ಮಾರುತಿ ಬಲೆನೊ ಸಿಎನ್‌ಜಿಯನ್ನು ಹಿಂದಿಕ್ಕಿದ ಟಾಟಾ ಆಲ್ಟ್ರೋಝ್ ಸಿಎನ್‌ಜಿಯ ಈ 5 ವೈಶಿಷ್ಟ್ಯಗಳು
ಟಾಟಾ ಆಲ್ಟ್ರೋಝ್ 2020-2023 ಗಾಗಿ ansh ಮೂಲಕ ಏಪ್ರಿಲ್ 27, 2023 10:38 am ರಂದು ಪ್ರಕಟಿಸಲಾಗಿದೆ
- 13 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಆಲ್ಟ್ರೋಝ್ ಸಿಎನ್‌ಜಿ ಹ್ಯಾಚ್‌ಬ್ಯಾಕ್‌ಗಾಗಿ ಬುಕ್ಕಿಂಗ್‌ಗಳನ್ನು ಪ್ರಸ್ತುತ ಸ್ವೀಕರಿಸಲಾಗುತ್ತಿದೆ. ಮುಂದಿನ ತಿಂಗಳಿನಿಂದ ಈ ವಾಹನದ ಡೆಲಿವರಿ ಆರಂಭವಾಗಲಿದೆ.
ಟಾಟಾ ಆಟೋ ಎಕ್ಸ್‌ಪೋ 2023 ರಲ್ಲಿ ಆಲ್ಟ್ರೋಝ್ ಸಿಎನ್‌ಜಿಯನ್ನು ಪ್ರದರ್ಶಿಸಿತು ಮತ್ತು ಶೀಘ್ರದಲ್ಲೇ ಬಿಡುಗಡೆಯ ಸುಳಿವು ನೀಡುವಂತೆ ಇತ್ತೀಚೆಗೆ ಅದರ ಆರ್ಡರ್ ಸ್ವೀಕರಿಸುವುದನ್ನು ಪ್ರಾರಂಭಿಸಲಾಗಿದೆ. ಟಾಟಾದ ಈ ಪ್ರೀಮಿಯಂ ಸಿಎನ್‌ಜಿ ಹ್ಯಾಚ್‌ಬ್ಯಾಕ್ ಮಾರುತಿ ಬಲೆನೊ ಸಿಎನ್‌ಜಿ ಮತ್ತು ಟೊಯೊಟಾ ಗ್ಲಾನ್ಝಾ ಸಿಎನ್‌ಜಿಗೆ ಪ್ರತಿಸ್ಪರ್ಧಿಯಾಗಿದೆ. ಮಾರುತಿ ಬಲೆನೊ ಸಿಎನ್‌ಜಿ ಮತ್ತು ಗ್ಲಾನ್ಝಾ ಸಿಎನ್‌ಜಿಗೆ ಹೋಲಿಸಿದರೆ ಟಾಟಾ ಆಲ್ಟ್ರೋಝ್ ಸಿಎನ್‌ಜಿ ಯಾವ ಐದು ಹೊಸ ವೈಶಿಷ್ಟ್ಯಗಳನ್ನು ಪಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ:-
ಸನ್‌ರೂಫ್
ಸನ್‌ರೂಫ್ ಎಂಬ ಮಹತ್ವದ ವೈಶಿಷ್ಟ್ಯದ ಸೇರ್ಪಡೆಯೊಂದಿಗೆ ಪ್ರಾರಂಭಿಸೋಣ. ಆಟೋ ಎಕ್ಸ್‌ಪೋ ಶೋಕೇಸ್‌ನಲ್ಲಿ ಪೂರ್ವವೀಕ್ಷಣೆ ಮಾಡಿದಂತೆ, ಆಲ್ಟ್ರೋಝ್ ಸಿಎನ್‌ಜಿ ಸನ್‌ರೂಫ್ ಅನ್ನು ಹೊಂದಿರುತ್ತದೆ ಎಂದು ಟಾಟಾ ಟೀಸರ್ ಮೂಲಕ ಖಚಿತಪಡಿಸಿದೆ. ಸಿಎನ್‌ಜಿ ಹ್ಯಾಚ್‌ಬ್ಯಾಕ್ ಬಿಡುಗಡೆಯಾದ ನಂತರ, ಈ ವೈಶಿಷ್ಟ್ಯವನ್ನು ಒಳಗೊಂಡಿರುವ ತನ್ನ ವಿಭಾಗದಲ್ಲಿ ಏಕೈಕ ಮಾಡೆಲ್ ಆಗಲಿದೆ.
