Login or Register ಅತ್ಯುತ್ತಮ CarDekho experience ಗೆ
Login

ಡೀಲರ್‌ಶಿಪ್‌ಗಳನ್ನು ತಲುಪಿದ 2024 Maruti Dzire, ಟೆಸ್ಟ್ ಡ್ರೈವ್‌ಗಳು ಶೀಘ್ರದಲ್ಲೇ ಪ್ರಾರಂಭ

ಮಾರುತಿ ಡಿಜೈರ್ ಗಾಗಿ shreyash ಮೂಲಕ ನವೆಂಬರ್ 13, 2024 07:31 pm ರಂದು ಪ್ರಕಟಿಸಲಾಗಿದೆ

ಮಾರುತಿಯು ಹೊಸ-ಜನರೇಶನ್‌ನ ಡಿಜೈರ್ ಅನ್ನು ಚಂದಾದಾರಿಕೆಯ ಆಧಾರದ ಮೇಲೆ ತಿಂಗಳಿಗೆ 18,248 ರೂ.ನಿಂದ ಪ್ರಾರಂಭಿಸುತ್ತಿದೆ

  • ಬಾಹ್ಯ ಬದಲಾವಣೆಗಳಲ್ಲಿ ಹೊಸ ಗ್ರಿಲ್ ಮತ್ತು ಎಲ್ಇಡಿ ಲೈಟಿಂಗ್ ಸೆಟಪ್ ಮತ್ತು ತಾಜಾ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳು ಸೇರಿವೆ.

  • 9-ಇಂಚಿನ ಟಚ್‌ಸ್ಕ್ರೀನ್, ಆಟೋ ಎಸಿ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಸೌಕರ್ಯಗಳೊಂದಿಗೆ ಬರುತ್ತದೆ.

  • ಸುರಕ್ಷತಾ ಫೀಚರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಸೇರಿವೆ.

  • 5-ಸ್ಪೀಡ್ ಮ್ಯಾನುವಲ್‌ ಮತ್ತು AMT ಆಯ್ಕೆಗಳೊಂದಿಗೆ ಹೊಸ 1.2-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗುತ್ತಿದೆ.

  • 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾದ ಕಡಿಮೆ ಔಟ್‌ಪುಟ್ (70 PS/102 Nm) ಜೊತೆಗೆ ಐಚ್ಛಿಕ ಸಿಎನ್‌ಜಿ ಪವರ್‌ಟ್ರೇನ್ ಅನ್ನು ಸಹ ಪಡೆಯುತ್ತಿರಿ.

  • ಭಾರತದಾದ್ಯಂತ ಇದರ ಪರಿಚಯಾತ್ಮಕ, ಎಕ್ಸ್ ಶೋ ರೂಂ ಬೆಲೆ 6.79 ಲಕ್ಷ ರೂ.ನಿಂದ 10.14 ಲಕ್ಷ ರೂ.ವರೆಗೆ ಇದೆ.

2024 ರ ಮಾರುತಿ ಡಿಜೈರ್ ಮಾರುತಿಯ ಇತ್ತೀಚಿನ ಬಿಡುಗಡೆಗಳಲ್ಲಿ ಒಂದಾಗಿದೆ ಮತ್ತು ಭಾರತದಾದ್ಯಂತ ಇದರ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆ 6.79 ಲಕ್ಷ ರೂ.ನಿಂದ 10.14 ಲಕ್ಷ ರೂ.ವರೆಗೆ ಇದೆ. ಹೊಸ ಡಿಜೈರ್ ಈಗ ಕೆಲವು ಶೋರೂಮ್‌ಗಳಿಗೆ ಆಗಮಿಸಿದೆ ಮತ್ತು ಗ್ರಾಹಕರು ಈಗ ಅದರ ವೈಭೋಗವನ್ನು ಪರಿಶೀಲಿಸಬಹುದು. ಹೊಸ ಜನರೇಶನ್‌ನ ಡಿಜೈರ್‌ಗಾಗಿ ಟೆಸ್ಟ್ ಡ್ರೈವ್‌ಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ. ಅದು ಹೇಗೆ ಕಾಣುತ್ತದೆ ಮತ್ತು ಅದು ಏನು ನೀಡುತ್ತದೆ ಎಂಬುದನ್ನು ನೋಡೋಣ.

