Mahindra Thar Roxx ವರ್ಸಸ್ 5 Door Force Gurkha: ಯಾವುದು ಬೆಸ್ಟ್ ?
ಮಹೀಂದ್ರ ಥಾರ್ ರಾಕ್ಸ್ ಗಾಗಿ dipan ಮೂಲಕ ಆಗಸ್ಟ್ 20, 2024 09:27 am ರಂದು ಪ್ರಕಟಿಸಲಾಗಿದೆ
- 47 Views
- ಕಾಮೆಂಟ್ ಅನ್ನು ಬರೆಯಿರಿ
ಎರಡೂ ಎಸ್‌ಯುವಿಗಳು ಆಫ್-ರೋಡಿಂಗ್‌ಗೆ ಉತ್ತಮವಾಗಿವೆ ಮತ್ತು ಈಗ ಹೊಸ 5-ಡೋರ್ ಮಾಡೆಲ್ ನಲ್ಲಿ ಬರುತ್ತವೆ. ಆನ್ ಪೇಪರ್ ನಲ್ಲಿ ಯಾವುದು ಉತ್ತಮವಾಗಿದೆ ಎಂಬುದನ್ನು ನೋಡಲು ನಾವು ಅವುಗಳ ಫೀಚರ್ ಗಳನ್ನು ಹೋಲಿಕೆ ಮಾಡಿ ನೋಡೋಣ
ಮಹೀಂದ್ರಾ ಥಾರ್ ರೋಕ್ಸ್ ಇದೀಗ ಮಾರುಕಟ್ಟೆಗೆ ಬಂದಿದೆ ಮತ್ತು ಆನ್‌ಲೈನ್‌ನಲ್ಲಿ ಮತ್ತು ಆಫ್‌ಲೈನ್ ಎರಡರಲ್ಲೂ ಕೂಡ ಹೆಚ್ಚು ಗಮನ ಸೆಳೆಯುತ್ತಿದೆ. ಅದರ ಉತ್ತಮ ಫೀಚರ್ ಗಳು ಮತ್ತು ಗಮನ ಸೆಳೆಯುವ ಡಿಸೈನ್ ನೊಂದಿಗೆ, ಇದು 5-ಡೋರ್ ಫೋರ್ಸ್ ಗೂರ್ಖಾದೊಂದಿಗೆ ನೇರವಾಗಿ ಸ್ಪರ್ಧಿಸಲು ಸಿದ್ಧವಾಗಿದೆ. ಈ ಲೇಖನದಲ್ಲಿ, SUVಗಳ ಹೋಲಿಕೆಯನ್ನು ನೋಡಲು ನಾವು ಎರಡೂ SUVಗಳ ಸ್ಪೆಸಿಫಿಕೇಷನ್ ಗಳನ್ನು ಹತ್ತಿರದಿಂದ ನೋಡೋಣ.
ಬೆಲೆ
ಮಾಡೆಲ್ |
ಬೆಲೆ |
ಮಹೀಂದ್ರಾ ಥಾರ್ ರೋಕ್ಸ್* |
ರೂ. 12.99 ಲಕ್ಷದಿಂದ ರೂ. 20.49 ಲಕ್ಷ |
5 ಡೋರ್ ಫೋರ್ಸ್ ಗೂರ್ಖಾ |
ರೂ. 18 ಲಕ್ಷ |
*ರಿಯರ್-ವೀಲ್-ಡ್ರೈವ್ (RWD) ಬೆಲೆಗಳನ್ನು ಮಾತ್ರ ಬಹಿರಂಗಪಡಿಸಲಾಗಿದೆ, 4-ವೀಲ್-ಡ್ರೈವ್ ಬೆಲೆಗಳು ಶೀಘ್ರದಲ್ಲೇ ಬರಲಿವೆ.