ಇದನ್ನೂ ಓದಿ: ಈ ಏಪ್ರಿಲ್‌ನಲ್ಲಿ ರೂ 35,000 ವರೆಗಿನ ಪ್ರಯೋಜನಗಳೊಂದಿಗೆ ಟಾಟಾ ಕಾರನ್ನು ಪಡೆದುಕೊಳ್ಳಿ
ಟಾಟಾ ಆಲ್ಟ್ರೋಝ್‌ನ ಪೆಟ್ರೋಲ್ ಮತ್ತು ಡೀಸೆಲ್ ವೇರಿಯಂಟ್‌ಗಳ ವೈಶಿಷ್ಟ್ಯಗಳ ಪಟ್ಟಿಗೆ ಸನ್‌ರೂಫ್ ಅನ್ನು ಸೇರಿಸಬಹುದು ಎಂಬ ನಿರೀಕ್ಷೆಯಿದೆ, ಹಾಗಾದಲ್ಲಿ ಇದು ಹ್ಯುಂಡೈ i20 ಬಳಿಕ ಸನ್‌ರೂಫ್ ಅನ್ನು ಹೊಂದಿರುವ ವಿಭಾಗದಲ್ಲಿ ಇದು ಎರಡನೇ ಮಾಡೆಲ್ ಆಗಲಿದೆ.
ಟ್ವಿನ್-ಸಿಲಿಂಡರ್ ತಂತ್ರಜ್ಞಾನ
ಸಿಎನ್‌ಜಿ ಕಾರುಗಳ ದೊಡ್ಡ ನ್ಯೂನತೆಯೆಂದರೆ ಅದರಲ್ಲಿ ಇರಿಸಲಾದ ದೊಡ್ಡ ಸಿಲಿಂಡರ್‌ನಿಂದಾಗಿ ಹೆಚ್ಚಿನ ಬೂಟ್ ಸ್ಪೇಸ್ ಅಲಭ್ಯತೆ. ಈ ಸಮಸ್ಯೆಯ ನಿವಾರಣೆಗಾಗಿ, ಟಾಟಾ ಆಲ್ಟ್ರೊಝ್‌ನ ಸಿಎನ್‌ಜಿ ಆವೃತ್ತಿಯಲ್ಲಿ ಟ್ವಿನ್-ಸಿಲಿಂಡರ್ ಸೆಟಪ್ ಅನ್ನು ನೀಡಿದೆ, ಇದರಲ್ಲಿ ಒಂದು ದೊಡ್ಡ ಸಿಎನ್‌ಜಿ ಟ್ಯಾಂಕ್ ಬದಲಿಗೆ, ಬೂಟ್ ಬೆಡ್ ಅಡಿಯಲ್ಲಿ ಅದೇ ಸಾಮರ್ಥ್ಯದ ಎರಡು ಸಣ್ಣ ಟ್ಯಾಂಕ್‌ಗಳನ್ನು ಇರಿಸಲಾಗಿದೆ. ಅದರಿಂದಾಗಿ, ಗ್ರಾಹಕರು ತಮ್ಮ ಲಗೇಜ್ ಅನ್ನು ಇರಿಸಲು ಸಾಕಷ್ಟು ಬೂಟ್ ಸ್ಪೇಸ್ ಅನ್ನು ಹೊಂದಿರುತ್ತಾರೆ.
ಸಿಎನ್‌ಜಿ ಮೋಡ್‌ನಲ್ಲಿ ಡೈರೆಕ್ಟ್ ಸ್ಟಾರ್ಟ್
ಬಲೆನೊ ಮತ್ತು ಗ್ಲಾನ್ಝಾ ಸೇರಿದಂತೆ ಅನೇಕ ಸಿಎನ್‌ಜಿ ಕಾರುಗಳು ಮೊದಲು ಪೆಟ್ರೋಲ್ ಮೋಡ್‌ನಲ್ಲಿ ಪ್ರಾರಂಭವಾಗುತ್ತವೆ ಮತ್ತು ನಂತರ ಸಿಎನ್‌ಜಿಗೆ ಬದಲಾಗುತ್ತವೆ, ಆಲ್ಟ್ರೋಝ್‌ನಂತಹ ಟಾಟಾದ ಸಿಎನ್‌ಜಿ ಮಾಡೆಲ್‌ಗಳು ನೇರವಾಗಿ ಸಿಎನ್‌ಜಿ ಮೋಡ್‌ನಲ್ಲಿ ಸ್ಟಾರ್ಟ್ ಆಗುವಂತಹ ವೈಶಿಷ್ಟ್ಯವನ್ನು ಪಡೆಯುತ್ತವೆ. ಇದು ಕೇವಲ ಒಂದು ಸಣ್ಣ ಅನುಕೂಲವಾಗಿರಬಹುದು, ಆದರೆ ಒಂದು ದಶಕದಿಂದ ಸಿಎನ್‌ಜಿ ಮಾಡೆಲ್‌ಗಳ ತಯಾರಿಸುತ್ತಿರುವ ಮಾರುತಿಗೆ ಈ ವೈಶಿಷ್ಟ್ಯವನ್ನು ನೀಡಲು ಸಾಧ್ಯವಾಗಿಲ್ಲ.
