5 ಡೋರ್‌ನ Mahindra Thar Roxx ಮಿಡ್-ಸ್ಪೆಕ್ ವೇರಿಯಂಟ್‌ನ ಇಂಟೀರಿಯರ್ ಸ್ಪೈ ಶಾಟ್‌ಗಳು, ಈ ಬಾರಿ ಕಂಡಿದ್ದೇನು ?
ಮಹೀಂದ್ರ ಥಾರ್ ರಾಕ್ಸ್ ಗಾಗಿ dipan ಮೂಲಕ ಆಗಸ್ಟ್ 01, 2024 08:37 pm ರಂದು ಪ್ರಕಟಿಸಲಾಗಿದೆ
- 38 Views
- ಕಾಮೆಂಟ್ ಅನ್ನು ಬರೆಯಿರಿ
ಈ ಸ್ಪೈ ಶಾಟ್‌ಗಳು ಬಿಳಿ ಮತ್ತು ಕಪ್ಪು ಡ್ಯುಯಲ್-ಥೀಮ್‌ನ ಇಂಟಿರೀಯರ್ ಮತ್ತು ಎರಡನೇ ಸಾಲಿನ ಬೆಂಚ್ ಸೀಟ್ ಅನ್ನು ತೋರಿಸುತ್ತವೆ
-
ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಮ್ಯಾನ್ಯುವಲ್ ಸಿಂಗಲ್-ಝೋನ್ ಎಸಿ ಮತ್ತು ADAS ಕ್ಯಾಮರಾವನ್ನು ಗಮನಿಸಬಹುದು.
-
ಟಾಪ್-ಸ್ಪೆಕ್ ಮಾಡೆಲ್ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋ ಎಸಿ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
-
ಸುರಕ್ಷತಾ ಪ್ಯಾಕೇಜ್ ಆರು ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರುತ್ತದೆ.
-
ಇದು ಎಲ್ಇಡಿ ಹೆಡ್‌ಲೈಟ್‌ಗಳು, ಸಿಲ್ವರ್ ಕಾಂಟ್ರಾಸ್ಟ್ ಅಂಶಗಳೊಂದಿಗೆ ಬಂಪರ್‌ಗಳು, ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಮತ್ತು ಎಲ್ಇಡಿ ಟೈಲ್ ಲೈಟ್‌ಗಳನ್ನು ಪಡೆಯುತ್ತದೆ.
-
ಇದು 2.2-ಲೀಟರ್ ಡೀಸೆಲ್ ಮತ್ತು 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ಗಳನ್ನು ಥಾರ್ ಆಗಿ ವಿಭಿನ್ನ ಟ್ಯೂನ್‌ನೊಂದಿಗೆ ಪಡೆಯಬಹುದು.
-
ಬೆಲೆಗಳು 12.99 ಲಕ್ಷ ರೂ.ನಿಂದ ಪ್ರಾರಂಭವಾಗಿ 23 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ) ಇರುವ ನಿರೀಕ್ಷೆಯಿದೆ.
ಆಗಸ್ಟ್ 15 ರಂದು ನಿಗದಿಯಾಗಿರುವ ಮಹೀಂದ್ರಾ ಥಾರ್ ರೋಕ್ಸ್‌ನ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಥಾರ್ 3-ಡೋರ್ ಮೊಡೆಲ್‌ಗೆ ಹೋಲಿಸಿದರೆ ಹೆಚ್ಚು ಪ್ರೀಮಿಯಂ ಇಂಟಿರೀಯರ್ ಅನ್ನು ನೀಡುತ್ತಿರುವಾಗ ಥಾರ್ ರೋಕ್ಸ್, ಐಕಾನಿಕ್ ಥಾರ್‌ನ ಬಾಡಿ ಆಕೃತಿಯನ್ನು ಉಳಿಸಿಕೊಳ್ಳುತ್ತದೆ ಎಂದು ಕಾರು ತಯಾರಕರು ಹಂಚಿಕೊಂಡ ಇತ್ತೀಚಿನ ಟೀಸರ್‌ಗಳು ದೃಢಪಡಿಸಿವೆ. ಉದ್ದವಾದ ಥಾರ್‌ನ ಮಿಡ್-ಸ್ಪೆಕ್ ಆವೃತ್ತಿಯಂತೆ ತೋರುವ ಇಂಟಿರೀಯರ್ ಅನ್ನು ತೋರಿಸುವ ಹೊಸ ಸ್ಪೈ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ಸ್ಪೈ ಶಾಟ್‌ಗಳಲ್ಲಿ ನಾವು ಗುರುತಿಸಬಹುದಾದ ಎಲ್ಲವನ್ನೂ ಕೆಳಗೆ ವಿವರಿಸಲಾಗಿದೆ.
