ಹೊಸ Maruti Dzire ವರ್ಸಸ್ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ
ಮಾರುತಿ ಡಿಜೈರ್ ಗಾಗಿ shreyash ಮೂಲಕ ನವೆಂಬರ್ 13, 2024 06:06 am ರಂದು ಮಾರ್ಪಡಿಸಲಾಗಿದೆ
- 125 Views
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ ಡಿಜೈರ್ ಸನ್‌ರೂಫ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತಿರುವ ಎರಡು ಫೀಚರ್‌ಗಳೊಂದಿಗೆ ಬರುತ್ತದೆ
2024ರ ಮಾರುತಿ ಡಿಜೈರ್ ಈಗ ಹೊಸ ವಿನ್ಯಾಸ, ಇಂಟಿರೀಯರ್ ಫೀಚರ್‌ಗಳು ಮತ್ತು ಮಾರುತಿ ಸ್ವಿಫ್ಟ್‌ನಿಂದ ಎರವಲು ಪಡೆದ ಹೊಸ Z ಸಿರೀಸ್‌ನ ಎಂಜಿನ್ ಅನ್ನು ಒಳಗೊಂಡು ಮಾರುಕಟ್ಟೆಗೆ ಪ್ರವೇಶಿಸಿದೆ. ಡಿಜೈರ್ ಹ್ಯುಂಡೈ ಔರಾ, ಹೋಂಡಾ ಅಮೇಜ್ ಮತ್ತು ಟಾಟಾ ಟಿಗೋರ್‌ಗಳೊಂದಿಗೆ ಸ್ಪರ್ಧಿಸುವುದನ್ನು ಮುಂದುವರೆಸಿದೆ. 2024ರ ಡಿಜೈರ್ ಬೆಲೆಗಳ ವಿಷಯದಲ್ಲಿ ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಹೇಗೆ ದರವನ್ನು ಹೊಂದಿದೆ ಎಂಬುದು ಇಲ್ಲಿದೆ.
ಪೆಟ್ರೋಲ್ ಮ್ಯಾನುವಲ್
2024ರ ಮಾರುತಿ ಡಿಜೈರ್ |
ಹ್ಯುಂಡೈ ಔರಾ |
ಹೋಂಡಾ ಅಮೇಜ್ |
ಟಾಟಾ ಟಿಗೋರ್ |
XE - 6 ಲಕ್ಷ ರೂ. |
|||
E - 6.49 ಲಕ್ಷ ರೂ. |
XM - 6.60 ಲಕ್ಷ ರೂ. |
||
LXi - 6.79 ಲಕ್ಷ ರೂ. |
|||
S - 7.33 ಲಕ್ಷ ರೂ. |
E - 7.20 ಲಕ್ಷ ರೂ. |
XZ - 7.30 ಲಕ್ಷ ರೂ. |
|
E CNG - 7.49 ಲಕ್ಷ ರೂ. |
|||
S - 7.63 ಲಕ್ಷ ರೂ. |
XM CNG - 7.60 ಲಕ್ಷ ರೂ. |
||
VXi - 7.79ಲಕ್ಷ ರೂ. |
XZ Plus - 7.80 ಲಕ್ಷ ರೂ. |
||
SX - 8.09 ಲಕ್ಷ ರೂ. |
|||
S CNG - 8.31 ಲಕ್ಷ ರೂ. |
XZ CNG - 8.25 ಲಕ್ಷ ರೂ. |
||
VXi CNG - 8.74 ಲಕ್ಷ ರೂ. |
SX(O) - 8.66 ಲಕ್ಷ ರೂ. |
||
ZXi - 8.89 ಲಕ್ಷ ರೂ. |
XZ Plus CNG - 8.80 ಲಕ್ಷ ರೂ. |
||
SX CNG - 9.05 ಲಕ್ಷ ರೂ. |
VX - 9.05 ಲಕ್ಷ ರೂ. |
||
VX Elite - 9.15 ಲಕ್ಷ ರೂ. |
|||
ZXi Plus - 9.69 ಲಕ್ಷ ರೂ. |
|||
ZXi CNG - 9.84 ಲಕ್ಷ ರೂ. |
ಗಮನಿಸಿದ ಪ್ರಮುಖ ಅಂಶಗಳು
-
2024ರ ಮಾರುತಿ ಡಿಜೈರ್‌ನ ಬೆಲೆ 6.79 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ, ಇದು ಹೋಂಡಾ ಅಮೇಜ್‌ನ ಎಂಟ್ರಿ ಲೆವೆಲ್ ಇ ವೇರಿಯೆಂಟ್‌ಗಿಂತ 41,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ. ಆದರೆ, ಡಿಜೈರ್‌ನ ಆರಂಭಿಕ ಬೆಲೆಯು ಹುಂಡೈ ಔರಾ ಮತ್ತು ಟಾಟಾ ಟಿಗೋರ್‌ಗಳಿಗಿಂತ ಕ್ರಮವಾಗಿ 30,000 ಮತ್ತು 79,000 ರೂ.ನಷ್ಟು ಹೆಚ್ಚಿದೆ.