ರೇನ್ ಸೆನ್ಸಿಂಗ್ ವೈಪರ್
ಟಾಟಾ ಆಲ್ಟ್ರೋಝ್, XZ ಮತ್ತು ಅದಕ್ಕಿಂತ ಮೇಲಿನ ಟಾಪ್ ಸ್ಪೆಕ್ ವೇರಿಯಂಟ್‌ಗಳು ರೇನ್-ಸೆನ್ಸಿಂಗ್ ವೈಪರ್‌ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ. ಈ ವೈಶಿಷ್ಟ್ಯಗಳನ್ನು ಹೊಂದಿರುವ ವೇರಿಯಂಟ್‌ಗಳು ಈಗ ಹೊಸ ಸಿಎನ್‌ಜಿ ಆಯ್ಕೆಯನ್ನು ಪಡೆಯುವುದರಿಂದ, ಪ್ರತಿಸ್ಪರ್ಧಿಗಳಿಗಿಂತ ಭಿನ್ನವಾಗಿ, ಈ ವೈಶಿಷ್ಟ್ಯವನ್ನು ಹೊಂದಿರುವ ಸಿಎನ್‌ಜಿ ವಿಭಾಗದಲ್ಲಿ ಏಕೈಕ ಕಾರು ಆಲ್ಟ್ರೋಝ್ ಆಗಿದೆ. ಈ ವೈಶಿಷ್ಟ್ಯವು ಹೆಸರೇ ಸೂಚಿಸುವಂತೆ, ಡ್ರೈವರ್‌ನಿಂದ ಯಾವುದೇ ಇನ್‌ಪುಟ್ ಇಲ್ಲದೆಯೇ ಮಳೆ ಪ್ರಾರಂಭವಾದಾಗ ವೈಪರ್‌ಗಳು ಆಟೋಮ್ಯಾಟಿಕ್ ಆಗಿ ಪ್ರಾರಂಭವಾಗುತ್ತದೆ. ರೇನ್ ಸೆನ್ಸಿಂಗ್ ವೈಪರ್ ವೈಶಿಷ್ಟ್ಯವು ಮಾರುತಿ ಮತ್ತು ಟೊಯೋಟಾದ ಸಿಎನ್‌ಜಿ ಕಾರುಗಳಲ್ಲಿ ಲಭ್ಯವಿಲ್ಲ.
ಕ್ರೂಸ್ ಕಂಟ್ರೋಲ್
ಟಾಟಾ ಆಲ್ಟ್ರೋಝ್ ಹ್ಯಾಚ್‌ಬ್ಯಾಕ್‌ನ ಟಾಪ್ ವೇರಿಯಂಟ್‌ಗಳಲ್ಲಿ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯನ್ನು ನೀಡುತ್ತದೆ. ಇದು ಹೈವೇ ಡ್ರೈವಿಂಗ್‌ಗೆ ಉಪಯುಕ್ತ ವೈಶಿಷ್ಟ್ಯವಾಗಿದೆ. ಬಲೆನೊ ಮತ್ತು ಗ್ಲಾನ್ಝಾ ಸಹ ಈ ವೈಶಿಷ್ಟ್ಯವನ್ನು ಹೊಂದಿದ್ದರೂ, ಅದು ಎರಡೂ ಮಾಡೆಲ್‌ಗಳ ಸಿಎನ್‌ಜಿ ವೇರಿಯಂಟ್‌ಗಳಲ್ಲಿ ಲಭ್ಯವಿಲ್ಲ ಏಕೆಂದರೆ ಎರಡೂ ತಮ್ಮ ಮಿಡ್ ಸೈಜ್ ವೇರಿಯಂಟ್‌ಗಳಲ್ಲಿ ಮಾತ್ರ ಸಿಎನ್‌ಜಿ ಪವರ್‌ಟ್ರೇನ್ ಅನ್ನು ನೀಡುತ್ತವೆ.
ಟಾಟಾ ಸಿಎನ್‌ಜಿ ಆಲ್ಟ್ರೋಝ್ ಅನ್ನು XE, XM+, XZ ಮತ್ತು XZ+ S ಎಂಬ ನಾಲ್ಕು ವೇರಿಯಂಟ್‌ಗಳಲ್ಲಿ ನೀಡುತ್ತಿದೆ ಮತ್ತು ಈ ವೇರಿಯಂಟ್‌ಗಳು ಪ್ರಮಾಣಿತ ಆಲ್ಟ್ರೋಝ್‌ಗಿಂತ ಸುಮಾರು ಒಂದು ಲಕ್ಷ ರೂಪಾಯಿ ಹೆಚ್ಚು ಬೆಲೆಯನ್ನು ಹೊಂದಿರುವ ನಿರೀಕ್ಷೆಯಿದೆ. ಟಾಟಾ ಆಲ್ಟ್ರೋಝ್ ಪ್ರಸ್ತುತ 6.45 ಲಕ್ಷ ರೂ.ದಿಂದ 10.40 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ) ಬೆಲೆ ಹೊಂದಿದೆ.
ಇನ್ನಷ್ಟು ಓದಿ: ಟಾಟಾ ಆಲ್ಟ್ರೋಝ್ ಆನ್ ರೋಡ್ ಬೆಲೆ
0 out of 0 found this helpful