Login or Register ಅತ್ಯುತ್ತಮ CarDekho experience ಗೆ
Login

ಬಿಡುಗಡೆಗೆ ಮುಂಚಿತವಾಗಿಯೇ 2024ರ Maruti Dzireನ ಅನಾವರಣ

ಮಾರುತಿ ಡಿಜೈರ್ ಗಾಗಿ shreyash ಮೂಲಕ ನವೆಂಬರ್ 06, 2024 09:13 pm ರಂದು ಪ್ರಕಟಿಸಲಾಗಿದೆ

2024 ಡಿಜೈರ್ ಹೊರಭಾಗದಲ್ಲಿ ಹೊಸ ಸ್ವಿಫ್ಟ್‌ಗಿಂತ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣುತ್ತದೆ, ಆದರೆ ಇದು ಅದರ ಹ್ಯಾಚ್‌ಬ್ಯಾಕ್ ಕೌಂಟರ್‌ಪಾರ್ಟ್‌ನಂತೆ ಅದೇ ಇಂಟಿರಿಯರ್‌ ಮತ್ತು ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿದೆ

  • ಹೊಸ ಜನರೇಶನ್‌ನ ಡಿಜೈರ್‌ಗಾಗಿ ಈಗಾಗಲೇ 11,000 ರೂ.ಗೆ ಬುಕ್ಕಿಂಗ್‌ಗಳು ನಡೆಯುತ್ತಿವೆ.

  • ಇದು LXi, VXi, ZXi, ಮತ್ತು ZXi Plus ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

  • ಹೊರಭಾಗದಲ್ಲಿ, ಇದು ನಯವಾದ ಎಲ್‌ಇಡಿ ಹೆಡ್‌ಲೈಟ್‌ಗಳು, ಹೊಸ ಅಲಾಯ್‌ ವೀಲ್‌ಗಳು ಮತ್ತು ಹೊಸ Y-ಆಕಾರದ ಎಲ್‌ಇಡಿ ಟೈಲ್ ಲೈಟ್‌ಗಳನ್ನು ಪಡೆಯುತ್ತದೆ.

  • ಸ್ವಿಫ್ಟ್‌ನಂತೆಯೇ ಅದೇ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯುತ್ತದೆ, ಆದರೆ ಡ್ಯುಯಲ್-ಟೋನ್ ಕಪ್ಪು ಮತ್ತು ಬೀಜ್ ಥೀಮ್ ಅನ್ನು ಪಡೆಯುತ್ತದೆ.

  • ಫೀಚರ್‌ನ ಹೈಲೈಟ್‌ಗಳಲ್ಲಿ 9-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸಿಂಗಲ್-ಪೇನ್ ಸನ್‌ರೂಫ್ (ಈ ಸೆಗ್ಮೆಂಟ್‌ನಲ್ಲಿ ಮೊದಲು) ಸೇರಿವೆ.

  • ಪ್ರಯಾಣಿಕರ ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ನಂತೆ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾದಿಂದ ನೋಡಿಕೊಳ್ಳಲಾಗುತ್ತದೆ.

  • ಸ್ವಿಫ್ಟ್‌ನಂತೆ ಅದೇ 82 ಪಿಎಸ್‌ 1.2-ಲೀಟರ್ Z ಸರಣಿಯ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ.

  • 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಿಎನ್‌ಜಿಯನ್ನು ಸಹ ನೀಡಲಾಗುತ್ತದೆ.

  • 6.70 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಬೆಲೆಗಳು ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ಹೊಸ ಜನರೇಶನ್‌ನ ಮಾರುತಿ ಡಿಜೈರ್ ಅಂತಿಮವಾಗಿ ಅನಾವರಣಗೊಂಡಿದೆ ಮತ್ತು ನವೆಂಬರ್ 11 ರಂದು ಮಾರುಕಟ್ಟೆಗೆ ತನ್ನ ಮೊದಲ ಹೆಜ್ಜೆಯನ್ನಿಡಲಿದೆ. ಇದು ತಾಜಾ ವಿನ್ಯಾಸ, ಸ್ವಿಫ್ಟ್-ಪ್ರೇರಿತ ಕ್ಯಾಬಿನ್ ಲೇಔಟ್ (ಹಿಂದಿನ ತಲೆಮಾರುಗಳಲ್ಲಿಯೂ ಪ್ರಚಲಿತವಾಗಿದೆ) ಮತ್ತು ಸ್ವಿಫ್ಟ್‌ನಿಂದ ಎರವಲು ಪಡೆದ ಹೊಸ Z-ಸೀರಿಸ್‌ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ. ಮಾರುತಿ ಹೊಸ ಡಿಜೈರ್ ಅನ್ನು LXi, VXi, ZXi, ಮತ್ತು ZXi Plus ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ. ಹೊಸ ಡಿಜೈರ್ ಹೇಗೆ ಕಾಣುತ್ತದೆ ಮತ್ತು ಅದು ಏನನ್ನು ನೀಡುತ್ತದೆ ಎಂಬುದನ್ನು ವಿವರವಾಗಿ ನೋಡೋಣ.