ಬೆಲೆಗಳು ಎಕ್ಸ್ ಶೋರೂಂ, ಪ್ಯಾನ್-ಇಂಡಿಯಾ ಬೆಲೆಯಾಗಿದೆ
5-ಡೋರ್ ಫೋರ್ಸ್ ಗೂರ್ಖಾ ಸಂಪೂರ್ಣವಾಗಿ ಲೋಡ್ ಮಾಡಲಾದ ವೇರಿಯಂಟ್ ನಲ್ಲಿ ಬರುತ್ತದೆ, ಮತ್ತು ಮಹೀಂದ್ರ ಥಾರ್ ರೋಕ್ಸ್ ಆರು ವೇರಿಯಂಟ್ ಗಳಲ್ಲಿ ಬರುತ್ತದೆ, ಅವುಗಳೆಂದರೆ: MX1, MX3, MX5, AX3L, AX5L ಮತ್ತು AX7L.
ಡೈಮೆನ್ಷನ್ ಗಳು
ಡೈಮೆನ್ಷನ್ ಗಳು |
ಮಹೀಂದ್ರಾ ಥಾರ್ ರೋಕ್ಸ್ |
5 ಡೋರ್ ಫೋರ್ಸ್ ಗೂರ್ಖಾ |
ವ್ಯತ್ಯಾಸ |
ಉದ್ದ |
4,428 ಮಿ.ಮೀ |
4,390 ಮಿ.ಮೀ |
+38 ಮಿ.ಮೀ |
ಅಗಲ |
1,870 ಮಿ.ಮೀ |
1,865 ಮಿ.ಮೀ |
+5 ಮಿ.ಮೀ |
ಎತ್ತರ |
1,923 ಮಿ.ಮೀ |
2,296 ಮಿ.ಮೀ |
(-902 ಮಿ.ಮೀ) |
ವೀಲ್ ಬೇಸ್ |
2,850 ಮಿ.ಮೀ |
2,825 ಮಿ.ಮೀ |
+25 ಮಿ.ಮೀ |
ಗ್ರೌಂಡ್ ಕ್ಲಿಯರೆನ್ಸ್ |
ಲಭ್ಯವಿಲ್ಲ |
233 ಮಿ.ಮೀ |
- |
ಮಹೀಂದ್ರಾ ಥಾರ್ ರೋಕ್ಸ್ ಮತ್ತು 5-ಡೋರ್ ಫೋರ್ಸ್ ಗೂರ್ಖಾ ಗಾತ್ರದಲ್ಲಿ ಒಂದೇ ರೀತಿ ಇವೆ, ಆದರೆ ಥಾರ್ ರೋಕ್ಸ್ ಸ್ವಲ್ಪ ಉದ್ದ ಮತ್ತು ಅಗಲವಾಗಿದೆ, ಆದ್ದರಿಂದ ಇದು ರಸ್ತೆಯಲ್ಲಿ ಸ್ವಲ್ಪ ಹೆಚ್ಚು ಎದ್ದು ಕಾಣುತ್ತದೆ. ಆದರೆ, ಗೂರ್ಖಾ ಹೆಚ್ಚು ಎತ್ತರವಾಗಿದೆ, ಆದ್ದರಿಂದ ಇದು ಪ್ರಯಾಣಿಕರಿಗೆ ಹೆಚ್ಚು ಹೆಡ್‌ರೂಮ್ ಅನ್ನು ನೀಡುವ ಸಾಧ್ಯತೆಯಿದೆ. ಥಾರ್ ರೋಕ್ಸ್ ಸ್ವಲ್ಪ ಉದ್ದವಾದ ವೀಲ್‌ಬೇಸ್ ಅನ್ನು ಹೊಂದಿದೆ, ಇದರಿಂದಾಗಿ ಇದು ಒಳಗೆ ಹೆಚ್ಚಿನ ಸ್ಥಳಾವಕಾಶ ನೀಡಬಹುದು.