ಡಿಸೈನ್‌

ಚಿತ್ರದಲ್ಲಿ ತೋರಿಸಿರುವ ಡಿಜೈರ್ ಗ್ಯಾಲಂಟ್ ರೆಡ್ ಬಾಡಿ ಕಲರ್‌ ಅನ್ನು ಹೊಂದಿದೆ, ಇದು ಡಿಜೈರ್‌ಗಾಗಿ ಮಾರುತಿಯಿಂದ ಹೊಸ ಬಣ್ಣವಾಗಿದೆ. ಹೊರಭಾಗದಲ್ಲಿರುವ ಪ್ರಮುಖ ಬದಲಾವಣೆಗಳು ಸಮತಲವಾದ ಸ್ಲ್ಯಾಟ್‌ಗಳೊಂದಿಗೆ ಪ್ರಮುಖವಾದ ಗ್ರಿಲ್, ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಹೊಸ ಹೆಡ್‌ಲೈಟ್‌ಗಳು ಮತ್ತು ಡ್ಯುಯಲ್-ಟೋನ್ 15-ಇಂಚಿನ ಅಲಾಯ್‌ ವೀಲ್‌ಗಳ ತಾಜಾ ಸೆಟ್‌ಗಳನ್ನು ಒಳಗೊಂಡಿವೆ. ಹಿಂಭಾಗವು ಈಗ Y-ಆಕಾರದ ಎಲ್ಇಡಿ ಇಂಟರ್ನಲ್‌ ಲೈಟಿಂಗ್‌ ಅಂಶಗಳೊಂದಿಗೆ ಹೊಸ ಟೈಲ್ ಲೈಟ್‌ಗಳನ್ನು ಸಂಯೋಜಿಸುತ್ತದೆ.

ಇತ್ತೀಚಿನ ಫೇಸ್‌ಲಿಫ್ಟ್‌ನಲ್ಲಿ, 2024ರ ಮಾರುತಿ ಡಿಜೈರ್ ತನ್ನ ಹ್ಯಾಚ್‌ಬ್ಯಾಕ್ ಪ್ರತಿರೂಪವಾದ ಸ್ವಿಫ್ಟ್‌ನಿಂದ ಸಂಪೂರ್ಣವಾಗಿ ಭಿನ್ನವಾಗಿದೆ.

ಇದನ್ನು ಸಹ ಓದಿ: ಹೊಸ Maruti Dzire ವರ್ಸಸ್‌ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ

ಇಂಟೀರಿಯರ್‌ ಮತ್ತು ಫೀಚರ್‌ಗಳು

2024 ಡಿಜೈರ್ ಹೊಸ ಸ್ವಿಫ್ಟ್‌ನಂತೆಯೇ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯುತ್ತದೆ. ಆದರೆ, ಇದು ಡ್ಯಾಶ್‌ಬೋರ್ಡ್‌ನಲ್ಲಿ ಫೇಕ್‌ ವುಡನ್‌ ಇನ್ಸರ್ಟ್‌ನೊಂದಿಗೆ ಕಪ್ಪು ಮತ್ತು ಬೀಜ್ ಇಂಟಿರಿಯರ್‌ ಥೀಮ್ ಅನ್ನು ಪಡೆಯುತ್ತದೆ.

ಮಾರುತಿಯು ಹೊಸ ಜನರೇಶನ್‌ನ ಡಿಜೈರ್ ಅನ್ನು 9 ಇಂಚಿನ ಟಚ್‌ಸ್ಕ್ರೀನ್, ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಸೌಕರ್ಯಗಳೊಂದಿಗೆ ಸಜ್ಜುಗೊಳಿಸಿದೆ. ಇದು ಸಿಂಗಲ್ ಪೇನ್ ಸನ್‌ರೂಫ್‌ನೊಂದಿಗೆ ಬರುತ್ತಿರುವ ಭಾರತದ ಮೊದಲ ಸಬ್‌ಕಾಂಪ್ಯಾಕ್ಟ್ ಸೆಡಾನ್ ಆಗಿದೆ. ಪ್ರಯಾಣಿಕರ ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), 360-ಡಿಗ್ರಿ ಕ್ಯಾಮೆರಾ (ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ನೋಡಿಕೊಳ್ಳುತ್ತವೆ.