ನಾವು ಗಮನಿಸಿದ್ದು ಏನು ?
ನಾವು ಡ್ಯಾಶ್‌ಬೋರ್ಡ್‌ನೊಂದಿಗೆ ಪ್ರಾರಂಭಿಸೋಣ, ಇದು 3-ಬಾಗಿಲಿನ ಥಾರ್‌ನ ಡ್ಯಾಶ್‌ಬೋರ್ಡ್‌ನಂತೆಯೇ ಕಾಣುತ್ತದೆ, ಆದರೆ ಇಲ್ಲಿ ಗಮನಾರ್ಹವಾದ ಬಿಳಿ ಮತ್ತು ಕಪ್ಪು ಥೀಮ್‌ನೊಂದಿಗೆ ಗಮನಿಸಬಹುದು. ಚಾಲಕನ ಡಿಸ್‌ಪ್ಲೇ ಸೆಮಿ-ಡಿಜಿಟಲ್ ಘಟಕವಾಗಿದ್ದು, ಅನಲಾಗ್ ಸ್ಪೀಡೋಮೀಟರ್ ಮತ್ತು ಟ್ಯಾಕೋಮೀಟರ್ ಅನ್ನು ಒಳಗೊಂಡಿದ್ದು, ಮಧ್ಯದಲ್ಲಿ ಬಹು-ಮಾಹಿತಿ ಡಿಸ್‌ಪ್ಲೇ (ಮಲ್ಟಿ ಇಂಫೋರ್ಮೆಶನ್ ಡಿಸ್‌ಪ್ಲೇ) ಅನ್ನು ಪ್ರಸ್ತುತ 3-ಡೋರ್ ಥಾರ್‌ಗೆ ಹೋಲುತ್ತದೆ. ಸ್ಟೀರಿಂಗ್ ವೀಲ್ ಮಹೀಂದ್ರಾ ಎಕ್ಸ್‌ಯುವಿ700ನ ಯುನಿಟ್ ಅನ್ನು ಹೋಲುತ್ತದೆ.
ಡ್ಯಾಶ್‌ಬೋರ್ಡ್ ದೊಡ್ಡದಾದ ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಯನ್ನು ಹೊಂದಿದೆ, ಬಹುಶಃ ಎಕ್ಸ್‌ಯುವಿ400 ಇವಿಯಿಂದ 10.25-ಇಂಚಿನ ಯುನಿಟ್ ಅನ್ನು ಟಾಪ್-ಸ್ಪೆಕ್ ಥಾರ್ ರೋಕ್ಸ್‌ನಲ್ಲಿ ಸಹ ನಿರೀಕ್ಷಿಸಲಾಗಿದೆ. ಮತ್ತೊಂದೆಡೆ, ಹೆಚ್‌ವಿಎಸಿ ಪ್ಯಾನೆಲ್, ಅಸ್ತಿತ್ವದಲ್ಲಿರುವ 3-ಡೋರ್ ಥಾರ್‌ನಿಂದ ಮ್ಯಾನುಯಲ್ ಎಸಿ ಕಂಟ್ರೋಲ್‌ಗಳನ್ನು ಉಳಿಸಿಕೊಂಡಿದೆ. ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಕ್ಯಾಮೆರಾವನ್ನು ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಸಹ ಗುರುತಿಸಬಹುದು, ಇದು ಅದರ ಸಂಭವನೀಯ ಸೇರ್ಪಡೆಯ ಬಗ್ಗೆ ಸುಳಿವು ನೀಡುತ್ತದೆ.
ಇದನ್ನು ಸಹ ಓದಿ: ಆಗಸ್ಟ್ 15ರ ಬಿಡುಗಡೆಗೆ ಮೊದಲೇ Mahindra Thar Roxx ನ ಟೀಸರ್ ಬಿಡುಗಡೆ
ಗಮನಾರ್ಹವಾಗಿ, ಸ್ಪೈಡ್ ಮಾಡೆಲ್ ಸಿಂಗಲ್-ಪೇನ್ ಸನ್‌ರೂಫ್ ಅನ್ನು ಹೊಂದಿದೆ, ಆದರೆ ಟಾಪ್-ಸ್ಪೆಕ್ ಮಾಡೆಲ್ ಮಹೀಂದ್ರಾ ಈ ಹಿಂದೆ ಟೀಸರ್‌ನಲ್ಲಿ ತೋರಿಸಿದಂತೆ ಪನೋರಮಿಕ್ ಸನ್‌ರೂಫ್ ಅನ್ನು ಪಡೆಯುತ್ತದೆ. ಪ್ರಸ್ತುತ ಥಾರ್‌ನಲ್ಲಿರುವ ಸೀಟ್‌ಗಳನ್ನು ಹೋಲುವ ಸೀಟ್‌ಗಳು, ಈಗ ಕ್ಯಾಬಿನ್‌ನ ಥೀಮ್‌ಗೆ ಹೊಂದಿಕೆಯಾಗುವಂತೆ ಬಿಳಿಯ ಕವರ್‌ಗಳನ್ನು ಹೊಂದಿವೆ. ಚಾಲಕ ಮತ್ತು ಪ್ರಯಾಣಿಕರಿಗೆ ಎರಡು ಪ್ರತ್ಯೇಕ ಆರ್ಮ್‌ರೆಸ್ಟ್‌ಗಳನ್ನು ಒದಗಿಸಲಾಗಿದೆ.