ಆಫ್-ರೋಡ್ ಸ್ಪೆಸಿಫಿಕೇಷನ್ ಗಳು
ಮಹೀಂದ್ರಾ ಥಾರ್ ರೋಕ್ಸ್ |
5 ಡೋರ್ ಫೋರ್ಸ್ ಗೂರ್ಖಾ |
|
ಅಪ್ರೋಚ್ ಆಂಗಲ್ |
41.7 ಡಿಗ್ರಿ |
39 ಡಿಗ್ರಿ |
ಬ್ರೇಕ್ಓವರ್ ಆಂಗಲ್ |
23.9 ಡಿಗ್ರಿ |
28 ಡಿಗ್ರಿ |
ಡಿಪಾರ್ಚರ್ ಆಂಗಲ್ |
36.1 ಡಿಗ್ರಿ |
37 ಡಿಗ್ರಿ |
ಟರ್ ವೇಡಿಂಗ್ ಸಾಮರ್ಥ್ಯ |
650 ಮಿ.ಮೀ |
700 ಮಿ.ಮೀ |
ಆಫ್-ರೋಡ್ ಡ್ರೈವಿಂಗ್‌ಗಾಗಿ, ಮಹೀಂದ್ರ ಥಾರ್ ರೋಕ್ಸ್ ಮತ್ತು 5-ಡೋರ್ ಫೋರ್ಸ್ ಗೂರ್ಖಾ ಎರಡೂ ಕೂಡ ತನ್ನದೇ ಆದ ವಿಶೇಷ ಪ್ರಯೋಜನಗಳನ್ನು ಹೊಂದಿದೆ. ಥಾರ್ ರೋಕ್ಸ್ ಉತ್ತಮ ಅಪ್ರೋಚ್ ಆಂಗಲ್ ಅನ್ನು ಹೊಂದಿದೆ, ಇದು ಅಡೆತಡೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಆದರೆ, ಗೂರ್ಖಾ ಅದರ ಉತ್ತಮ ಬ್ರೇಕ್‌ಓವರ್ ಮತ್ತು ಡಿಪಾರ್ಚರ್ ಆಂಗಲ್ ಗಳ ಕಾರಣದಿಂದಾಗಿ ಮೇಲುಗೈಯನ್ನು ಹೊಂದಿದೆ, ಹಾಗಾಗಿ ಇದು ಒರಟಾದ ಭೂಪ್ರದೇಶದಲ್ಲಿ ಡ್ರೈವಿಂಗ್ ಮಾಡಲು ಸ್ವಲ್ಪ ಉತ್ತಮವಾಗಿದೆ. ಗೂರ್ಖಾ ಹೆಚ್ಚಿನ ನೀರಿನ ವೇಡಿಂಗ್ ಸಾಮರ್ಥ್ಯವನ್ನು ಹೊಂದಿದ್ದು, ಇದು ಥಾರ್ ರೋಕ್ಸ್‌ಗಿಂತ 50 ಮಿಮೀ ಹೆಚ್ಚು ಆಳವಾದ ನೀರಿನಲ್ಲಿ ದಾಟಲು ಅವಕಾಶ ನೀಡುತ್ತದೆ.
ಇದನ್ನು ಕೂಡ ಓದಿ: 5 ಡೋರ್ ಮಹೀಂದ್ರಾ ಥಾರ್ ರೋಕ್ಸ್ ವರ್ಸಸ್ ಮಾರುತಿ ಜಿಮ್ನಿ ಮತ್ತು ಫೋರ್ಸ್ ಗೂರ್ಖಾ 5-ಡೋರ್: ಆಫ್ ರೋಡ್ ಸ್ಪೆಸಿಫಿಕೇಷನ್ ಗಳ ಹೋಲಿಕೆ
ಪವರ್‌ಟ್ರೇನ್
ಸ್ಪೆಸಿಫಿಕೇಷನ್ ಗಳು |
ಮಹೀಂದ್ರ ಥಾರ್ ರೋಕ್ಸ್ |
5 ಡೋರ್ ಫೋರ್ಸ್ ಗೂರ್ಖಾ |
|
ಇಂಜಿನ್ |
2-ಲೀಟರ್ ಟರ್ಬೊ-ಪೆಟ್ರೋಲ್ |
2.2-ಲೀಟರ್ ಡೀಸೆಲ್ |
2.5-ಲೀಟರ್ ಡೀಸೆಲ್ |
ಪವರ್ |
177 PS ವರೆಗೆ |
175 PS ವರೆಗೆ |
140 PS |
ಟಾರ್ಕ್ |
380 Nm ವರೆಗೆ |
370 Nm ವರೆಗೆ |