-
ಇದು 9.69 ಲಕ್ಷ ರೂ.ವಿನ ಬೆಲೆಯೊಂದಿಗೆ ಅಗ್ರಸ್ಥಾನದಲ್ಲಿದೆ, ಈ ಹೋಲಿಕೆಯಲ್ಲಿ ಉಲ್ಲೇಖಿಸಲಾದ ಎಲ್ಲಾ ನಾಲ್ಕು ಮೊಡೆಲ್‌ಗಿಂತ ಇದು ಅತ್ಯಧಿಕವಾಗಿದೆ.
-
ಮಾರುತಿ ಡಿಜೈರ್‌ನ ಮಿಡ್-ಸ್ಪೆಕ್ VXi ವೇರಿಯೆಂಟ್ ಟಾಟಾ ಟಿಗೋರ್‌ನ ಟಾಪ್-ಸ್ಪೆಕ್ ಎಕ್ಸ್‌ಝಡ್ ಪ್ಲಸ್ ಪೆಟ್ರೋಲ್-ಮ್ಯಾನ್ಯುವಲ್ ವೇರಿಯೆಂಟ್‌ಗೆ ಸರಿಸಮಾನವಾಗಿದೆ. ಡಿಜೈರ್‌ನ VXi ಗಿಂತ ಹೆಚ್ಚುವರಿಯಾಗಿ, ಟಿಗೋರ್ XZ Plus ಆಟೋ ಎಸಿ, 8-ಸ್ಪೀಕರ್ ಸೌಂಡ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಹಿಂಬದಿ ಪಾರ್ಕಿಂಗ್ ಕ್ಯಾಮೆರಾ, ಆಟೋ ಹೆಡ್‌ಲೈಟ್‌ಗಳು ಮತ್ತು ಮಳೆ-ಸೆನ್ಸಿಂಗ್ ವೈಪರ್‌ಗಳಂತಹ ಸೌಕರ್ಯಗಳನ್ನು ನೀಡುತ್ತದೆ.
-
ಅದೇ ರೀತಿ, ಹ್ಯುಂಡೈ ಔರಾದ ಟಾಪ್-ಸ್ಪೆಕ್ SX(O) ವೇರಿಯೆಂಟ್ ಮಾರುತಿ ಡಿಜೈರ್‌ನ ಮಿಡ್-ಸ್ಪೆಕ್ ZXi ವೇರಿಯೆಂಟ್‌ಗಿಂತ 23,000 ರೂ.ನಷ್ಟು ಅಗ್ಗವಾಗಿದೆ. ಇಲ್ಲಿ ಔರಾವು ಇಲ್ಲಿ ದೊಡ್ಡ 8-ಇಂಚಿನ ಟಚ್‌ಸ್ಕ್ರೀನ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ನೀಡುತ್ತದೆ. ಸಬ್-4ಎಮ್ ಸೆಡಾನ್‌ಗಳ ಎರಡೂ ವೇರಿಯೆಂಟ್‌ಗಳು, ಆಟೋ AC, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ನೀಡುತ್ತವೆ.
-
ಹೋಂಡಾ ಅಮೇಜ್, ಅದರ ಟಾಪ್-ಸ್ಪೆಕ್ ಟ್ರಿಮ್‌ನಲ್ಲಿ, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಎಸಿ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಸೌಕರ್ಯಗಳೊಂದಿಗೆ ಬರುತ್ತದೆ.
