2024 Hyundai Creta ಭಾರತದಲ್ಲಿ ಬಿಡುಗಡೆಯಾಗಬಹುದಾದ ಮುಂದಿನ N ಲೈನ್ ಮಾಡೆಲ್ ಆಗುವ ಸಾಧ್ಯತೆ
ಹೊಸ ಕ್ರೆಟಾವು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ವಾಪಾಸ್ ತಂದಿದೆ, ಆದರೆ ಡಿಸೈನ್ ಮತ್ತು ಟ್ರಾನ್ಸ್ಮಿಷನ್ ನಲ್ಲಿ ಕಾಣೆಯಾಗಿರುವ ಕೆಲವು ಆಯ್ಕೆಗಳನ್ನು ಹ್ಯುಂಡೈ ತನ್ನ SUVಯ N ಲೈನ್ ವರ್ಷನ್ ಗೆ ಕಾಯ್ದಿರಿಸುತ್ತಿದೆ ಎಂದು ನಾವು ಅಂದುಕೊಡಿದ್ದೇವೆ.
2024 ಹ್ಯುಂಡೈ ಕ್ರೆಟಾ ಪರ್ಫಾರ್ಮೆನ್ಸ್ ವಿಷಯದಲ್ಲಿ ಈ ಸೆಗ್ಮೆಂಟ್ ನ ಲೀಡರ್ ಆಗಿ ಹೊರಹೊಮ್ಮಿದೆ. ಅಪ್ಡೇಟ್ ಆಗಿರುವ ಡಿಸೈನ್ ಮತ್ತು ಎಲ್ಲಾ ಹೊಸ ಫೀಚರ್ ಗಳ ಜೊತೆಗೆ, ಫೇಸ್‌ಲಿಫ್ಟ್ ಆಗಿರುವ ಕಾಂಪ್ಯಾಕ್ಟ್ SUV ಈಗ 160 PS 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. ಆದರೆ ಕಿಯಾ ಸೆಲ್ಟೋಸ್‌ಗಿಂತ ಭಿನ್ನವಾಗಿ, ಹುಂಡೈ ಕ್ರೆಟಾವು ಟರ್ಬೊ-ಪೆಟ್ರೋಲ್ ವರ್ಷನ್ ಗೆ ಯಾವುದೇ ವಿಶುವಲ್ ಬದಲಾವಣೆಯನ್ನು ನೀಡುತ್ತಿಲ್ಲ ಮತ್ತು ಅದರ ಟಾಪ್ ವರ್ಷನ್ ಅನ್ನು ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಗೆ ಮಾತ್ರ ಸೀಮಿತಗೊಳಿಸಿದೆ. ಆದರೆ, ಈ ಬಲಿಷ್ಠ ಪವರ್‌ಟ್ರೇನ್‌ಗೆ ಹ್ಯುಂಡೈ ಅದರ ಕ್ರೆಟಾ N ಲೈನ್ ರೂಪದಲ್ಲಿ ಹೆಚ್ಚಿನ ಬದಲಾವಣೆಯನ್ನು ನೀಡಬಹುದು ಎಂದು ನಾವು ಭಾವಿಸುತ್ತೇವೆ.
ನಾವು ಏಕೆ ಹೀಗೆ ಅಂದುಕೊಳ್ಳುತ್ತಿದ್ದೇವೆ
-
ಮಾನ್ಯುಯಲ್ ಕಾರುಪ್ರಿಯರಿಗಾಗಿ ಮಾನ್ಯುಯಲ್ ಆಯ್ಕೆ
ಹ್ಯುಂಡೈ ವೆರ್ನಾದ ಟರ್ಬೊ-ಮ್ಯಾನ್ಯುವಲ್ ಕಾಂಬೊ ಚಿತ್ರವನ್ನು ನಿಮ್ಮ ರೆಫರೆನ್ಸ್ ಗಾಗಿ ಮಾತ್ರ ಬಳಸಲಾಗಿದೆ
ಕ್ರೆಟಾ N ಲೈನ್ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ನಾವು ಏಕೆ ಭಾವಿಸುತ್ತೇವೆ ಎಂಬುದಕ್ಕೆ ಕೆಲವು ಕಾರಣಗಳಿವೆ. ಮೇಲೆ ತಿಳಿಸಿದಂತೆ, ಫೇಸ್‌ಲಿಫ್ಟ್ ಆಗಿರುವ ಕ್ರೆಟಾ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಕೇವಲ 7-ಸ್ಪೀಡ್ DCT ಟ್ರಾನ್ಸ್‌ಮಿಷನ್‌ನೊಂದಿಗೆ ಪರಿಚಯಿಸಲಾಗಿದೆ. ಇದೇ ಎಂಜಿನ್ ವೆರ್ನಾ ಮತ್ತು ಅಲ್ಕಾಜರ್‌ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್‌ನ ಆಯ್ಕೆಯನ್ನು ಪಡೆದಿದೆ. ಇವೆಲ್ಲ ಕಾರಣಗಳಿಂದ, ಈ ಆಯ್ಕೆಗಳನ್ನು ಕ್ರೆಟಾ N ಲೈನ್‌ಗೆ ಕೂಡ ನೀಡಬಹುದೆಂದು ಯೋಚಿಸುವಂತೆ ಮಾಡುತ್ತದೆ.