ಒಂದು ಪ್ರಮುಖ ಬದಲಾವಣೆಯು ಉದ್ದವಾದ ವೀಲ್‌ಬೇಸ್ ಆಗಿದೆ, ಇದು ಎರಡನೇ ಸಾಲಿನಲ್ಲಿ ಸಾಕಷ್ಟು ಜಾಗವನ್ನು ಹೊಂದಲು ಅನುವು ಮಾಡಿಕೊಡುತ್ತದೆ ಮತ್ತು ಹಿಂಭಾಗದ ಬೆಂಚ್ ಸೀಟ್‌ನ ಸೇರ್ಪಡೆಯನ್ನು ಗಮನಿಸಬಹುದು. ಈ ಸೀಟಿನಲ್ಲಿ ಈಗ ಮೂವರು ಪ್ರಯಾಣಿಕರಿಗೆ ಕುಳಿತು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಆಸನಗಳು ಬದಿಗಳಲ್ಲಿ ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಫೋಲ್ಡೌಟ್ ಸೆಂಟರ್ ಆರ್ಮ್‌ರೆಸ್ಟ್, ಮೂರು-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ಎಲ್ಲಾ ಪ್ರಯಾಣಿಕರಿಗೆ ಸರಿಹೊಂದಿಸಬಹುದಾದ ಹೆಡ್‌ರೆಸ್ಟ್‌ಗಳನ್ನು ಒಳಗೊಂಡಿವೆ. ಹೆಚ್ಚುವರಿಯಾಗಿ, ನಾಲ್ಕು ರೂಫ್-ಮೌಂಟೆಡ್ ಸ್ಪೀಕರ್‌ಗಳನ್ನು ಸಹ ಗಮನಿಸಬಹುದು. ಬೂಟ್ ಸ್ಪೇಸ್ ಪ್ರಸ್ತುತ 3-ಡೋರ್ ಥಾರ್‌ಗಿಂತ ದೊಡ್ಡದಾಗಿ ಕಾಣುತ್ತದೆ, ಹೆಚ್ಚಿದ ವೀಲ್‌ಬೇಸ್‌ನಿಂದಾಗಿ ಸಂಗ್ರಹಣೆಗೆ ಹೆಚ್ಚಿನ ಸ್ಥಳವನ್ನು ಸೃಷ್ಟಿಸುತ್ತದೆ.
ಟಾಪ್-ಸ್ಪೆಕ್ ಥಾರ್ ರೋಕ್ಸ್‌ನಲ್ಲಿ ನಿರೀಕ್ಷಿತ ಫೀಚರ್‌ಗಳು ಮತ್ತು ಸುರಕ್ಷತೆ
ಥಾರ್ ರೋಕ್ಸ್‌ನ ಟಾಪ್-ಸ್ಪೆಕ್ ಆವೃತ್ತಿಯು ಹೆಚ್ಚುವರಿಯಾಗಿ 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಎಸಿ, ಪನೋರಮಿಕ್ ಸನ್‌ರೂಫ್, ಪುಶ್-ಬಟನ್ ಸ್ಟಾರ್ಟ್‌ನೊಂದಿಗೆ ಕೀಲೆಸ್ ಎಂಟ್ರಿ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಸುರಕ್ಷತಾ ಫೀಚರ್‌ಗಳು ಆರು ಏರ್‌ಬ್ಯಾಗ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್ ಮತ್ತು ADAS ಸೂಟ್‌ಗಳನ್ನು ಒಳಗೊಂಡಿರಬಹುದು.
ಇದನ್ನು ಸಹ ಓದಿ: ಈ ಆಗಸ್ಟ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ 8 ಕಾರುಗಳು