ಒಂದು ತಾಜಾ ವಿನ್ಯಾಸ

2024ರ ಡಿಜೈರ್ ಈಗ ವಿನ್ಯಾಸದ ವಿಷಯದಲ್ಲಿ ಸ್ವಿಫ್ಟ್‌ನಿಂದ ಸಂಪೂರ್ಣವಾಗಿ ಭಿನ್ನವಾಗಿದೆ. ಇದು ಬಹು ಅಡ್ಡವಾದ ಸ್ಲ್ಯಾಟ್‌ಗಳೊಂದಿಗೆ ದೊಡ್ಡ ಗ್ರಿಲ್ ಅನ್ನು ಹೊಂದಿದೆ, ಇದು ಕ್ರೋಮ್ ಸ್ಟ್ರಿಪ್ ಅನ್ನು ಹೊಂದಿರುವ ಸ್ವಿಫ್ಟ್‌ನ ಜೇನುಗೂಡು ಮಾದರಿಯ ಗ್ರಿಲ್‌ಗಿಂತ ಭಿನ್ನವಾಗಿದೆ. ಇದು ಸಮತಲ ಡಿಆರ್‌ಎಲ್‌ಗಳನ್ನು ಹೊಂದಿರುವ ನಯವಾದ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ ಮತ್ತು ಆಕ್ರಮಣಕಾರಿಯಾಗಿ ವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್ ಅನ್ನು ಮರುಹೊಂದಿಸಲಾದ ಫಾಗ್ ಲ್ಯಾಂಪ್ ಹೌಸಿಂಗ್‌ಗಳನ್ನು ಸಹ ಸಂಯೋಜಿಸುತ್ತದೆ.

ಒಟ್ಟಾರೆ ಸೈಡ್‌ ಮತ್ತು ವಿಂಡೋ ಲೈನ್ ಈಗಲೂ ಹೊರಹೋಗುವ ಆವೃತ್ತಿಗೆ ಹೋಲುತ್ತದೆ, ಆದರೆ, 2024 ಡಿಜೈರ್ ಹೊಸದಾಗಿ ವಿನ್ಯಾಸಗೊಳಿಸಿದ 15-ಇಂಚಿನ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳಲ್ಲಿ ಸವಾರಿ ಮಾಡುತ್ತದೆ. ಹಿಂಭಾಗದಲ್ಲಿ, ಹೊಸ ಡಿಜೈರ್ Y-ಆಕಾರದ ಎಲ್ಇಡಿ ಟೈಲ್ ಲೈಟ್‌ಗಳನ್ನು ಕ್ರೋಮ್ ಅಂಶದಿಂದ ಕನೆಕ್ಟ್‌ ಆಗಿರುವುದನ್ನು ನಾವು ನೋಡಬಹುದು.

ಸ್ವಿಫ್ಟ್ ಪ್ರೇರಿತ ಕ್ಯಾಬಿನ್

ಹೊಸ-ಪೀಳಿಗೆಯ ಡಿಜೈರ್ ಹೊರಗಿನಿಂದ ಸಂಪೂರ್ಣವಾಗಿ ವಿಭಿನ್ನವಾಗಿ ಕಂಡುಬಂದರೂ, ಡ್ಯಾಶ್‌ಬೋರ್ಡ್ ವಿನ್ಯಾಸವು ಸ್ವಿಫ್ಟ್‌ನಂತೆಯೇ ಇದೆ. ಆದಾಗ್ಯೂ, ಸ್ವಿಫ್ಟ್‌ನ ಸಂಪೂರ್ಣ ಕಪ್ಪು ಒಳಭಾಗಕ್ಕಿಂತ ಭಿನ್ನವಾಗಿ, ಹೊಸ ಡಿಜೈರ್ ಡ್ಯಾಶ್‌ಬೋರ್ಡ್‌ನಲ್ಲಿ ನಕಲಿ ಮರದ ಇನ್ಸರ್ಟ್‌ನೊಂದಿಗೆ ಡ್ಯುಯಲ್-ಟೋನ್ ಕಪ್ಪು ಮತ್ತು ಬೀಜ್ ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ. ಇಲ್ಲಿ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಸಹ ಸ್ವಿಫ್ಟ್ ಮತ್ತು ಬಲೆನೊದಂತಹ ಕೆಲವು ಮಾರುತಿ ಕಾರುಗಳಲ್ಲಿ ನೀಡಲಾದಂತೆಯೇ ಇರುತ್ತದೆ.