320 Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT/ 6-ಸ್ಪೀಡ್ AT^ |
6-ಸ್ಪೀಡ್ MT/ 6-ಸ್ಪೀಡ್ AT |
5-ಸ್ಪೀಡ್ MT |
ಡ್ರೈವ್ ಟ್ರೈನ್* |
RWD |
RWD/4WD |
4WD |
*RWD: ರಿಯರ್-ವೀಲ್-ಡ್ರೈವ್; 4WD - ಫೋರ್-ವೀಲ್-ಡ್ರೈವ್
^AT: ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
5-ಡೋರ್ ಗೂರ್ಖಾಗೆ ಹೋಲಿಸಿದರೆ ಥಾರ್ ರೋಕ್ಸ್ ಹೊಂದಿರುವ ಒಂದು ಪ್ರಯೋಜನವೆಂದರೆ ಅದರ ಟರ್ಬೊ-ಪೆಟ್ರೋಲ್ ಎಂಜಿನ್, ಏಕೆಂದರೆ ಇದು ಗೂರ್ಖಾದಲ್ಲಿ ಲಭ್ಯವಿಲ್ಲ. ಆದರೆ, ಈ ಟರ್ಬೊ-ಪೆಟ್ರೋಲ್ ಪವರ್‌ಟ್ರೇನ್ ಅನ್ನು ರಿಯರ್-ವೀಲ್-ಡ್ರೈವ್ (RWD) ಕಾನ್ಫಿಗರೇಶನ್‌ನೊಂದಿಗೆ ಮಾತ್ರ ನೀಡಲಾಗುತ್ತಿದೆ.
ಮಹೀಂದ್ರ ಥಾರ್ ರೋಕ್ಸ್ ಮತ್ತು 5-ಡೋರ್ ಫೋರ್ಸ್ ಗೂರ್ಖಾ ಎರಡೂ ಬಲಿಷ್ಠವಾದ ಡೀಸೆಲ್ ಎಂಜಿನ್‌ಗಳನ್ನು ಹೊಂದಿವೆ, ಆದರೆ ಅವುಗಳ ನಡುವೆ ಕೆಲವು ಪ್ರಮುಖ ವ್ಯತ್ಯಾಸಗಳಿವೆ. ಥಾರ್ ರೋಕ್ಸ್ 2.2-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು ಅದು 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ 175 PS ಮತ್ತು 370 Nm ಟಾರ್ಕ್ ಅನ್ನು ನೀಡುತ್ತದೆ. ಮತ್ತೊಂದೆಡೆ, ಗೂರ್ಖಾ ದೊಡ್ಡದಾದ 2.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ, ಇದು 140 PS ಮತ್ತು 320 Nm ಅನ್ನು ಉತ್ಪಾದಿಸುತ್ತದೆ, ಆದರೆ ಕೇವಲ 5-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ ಬರುತ್ತದೆ. ಥಾರ್ ರೋಕ್ಸ್ ರಿಯರ್-ವೀಲ್-ಡ್ರೈವ್ ಮತ್ತು ಫೋರ್-ವೀಲ್-ಡ್ರೈವ್ ಆಯ್ಕೆಗಳೊಂದಿಗೆ ಬರುತ್ತದೆ, ಆದರೆ ಗೂರ್ಖಾ ಆಫ್-ರೋಡ್ ಡ್ರೈವಿಂಗ್ ಮೇಲೆ ಹೆಚ್ಚು ಗಮನಹರಿಸಿ ಕೇವಲ ಫೋರ್-ವೀಲ್-ಡ್ರೈವ್ ಅನ್ನು ಮಾತ್ರ ನೀಡುತ್ತಿದೆ.
