Mahindra Thar Roxx ಈಗ ಡೀಲರ್‌ಶಿಪ್‌ಗಳಲ್ಲಿ ಲಭ್ಯ, ಶೀಘ್ರದಲ್ಲೇ ಟೆಸ್ಟ್ ಡ್ರೈವ್‌ಗೂ ಅವಕಾಶ
ಮಹೀಂದ್ರ ಥಾರ್ ರಾಕ್ಸ್ ಗಾಗಿ anonymous ಮೂಲಕ ಸೆಪ್ಟೆಂಬರ್ 12, 2024 09:34 pm ರಂದು ಪ್ರಕಟಿಸಲಾಗಿದೆ
- 46 Views
- ಕಾಮೆಂಟ್ ಅನ್ನು ಬರೆಯಿರಿ
ಒಂದು ಎಕ್ಷ್‌ಟ್ರಾ ಡೋರ್ ಹೊರತಾಗಿ, 3-ಡೋರ್ ಮಾಡೆಲ್ ಗೆ ಹೋಲಿಸಿದರೆ ಥಾರ್ ರೋಕ್ಸ್ ಆಪ್‌ಡೇಟ್ ಆಗಿರುವ ಸ್ಟೈಲಿಂಗ್ ಮತ್ತು ಹೆಚ್ಚು ಆಧುನಿಕ ಕ್ಯಾಬಿನ್ ಅನ್ನು ಕೂಡ ಹೊಂದಿದೆ
-
SUV ಯ ಟೆಸ್ಟ್ ಡ್ರೈವ್ ಸೆಪ್ಟೆಂಬರ್ 14 ರಿಂದ ಪ್ರಾರಂಭವಾಗಲಿದೆ.
-
ಈ ಆಫ್‌ರೋಡರ್‌ಗಾಗಿ ಬುಕ್ಕಿಂಗ್‌ಗಳು ಅಕ್ಟೋಬರ್ 3 ರಿಂದ ಪ್ರಾರಂಭವಾಗಲಿದ್ದು, ಡೆಲಿವರಿ ದಸರಾ 2024 ರಿಂದ ಶುರುವಾಗಲಿದೆ.
-
ಇದನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ಆರು ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ.
-
ಇದು ರಿಯರ್-ವೀಲ್ ಡ್ರೈವ್ ಮತ್ತು ನಾಲ್ಕು-ವೀಲ್ ಡ್ರೈವ್ ಟ್ರೈನ್ ಆಯ್ಕೆಗಳಲ್ಲಿ ಲಭ್ಯವಿದೆ.
-
ರಿಯರ್-ವೀಲ್ ಡ್ರೈವ್ ವೇರಿಯಂಟ್ ಬೆಲೆಯು ರೂ 12.99 ಲಕ್ಷದಿಂದ ರೂ 20.49 ಲಕ್ಷದ (ಎಕ್ಸ್ ಶೋ ರೂಂ) ನಡುವೆ ಇರುತ್ತದೆ.
-
ಫೋರ್-ವೀಲ್ ಡ್ರೈವ್ ವೇರಿಯಂಟ್ ಗಳ ಬೆಲೆಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಕಳೆದ ತಿಂಗಳು, 5-ಡೋರ್ ಮಹೀಂದ್ರಾ ಥಾರ್ ರೋಕ್ಸ್ ಅನ್ನು ರೂ 12.99 ಲಕ್ಷದ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಲಾಯಿತು (ಪರಿಚಯಾತ್ಮಕ ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ). 5-ಡೋರ್ ಆಫ್-ರೋಡರ್ ಈಗ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ ಮತ್ತು ಅದರ ಟೆಸ್ಟ್ ಡ್ರೈವ್ ಸೆಪ್ಟೆಂಬರ್ 14 ರಿಂದ ಪ್ರಾರಂಭವಾಗಲಿದೆ. ಮಹೀಂದ್ರಾ ಅಕ್ಟೋಬರ್ 3, 2024 ರಿಂದ ಥಾರ್ ರೋಕ್ಸ್‌ಗಾಗಿ ಬುಕಿಂಗ್‌ಗಳನ್ನು ತೆರೆಯಲಿದೆ ಮತ್ತು ಡೆಲಿವರಿಗಳು ಅಕ್ಟೋಬರ್ 12 ರಂದು (ದಸರಾ 2024) ಪ್ರಾರಂಭವಾಗಲಿದೆ. ನೀವು ಸ್ಥಳೀಯ ಡೀಲರ್‌ಶಿಪ್‌ಗಳಲ್ಲಿ ಥಾರ್ ರೋಕ್ಸ್ ಅನ್ನು ಟೆಸ್ಟ್ ಡ್ರೈವ್ ಮಾಡುವ ಮೊದಲು, ಅದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿವರಗಳು ಇಲ್ಲಿದೆ.
ಇಲ್ಲಿ ಚಿತ್ರಗಳಲ್ಲಿ ಥಾರ್ ರೋಕ್ಸ್‌ನ ಟಾಪ್ ಸ್ಪೆಕ್ AX7L ಮಾಡೆಲ್ ಅನ್ನು ತೋರಿಸಲಾಗಿದೆ. ಇದು 19-ಇಂಚಿನ ಅಲೊಯ್ ವೀಲ್ಸ್, ಪನರೋಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ ಸಿಸ್ಟಮ್ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಪಡೆಯಲಿದೆ. ಇದು ಡ್ಯುಯಲ್-ಟೋನ್ ಬ್ಲಾಕ್ ಮತ್ತು ವೈಟ್ ಕ್ಯಾಬಿನ್ ಅನ್ನು ಲೆಥೆರೆಟ್ ಅಪ್ಹೋಲ್ಸ್ಟರಿಯೊಂದಿಗೆ ಹೊಂದಿದೆ, ಮತ್ತು ಇದರ ಜೊತೆಗೆ ಪವರ್ಡ್ ಡ್ರೈವರ್ ಸೀಟ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ಹೆಚ್ಚುವರಿ ಫೀಚರ್ ಗಳನ್ನು ಪಡೆಯಲಿದೆ.
