2023 ಹ್ಯುಂಡೈ ವರ್ನಾ SX(O) ವೇರಿಯಂಟ್ ವಿಶ್ಲೇಷಣೆ: ಇದರ ಆಯ್ಕೆ ಲಾಭದಾಯಕವೇ?
ಎಡಿಎಎಸ್ ಮತ್ತು ಹೀಟೆಡ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಬೇಕೆಂದು ನೀವು ಬಯಸಿದರೆ ಶ್ರೇಣಿಯ ಟಾಪಿಂಗ್ SX(O) ನಿಮಗೆ ಲಭ್ಯವಿರುವ ಏಕೈಕ ಆಯ್ಕೆಯಾಗಿದೆ.
ಹೊಸ ಹ್ಯುಂಡೈ ವರ್ನಾದಲ್ಲಿ ಕೆಲವು ವಿಭಾಗದಲ್ಲೇ ಮೊದಲ ಮತ್ತು ಸುಧಾರಿತ ಡ್ರೈವರ್ ಅಸಿಸ್ಟೆಂಟ್ ವ್ಯವಸ್ಥೆಗಳು (ಎಡಿಎಎಸ್), ವೆಂಟಿಲೇಟೆಡ್ ಮತ್ತು ಹೀಟೆಡ್ ಫ್ರಂಟ್ ಸೀಟುಗಳು ಮತ್ತು ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ (ಎನ್‌ಎ ಪವರ್‌ಟ್ರೇನ್‌ಗೆ ಮಾತ್ರ) ನಂತಹ ಉತ್ತಮ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಆದಾಗ್ಯೂ, ನೀವು ಇವೆಲ್ಲವನ್ನೂ ಮತ್ತು ಹೆಚ್ಚಿನದನ್ನು ಬಯಸಿದರೆ, ನಿಮಗೆ ಲಭ್ಯವಿರುವ ಏಕೈಕ ಆಯ್ಕೆ ಕಾಂಪ್ಯಾಕ್ಟ್ ಸೆಡಾನ್‌ನ ಶ್ರೇಣಿಯ-ಟಾಪ್ SX(O) ವೇರಿಯಂಟ್ ಆಗಿದೆ. ಇದನ್ನು ಆಯ್ದುಕೊಳ್ಳುವುದು ಲಾಭದಾಯಕವಾಗಿದೆಯೇ ಎಂದು ತಿಳುದುಕೊಳ್ಳೋಣ:
ವೇರಿಯಂಟ್ |
1.5-ಲೀಟರ್ ಎನ್.ಎ. ಪೆಟ್ರೋಲ್ |
1.5-ಲೀಟರ್ ಟರ್ಬೋ-ಪೆಟ್ರೋಲ್ |
||
ಎಂಟಿ |
ಸಿವಿಟಿ |
ಎಂಟಿ |
ಡಿಸಿಟಿ |
|
SX(O) |
14.66 ಲಕ್ಷ ರೂ. |
16.20 ಲಕ್ಷ ರೂ. |
15.99 ಲಕ್ಷ ರೂ. |
17.38 ಲಕ್ಷ ರೂ. |
ವರ್ನಾ ಎಸ್‌ಎಕ್ಸ್(ಒ) ಅನ್ನು ಏಕೆ ಆರಿಸಬೇಕು?
ನೀವು ಇಂದಿನ ಮಾರುಕಟ್ಟೆಯಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ವೈಶಿಷ್ಟ್ಯ-ಭರಿತ ಕಾಂಪ್ಯಾಕ್ಟ್ ಸೆಡಾನ್‌ಗಾಗಿ ಹುಡುಕುತ್ತಿದ್ದರೆ, ಹೊಸ ವರ್ನಾದ ಟಾಪ್-ಸ್ಪೆಕ್ SX(O) ನಿಮ್ಮ ಆಯ್ಕೆಯಾಗಿರಬೇಕು. ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ (ಎನ್‌ಎ ಪವರ್‌ಟ್ರೇನ್‌ನೊಂದಿಗೆ) ಮತ್ತು ಹೀಟೆಡ್ ಫ್ರಂಟ್ ಸೀಟ್‌ಗಳು (ಕೂಲಿಂಗ್ ಕಾರ್ಯವನ್ನು ಸಹ ಉಳಿಸಿಕೊಳ್ಳಲಾಗಿದೆ) ಸೇರಿದಂತೆ ಸೆಡಾನ್‌ನ ಹೊಸ ವೈಶಿಷ್ಟ್ಯಗಳನ್ನು ನೀವು ಆನಂದಿಸಬಹುದಾದ ಮತ್ತು ಬಳಸಬಹುದಾದ ಏಕೈಕ ವೇರಿಯಂಟ್ ಆಗಿದೆ. ಸುರಕ್ಷತೆಯ ದೃಷ್ಟಿಯಿಂದಲೂ, SX(O) ಎಡಿಎಎಸ್, ರಿಯರ್ ಡಿಸ್ಕ್ ಬ್ರೇಕ್‌ಗಳು ಮತ್ತು ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್‌ಗಳನ್ನು ಪಡೆದುಕೊಂಡಿದೆ (ನಂತರದ ಎರಡು ಟರ್ಬೊ ಡಿಸಿಟಿ ಆವೃತ್ತಿಯೊಂದಿಗೆ ಮಾತ್ರ ಲಭ್ಯವಿವೆ).