ಇದನ್ನು ಕೂಡ ಓದಿ: 5 ಡೋರ್ ಮಹೀಂದ್ರ ಥಾರ್ ರೋಕ್ಸ್ ವೇರಿಯಂಟ್-ವಾರು ಪವರ್‌ಟ್ರೇನ್ ಆಯ್ಕೆಗಳ ವಿವರ ಇಲ್ಲಿದೆ
ಫೀಚರ್ ಗಳು
ಫೀಚರ್ ಗಳು |
ಮಹೀಂದ್ರ ಥಾರ್ ರೋಕ್ಸ್ |
5 ಡೋರ್ ಫೋರ್ಸ್ ಗೂರ್ಖಾ |
Exterior ಹೊರಭಾಗ |
|
|
Interior ಒಳಭಾಗ |
|
|
Comfort and Convenience ಸೌಕರ್ಯ ಮತ್ತು ಅನುಕೂಲತೆ |
|
|
Infotainment ಇನ್ಫೋಟೈನ್ಮೆಂಟ್ |
|
|
Safety ಸುರಕ್ಷತೆ |
|
|
-
ಈ ಎರಡರಲ್ಲಿ, ಥಾರ್ ರೋಕ್ಸ್ ತನ್ನ ಆಟೋ-LED ಹೆಡ್‌ಲೈಟ್‌ಗಳು, 19-ಇಂಚಿನ ಅಲೊಯ್ ವೀಲ್ ಗಳು ಮತ್ತು ಮುಂಭಾಗದ LED ಫಾಗ್ ಲೈಟ್‌ಗಳೊಂದಿಗೆ ಹೆಚ್ಚು ಸ್ಟೈಲಿಶ್ ಆಗಿ ಕಾಣುತ್ತದೆ. ಮತ್ತೊಂದೆಡೆ, ಗೂರ್ಖಾ, ಏರ್ ಇನ್ಟೇಕ್ ಸ್ನಾರ್ಕೆಲ್ ಮತ್ತು ರೂಫ್ ಕ್ಯಾರಿಯರ್‌ನಂತಹ ಫೀಚರ್ ಗಳೊಂದಿಗೆ ಆಫ್-ರೋಡ್ ಡ್ರೈವಿಂಗ್ ಮೇಲೆ ಕೇಂದ್ರೀಕರಿಸುತ್ತದೆ.
-
ಥಾರ್ ರೋಕ್ಸ್ ತನ್ನ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್, ವೈಟ್ ಲೆಥೆರೆಟ್ ಸೀಟುಗಳು ಮತ್ತು ಆಂಬಿಯೆಂಟ್ ಫುಟ್‌ವೆಲ್ ಲೈಟಿಂಗ್‌ನೊಂದಿಗೆ ಹೆಚ್ಚು ಪ್ರೀಮಿಯಂ ಇನ್-ಕ್ಯಾಬಿನ್ ಅನುಭವವನ್ನು ಒದಗಿಸುತ್ತದೆ. ಮತ್ತೊಂದೆಡೆ, ಗೂರ್ಖಾ ಆಲ್ ಬ್ಲಾಕ್ ಡ್ಯಾಶ್‌ಬೋರ್ಡ್ ಮತ್ತು ಫ್ಯಾಬ್ರಿಕ್ ಸೀಟ್‌ಗಳೊಂದಿಗೆ ಸರಳವಾದ ಅನುಭವ ನೀಡಿದರೂ ಕೂಡ ಇದು ಆರು ಸೀಟ್ ಗಳನ್ನು ಒದಗಿಸುತ್ತದೆ.
-
ಥಾರ್ ರೋಕ್ಸ್ ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಪನರೋಮಿಕ್ ಸನ್‌ರೂಫ್‌ನಂತಹ ಫೀಚರ್ ಗಳನ್ನು ಹೊಂದಿದೆ, ಆದರೆ ಗೂರ್ಖಾದ ಪ್ರೀಮಿಯಂ ಫೀಚರ್ ಗಳೆಂದರೆ ಡಿಜಿಟಲ್ ಡ್ರೈವರ್‌ನ ಡಿಸ್ಪ್ಲೇ ಮತ್ತು 9-ಇಂಚಿನ ಟಚ್‌ಸ್ಕ್ರೀನ್ ಮಾತ್ರ.
-
ಎರಡೂ SUVಗಳಲ್ಲಿ ಅಗತ್ಯವಿರುವ ಎಲ್ಲಾ ಸುರಕ್ಷತಾ ಫೀಚರ್ ಗಳನ್ನು ನೀಡಲಾಗಿದೆ, ಆದರೆ ಥಾರ್ ರೋಕ್ಸ್ ನಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ADAS ಅನ್ನು ನೀಡುವ ಮೂಲಕ ಇನ್ನಷ್ಟು ಸುರಕ್ಷತಾ ಫೀಚರ್ ಗಳನ್ನು ಲೋಡ್ ಮಾಡಲಾಗಿದೆ.