-
ಹೆಚ್ಚು ಆಯ್ಕೆಗಳ ಅವಕಾಶ
ಇದರಲ್ಲಿ ಪರಿಗಣಿಸಬೇಕಾದ ಇನ್ನೊಂದು ಅಂಶವೆಂದರೆ, ಹ್ಯುಂಡೈ ಪ್ರಸ್ತುತ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಸಂಪೂರ್ಣವಾಗಿ ಲೋಡ್ ಮಾಡಲಾದ SX (O) ವೇರಿಯಂಟ್ ನಲ್ಲಿ ಮಾತ್ರ ನೀಡುತ್ತಿದೆ ಮತ್ತು ಇದರ ಬೆಲೆಯು ರೂ.20 ಲಕ್ಷವಾಗಿದೆ. ವೆನ್ಯೂ ಮತ್ತು ವೆನ್ಯೂ N ಲೈನ್‌ನ ಕಂಡುಬಂದಂತೆ, ಕ್ರೆಟಾ N ಲೈನ್ SUVಯನ್ನು ಹೆಚ್ಚಿನ ವೇರಿಯಂಟ್ ಗಳೊಂದಿಗೆ ಅದೇ ಪವರ್‌ಟ್ರೇನ್ ಅನ್ನು ನೀಡಬಹುದೆಂದು ನಾವು ನಂಬುತ್ತೇವೆ.
-
ಡಿಸೈನ್ ನ ವ್ಯತ್ಯಾಸ
ಪ್ರಿ-ಫೇಸ್‌ಲಿಫ್ಟ್ ಕ್ರೆಟಾವನ್ನು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ನೀಡಿದಾಗ, ಅದರ ಕ್ಯಾಬಿನ್ ಮತ್ತು ಎಕ್ಸಾಸ್ಟ್‌ನ ಕಲರ್ ಗಳ ಮೂಲಕ ಅದನ್ನು ಗುರುತಿಸಬಹುದಿತ್ತು. ಆದರೆ, ಅಂತಹ ಭಿನ್ನತೆಯು ಫೇಸ್‌ಲಿಫ್ಟ್ ಆಗಿರುವ ಕ್ರೆಟಾದ ಟರ್ಬೊ-ಪೆಟ್ರೋಲ್ ವೇರಿಯಂಟ್ ನಲ್ಲಿ ಇಲ್ಲ. ಕ್ರೆಟಾ N ಲೈನ್ ಅದರ ಸ್ಟ್ಯಾಂಡರ್ಡ್ ಮಾಡೆಲ್‌ಗೆ ಹೋಲಿಸಿದರೆ, 'N ಲೈನ್' ಬ್ಯಾಡ್ಜ್‌ಗಳು, ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಸ್ಪೋರ್ಟಿಯರ್-ಲುಕಿಂಗ್ ಅಲಾಯ್ ವೀಲ್‌ಗಳು, ಬ್ಲ್ಯಾಕ್ಡ್-ಔಟ್ ಕ್ಯಾಬಿನ್ ಮತ್ತು ಡ್ಯುಯಲ್ ಎಕ್ಸಾಸ್ಟ್ ಟಿಪ್ಸ್ ಸೇರಿದಂತೆ ಹಲವಾರು ಸ್ಟೈಲಿಂಗ್ ಅಪ್‌ಗ್ರೇಡ್‌ಗಳನ್ನು ಪಡೆಯುವ ಸಾಧ್ಯತೆಯಿದೆ.
