Login or Register ಅತ್ಯುತ್ತಮ CarDekho experience ಗೆ
Login

ಈಗ ಹೆಚ್ಚು ಫೀಚರ್‌ಗಳೊಂದಿಗೆ 2024 Land Rover Discovery Sport ಕಾರು 67.90 ಲಕ್ಷ ರೂ.ಗೆ ಬಿಡುಗಡೆ

ಎಂಟ್ರಿ ಲೆವೆಲ್ ಲ್ಯಾಂಡ್ ರೋವರ್ ಲಕ್ಸುರಿ SUVಯು 3.5 ಲಕ್ಷ ರೂಪಾಯಿಗಳ ವರೆಗಿನ ಅತಿ ದೊಡ್ಡ ಬೆಲೆ ಕಡಿತವನ್ನು ಪಡೆದುಕೊಂಡಿದೆ.

ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಜನವರಿಯ MY24 ಅಪ್‌ಡೇಟ್‌ನೊಂದಿಗೆ, ಭಾರತದಲ್ಲಿ ರೂ 67.90 ಲಕ್ಷಕ್ಕೆ (ಎಕ್ಸ್-ಶೋರೂಮ್ ಭಾರತದಾದ್ಯಂತ) ಬಿಡುಗಡೆಯಾಗಿದೆ. ಅಪ್‌ಡೇಟ್‌ಗಳಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಕರ್ವ್ ಆಗಿರುವ ಸ್ಕ್ರೀನ್ ಮತ್ತು ಹೊಸ ಡ್ರೈವ್ ಮೋಡ್ ಸೆಲೆಕ್ಟರ್ ಅನ್ನು ಒಳಗೊಂಡಿವೆ. ಲ್ಯಾಂಡ್ ರೋವರ್ ತನ್ನ ಲಕ್ಸುರಿ SUVಯ ಬೆಲೆಯನ್ನು ರೂ.3.5 ಲಕ್ಷದವರೆಗೆ ಕಡಿಮೆಗೊಳಿಸಿದೆ. ನಾವು ಹೆಚ್ಚಿನ ವಿವರಗಳನ್ನು ನೀಡುವ ಮೊದಲು, 2024 ಡಿಸ್ಕವರಿ ಸ್ಪೋರ್ಟ್‌ನ ಬೆಲೆಗಳನ್ನು ಈ ಕೆಳಗೆ ನೀಡಲಾಗಿದೆ:

ವೇರಿಯಂಟ್

ಬೆಲೆ

ಡೈನಾಮಿಕ್ SE ಪೆಟ್ರೋಲ್

ರೂ 67.90 ಲಕ್ಷ

ಡೈನಾಮಿಕ್ SE ಡೀಸೆಲ್

ರೂ 67.90 ಲಕ್ಷ

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಭಾರತದಾದ್ಯಂತ ಬೆಲೆಗಳಾಗಿವೆ

2024 ಡಿಸ್ಕವರಿ ಸ್ಪೋರ್ಟ್‌ ಪಡೆದ ಅಪ್ಡೇಟ್ ಗಳು

ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್‌ನ ಹೊರಭಾಗದ ಬದಲಾವಣೆಗಳಲ್ಲಿ, ಗ್ರಿಲ್, ಲೋವರ್ ಬಾಡಿ ಸಿಲ್ಸ್, ಲೋವರ್ ಬಂಪರ್ ಸೇರಿದ್ದು, ಇದರ ಜೊತೆಗೆ ಡಿಸ್ಕವರಿ ಬ್ಯಾಡ್ಜ್ ಈಗ ಗ್ಲೋಸ್ ಬ್ಲ್ಯಾಕ್‌ ಫಿನಿಷ್ ಪಡೆದಿದೆ. SUV ಈಗ ರೀಡಿಸೈನ್ ಆಗಿರುವ 19-ಇಂಚಿನ ಅಲಾಯ್ ವೀಲ್ ಗಳನ್ನು ಹೊಂದಿದೆ. ಮತ್ತು, ಇದು ಈಗ ಹೊಸ ವರೆಸಿನ್ ಬ್ಲೂ ಪೇಂಟ್ ಸ್ಕೀಮ್ ಅನ್ನು ಪಡೆದಿದೆ.