-
2024 ಡಿಜೈರ್ ಭಾರತದಲ್ಲಿನ ಮೊದಲ ಸಬ್‌ಕಾಂಪ್ಯಾಕ್ಟ್ ಸೆಡಾನ್ ಆಗಿದ್ದು, ಸಿಂಗಲ್-ಪೇನ್ ಸನ್‌ರೂಫ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಫೀಚರ್‌ಗಳೊಂದಿಗೆ ಬರುತ್ತದೆ, ಇವೆರಡನ್ನೂ ಅದರ ಟಾಪ್-ಸ್ಪೆಕ್ ZXi ಪ್ಲಸ್ ವೇರಿಯೆಂಟ್‌ನೊಂದಿಗೆ ಮಾತ್ರ ನೀಡಲಾಗುತ್ತದೆ.
-
2024 ಡಿಜೈರ್ ಹೊಸ 1.2-ಲೀಟರ್ Z ಸಿರೀಸ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಇದು 82 ಪಿಎಸ್ ಮತ್ತು 112 ಎನ್‌ಎಮ್‌ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸುತ್ತದೆ. ಇದು 70 ಪಿಎಸ್ ಮತ್ತು 102 ಎನ್‌ಎಮ್‌ನ ಕಡಿಮೆ ಔಟ್‌ಪುಟ್‌ನೊಂದಿಗೆ ಸಿಎನ್‌ಜಿಯಲ್ಲಿಯೂ ಲಭ್ಯವಿದೆ.
-
ಡಿಜೈರ್ ನಂತರ, ಟಾಟಾ ಟಿಗೊರ್ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು 86 ಪಿಎಸ್ ಮತ್ತು 113 ಎನ್‌ಎಮ್ ಪೆಟ್ರೋಲ್‌ನಲ್ಲಿ ಮತ್ತು 73.4 ಪಿಎಸ್ ಮತ್ತು 96 ಎನ್‌ಎಮ್ ಸಿಎನ್‌ಜಿಯಲ್ಲಿ ಬಳಸುತ್ತದೆ. ಇದು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್‌ಗೆ ಜೋಡಿಸಲ್ಪಟ್ಟಿರುತ್ತದೆ.
-
ಹ್ಯುಂಡೈ ಔರಾ ಮತ್ತು ಹೋಂಡಾ ಅಮೇಜ್ ಎರಡೂ 1.2-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತವೆ. ಔರಾ ಪೆಟ್ರೋಲ್‌ನಲ್ಲಿ 83 ಪಿಎಸ್ ಮತ್ತು 114 ಎನ್‌ಎಮ್ ಮತ್ತು ಸಿಎನ್‌ಜಿಯಲ್ಲಿ 69 ಪಿಎಸ್ ಮತ್ತು 95.2 ಎನ್‌ಎಮ್‌ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸುತ್ತದೆ. ಮತ್ತೊಂದೆಡೆ, ಅಮೇಜ್ ಪೆಟ್ರೋಲ್‌ನಲ್ಲಿ ಮಾತ್ರ ಲಭ್ಯವಿದೆ ಮತ್ತು ಅದರ ಔಟ್‌ಪುಟ್ ಅಂಕಿಅಂಶಗಳು 90 ಪಿಎಸ್ ಮತ್ತು 110 ಎನ್‌ಎಮ್‌ನಷ್ಟಿದೆ.
-
ಹುಂಡೈ ಔರಾ ಸಿಎನ್‌ಜಿ ಮತ್ತು ಟಾಟಾ ಟಿಗೊರ್ ಸಿಎನ್‌ಜಿ ಡ್ಯುಯಲ್ ಸಿಲಿಂಡರ್ ತಂತ್ರಜ್ಞಾನದೊಂದಿಗೆ ಬರುವ ಎರಡು ಸಬ್‌ಕಾಂಪ್ಯಾಕ್ಟ್ ಸೆಡಾನ್‌ಗಳಾಗಿವೆ. ಇದರಲ್ಲಿ, ಎರಡು ಸಿಎನ್‌ಜಿ ಟ್ಯಾಂಕ್‌ಗಳನ್ನು ಬೂಟ್ ಫ್ಲೋರ್‌ನ ಕೆಳಗೆ ಇರಿಸಲಾಗುತ್ತದೆ, ಇದು ಸ್ಪೇರ್ ವೀಲ್‌ನ ಜಾಗದಲ್ಲಿ ಇರಿಸಲಾಗಿದೆ. ಇದು ಸಿಎನ್‌ಜಿ ಕಿಟ್ ಅನ್ನು ಹೊಂದಿದ್ದರೂ ಸಹ ಹೆಚ್ಚು ಬಳಸಬಹುದಾದ ಬೂಟ್ ಜಾಗವನ್ನು ಹೊಂದಲು ನಿಮಗೆ ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: 2024ರ Honda Amazeನ ಹೊಸ ಟೀಸರ್ ಸ್ಕೆಚ್‌ಗಳ ಬಿಡುಗಡೆ, ಏನಿದೆ ಈ ಬಾರಿ ವಿಶೇಷ?
