Login or Register ಅತ್ಯುತ್ತಮ CarDekho experience ಗೆ
Login

2024 ಮಾರುತಿ ಡಿಜೈರ್‌ನ ವೇರಿಯೆಂಟ್‌-ವಾರು ಫೀಚರ್‌ಗಳ ವಿವರ

ಮಾರುತಿ ಡಿಜೈರ್ ಗಾಗಿ dipan ಮೂಲಕ ನವೆಂಬರ್ 08, 2024 07:04 pm ರಂದು ಪ್ರಕಟಿಸಲಾಗಿದೆ

2024ರ ಮಾರುತಿ ಡಿಜೈರ್ LXi, VXi, ZXi ಮತ್ತು ZXi ಪ್ಲಸ್ ಎಂಬ ನಾಲ್ಕು ವೇರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ

ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ಗೆ ಹೋಲಿಸಿದರೆ ಅದರ ಹೊಸ ಡಿಸೈನ್ ಮತ್ತು ಹೆಚ್ಚಿನ ಪ್ರೀಮಿಯಂ ಫೀಚರ್‌ಗಳಿಂದಾಗಿ 2024 ಮಾರುತಿ ಡಿಜೈರ್ ಮೊದಲ ಬಾರಿಗೆ ಯಾವುದೇ ಕೆಮಫ್ಲೇಜ್ ಇಲ್ಲದೆ ಕಾಣಿಸಿಕೊಂಡಾಗಿನಿಂದ ಹೆಚ್ಚಿನ ಗಮನವನ್ನು ಪಡೆಯುತ್ತಿದೆ. ಈಗ ಅಧಿಕೃತವಾಗಿ ಅನಾವರಣಗೊಂಡಿರುವ ಡಿಜೈರ್ ನಾಲ್ಕು ವೇರಿಯಂಟ್ ಗಳಲ್ಲಿ ಲಭ್ಯವಿರುತ್ತದೆ: LXi, VXi, ZXi, ಮತ್ತು ZXi ಪ್ಲಸ್. ಹೊಸ ಡಿಜೈರ್, ನವೆಂಬರ್ 11 ರಂದು ಬಿಡುಗಡೆಯಾಗಲಿದೆ, ಮತ್ತು ವಿಭಿನ್ನ ಅಗತ್ಯಗಳಿಗೆ ಸರಿಹೊಂದುವಂತೆ ವಿವಿಧ ಟ್ರಿಮ್‌ಗಳಲ್ಲಿ ವಿವಿಧ ಫೀಚರ್‌ಗಳೊಂದಿಗೆ ಬರಲಿದೆ. ಈ ಅಪ್ಡೇಟ್ ಆಗಿರುವ ಸಬ್‌ಕಾಂಪ್ಯಾಕ್ಟ್ ಸೆಡಾನ್ ಅನ್ನು ನೀವು ಖರೀದಿಸಲು ನೋಡುತ್ತಿದ್ದರೆ, ಪ್ರತಿ ವೇರಿಯಂಟ್‌ನ ವಿವರವಾದ ನೋಟ ಇಲ್ಲಿದೆ:

2024 ಮಾರುತಿ ಡಿಜೈರ್ LXi

ಡಿಜೈರ್‌ನ ಎಂಟ್ರಿ ಲೆವೆಲ್ LXi ವೇರಿಯಂಟ್‌ನ ಎಲ್ಲಾ ಫೀಚರ್‌ಗಳ ವಿವರ ಇಲ್ಲಿದೆ:

ಹೊರಭಾಗ

ಇಂಟಿರಿಯರ್‌

ಸೌಕರ್ಯ ಮತ್ತು ಅನುಕೂಲತೆ

ಇನ್ಫೋಟೈನ್‌ಮೆಂಟ್‌

ಸುರಕ್ಷತೆ

  • ಪ್ರೊಜೆಕ್ಟರ್ ಆಧಾರಿತ ಹ್ಯಾಲೊಜೆನ್ ಹೆಡ್‌ಲೈಟ್‌ಗಳು

  • LED ಟೈಲ್ ಲೈಟ್‌ಗಳು

  • ಕವರ್‌ಗಳಿಲ್ಲದ 14-ಇಂಚಿನ ಸ್ಟೀಲ್ ವೀಲ್ಸ್

  • ಶಾರ್ಕ್ ಫಿನ್ ಆಂಟೆನಾ

  • ಬೂಟ್ ಲಿಪ್ ಸ್ಪಾಯ್ಲರ್

  • ಬ್ಲಾಕ್ ಡೋರ್ ಹ್ಯಾಂಡಲ್ ಗಳು ಮತ್ತು ORVM ಗಳು (ಹೊರಗಿನ ರಿಯರ್ ವ್ಯೂ ಮಿರರ್ ಗಳು)

  • ಬ್ಲಾಕ್ ಮತ್ತು ಬೀಜ್ ಡ್ಯುಯಲ್ ಟೋನ್ ಇಂಟೀರಿಯರ್

  • ಫ್ಯಾಬ್ರಿಕ್ ಸೀಟ್ ಅಪ್ಹೋಲ್ಸ್ಟರಿ

  • ಫ್ಯಾಬ್ರಿಕ್ ಡೋರ್ ಆರ್ಮ್ ರೆಸ್ಟ್

  • ಸೆಂಟರ್ ಕ್ಯಾಬಿನ್ ಲ್ಯಾಂಪ್

  • ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟಿನ ಹೆಡ್‌ರೆಸ್ಟ್

  • ಅನಲಾಗ್ ಡಯಲ್‌ಗಳು ಮತ್ತು MID (ಮಲ್ಟಿ-ಇನ್ಫೋರ್ಮೇಷನ್ ಡಿಸ್ಪ್ಲೇ) ಜೊತೆಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್

  • ಡ್ರೈವರ್ ಸೈಡ್ ವಿಂಡೋಗೆ ಆಟೋ ಅಪ್/ ಡೌನ್‌ನೊಂದಿಗೆ ಮುಂಭಾಗ ಮತ್ತು ಹಿಂಭಾಗದ ಪವರ್ ವಿಂಡೋಗಳು

  • ಮ್ಯಾನುಯಲ್ AC

  • ಟಿಲ್ಟ್-ಅಡ್ಜಸ್ಟ್ ಮಾಡಬಹುದಾದ ಸ್ಟೀರಿಂಗ್ ವೀಲ್

  • ಮುಂಭಾಗದ ಪ್ರಯಾಣಿಕರಿಗೆ 12V ಆಕ್ಸೆಸರಿ ಚಾರ್ಜಿಂಗ್ ಸಾಕೆಟ್

  • ಕೀಲೆಸ್ ಎಂಟ್ರಿ

  • ಯಾವುದೂ ಇಲ್ಲ

  • ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ)

  • ರಿಯರ್ ಡಿಫಾಗರ್

  • ಎಲ್ಲಾ ಸೀಟುಗಳಿಗೆ ಸೀಟ್-ಬೆಲ್ಟ್ ರಿಮೈಂಡರ್ ಮತ್ತು 3-ಪಾಯಿಂಟ್ ಸೀಟ್ ಬೆಲ್ಟ್

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP)

