದರಿಂದ ಇದು ಮಕ್ಕಳ ಸ್ನೇಹಿಯಾಗಿಲ್ಲ. ಹಾಗು, ಹಿಂಬದಿಯ ಸೀಟ್ ಗಳಿಗೆ ELR ( ಎಮರ್ಜೆನ್ಸಿ ಲೊಕ್ಕಿನ್ಗ್ ರೆಟ್ರಾಕ್ಟರ್ ) ಸೀಟ್ ಬೆಲ್ಟ್ ಕೂಡ ಕೊಡಲಾಗಿಲ್ಲ.

ಹೊಸ ಆಲ್ಟೊ ಬೇಸ್ ಸ್ಪೆಕ್ ವೇರಿಯೆಂಟ್ ಬೆಲೆ ಅದರ ಪ್ರತಿಸ್ಪರ್ದಿಗಳಾದ ರೆನಾಲ್ಟ್ ಕ್ವಿಡ್ ಮತ್ತು ಡಾಟ್ಸನ್ ರೆಡಿ -GO ಗಳಿಗಿಂತ ಹೆಚ್ಚು ಇದೆ. ಆದರೆ, ಇದರಲ್ಲಿ ಮಾತ್ರ ಪ್ಯಾಸೆಂಜರ್ ಏರ್ಬ್ಯಾಗ್ ಅನ್ನು ಆಯ್ಕೆಯಾಗಿ ಕೊಡಲಾಗುತ್ತಿದೆ. ಮತ್ತು Std (O) ವನ್ನು ಮಾತ್ರ ಕಾರ್ ದೇಕೋ ಕೊಳ್ಳಲು ಶಿಫಾರಸು ಮಾಡುತ್ತದೆ.

2019 ಮಾರುತಿ ಸುಜುಕಿ ಆಲ್ಟೊ LXi: ಅವಶ್ಯಕತೆಗಳನ್ನು ಪೂರೈಸುತ್ತದೆ; ಮೌಲ್ಯಯುಕ್ತ ಹೆಚ್ಚಳಿಕೆ ಆಗಿದೆ.

Price

LXi

Rs 3.50 lakh

LXi (O) (passenger side airbag)

Rs 3.55 lakh (+Rs 5000)

Price over Std/ Std (O)

Rs 56,000/ Rs 53,000

ಫೀಚರ್ ಗಳು ( Std ಗಿಂತಲೂ ಹೆಚ್ಚಿನದಾಗಿ )

ಬಾಹ್ಯ: ಬಾಡಿ ಕಲರ್ ಬಂಪರ್ ಗಳು ಮತ್ತು ಡೋರ್ ಹ್ಯಾಂಡಲ್ ಗಳು, ಮತ್ತು ಫುಲ್ ವೀಲ್ ಕವರ್ ಗಳು

ಆಂತರಿಕಗಳು: ಫ್ಯಾಬ್ರಿಕ್ ಮತ್ತು ವಿನೈಲ್ ಸಂಯೋಜನೆಯ ಮೇಲ್ಪದರಗಳು, ಸ್ಟಿಯರಿಂಗ್ ವೀಲ್ ಮೇಲೆ ಸಿಲ್ವರ್ ಅಸ್ಸೇನ್ಟ್ ಗಳು, ವೆಂಟ್ ಗಳು ಮತ್ತು ಒಳಭಾಗದ ಡೋರ್ ಹ್ಯಾಂಡಲ್ ಗಳು.

ಅನುಕೂಲತೆಗಳು: AC, ಪವರ್ ಸ್ಟಿಯರಿಂಗ್ , ಮುಂಬದಿಯ ಪವರ್ ವಿಂಡೋ ಗಳು, ಸಂಯೋಜಿಸಲ್ಪಟ್ಟ ಹಿಂಬದಿಯ ಸೀಟ್ ಹೆಡ್ ರೆಸ್ಟ್ ಗಳು, ಮುಂಬದಿಯ ಪ್ಯಾಸೆಂಜರ್ ಸನ್ ವೈಸರ್ ಗಳು, ರಿಮೋಟ್ ಬೂಟ್ ಲಿಡ್ ಓಪನರ್, ಮತ್ತು ಮುಂಬದಿಯ ವೈಪರ್ ಜೊತೆಗೆ ಮರುಕಳಿಸುವ ಕಾರ್ಯತತ್ಪರತೆ,

ಆಡಿಯೋ :NA

ಸುರಕ್ಷತೆ: ಚೈಲ್ಡ್ ಲಾಕ್ ಹಿಂಬದಿಯ ಡೋರ್ ಗಳಿಗೆ, ಹಿಂಬದಿಯ ELR ಸೀಟ್ ಬೆಲ್ಟ್ ಗಳು

ನೀವು ಒಂದು ಕೊಳ್ಳಬಹುದಾಗಿದೆಯೇ?

