2024ರ Maruti Dzire ಬಿಡುಗಡೆಗೆ ದಿನಾಂಕ ನಿಗದಿ, 6.70 ಲಕ್ಷ ರೂ.ನಿಂದ ಬೆಲೆ ಪ್ರಾರಂಭ
ಹೊಸ ಡಿಜೈರ್ ತಾಜಾ ವಿನ್ಯಾಸ, ಆಪ್‌ಡೇಟ್ ಮಾಡಿದ ಇಂಟಿರಿಯರ್, ಹೊಸ ಫೀಚರ್‌ಗಳು ಮತ್ತು ಮುಖ್ಯವಾಗಿ ಹೊಸ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ
-
ಹೊಸ ಗ್ರಿಲ್, ಸ್ಲೀಕರ್ ಹೆಡ್‌ಲೈಟ್‌ಗಳು ಮತ್ತು ಟೈಲ್ ಲೈಟ್‌ಗಳು ಮತ್ತು ಹೊಸ ಅಲಾಯ್ ವೀಲ್‌ಗಳನ್ನು ಪಡೆಯಬಹುದು.
-
ಕಪ್ಪು ಮತ್ತು ಬೀಜ್ ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್ ಅನ್ನು ಪಡೆಯುವ ಸಾಧ್ಯತೆಯಿದೆ.
-
ಫೀಚರ್‌ಗಳ ಪಟ್ಟಿಯಲ್ಲಿ 9-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು 6 ಸ್ಟ್ಯಾಂಡರ್ಡ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಿರಬಹುದು.
-
ಸ್ಪೈ ಶಾಟ್‌ಗಳಲ್ಲಿ ಕಂಡುಬಂದಂತೆ ಇದರಲ್ಲಿ 360-ಡಿಗ್ರಿ ಕ್ಯಾಮೆರಾ ಮತ್ತು ಸನ್‌ರೂಫ್ ಲಭ್ಯವಿರುತ್ತದೆ.
-
ಸ್ವಿಫ್ಟ್‌ನ 82 ಪಿಎಸ್ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಬಳಸಬಹುದೆಂದು ನಿರೀಕ್ಷಿಸಲಾಗಿದೆ.
-
6.70 ಲಕ್ಷ ರೂ.ನಿಂದ ಎಕ್ಸ್ ಶೋರೂಂ ಬೆಲೆ ಪ್ರಾರಂಭವಾಗಬಹುದು.
ಮಾರುತಿ ಡಿಜೈರ್ ಈ ವರ್ಷ ಜನರೇಶನ್ ಆಪ್‌ಡೇಟ್ ಅನ್ನು ಸ್ವೀಕರಿಸಲು ಸಿದ್ಧವಾಗಿದೆ, ಹಾಗೆಯೇ ವಾಹನ ತಯಾರಕರು ಇದೀಗ ಅದರ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿದ್ದಾರೆ. 2024ರ ಡಿಜೈರ್ ಬೆಲೆಗಳನ್ನು ನವೆಂಬರ್ 11 ರಂದು ಪ್ರಕಟಿಸಲಾಗುವುದು. ಇದು ಸಮಗ್ರ ವಿನ್ಯಾಸದ ಆಪ್‌ಡೇಟ್‌ಗೆ ಒಳಗಾಗುವುವುದು ಮಾತ್ರವಲ್ಲದೆ, ಪರಿಷ್ಕೃತ ಒಳಾಂಗಣಗಳನ್ನು ಮತ್ತು ಹೊಸ ಸ್ವಿಫ್ಟ್‌ನಿಂದ ಎರವಲು ಪಡೆದ Z- ಸರಣಿಯ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆಯುತ್ತದೆ. ಹೊಸ ತಲೆಮಾರಿನ ಡಿಜೈರ್‌ನಿಂದ ಏನನ್ನು ನಿರೀಕ್ಷಿಸಬಹುದು ಎಂಬುದು ಇಲ್ಲಿದೆ.
ಹೊರಭಾಗದಲ್ಲಿನ ಬದಲಾವಣೆಗಳು
ಈ ಹಿಂದೆ ಸೋರಿಕೆಯಾದ ಸ್ಪೈ ಶಾಟ್‌ಗಳಲ್ಲಿ ನೋಡಿದಂತೆ ಹೊಸ-ಜನರೇಶನ್‌ನ ಡಿಜೈರ್ ವಿನ್ಯಾಸದ ವಿಷಯದಲ್ಲಿ ಸ್ವಿಫ್ಟ್‌ಗಿಂತ ಭಿನ್ನವಾಗಿರಲಿದೆ. ಹೊರಭಾಗದ ಬದಲಾವಣೆಗಳಲ್ಲಿ ಕ್ರೋಮ್ ಸ್ಲ್ಯಾಟ್‌ಗಳೊಂದಿಗೆ ದೊಡ್ಡ ಗ್ರಿಲ್, ಸ್ಲೀಕರ್ ಹೆಡ್‌ಲೈಟ್‌ಗಳು ಮತ್ತು ಹೊಸ ಅಲಾಯ್ ವೀಲ್‌ಗಳನ್ನು ಒಳಗೊಂಡಿರುತ್ತದೆ. ಹೊಸ-ಪೀಳಿಗೆಯ ಸೆಡಾನ್ ಮರುವಿನ್ಯಾಸಗೊಳಿಸಲಾದ ಟೈಲ್ ಲೈಟ್‌ಗಳನ್ನು ಸಹ ಪಡೆಯುತ್ತದೆ ಮತ್ತು ಆಪ್‌ಡೇಟ್ ಮಾಡಲಾದ ಟೈಲ್‌ಲೈಟ್‌ಗಳನ್ನು ಸಹ ಸಂಯೋಜಿಸಬಹುದು, ಇವೆಲ್ಲವೂ ಆಧುನಿಕ ಎಲ್‌ಇಡಿ ಲೈಟಿಂಗ್ ಅಂಶಗಳಿಂದ ವರ್ಧಿಸಲ್ಪಟ್ಟಿದೆ.