  • ಹಿಲ್-ಹೋಲ್ಡ್ ಅಸಿಸ್ಟ್

  • EBD ಜೊತೆಗೆ ABS

  • ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು

  • ISOFIX ಚೈಲ್ಡ್ ಸೀಟ್ ಮೌಂಟ್ಸ್

ಮಾರುತಿ ಡಿಜೈರ್‌ನ ಎಂಟ್ರಿ ಲೆವೆಲ್ LXi ವೇರಿಯಂಟ್ ಪ್ರೊಜೆಕ್ಟರ್ ಹ್ಯಾಲೊಜೆನ್ ಹೆಡ್‌ಲೈಟ್‌ಗಳು, LED ಟೈಲ್ ಲೈಟ್‌ಗಳು, ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ) ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳೊಂದಿಗೆ ಲೋಡ್ ಆಗಿದೆ. ಇದು ಡ್ಯುಯಲ್-ಟೋನ್ ಇಂಟೀರಿಯರ್, ಮ್ಯಾನ್ಯುವಲ್ AC ಮತ್ತು ಪವರ್ ವಿಂಡೋಗಳನ್ನು ಕೂಡ ಹೊಂದಿದೆ. ಆದರೆ, ಇದು ಆಡಿಯೊ ಸಿಸ್ಟಮ್ ಮತ್ತು ಅಲೊಯ್ ವೀಲ್ಸ್ ಅನ್ನು ಪಡೆದಿಲ್ಲ.

2024 ಮಾರುತಿ ಡಿಜೈರ್ VXi

2024 ರ ಡಿಜೈರ್‌ನ ನೆಕ್ಸ್ಟ್-ಇನ್-ಲೈನ್ VXi ವೇರಿಯಂಟ್ ಬೇಸ್-ಸ್ಪೆಕ್ LXi ವೇರಿಯಂಟ್‌ಗೆ ಹೋಲಿಸಿದರೆ ಈ ಕೆಳಗಿನ ಫೀಚರ್‌ಗಳನ್ನು ಪಡೆಯುತ್ತದೆ:

ಹೊರಭಾಗ

ಒಳಭಾಗ

ಸೌಕರ್ಯ ಮತ್ತು ಅನುಕೂಲತೆ

ಇನ್ಫೋಟೈನ್‌ಮೆಂಟ್‌

ಸುರಕ್ಷತೆ

  • ಕವರ್‌ಗಳೊಂದಿಗೆ 14-ಇಂಚಿನ ಸ್ಟೀಲ್ ವೀಲ್

  • ಮುಂಭಾಗದ ಗ್ರಿಲ್‌ನಲ್ಲಿ ಕ್ರೋಮ್ ಫಿನಿಷ್

  • ಕ್ರೋಮ್ ಬೂಟ್ ಲಿಡ್ ಗಾರ್ನಿಶ್

  • ORVM ಗಳ ಮೇಲೆ ಮೌಂಟ್ ಮಾಡಿರುವ ಟರ್ನ್ ಇಂಡಿಕೇಟರ್‌ಗಳು

  • ಬಾಡಿ- ಕಲರ್‌ನ ಡೋರ್ ಹ್ಯಾಂಡಲ್‌ಗಳು ಮತ್ತು ORVM ಗಳು

  • ಬೂಟ್ ಲ್ಯಾಂಪ್

  • ಕಪ್‌ಹೋಲ್ಡರ್‌ಗಳೊಂದಿಗೆ ಹಿಂಭಾಗದ ಸೆಂಟರ್ ಆರ್ಮ್‌ರೆಸ್ಟ್

  • ಹಿಂಬದಿಯ ಸೀಟುಗಳ ಮೇಲೆ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು

  • ಒಳಗಿನ ಡೋರ್ ಹ್ಯಾಂಡಲ್‌ಗಳಲ್ಲಿ ಕ್ರೋಮ್ ಫಿನಿಷ್

  • ಪಾರ್ಕಿಂಗ್ ಬ್ರೇಕ್ ಲಿವರ್ ಟಿಪ್ ಮತ್ತು ಗೇರ್ ಲಿವರ್‌ನಲ್ಲಿ ಕ್ರೋಮ್ ಅಕ್ಸೆಂಟ್

  • ಡ್ಯಾಶ್‌ಬೋರ್ಡ್‌ನಲ್ಲಿ ಸಿಲ್ವರ್ ಇನ್ಸರ್ಟ್

  • ಮುಂಭಾಗದ ರೂಫ್ ಲ್ಯಾಂಪ್

  • ರಿಯರ್ AC ವೆಂಟ್‌ಗಳು

  • ಮುಂಭಾಗದ ಪ್ರಯಾಣಿಕರಿಗೆ ಟೈಪ್-A USB ಫೋನ್ ಚಾರ್ಜರ್

  • ಹಿಂಭಾಗದ ಪ್ರಯಾಣಿಕರಿಗೆ ಟೈಪ್-A ಮತ್ತು ಟೈಪ್-C USB ಫೋನ್ ಚಾರ್ಜರ್‌ಗಳು

  • ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಮತ್ತು ಫೋಲ್ಡ್ ಮಾಡಬಹುದಾದ ORVM ಗಳು