ಇದನ್ನೂ ಸಹ ಓದಿ: 2024ರ ಮಾರುತಿ ಡಿಜೈರ್‌ಗಾಗಿ ಬುಕಿಂಗ್‌ಗಳು ಪ್ರಾರಂಭ, ಬಿಡುಗಡೆಗೆ ಮುಂಚಿತವಾಗಿಯೇ ಇಂಟೀರಿಯರ್ ಫೋಟೋಗಳು ಲೀಕ್‌..!

ಫೀಚರ್‌ಗಳು ಮತ್ತು ಸುರಕ್ಷತೆ

ಮಾರುತಿಯು 2024 ಡಿಜೈರ್ ಅನ್ನು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಬೆಂಬಲದೊಂದಿಗೆ 9 ಇಂಚಿನ ಟಚ್‌ಸ್ಕ್ರೀನ್, ಹಿಂಬದಿ ದ್ವಾರಗಳೊಂದಿಗೆ ಆಟೋ ಎಸಿ, ಅನಲಾಗ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಸೌಕರ್ಯಗಳೊಂದಿಗೆ ಸಜ್ಜುಗೊಳಿಸಿದೆ. ಡಿಜೈರ್ ಸಿಂಗಲ್-ಪೇನ್ ಸನ್‌ರೂಫ್‌ನೊಂದಿಗೆ ಬಂದ ಭಾರತದಲ್ಲಿನ ಮೊದಲ ಸಬ್‌ಕಾಂಪ್ಯಾಕ್ಟ್ ಸೆಡಾನ್ ಆಗಿದೆ.

ಇದರ ಸುರಕ್ಷತಾ ಕಿಟ್‌ನಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಸೇರಿವೆ. ಸ್ವಿಫ್ಟ್‌ಗಿಂತ ಹೆಚ್ಚುವರಿಯಾಗಿ, ಡಿಜೈರ್ 360-ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯುತ್ತದೆ (ಈ ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ).

ಪವರ್‌ಟ್ರೈನ್ ಆಯ್ಕೆಗಳು

2024 ಡಿಜೈರ್ ಹೊಸ 1.2-ಲೀಟರ್ 3 ಸಿಲಿಂಡರ್ Z ಸಿರೀಸ್‌ನ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಇದು ಹೊಸ ಸ್ವಿಫ್ಟ್‌ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1.2-ಲೀಟರ್ 3 ಸಿಲಿಂಡರ್ Z ಸೀರಿಸ್‌ ಪೆಟ್ರೋಲ್ ಎಂಜಿನ್

1.2-ಲೀಟರ್ 3 ಸಿಲಿಂಡರ್ Z ಸೀರಿಸ್‌ ಪೆಟ್ರೋಲ್-ಸಿಎನ್‌ಜಿ

ಪವರ್‌

82 ಪಿಎಸ್

70 ಪಿಎಸ್

ಟಾರ್ಕ್‌

112 ಎನ್ಎಂ

102 ಎನ್ಎಂ

ಟ್ರಾನ್ಸ್‌ಮಿಷನ್‌

5-ಸ್ಪೀಡ್ ಮ್ಯಾನುವಲ್‌, 5-ಸ್ಪೀಡ್ ಎಎಮ್‌ಟಿ

5-ಸ್ಪೀಡ್ ಮ್ಯಾನುವಲ್‌

ಕ್ಲೈಮ್‌ ಮಾಡಲಾದ ಮೈಲೇಜ್‌

ಪ್ರತಿ ಲೀ.ಗೆ 24.79 ಕಿಮೀ(ಮ್ಯಾನುವಲ್‌), ಪ್ರತಿ ಲೀ.ಗೆ 25.71 ಕಿ.ಮೀ. (ಎಎಮ್‌ಟಿ)

ಪ್ರತಿ ಕೆ.ಜಿ.ಗೆ 33.73 ಕಿ.ಮೀ

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಹೊಸ ತಲೆಮಾರಿನ ಡಿಜೈರ್‌ನ ಬೆಲೆ 6.70 ಲಕ್ಷ ರೂ.ನಿಂದ(ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಹೊಸ ತಲೆಮಾರಿನ ಹೋಂಡಾ ಅಮೇಜ್, ಟಾಟಾ ಟಿಗೋರ್ ಮತ್ತು ಹ್ಯುಂಡೈ ಔರಾದೊಂದಿಗೆ ತನ್ನ ಪೈಪೋಟಿಯನ್ನು ಮುಂದುವರಿಸುತ್ತದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on Maruti ಡಿಜೈರ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.6.54 - 9.11 ಲಕ್ಷ*
ಫೇಸ್ ಲಿಫ್ಟ್
ಹೊಸ ವೇರಿಯೆಂಟ್
Rs.11.82 - 16.55 ಲಕ್ಷ*
ಹೊಸ ವೇರಿಯೆಂಟ್
Rs.6 - 9.50 ಲಕ್ಷ*
ಹೊಸ ವೇರಿಯೆಂಟ್
Rs.11.07 - 17.55 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