ಪೆಟ್ರೋಲ್ ಮತ್ತು CNG ಎರಡರಲ್ಲೂ ಲಭ್ಯವಿದೆ

ಇದು ಹೊಸ 1.2-ಲೀಟರ್ 3-ಸಿಲಿಂಡರ್ Z ಸೀರಿಸ್‌ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದನ್ನು ಹೊಸ ಸ್ವಿಫ್ಟ್‌ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಇದರ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1.2-ಲೀಟರ್ 3-ಸಿಲಿಂಡರ್ Z ಸಿರೀಸ್‌ ಪೆಟ್ರೋಲ್ ಎಂಜಿನ್

  1. 1.2-ಲೀಟರ್ 3-ಸಿಲಿಂಡರ್ Z ಸಿರೀಸ್‌ ಪೆಟ್ರೋಲ್+ಸಿಎನ್‌ಜಿ

ಪವರ್‌

82 ಪಿಎಸ್‌

70 ಪಿಎಸ್‌

ಟಾರ್ಕ್‌

112 ಎನ್‌ಎಮ್‌

102 ಎನ್‌ಎಮ್‌

ಗೇರ್‌ಬಾಕ್ಸ್‌

5-ಸ್ಪೀಡ್ ಮ್ಯಾನುವಲ್‌, 5-ಸ್ಪೀಡ್ ಎಎಮ್‌ಟಿ

5-ಸ್ಪೀಡ್ ಮ್ಯಾನುವಲ್‌

ಕ್ಲೈಮ್‌ ಮಾಡಲಾದ ಮೈಲೇಜ್‌

ಪ್ರತಿ ಲೀ.ಗೆ 24.79 ಕಿ.ಮೀ.(ಮ್ಯಾನುವಲ್‌), ಪ್ರತಿ ಲೀ.ಗೆ 25.71 ಕಿ.ಮೀ. (ಎಎಮ್‌ಟಿ)

ಪ್ರತಿ ಕೆ.ಜಿ.ಗೆ 33.73 ಕಿ.ಮೀ

ಬೆಲೆ ಮತ್ತು ಪ್ರತಿಸ್ಪರ್ಧಿಗಳು

2024 ಮಾರುತಿ ಡಿಜೈರ್ ಟಾಟಾ ಟಿಗೊರ್ ಮತ್ತು ಹ್ಯುಂಡೈ ಔರಾಗೆ ಪ್ರತಿಸ್ಪರ್ಧಿಯಾಗಿದೆ. ಇದು ಹೊಸ ಜನರೇಶನ್‌ನ ಹೋಂಡಾ ಅಮೇಜ್‌ಗೆ ಸಹ ಸ್ಪರ್ಧೆಯನ್ನು ಒಡ್ಡುತ್ತದೆ. ಮಾರುತಿಯು ಹೊಸ-ಜನರೇಶನ್‌ನ ಡಿಜೈರ್ ಅನ್ನು ಚಂದಾದಾರಿಕೆಯ ಆಧಾರದ ಮೇಲೆ ನೀಡುತ್ತಿದ್ದು, ಇದು ತಿಂಗಳಿಗೆ 18,248 ರೂ.ನಿಂದ ಪ್ರಾರಂಭವಾಗುತ್ತದೆ. ಇದರಲ್ಲಿ ರಿಜಿಸ್ಟ್ರೇಶನ್‌, ನಿರ್ವಹಣೆ, ಇನ್ಶೂರೆನ್ಸ್‌ ಮತ್ತು ರೋಡ್‌ ಸೈಡ್‌ ಅಸಿಸ್ಟೆನ್ಸ್‌ ಅನ್ನು ಒಳಗೊಂಡಿರುತ್ತದೆ.

ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸ್ಆಪ್ ಚಾನೆಲ್ ಅನ್ನು ಫಾಲೋ ಮಾಡಿ

ಇದರ ಬಗ್ಗೆ ಇನ್ನಷ್ಟು ಓದಿ : ಮಾರುತಿ ಡಿಜೈರ್ ಎಎಮ್‌ಟಿ

Share via

Write your Comment on Maruti ಡಿಜೈರ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
ಹೊಸ ವೇರಿಯೆಂಟ್
Rs.11.82 - 16.55 ಲಕ್ಷ*
ಹೊಸ ವೇರಿಯೆಂಟ್
Rs.6 - 9.50 ಲಕ್ಷ*
ಹೊಸ ವೇರಿಯೆಂಟ್
Rs.11.07 - 17.55 ಲಕ್ಷ*
ಫೇಸ್ ಲಿಫ್ಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