  • ಎತ್ತರ-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟು

  • ಡೇ/ನೈಟ್ IRVM (ಒಳಗಿನ ರಿಯರ್ ವ್ಯೂ ಮಿರರ್)

  • 7-ಇಂಚಿನ ಟಚ್‌ಸ್ಕ್ರೀನ್

  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

  • 4 ಸ್ಪೀಕರ್‌ಗಳು

  • ಯಾವುದೂ ಇಲ್ಲ

2024 ರ ಮಾರುತಿ ಡಿಜೈರ್‌ನ VXi ವೇರಿಯಂಟ್ ಬೇಸ್ LXi ವೇರಿಯಂಟ್‌ಗೆ ಹೋಲಿಸಿದರೆ ಹಲವಾರು ಪ್ರಮುಖ ಅಪ್ಡೇಟ್‌ಗಳನ್ನು ಪಡೆಯುತ್ತದೆ. ಇಲ್ಲಿ ಟರ್ನ್ ಇಂಡಿಕೇಟರ್‌ಗಳೊಂದಿಗೆ ORVM ಗಳನ್ನು ಮತ್ತು ಜೊತೆಗೆ ಬಾಡಿ-ಕಲರ್ ಡೋರ್ ಹ್ಯಾಂಡಲ್‌ಗಳನ್ನು ನೀಡಲಾಗಿದೆ. ಒಳಗೆ, ಹಿಂಭಾಗದ ಸೆಂಟರ್ ಆರ್ಮ್‌ರೆಸ್ಟ್‌ನೊಂದಿಗೆ ಕಪ್‌ಹೋಲ್ಡರ್‌ಗಳು, ಹಿಂಭಾಗದ AC ವೆಂಟ್‌ಗಳು, ಎತ್ತರ-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಎಲೆಕ್ಟ್ರಿಕ್ ಅಡ್ಜಸ್ಟ್ ಮಾಡಬಹುದಾದ ಮತ್ತು ಫೋಲ್ಡ್ ಮಾಡಬಹುದಾದ ORVM ಗಳನ್ನು ಪಡೆಯುತ್ತದೆ. VXi ವರ್ಷನ್‌ನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಮತ್ತು 4-ಸ್ಪೀಕರ್ ಆಡಿಯೊ ಸಿಸ್ಟಮ್ ಅನ್ನು ಕೂಡ ನೀಡಲಾಗಿದೆ.

ಇದನ್ನು ಕೂಡ ನೋಡಿ: ಈ 15 ಷೋರೂಮ್ ಚಿತ್ರಗಳಲ್ಲಿ 2024 ಮಾರುತಿ ಡಿಜೈರ್‌ನ ಎಲ್ಲಾ ವಿವರ

2024 ಮಾರುತಿ ಡಿಜೈರ್ ZXi

ಡಿಜೈರ್‌ನ ಬೇಸ್-ಸ್ಪೆಕ್ ZXi ವೇರಿಯಂಟ್‌ನಲ್ಲಿ ಹಿಂದಿನ VXi ಟ್ರಿಮ್‌ನಲ್ಲಿ ನೀಡಲಾಗಿರುವ ಕೊಡುಗೆಗಳ ಜೊತೆಗೆ ಕೆಳಗಿನವುಗಳನ್ನು ನೀಡಲಾಗಿದೆ:

ಹೊರಭಾಗ

ಒಳಭಾಗ

ಸೌಕರ್ಯ ಮತ್ತು ಅನುಕೂಲತೆ

ಇನ್ಫೋಟೈನ್ಮೆಂಟ್

ಸುರಕ್ಷತೆ

  • ಆಟೋ LED ಹೆಡ್‌ಲೈಟ್‌ಗಳು

  • LED DRL ಗಳು

  • 15-ಇಂಚಿನ ಸಿಂಗಲ್-ಟೋನ್ ಅಲೊಯ್ ವೀಲ್ಸ್

  • ಕ್ರೋಮ್ ವಿಂಡೋ ಗಾರ್ನಿಶ್

  • ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಡೋರ್ ಮೇಲೆ ಸ್ಯಾಟಿನ್ ಅಕ್ಸೆಂಟ್‌ಗಳು

  • AC ವೆಂಟ್‌ಗಳಲ್ಲಿ ಕ್ರೋಮ್ ಫಿನಿಷ್

  • ಡ್ಯಾಶ್‌ಬೋರ್ಡ್‌ನಲ್ಲಿ ಸಿಲ್ವರ್ ಟ್ರಿಮ್ ಮತ್ತು ಫಾಕ್ಸ್ ವುಡನ್ ಇನ್ಸರ್ಟ್

  • ಹೊರಗಿನ ಟೆಂಪರೇಚರ್ ಡಿಸ್ಪ್ಲೇ

  • ಪುಶ್ ಬಟನ್ ಸ್ಟಾರ್ಟ್/ಸ್ಟಾಪ್

  • ವೈರ್‌ಲೆಸ್ ಫೋನ್ ಚಾರ್ಜರ್

  • ಕೀ-ಆಪರೇಟ್ ಮಾಡಿರುವ ಬೂಟ್ ಓಪನಿಂಗ್

  • ಆಟೋ AC

  • 6 ಸ್ಪೀಕರ್‌ಗಳು (2 ಟ್ವೀಟರ್‌ಗಳು ಸೇರಿದಂತೆ)

  • ಕನೆಕ್ಟೆಡ್ ಕಾರ್ ಟೆಕ್ನಾಲಜಿ

  • ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ

  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

ಡಿಜೈರ್‌ನ ZXi ವೇರಿಯಂಟ್ ಆಟೋ LED ಹೆಡ್‌ಲೈಟ್‌ಗಳು, LED DRL ಗಳು ಮತ್ತು 15-ಇಂಚಿನ ಅಲೊಯ್ ವೀಲ್ ಗಳಂತಹ ಪ್ರೀಮಿಯಂ ಫೀಚರ್‌ಗಳನ್ನು ಪಡೆಯುತ್ತದೆ. ಇದು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಟೋ ACಯಂತಹ ಸೌಕರ್ಯ ಮತ್ತು ಅನುಕೂಲತೆಯ ಫೀಚರ್‌ಗಳನ್ನು ಹೊಂದಿದೆ. ಇದರಲ್ಲಿ 6 ಸ್ಪೀಕರ್‌ಗಳೊಂದಿಗೆ (2 ಟ್ವೀಟರ್‌ಗಳನ್ನು ಒಳಗೊಂಡಂತೆ) ಮತ್ತು ಕನೆಕ್ಟೆಡ್ ಕಾರ್ ತಂತ್ರಜ್ಞಾನದೊಂದಿಗೆ ಇನ್ಫೋಟೈನ್‌ಮೆಂಟ್ ಅನ್ನು ಅಪ್‌ಗ್ರೇಡ್ ಮಾಡಲಾಗಿದೆ. ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನೀಡುವ ಮೂಲಕ ಸುರಕ್ಷತೆಯನ್ನು ಸುಧಾರಿಸಲಾಗಿದೆ, ಇದು ZXi ಅನ್ನು ಹೆಚ್ಚು ಟೆಕ್-ಸ್ನೇಹಿ ಆಯ್ಕೆಯನ್ನಾಗಿ ಮಾಡುತ್ತದೆ.