ಈ ಮಿಡ್ ಸ್ಪೆಕ್ ವೇರಿಯೆಂಟ್ ನಲ್ಲಿ ಬಹಳಷ್ಟು ಫೀಚರ್ ಗಳನ್ನು ಕೊಡಲಾಗಿದೆ ಮತ್ತು ಅದು Rs 50,000 ಹೆಚ್ಚು ಆಗುತ್ತದೆ ಕೂಡ. ಆದರೆ, ಹೆಚ್ಚಿನದಾಗಿ ಕೊಡಲಾಗಿರುವ ಅನುಕೂಲತೆಗಳು ಮೌಲ್ಯಯುಕ್ತವಾಗಿದೆ ಮತ್ತು ಸೌಂದರ್ಯಕಗಳು ಹೆಚ್ಚಿನ ಕೊಡುಗೆಯಾಗಿದೆ. ಬೇಸ್ ಸ್ಪೆಕ್ ಗೀತಲೂ ಹೆಚ್ಚಿನದಾಗಿನ ಪ್ರೀಮಿಯಂ ಒಪ್ಪಿಕೊಳ್ಳಬಹುದಾದ ವಿಷಯವಾಗಿದೆ, ಹೆಚ್ಚಾಗಿ ಕೊಡಲಾಗಿರುವ ಆಂತರಿಕವಾಗಿ ಅಳವಡಿಸಬಹುದಾದ ORVM ಗಳು ಮತ್ತು ಬ್ಲೂಟೂತ್ ಇರುವ ಆಡಿಯೋ ಸಿಸ್ಟಮ್ ಗಳನ್ನು ಮೆಚ್ಚಬಹುದಾಗಿದೆ.

ಈ ವೇರಿಯೆಂಟ್ ನಿಮಗೆ ಹೆಚ್ಚು ಸೂಕ್ತವಾಗಿರುತ್ತದೆ , ನೀವು ಆಡಿಯೋ ಸಿಸ್ಟಮ್ ಅನ್ನು ಹೊರಗಡೆಯಿಂದ ಕೊಳ್ಳಬಯಸಿದರೆ.

LXI (O) ವೇರಿಯೆಂಟ್ ಜೊತೆಗೆ ಪ್ಯಾಸೆಂಜರ್ ಏರ್ಬ್ಯಾಗ್ ಆಯ್ಕೆ ವೇರಿಯೆಂಟ್ ಅನ್ನು ಮಾತ್ರ ಕಾರ್ ದೇಖೊ ಶಿಫಾರಸು ಮಾಡುತ್ತದೆ.

2019 ಮಾರುತಿ ಸುಜುಕಿ ಆಲ್ಟೊ VXi: ಪೂರ್ಣವಾಗಿ ಲೋಡ್ ಮಾಡಲಾಗಿದೆ, ಬೆಲೆ ಸ್ವಲ್ಪ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ.

Price

VXi

Rs 3.72 lakh

Price over LXi/LXi (O)

Rs 22,000/Rs 17,000

ಫೀಚರ್ ಗಳು (LXi ಗಿಂತಲೂ ಹೆಚ್ಚಾಗಿ )

ಬಾಹ್ಯ: ಬಾಡಿ ಸೈಡ್ ಮೌಲ್ಡಿಂಗ್

ಆಂತರಿಕಗಳು: ಸಿಲ್ವರ್ ಅಸ್ಸೇನ್ಟ್ ಸೆಂಟರ್ ಕನ್ಸೋಲ್ ಮೇಲೆ

ಅನುಕೂಲತೆಗಳು: ಸೆಂಟ್ರಲ್ ಡೋರ್ ಲಾಕ್, ಕೀ ಲೆಸ್ ಎಂಟ್ರಿ, ಅಸ್ಸೇಸ್ಸೋರಿ ಸಾಕೆಟ್, ರೇರ್ ಪಾರ್ಸೆಲ್ ಟ್ರೇ ಮತ್ತು ಆಂತರಿಕವಾಗಿ ಸರಿಹೊಂದಿಸಬಹುದಾದ ORVM ಗಳು.

ಆಡಿಯೋ: ಆಡಿಯೋ ಸಿಸ್ಟಮ್ ಜೊತೆಗೆ USB, aux-in, ರೇಡಿಯೋ ಮತ್ತು ಬ್ಲೂಟೂತ್ ಹೊಂದಾಣಿಕೆ ಜೊತೆಗೆ ಮುಂಬದಿಯ ಎರೆಡು ಸ್ಪೀಕರ್ ಗಳು.

ಸುರಕ್ಷತೆ: ಮುಂಬದಿಯ ಪ್ಯಾಸೆಂಜರ್ ಏರ್ಬ್ಯಾಗ್

ನೀವು ಒಂದು ಕೊಳ್ಳಬಹುದಾಗಿದೆಯೇ?

ಇದು 2019 ಆಲ್ಟೊ ನಲ್ಲಿಯ ಟಾಪ್ ಸ್ಪೆಕ್ ವೇರಿಯೆಂಟ್ ಆಗಿದೆ, ಹಾಗಾಗಿ ಬೆಲೆ ಕೂಡ ಹೆಚ್ಚು ಪ್ರೀಮಿಯಂ ಆಗಿದೆ. ಹೆಚ್ಚಿನ ಫೀಚರ್ ಗಳು ಮತ್ತು ಆಡಿಯೋ ಸಿಸ್ಟಮ್ ಈಗಲೂ ಸ್ಪರ್ಧೆಗೆ ತಕ್ಕುದಾಗಿಲ್ಲ. ಉದಾಹರಣೆಗೆ, ರೆನಾಲ್ಟ್ ಕೆವಿಡ್ ನಲ್ಲಿ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಸಹ ಕೊಡಲಾಗಿದೆ.

Read More on : Maruti Alto 800 on road price

s
ಅವರಿಂದ ಪ್ರಕಟಿಸಲಾಗಿದೆ

sonny

  • 17 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ Alto 800

ಪೋಸ್ಟ್ ಕಾಮೆಂಟ್
2 ಕಾಮೆಂಟ್ಗಳು
C
chandrakant prasad
Aug 19, 2020, 8:43:46 AM

My Alto vxi 2019 is the best car.

S
sai teja jella
Jun 29, 2019, 6:32:03 PM

But where is the body coloured ORVM's.

Read Full News

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