5-ಡೋರ್ ಥಾರ್ ಸಾಕಷ್ಟು ಸಾಫ್ಟ್-ಟಚ್ ಅಂಶಗಳೊಂದಿಗೆ ಹೆಚ್ಚು ಉನ್ನತ ಮಟ್ಟದ ಕ್ಯಾಬಿನ್ ಜೊತೆಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಉಪಯುಕ್ತ ಫೀಚರ್ ಗಳನ್ನು ಹೊಂದಿದೆ.
ಇದರ ಜೊತೆಗೆ, ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್‌ನೊಂದಿಗೆ ಕೀಲೆಸ್ ಎಂಟ್ರಿಯನ್ನು ಹೊಂದಿದೆ.
ಸುರಕ್ಷತೆಯ ವಿಷಯದಲ್ಲಿ, ಥಾರ್ ರೋಕ್ಸ್ ಸ್ಟ್ಯಾಂಡರ್ಡ್ ಆಗಿ ಆರು ಏರ್‌ಬ್ಯಾಗ್‌ಗಳನ್ನು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಪಡೆಯುತ್ತದೆ.
ಇದನ್ನು ಕೂಡ ಓದಿ: ಈ ಗ್ರಾಹಕರ ಅನುಭವದ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಕಿಯಾ ಮತ್ತು ಆಡಿ ಅತ್ಯುತ್ತಮ ಕಾರು ಬ್ರಾಂಡ್‌ಗಳಾಗಿವೆ, ಇಲ್ಲಿದೆ ಇನ್ನಷ್ಟು ವಿವರ
ಮಹೀಂದ್ರಾ ತನ್ನ ಥಾರ್ ರೋಕ್ಸ್ ಅನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತದೆ: 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ. ಎರಡೂ ಪವರ್‌ಟ್ರೇನ್ ಆಯ್ಕೆಗಳನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್-ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಜೋಡಿಸಲಾಗಿದೆ. ಎರಡೂ ಆಯ್ಕೆಗಳ ಎಂಜಿನ್ ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ನೀಡಲಾಗಿದೆ.
ಮಹೀಂದ್ರಾ ಥಾರ್ ರೋಕ್ಸ್ ಎಂಜಿನ್ ಆಯ್ಕೆಗಳು |
||
ಇಂಜಿನ್ |
2-ಲೀಟರ್ ಟರ್ಬೋಚಾರ್ಜ್ ಆಗಿರುವ ಪೆಟ್ರೋಲ್ ಎಂಜಿನ್ |
2.2-ಲೀಟರ್ ಡೀಸೆಲ್ ಎಂಜಿನ್ |
ಪವರ್ |
162 PS (MT)/ 177 PS (AT) |
152 PS (MT ಮತ್ತು AT)/175 PS ವರೆಗೆ (4X4 AT) |
ಟಾರ್ಕ್ |
330 Nm (MT)/380 Nm (AT) |
330 Nm (MT ಮತ್ತು AT)/370 Nm ವರೆಗೆ (4X4 AT) |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT/6-ಸ್ಪೀಡ್ AT |
6-ಸ್ಪೀಡ್ MT/6-ಸ್ಪೀಡ್ AT |
ಡ್ರೈವ್ ಟ್ರೈನ್ |
ರಿಯರ್-ವೀಲ್ ಡ್ರೈವ್ |
ರಿಯರ್-ವೀಲ್ ಡ್ರೈವ್/ ಫೋರ್-ವೀಲ್ ಡ್ರೈವ್ |
ಫೋರ್ ವೀಲ್ ಡ್ರೈವ್ ವೇರಿಯಂಟ್ ಗಳ ಬೆಲೆಗಳನ್ನು ಮಹೀಂದ್ರಾ ಇನ್ನೂ ಪ್ರಕಟಿಸಿಲ್ಲ. ರಿಯರ್-ವೀಲ್ ಡ್ರೈವ್ ಥಾರ್ ರೋಕ್ಸ್‌ನ ಬೆಲೆಯು ರೂ 12.99 ಲಕ್ಷದಿಂದ ರೂ 20.49 ಲಕ್ಷದ ನಡುವೆ (ಪರಿಚಯಾತ್ಮಕ ಎಕ್ಸ್-ಶೋ ರೂಂ ಪ್ಯಾನ್-ಇಂಡಿಯಾ) ಇದೆ. ಇದು ಫೋರ್ಸ್ ಗೂರ್ಖಾ 5-ಡೋರ್‌ಗೆ ಪ್ರತಿಸ್ಪರ್ಧಿಯಾಗಿದೆ ಮತ್ತು ಮಾರುತಿ ಸುಜುಕಿ ಜಿಮ್ನಿಗೆ ಹೋಲಿಸಿದರೆ ದೊಡ್ಡ ಗಾತ್ರದ ಪರ್ಯಾಯ ಆಯ್ಕೆಯಾಗಿದೆ.
ನಿರಂತರವಾದ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: ಮಹೀಂದ್ರಾ ಥಾರ್ ರೋಕ್ಸ್ ಆನ್ ರೋಡ್ ಬೆಲೆ