2024 ಮಾರುತಿ ಡಿಜೈರ್ ZXi ಪ್ಲಸ್

ಸಂಪೂರ್ಣವಾಗಿ ಲೋಡ್ ಮಾಡಲಾದ 2024 ಮಾರುತಿ ಡಿಜೈರ್ ZXi ವೇರಿಯಂಟ್‌ನಲ್ಲಿ ಈ ಕೆಳಗಿನ ಫೀಚರ್‌ಗಳನ್ನು ನೀಡಲಾಗಿದೆ:

ಹೊರಭಾಗ

ಒಳಭಾಗ

ಸೌಕರ್ಯ ಮತ್ತು ಅನುಕೂಲತೆ

ಇನ್ಫೋಟೈನ್ಮೆಂಟ್

ಸುರಕ್ಷತೆ

  • 15-ಇಂಚಿನ ಡ್ಯುಯಲ್-ಟೋನ್ ಅಲೊಯ್ ವೀಲ್ಸ್

  • LED ಮುಂಭಾಗದ ಫಾಗ್ ಲ್ಯಾಂಪ್‌ಗಳು

  • ಹಿಂದಿನ ಪ್ರಯಾಣಿಕರಿಗೆ ರೀಡಿಂಗ್ ಲ್ಯಾಂಪ್‌ಗಳು

  • ಫ್ರಂಟ್ ಫುಟ್‌ವೆಲ್ ಇಲ್ಯೂಮಿನೇಷನ್

  • ಲೆಥೆರೆಟ್ ಸುತ್ತಿದ ಸ್ಟೀರಿಂಗ್ ವೀಲ್

  • ಫ್ರಂಟ್ ಸ್ಪಾಟ್ ಕ್ಯಾಬಿನ್ ಲ್ಯಾಂಪ್

  • ಸಿಂಗಲ್ ಪೇನ್ ಸನ್‌ರೂಫ್

  • ಇನ್ಸ್ಟ್ರುಮೆಂಟ್ ಕನ್ಸೋಲ್‌ನಲ್ಲಿ ಕಲರ್ಡ್ MID

  • ಕ್ರೂಸ್ ಕಂಟ್ರೋಲ್

  • ಕಾರ್ ಲಾಕ್‌ ಮಾಡುವಾಗ ಆಟೋ-ಫೋಲ್ಡ್ ORVM ಗಳು

  • 9 ಇಂಚಿನ ಟಚ್‌ಸ್ಕ್ರೀನ್

  • ಅರ್ಕಾಮಿಸ್-ಟ್ಯೂನ್ಡ್ ಸೌಂಡ್ ಸಿಸ್ಟಮ್

  • 360 ಡಿಗ್ರಿ ಕ್ಯಾಮೆರಾ

  • ಆಂಟಿ-ಥೆಫ್ಟ್ ಸೆಕ್ಯೂರಿಟಿ ಸಿಸ್ಟಮ್ (ಶಾಕ್ ಸೆನ್ಸಾರ್)

2024 ರ ಮಾರುತಿ ಡಿಜೈರ್ ಉನ್ನತ ಮಟ್ಟದ ಫೀಚರ್‌ಗಳೊಂದಿಗೆ ಪ್ಯಾಕ್ ಮಾಡಲಾಗಿದ್ದು ಅದು ಇದನ್ನು ಹೆಚ್ಚು ಆಕರ್ಷಕವಾಗಿಸುತ್ತದೆ. ಇದು ಸಿಂಗಲ್ ಪೇನ್ ಸನ್‌ರೂಫ್, LED ಫ್ರಂಟ್ ಫಾಗ್ ಲ್ಯಾಂಪ್‌ಗಳು, ಇನ್ಸ್ಟ್ರುಮೆಂಟ್ ಕನ್ಸೋಲ್‌ನಲ್ಲಿ ಕಲರ್ಡ್ MID ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ. ಅಪ್‌ಗ್ರೇಡ್ ಮಾಡಲಾದ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಅರ್ಕಾಮಿಸ್-ಟ್ಯೂನ್ಡ್ ಸೌಂಡ್ ಸಿಸ್ಟಮ್‌ನೊಂದಿಗೆ ಜೋಡಿಸಲಾಗಿದೆ, ಹಾಗೆಯೆ ಸುರಕ್ಷತೆಯನ್ನು 360-ಡಿಗ್ರಿ ಕ್ಯಾಮೆರಾ ಮತ್ತು ಶಾಕ್ ಸೆನ್ಸರ್‌ನೊಂದಿಗೆ ಆಂಟಿ-ಥೆಫ್ಟ್ ಸೆಕ್ಯೂರಿಟಿ ಸಿಸ್ಟಮ್ ನೊಂದಿಗೆ ಮತ್ತಷ್ಟು ಹೆಚ್ಚಿಸಲಾಗಿದೆ.