ಇದನ್ನು ಕೂಡ ಓದಿ: 5 ಡೋರ್ ಮಹೀಂದ್ರ ಥಾರ್ ರೋಕ್ಸ್ ವೇರಿಯಂಟ್-ವಾರು ಫೀಚರ್ ಗಳ ವಿವರ ಇಲ್ಲಿದೆ
ನೀವು ಯಾವುದನ್ನು ಆಯ್ಕೆಮಾಡಬಹುದು?
ಮಹೀಂದ್ರ ಥಾರ್ ರೋಕ್ಸ್ ಮತ್ತು 5-ಡೋರ್ ಫೋರ್ಸ್ ಗೂರ್ಖಾ ನಡುವೆ ಯಾವುದನ್ನು ಆಯ್ಕೆ ಮಾಡಬೇಕು ಎನ್ನುವುದು ನಿಮ್ಮ ಅಗತ್ಯಗಳ ಮೇಲೆ ಅವಲಂಬಿಸಿರುತ್ತದೆ. ನೀವು ಆಫ್-ರೋಡ್ ಡ್ರೈವಿಂಗ್ ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮತ್ತು ಉನ್ನತ-ಮಟ್ಟದ ಫೀಚರ್ ಗಳನ್ನು ಹೊಂದಿರುವ ಆಲ್ ರೌಂಡರ್ SUV ಬಯಸಿದರೆ, ಥಾರ್ ರೋಕ್ಸ್ ಉತ್ತಮ ಆಯ್ಕೆಯಾಗಿದೆ. ಇದು ಸುಧಾರಿತ ತಂತ್ರಜ್ಞಾನ, ಐಷಾರಾಮಿ ಕ್ಯಾಬಿನ್ ಮತ್ತು ಹಲವಾರು ಡ್ರೈವ್‌ಟ್ರೇನ್ ಆಯ್ಕೆಗಳನ್ನು ಹೊಂದಿದೆ, ಆದರೆ ಇದು ಹೆಚ್ಚು ದುಬಾರಿ ಕೂಡ ಆಗಿದೆ.
ಪ್ರಮುಖ ಫೀಚರ್ ಗಳು ಮತ್ತು ಕಡಿಮೆ ಬೆಲೆಯೊಂದಿಗೆ ನೀವು ಬಲಿಷ್ಠವಾದ, ಹೆಚ್ಚು ಸಾಂಪ್ರದಾಯಿಕ ಆಫ್-ರೋಡರ್ ಬಯಸಿದರೆ, ಫೋರ್ಸ್ ಗೂರ್ಖಾ ಉತ್ತಮ ಆಯ್ಕೆಯಾಗಿರಬಹುದು. ಇದು ಹೆಚ್ಚು ಉತ್ತಮ ಆಫ್-ರೋಡ್ ಪರ್ಫಾರ್ಮೆನ್ಸ್ ಮತ್ತು ಸರಳವಾದ ಫೀಚರ್ ಗಳ ಮೇಲೆ ಕೇಂದ್ರೀಕರಿಸುತ್ತದೆ, ಆದರೆ ಥಾರ್ ರೋಕ್ಸ್‌ನಲ್ಲಿ ಕಂಡುಬರುವ ಕೆಲವು ಸುಧಾರಿತ ಫೀಚರ್ ಗಳು ಇಲ್ಲಿ ಲಭ್ಯವಿಲ್ಲ.
ನಿಮ್ಮ ಗ್ಯಾರೇಜ್‌ನಲ್ಲಿ ಈ ಎರಡು SUVಗಳಲ್ಲಿ ಯಾವುದನ್ನು ನೀವು ಇರಿಸಲು ಬಯಸುತ್ತೀರಿ? ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: ಮಹೀಂದ್ರ ಥಾರ್ ರೋಕ್ಸ್ ಆನ್ ರೋಡ್ ಬೆಲೆ