ನೀವು ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹೊಂದಿರುವ ಹೊಸ ವೆರ್ನಾವನ್ನು ಖರೀದಿಸಲು ಬಯಸಿದರೆ, ನೀವು ಪೆಟ್ರೋಲ್-ಸಿವಿಟಿ ಆಯ್ಕೆಯನ್ನು ಅಥವಾ ಟರ್ಬೋಚಾರ್ಜ್ಡ್ ಎಂಜಿನ್ ಆಯ್ಕೆಯನ್ನು ಪರಿಗಣಿಸಬಹುದಾಗಿದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ಗಾಗಿ, ನೀವು SX(O) ಟರ್ಬೊ DCT ಅನ್ನು ಪಡೆಯಬೇಕು.
ಈಗ ಈ ವೇರಿಯಂಟ್‌ಗಳಲ್ಲಿ ನೀಡಲಾದ ಎಲ್ಲಾ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ:
ಹೊರಭಾಗ |
ಒಳಭಾಗ |
ಆರಾಮ ಮತ್ತು ಅನುಕೂಲತೆ |
ಇನ್ಫೋಟೈನ್‌ಮೆಂಟ್ |
ಸುರಕ್ಷತೆ |
|
ಪ್ರಮುಖ ವೈಶಿಷ್ಟ್ಯಗಳು |
|
|
|
|
|
ಇತರೆ ವೈಶಿಷ್ಟ್ಯಗಳು |
|
|
|
|
|
ವರ್ನಾ SX(O) ನಲ್ಲಿ ಯಾವುದು ಇನ್ನೂ ಉತ್ತಮವಾಗಿರಬಹುದಾಗಿತ್ತು?
ಪೀಳಿಗೆಯ ಅಪ್‌ಗ್ರೇಡ್‌ನೊಂದಿಗೆ, ವರ್ನಾ ಈಗ ಅಧಿಕ ಸ್ಪೇಸ್, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ ಅದರ ಪ್ರತಿಸ್ಪರ್ಧಿಗಳಿಗೆ ಸರಿಸಮನಾಗಿದೆ. ಹ್ಯುಂಡೈಗೆ ರಿಯರ್ ವಿಂಡೋ ಸನ್‌ಶೇಡ್‌ಗಳು, ರಿಯರ್ ಸೆಂಟರ್ ಹೆಡ್‌ರೆಸ್ಟ್, 360-ಡಿಗ್ರಿ ಕ್ಯಾಮೆರಾ ವ್ಯೂ ಮತ್ತು ಮೀಸಲಾದ ಫೋನ್ ಸೀಟ್ ಬ್ಯಾಕ್ ಪಾಕೆಟ್‌ಗಳಂತಹ ಹೆಚ್ಚಿನ ಅನುಕೂಲಗಳನ್ನು ನೀಡಲು ಅವಕಾಶವಿತ್ತು ಎಂದು ನಮ್ಮ ಭಾವನೆ. ಕಾರು ತಯಾರಕರು ಅದನ್ನು SX(O) ವೇರಿಯಂಟ್‌ನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ ಒದಗಿಸಿರಬಹುದಿತ್ತು ಎಂದು ನಮ್ಮ ಅಭಿಪ್ರಾಯ. ಹಾಗೆಯೇ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಫಂಕ್ಷನ್ ಅನ್ನು ಪೆಟ್ರೋಲ್-ಸಿವಿಟಿ SX(O) ನಲ್ಲಿ ಉಳಿದ ಎಡಿಎಎಸ್ ಸೂಟ್ ಜೊತೆಗೆ ಒದಗಿಸಬಹುದಾಗಿತ್ತು.
ವೇರಿಯಂಟ್ |
ತೀರ್ಮಾನ |
EX |
ಸುರಕ್ಷತೆಯ ಮೇಲೆ ಕೇಂದೀಕರಿಸಲಾದ ಮೂಲಭೂತ ಅಂಶಗಳನ್ನು ಮಾತ್ರ ಒಳಗೊಂಡಿದೆ; ಸೀಮಿತ ಬಜೆಟ್ ಹೊಂದಿದ್ದರೆ ಮಾತ್ರ ಪರಿಗಣಿಸಿ |
S |
ಸಮರ್ಥನೀಯ ಪ್ರೀಮಿಯಂನಲ್ಲಿ ಉಪಯುಕ್ತ ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿರುವ ಟ್ರೂ ಎಂಟ್ರಿ ವೇರಿಯಂಟ್ |
SX |
ಶಿಫಾರಸು ಮಾಡಲಾದ ವೇರಿಯಂಟ್, ವಿಶೇಷವಾಗಿ ಸಿವಿಟಿ ಆಟೋಮ್ಯಾಟಿಕ್ ಅಥವಾ ಎಂಟ್ರಿ ಲೆವೆಲ್ ಟರ್ಬೊ ವೇರಿಯಂಟ್ ಆಗಿ |
SX(O) |
ನೀವು ಟಾಪ್-ಸ್ಪೆಕ್ ಪೆಟ್ರೋಲ್-ಸಿವಿಟಿ ಅಥವಾ ಟರ್ಬೊ ವೇರಿಯಂಟ್ ಅನ್ನು ಬಯಸಿದರೆ ಮಾತ್ರ ಅದನ್ನು ಆರಿಸಿಕೊಳ್ಳಿ, ಉತ್ತಮ ವೈಶಿಷ್ಟ್ಯಗಳು ಮತ್ತು ಎಡಿಎಎಸ್‌ಗಳನ್ನು ಹೊಂದಿದೆ. |
ಎಲ್ಲವೂ ಭಾರತದಾದ್ಯಂತದ ಪ್ರಾಸ್ತಾವಿಕ ಎಕ್ಸ್ ಶೋರೂಂ ಬೆಲೆಗಳಾಗಿವೆ
ಇನ್ನಷ್ಟು ಓದಿ : ವರ್ನಾ ಆನ್ ರೋಡ್ ಬೆಲೆ