ಇದನ್ನೂ ಓದಿ: 2024ರ ಕೊನೆಯಲ್ಲಿ ಬಿಡುಗಡೆಗೊಳ್ಳಲಿರುವ ಕಾರುಗಳ ಪಟ್ಟಿ ಇಲ್ಲಿದೆ..
ಕ್ಯಾಬಿನ್ ಮತ್ತು ನಿರೀಕ್ಷಿತ ಫೀಚರ್‌ಗಳು
2024 ಸ್ವಿಫ್ಟ್ ಟಚ್‌ಸ್ಕ್ರೀನ್ ಚಿತ್ರವನ್ನು ಮಾಹಿತಿಗಾಗಿ ಬಳಸಲಾಗಿದೆ
2024 ಡಿಜೈರ್ ಅದರ ಹೊರಹೋಗುವ ಆವೃತ್ತಿಯಂತೆಯೇ ಡ್ಯುಯಲ್-ಟೋನ್ ಕಪ್ಪು ಮತ್ತು ಬೀಜ್ ಕ್ಯಾಬಿನ್ ಥೀಮ್ ಅನ್ನು ಹೊಂದಿರುತ್ತದೆ. ಆದರೆ, ಡ್ಯಾಶ್‌ಬೋರ್ಡ್ ವಿನ್ಯಾಸವು 2024 ರ ಸ್ವಿಫ್ಟ್‌ನಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಬೋರ್ಡ್‌ನಲ್ಲಿರುವ ಫೀಚರ್‌ಗಳು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋ ಎಸಿ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿರುತ್ತದೆ. 2024 ಡಿಜೈರ್ ಸಿಂಗಲ್-ಪೇನ್ ಸನ್‌ರೂಫ್‌ನೊಂದಿಗೆ ಬರುವ ನಿರೀಕ್ಷೆಯಿದೆ, ಇದು ಈ ಫೀಚರ್‌ನೊಂದಿಗೆ ಈ ಸೆಗ್ಮೆಂಟ್‌ನಲ್ಲಿ ಬರುವ ಮೊದಲ ಸಬ್‌ಕಾಂಪ್ಯಾಕ್ಟ್ ಸೆಡಾನ್ ಆಗಲಿದೆ. ಇದರ ಸುರಕ್ಷತಾ ಕಿಟ್ 6 ಏರ್‌ಬ್ಯಾಗ್‌ಗಳನ್ನು (ಎಲ್ಲಾ ವೇರಿಯೆಂಟ್‌ಗಳಲ್ಲಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರಬಹುದು.
ನಿರೀಕ್ಷಿತ ಪವರ್‌ಟ್ರೇನ್
2024ರ ಡಿಜೈರ್ ಹೊಸ Z-ಸಿರೀಸ್‌ನ 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುವ ನಿರೀಕ್ಷೆಯಿದೆ, ಇದು 2024ರ ಸ್ವಿಫ್ಟ್‌ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
1.2-ಲೀಟರ್ 3 ಸಿಲಿಂಡರ್ Z-ಸೀರಿಸ್ ಪೆಟ್ರೋಲ್ |
ಪವರ್ |
82 ಪಿಎಸ್ |
ಟಾರ್ಕ್ |
112 ಎನ್‌ಎಮ್ |
ಟ್ರಾನ್ಸ್‌ಮಿಷನ್ |
5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಎಎಮ್‌ಟಿ |
ಇದು ಮುಂದಿನ ದಿನಗಳಲ್ಲಿ ಸಿಎನ್‌ಜಿ ಪವರ್‌ಟ್ರೇನ್‌ನ ಆಯ್ಕೆಯನ್ನು ಸಹ ಪಡೆಯಬಹುದು.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
2024ರ ಮಾರುತಿ ಡಿಜೈರ್ ಆರಂಭಿಕ ಬೆಲೆ ಸುಮಾರು 6.70 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ಅಂದಾಜಿಸಲಾಗಿದೆ. ಇದು ಹ್ಯುಂಡೈ ಔರಾ, ಟಾಟಾ ಟಿಗೋರ್ ಮತ್ತು ಹೋಂಡಾ ಅಮೇಜ್‌ನಂತಹ ಇತರ ಸಬ್‌ಕಾಂಪ್ಯಾಕ್ಟ್ ಸೆಡಾನ್‌ಗಳೊಂದಿಗೆ ಸ್ಪರ್ಧಿಸುತ್ತದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
Write your Comment on Maruti ಡಿಜೈರ್
It's 100 percent truth because am eagerly waiting for the car only