ಪೆಟ್ರೋಲ್ ಆಟೋಮ್ಯಾಟಿಕ್
2024ರ ಮಾರುತಿ ಡಿಜೈರ್ |
ಹ್ಯುಂಡೈ ಔರಾ |
ಹೋಂಡಾ ಅಮೇಜ್ |
ಟಾಟಾ ಟಿಗೋರ್ |
XMA AMT - 7.20 ಲಕ್ಷ ರೂ. |
|||
VXi AMT - 8.24 ಲಕ್ಷ ರೂ. |
|||
S CVT- 8.53 ಲಕ್ಷ ರೂ. |
XZA Plus AMT - 8.40 ಲಕ್ಷ ರೂ. |
||
SX Plus AMT - 8.89 ಲಕ್ಷ ರೂ. |
XZA CNG AMT - 8.70 ಲಕ್ಷ ರೂ. |
||
ZXi AMT - 9.34 ಲಕ್ಷ ರೂ. |
XZA Plus CNG AMT - 9.40 ಲಕ್ಷ ರೂ. |
||
VX CVT - 9.86 ಲಕ್ಷ ರೂ. |
|||
ZXi Plus AMT - 10.14 ಲಕ್ಷ ರೂ. |
VX Elite CVT - 9.96 ಲಕ್ಷ ರೂ. |
ಗಮನಿಸಿದ ಪ್ರಮುಖ ಅಂಶಗಳು
-
2024ರ ಡಿಜೈರ್‌ನ ಆಟೋಮ್ಯಾಟಿಕ್ ವೇರಿಯೆಂಟ್‌ನ ಬೆಲೆ ಹ್ಯುಂಡೈ ಔರಾ ಮತ್ತು ಹೋಂಡಾ ಅಮೇಜ್‌ನ ಎಂಟ್ರಿ-ಲೆವೆಲ್ ಆಟೋಮ್ಯಾಟಿಕ್ ವೇರಿಯೆಂಟ್‌ಗಿಂತ ಕ್ರಮವಾಗಿ ರೂ 65,000 ಮತ್ತು ರೂ 29,000 ರಷ್ಟು ಕಡಿಮೆ ಇದೆ.
-
ಆಟೋಮ್ಯಾಟಿಕ್ ಸೆಗ್ಮೆಂಟ್‌ನಲ್ಲಿ ಟಾಟಾ ಟಿಗೊರ್ ಮತ್ತೊಮ್ಮೆ ಭಾರತದಲ್ಲಿ ಅತ್ಯಂತ ಕೈಗೆಟುಕುವ ಸಬ್ ಕಾಂಪ್ಯಾಕ್ಟ್ ಸೆಡಾನ್ ಆಗಿ ಹೊರಹೊಮ್ಮುತ್ತದೆ.
-
ಹೋಂಡಾ ಅಮೇಜ್‌ನ ಹೊರತುಪಡಿಸಿ, ಎಲ್ಲಾ ಇತರ ಸೆಡಾನ್‌ಗಳು 5-ಸ್ಪೀಡ್ AMT (ಆಟೋಮೆಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ನೊಂದಿಗೆ ಬರುತ್ತವೆ. ಮತ್ತೊಂದೆಡೆ ಅಮೇಜ್, ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಬಳಸುತ್ತದೆ.
-
ಟಿಗೋರ್ ಇಲ್ಲಿಯ ಏಕೈಕ ಸಬ್‌ಕಾಂಪ್ಯಾಕ್ಟ್ ಸೆಡಾನ್ ಆಗಿದ್ದು ಅದು ಸಿಎನ್‌ಜಿಯಲ್ಲಿ 5-ಸ್ಪೀಡ್ ಎಎಮ್‌ಟಿ ಆಯ್ಕೆಯನ್ನು ಸಹ ನೀಡುತ್ತದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ : ಡಿಜೈಆರ್ ಎಎಮ್‌ಟಿ