-
ಕ್ರೆಟಾ N ಲೈನ್ ಹೊರಗಿನ ದೇಶಗಳಲ್ಲಿ ಈಗಾಗಲೇ ಲಭ್ಯವಿದೆ
ಬ್ರೆಜಿಲ್-ಸ್ಪೆಕ್ ಹುಂಡೈ ಕ್ರೆಟಾ N ಲೈನ್ ಚಿತ್ರವನ್ನು ರೆಫರೆನ್ಸ್ ಗಾಗಿ ಮಾತ್ರ ಬಳಸಲಾಗಿದೆ
ಕೊನೆಯದಾಗಿ, ಹ್ಯುಂಡೈ ಈಗಾಗಲೇ ಅದರ ವಿದೇಶಿ ಮಾರುಕಟ್ಟೆಗಳಲ್ಲಿ ತನ್ನ N ಲೈನ್ ಖಾತೆಗೆ ಕ್ರೆಟಾ SUV ಅನ್ನು ಸೇರಿಸಿದೆ. ಹ್ಯುಂಡೈ ತನ್ನ ಕ್ರೆಟಾ N ಲೈನ್ ಅನ್ನು ಪ್ರಸ್ತುತ ಕೆಲವು ದಕ್ಷಿಣ ಅಮೆರಿಕಾದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದೆ (ಆದರೆ ಭಾರತ-ಸ್ಪೆಕ್ ವರ್ಷನ್ ಅಲ್ಲ), ಇದರಿಂದಾಗಿ ಹ್ಯುಂಡೈ ನಮಗೆ SUVಯ ಸ್ಪೋರ್ಟಿಯರ್ ಆಗಿ ಕಾಣುವ ವರ್ಷನ್ ಅನ್ನು ನೀಡುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನು ಕೂಡ ಓದಿ: ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ವರ್ಸಸ್ ಕಿಯಾ ಸೆಲ್ಟೋಸ್: ಮೈಲೇಜ್ ಹೋಲಿಕೆ
ಪವರ್‌ಟ್ರೇನ್ ವಿವರಗಳು
2024 ಹ್ಯುಂಡೈ ಕ್ರೆಟಾ N ಲೈನ್ ಸ್ಟ್ಯಾಂಡರ್ಡ್ ಮಾಡೆಲ್‌ನಂತೆ ಅದೇ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 PS/ 253 Nm) ಅನ್ನು ಪಡೆಯಲಿದೆ, ಇದು 6-ಸ್ಪೀಡ್ MT ಮತ್ತು 7-ಸ್ಪೀಡ್ DCT (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ಎರಡನ್ನೂ ಹೊಂದುವ ಸಾಧ್ಯತೆಯಿದೆ. ಹ್ಯುಂಡೈ ತನ್ನ ಸ್ಟ್ಯಾಂಡರ್ಡ್ ಕ್ರೆಟಾವನ್ನು ಇನ್ನೂ ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತಿದೆ, ಅದರ ಸ್ಪೆಸಿಫಿಕೇಷನ್ ಗಳನ್ನು ನಮ್ಮ ವಿವರವಾದ ಲಾಂಚ್ ಲೇಖನದಲ್ಲಿ ನೀವು ಓದಬಹುದು. ಇದನ್ನು ರೆಗ್ಯುಲರ್ ಕ್ರೆಟಾದಿಂದ ಬೇರೆಯಾಗಿಸಲು N ಲೈನ್ ವರ್ಷನ್ ನಲ್ಲಿ ಶಾರ್ಪ್ ಆಗಿರುವ ಹ್ಯಾಂಡಲಿಂಗ್ ಗಾಗಿ ಸ್ವಲ್ಪ ವಿಭಿನ್ನವಾದ ಸಸ್ಪೆನ್ಷನ್ ಸೆಟಪ್ ಅನ್ನು ನೀಡಬಹುದು.
ಲಾಂಚ್ ಅನ್ನು ಯಾವಾಗ ನಿರೀಕ್ಷಿಸಬಹುದು ಮತ್ತು ಬೆಲೆ ಎಷ್ಟಿರಬಹುದು
ಹುಂಡೈ ತನ್ನ ಕ್ರೆಟಾ N ಲೈನ್ ಅನ್ನು ಮುಂಬರುವ ತಿಂಗಳುಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು, ಇದರ ಬೆಲೆಗಳು ಸುಮಾರು ರೂ.17.50 ಲಕ್ಷಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ). ಇದು ಕಿಯಾ ಸೆಲ್ಟೋಸ್ GTX + ಮತ್ತು X-ಲೈನ್ ಗೆ ನೇರ ಪ್ರತಿಸ್ಪರ್ಧಿಯಾಗಲಿದೆ, ಮತ್ತು ಸ್ಕೋಡಾ ಕುಶಾಕ್, ಫೋಕ್ಸ್ ವ್ಯಾಗನ್ ಟೈಗನ್ ಮತ್ತು MG ಆಸ್ಟರ್‌ಗೆ ಸ್ಪೋರ್ಟಿಯರ್ ಆಗಿ ಕಾಣುವ ಪರ್ಯಾಯ ಆಯ್ಕೆಯಾಗಲಿದೆ.
ಇನ್ನಷ್ಟು ಓದಿ: ಕ್ರೆಟಾ ಡೀಸೆಲ್