ಇದನ್ನು ಕೂಡ ಓದಿ: ಹೊಸ ಹೋಂಡಾ ಅಮೇಜ್ ಬಿಡುಗಡೆ ದಿನಾಂಕ ಇಲ್ಲಿದೆ

ಪವರ್‌ಟ್ರೇನ್ ಆಯ್ಕೆಗಳು

2024 ರ ಮಾರುತಿ ಡಿಜೈರ್ 2024 ಸ್ವಿಫ್ಟ್‌ನಲ್ಲಿರುವ ಅದೇ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ. ಅದರ ಸ್ಪೆಸಿಫಿಕೇಷನ್‌ಗಳ ವಿವರಗಳು ಇಲ್ಲಿವೆ:

ಇಂಜಿನ್

1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್

1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್-CNG

ಪವರ್

82 PS

70 PS

ಟಾರ್ಕ್

112 Nm

102 Nm

ಟ್ರಾನ್ಸ್‌ಮಿಷನ್‌

5-ಸ್ಪೀಡ್ ಮಾನ್ಯುಯಲ್, 5-ಸ್ಪೀಡ್ ಆಟೋಮೇಟೆಡ್ ಮಾನ್ಯುಯಲ್ ಟ್ರಾನ್ಸ್‌ಮಿಷನ್‌ (AMT)

5-ಸ್ಪೀಡ್ ಮಾನ್ಯುಯಲ್

ಕ್ಲೇಮ್ ಮಾಡಿರುವ ಮೈಲೇಜ್

ಪ್ರತಿ ಲೀಟರ್ ಗೆ 24.79 ಕಿ.ಮೀ (ಮಾನ್ಯುಯಲ್), ಪ್ರತಿ ಲೀಟರ್ ಗೆ 25.71 ಕಿ.ಮೀ (AMT)

ಪ್ರತಿ ಕೆಜಿಗೆ 33.73 ಕಿ.ಮೀ

ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಹೊಸ ಜನರೇಷನ್ ಮಾರುತಿ ಡಿಜೈರ್ ಬೆಲೆಯು ರೂ 6.70 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಇದು 2025 ಹೋಂಡಾ ಅಮೇಜ್, ಟಾಟಾ ಟಿಗೋರ್ ಮತ್ತು ಹುಂಡೈ ಔರಾ ಮುಂತಾದ ಸಬ್‌ಕಾಂಪ್ಯಾಕ್ಟ್ ಸೆಡಾನ್‌ಗಳೊಂದಿಗೆ ಸ್ಪರ್ಧಿಸಲಿದೆ.

ವಾಹನ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

Share via

Write your Comment on Maruti ಡಿಜೈರ್

S
sitaram sasubilli
Nov 9, 2024, 3:47:42 PM

Nice information

S
sachin
Nov 8, 2024, 9:22:16 AM

Does vxi cng will come for commercial use

H
harish rangrej
Nov 7, 2024, 12:22:43 PM

Will they dare to send this vehicle for bharat NCAP?

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.6.54 - 9.11 ಲಕ್ಷ*
ಫೇಸ್ ಲಿಫ್ಟ್
ಹೊಸ ವೇರಿಯೆಂಟ್
Rs.11.82 - 16.55 ಲಕ್ಷ*
ಹೊಸ ವೇರಿಯೆಂಟ್
Rs.6 - 9.50 ಲಕ್ಷ*
ಹೊಸ ವೇರಿಯೆಂಟ್
Rs.11.07 - 17.55 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