ಇದನ್ನು ಕೂಡ ಓದಿ: ಈ ಜನವರಿಯಲ್ಲಿ ಮಹೀಂದ್ರಾ SUV ಗಳು ರೂ.57,000 ದಷ್ಟು ದುಬಾರಿ

2024 ರ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್‌ನ ಪ್ರಮುಖ ಆಕರ್ಷಣೆಯೆಂದರೆ, ಇತ್ತೀಚೆಗೆ ರೇಂಜ್ ರೋವರ್ ವೆಲಾರ್‌ನಲ್ಲಿ ನೋಡಲಾದ ಹೊಸ 11.4-ಇಂಚಿನ ಕರ್ವ್ ಆಗಿರುವ ಗ್ಲಾಸ್ ಪಿವಿ ಪ್ರೊ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ರಿಫ್ರೆಶ್ ಮಾಡಿದ ಡ್ಯಾಶ್‌ಬೋರ್ಡ್ ಲೇಔಟ್. ಈ ಸಿಸ್ಟಮ್ ವೈರ್‌ಲೆಸ್ ಆಪಲ್ ಕಾರ್ ಪ್ಲೇ ಅನ್ನು ಕೂಡ ಸಪೋರ್ಟ್ ಮಾಡುತ್ತದೆ. ಅಪ್ಡೇಟ್ ಆಗಿರುವ SUVಯು "ಓಕ್ ಶ್ಯಾಡೋ" ಎಂದು ಲ್ಯಾಂಡ್ ರೋವರ್ ಕರೆಯುವ ಹೊಸ ಡ್ರೈವ್ ಮೋಡ್ ಸೆಲೆಕ್ಟರ್ ಮತ್ತು ಅಪ್ಡೇಟ್ ಆಗಿರುವ 3-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಕೂಡ ನೀಡಲಾಗಿದೆ.

ಫೀಚರ್ ಗಳು ಮತ್ತು ಸುರಕ್ಷತೆ

ಅಪ್ಡೇಟ್ ಆಗಿರುವ ಡಿಸ್ಕವರಿ ಸ್ಪೋರ್ಟ್‌ನಲ್ಲಿನ ಇತರ ಫೀಚರ್ ಗಳಲ್ಲಿ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, PM2.5 ಏರ್ ಫಿಲ್ಟರ್ ಮತ್ತು ಕ್ಲಿಯರ್ ಗ್ರೌಂಡ್ ವ್ಯೂ ಫೀಚರ್ ನೊಂದಿಗೆ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿವೆ (SUV ಸುತ್ತಲೂ ಅಳವಡಿಸಲಾಗಿರುವ ಕ್ಯಾಮೆರಾಗಳನ್ನು ಬಳಸಿಕೊಂಡು ಸ್ಕ್ರೀನ್ ನಲ್ಲಿ ಕಾರಿನ ಬಾನೆಟ್ ಅಡಿಯಲ್ಲಿ ಏನಿದೆ ಎಂಬುದನ್ನು ತೋರಿಸುತ್ತದೆ). 7-ಸೀಟರ್ ಲ್ಯಾಂಡ್ ರೋವರ್ SUVಯು 12-ವೇ ಡ್ರೈವರ್ ಮತ್ತು 10-ವೇ ಕೋ-ಡ್ರೈವರ್ ಗಾಗಿ ಮೆಮೊರಿ ಫಂಕ್ಷನ್ ಹೊಂದಿರುವ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಸೀಟ್, ಪನಾರೊಮಿಕ್ ಗ್ಲಾಸ್ ರೂಫ್ ಮತ್ತು ಪವರ್ ಆಗಿರುವ ಟೈಲ್‌ಗೇಟ್‌ಗಳನ್ನು ಪಡೆದಿದೆ.

ಪ್ಯಾಸೆಂಜರ್ ಸುರಕ್ಷತೆಯನ್ನು ನೋಡಿದರೆ, ಹಲವಾರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್ ಡಿಸೆಂಟ್ ಕಂಟ್ರೋಲ್, ರೋಲ್ ಸ್ಟೆಬಿಲಿಟಿ ಕಂಟ್ರೋಲ್, ಆಟೋ ಹೈ ಬೀಮ್ ಅಸಿಸ್ಟ್ ಮತ್ತು ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್‌ಗಳನ್ನು ನೀಡಲಾಗಿದೆ.

ಇದನ್ನು ಕೂಡ ಓದಿ: ಮರ್ಸಿಡಿಸ್-ಬೆಂಜ್ 2024 ರಲ್ಲಿ ಭಾರತದ ಮಾರುಕಟ್ಟೆಗೆ 12 ಹೊಸ ಮಾಡೆಲ್ ಗಳನ್ನು ತರಲಿದೆ

ಪವರ್‌ಟ್ರೇನ್ ನಲ್ಲಿ ಯಾವುದೇ ಅಪ್ಡೇಟ್ ಗಳಿಲ್ಲ

ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಹಿಂದೆ ಇದ್ದ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (249 PS / 365 Nm), ಮತ್ತು ಇಂಜಿನಿಯಮ್ 2-ಲೀಟರ್ ಡೀಸೆಲ್ ಎಂಜಿನ್ (204 PS / 430 Nm). ಎರಡೂ ಯೂನಿಟ್ ಗಳನ್ನು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಜೋಡಿಸಲಾಗಿದೆ, ಇದು ಎಲ್ಲಾ ನಾಲ್ಕು ವೀಲ್ ಗಳಿಗೆ ಪವರ್ ನೀಡುತ್ತದೆ.

ಪ್ರತಿಸ್ಪರ್ಧಿಗಳು

ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಭಾರತದಲ್ಲಿ ಮರ್ಸಿಡಿಸ್-ಬೆಂಜ್ GLC, ಆಡಿ Q5 ಮತ್ತು BMW X3 ಗೆ ಪ್ರತಿಸ್ಪರ್ಧಿಯಾಗಿದೆ.

ಇನ್ನಷ್ಟು ಓದಿ: ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಆಟೋಮ್ಯಾಟಿಕ್

s
ಅವರಿಂದ ಪ್ರಕಟಿಸಲಾಗಿದೆ

shreyash

  • 52 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ Land Rover ಡಿಸ್ಕಾವರಿ Sport

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