• English
  • Login / Register

ಸುಧಾರಿತ ಕಿಯಾ ಸೆಲ್ಟೋಸ್‌ನಿಂದ ಈ 5 ವಿಷಯಗಳನ್ನು ಪಡೆಯಲಿರುವ 2024ರ ಹ್ಯುಂಡೈ ಕ್ರೆಟಾ

ಕಿಯಾ ಸೆಲ್ಟೋಸ್ ಗಾಗಿ tarun ಮೂಲಕ ಜುಲೈ 11, 2023 10:02 am ರಂದು ಪ್ರಕಟಿಸಲಾಗಿದೆ

  • 33 Views
  • ಕಾಮೆಂಟ್‌ ಅನ್ನು ಬರೆಯಿರಿ

 ಹೊಸ ಸೆಲ್ಟೋಸ್‌ನಿಂದ ಹಲವಾರು ಫೀಚರ್‌ಗಳನ್ನು ಎರವಲು ಪಡೆದ ನವೀಕೃತ ಕ್ರೆಟಾ, ತನ್ನನ್ನು ಹೆಚ್ಚು ಫೀಚರ್-ಭರಿತ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಒಂದಾಗಿ ಪರಿವರ್ತಿಸಿಕೊಳ್ಳುತ್ತಿದೆ.

Kia Seltos Vs Hyundai Creta

ಈ ನವೀಕೃತ ಕಿಯಾ ಸೆಲ್ಟೋಸ್ ಇತ್ತೀಚೆಗೆ ಭಾರತಕ್ಕೆ ಪಾದಾರ್ಪಣೆ ಮಾಡಿದೆ ಮತ್ತು ಅದರ ಮಾರುಕಟ್ಟೆ ಬಿಡುಗಡೆಯು ಶೀಘ್ರದಲ್ಲಿಯೇ ನಡೆಯಲಿದೆ. ಈ ಅಪ್‌ಡೇಟ್ ಆದ ಮಾಡೆಲ್ ಒಳಭಾಗದಲ್ಲಿ ಹಲವಾರು ಕಾಸ್ಮೆಟಿಕ್ ಅಪ್‌ಗ್ರೇಡ್‌ಗಳು, ಹೊಸ ಫೀಚರ್‌ಗಳು ಮತ್ತು ಹೆಚ್ಚು ಶಕ್ತಿಶಾಲಿ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಪ್ರಾರಂಭವಾದ ನಾಲ್ಕು ವರ್ಷಗಳಲ್ಲಿ ಸೆಲ್ಟೋಸ್‌ಗೆ ಇದು ಮೊದಲ ಪ್ರಮುಖ ಅಪ್‌ಡೇಟ್ ಆಗಿದೆ ಮತ್ತು 2024 ರಲ್ಲಿ ಆಗಮಿಸಲಿರುವ ಕೊರಿಯನ್ ಮಾಡೆಲ್, ನವೀಕೃತ ಹ್ಯುಂಡೈ ಕ್ರೆಟಾದಲ್ಲಿಯೂ ಈ ಬದಲಾವಣೆಗಳನ್ನು ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ.

 ಅವುಗಳು ತಮ್ಮ ಫೀಚರ್‌ ವಿನ್ಯಾಸದ ಕುರಿತು ಮಾತನಾಡುತ್ತಿದ್ದರೆ, ಎರಡೂ ಎಸ್‌ಯುವಿಗಳ ವಿವರಗಳು ಈ ಕೆಳಗಿನಂತಿವೆ. ನವೀಕೃತ ಸೆಲ್ಟೋಸ್‌ನಿಂದ 2024 ರ ಕ್ರೆಟಾ ಎರವಲು ಪಡೆಯಬಹುದಾದ 5 ಪ್ರಮುಖ ಫೀಚರ್‌ಗಳು ಇಲ್ಲಿವೆ: 

ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳು

Kia Seltos New Vs Old

 ಈ ಸೆಲ್ಟೋಸ್ ಡ್ಯುಯಲ್ 10.25-ಇಂಚಿನ ಸಂಪರ್ಕಿತ ಡಿಸ್‌ಪ್ಲೇಯನ್ನು ಪಡೆಯುತ್ತಿದ್ದು, ಒಂದು ಟಚ್‌ಸ್ಕ್ರೀನ್ ಇನ್‌ಫೊಟೇನ್‌ಮೆಂಟ್ ಸಿಸ್ಟಮ್‌ಗಾಗಿ ಮತ್ತು ಇನ್ನೊಂದು ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ನೀಡಲಾಗಿದೆ. ಕ್ರೆಟಾ ಪ್ರಸ್ತುತದಲ್ಲಿ 10.25-ಇಂಚಿನ ಇನ್‌ಫೊಟೇನ್‌ಮೆಂಟ್ ಯೂನಿಟ್ ಮತ್ತು ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ. ನವೀಕೃತ ಕ್ರೆಟಾದಲ್ಲಿ ನಾವು ಇದೇ ರೀತಿಯ ವಿನ್ಯಾಸವನ್ನು ನೋಡಬಹುದಾಗಿದ್ದು, ಇದು ಕ್ರೆಟಾದ ಕ್ಯಾಬಿನ್‌ನ ಪ್ರೀಮಿಯಂ ಅಂಶವನ್ನು ಹೆಚ್ಚಿಸುತ್ತದೆ. 

ADAS

 Kia Seltos New Vs Old

 ನವೀಕೃತ ಸೆಲ್ಟೋಸ್‌ನ ಪ್ರಮುಖ ಸೇರ್ಪಡೆಗಳಲ್ಲಿ ಒಂದು ರಾಡಾರ್-ಆಧಾರಿತ ADAS ಆಗಿದೆ. ಸಕ್ರಿಯ ಸುರಕ್ಷತಾ ಫೀಚರ್‌ಗಳ ಸೂಟ್ ಅನ್ನು ನವೀಕೃತೆ ಕ್ರೆಟಾದಲ್ಲಿಯೂ ನಾವು ಕಾಣಬಹುದು. ಟಕ್ಸನ್ ಎಸ್‌ಯುವಿ ಮತ್ತು ವರ್ನಾ ಸೆಡಾನ್‌ಗಳ ಹಿಂದೆಯೇ ತನ್ನ ಹೆಚ್ಚಿನ ಕಾರುಗಳು ADAS ಅನ್ನು ಪಡೆಯುತ್ತವೆ ಎಂದು ಹ್ಯುಂಡೈ ಈಗಾಗಲೇ ದೃಢೀಕರಿಸಿದೆ.

 ಸೆಲ್ಟೋಸ್‌ನ ADAS ಸೂಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಹೈ-ಬೀಮ್ ಅಸಿಸ್ಟ್ ಮತ್ತು ಆಟೋನೊಮಸ್ ತುರ್ತು ಬ್ರೇಕಿಂಗ್ ಅನ್ನು ಇದು ಒಳಗೊಂಡಿದೆ.

ಇದನ್ನೂ ಓದಿ: ಈ 15 ಚಿತ್ರಗಳಲ್ಲಿ ನವೀಕೃತ ಕಿಯಾ ಸೆಲ್ಟೋಸ್‌ ಅನ್ನು ಸಮೀಪದಿಂದ ನೋಡಿ

 ಡ್ಯುಯಲ್-ಝೋನ್ ಎಸಿ

Kia Seltos New Vs Old

 ನವೀಕೃತ ಸೆಲ್ಟೋಸ್‌ನ ವಿಭಾಗದಲ್ಲಿಯೋ ಪ್ರಥಮವಾದ ಫೀಚರ್‌ ಎಂದರೆ ಡ್ಯುಯಲ್-ಝೋನ್ ಕ್ಲೈಮೆಟ್ ಕಂಟ್ರೋಲ್, ಇದನ್ನು ನಾವು 2024 ಕ ಕ್ರೆಟಾದಲ್ಲಿಯೂ ನೋಡಬಹುದು. ಇದು ಉತ್ತಮವಾದ ಫೀಚರ್‌ ಆಗಿದ್ದು, ಇದು ಮಾಲೀಕರಿಗೆ ಖಂಡಿತವಾಗಿಯೂ ಅನುಕೂಲಕರವಾಗಿರುತ್ತದೆ ಮತ್ತು ಈ ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ಮಹೀಂದ್ರಾ  XUV700 ನಂತಹ ಅದೇ ಪ್ರೀಮಿಯಂ ಫೀಚರ್‌ ಸೆಟ್‌ಗೆ ಏರಿಸುತ್ತದೆ. 

 1.5-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್

Kia Seltos New Vs Old

ತನ್ನ 160PS/253Nm 1.5-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್‌ನೊಂದಿಗೆ, ನವೀಕೃತ ಸೆಲ್ಟೋಸ್ ಪ್ರಸ್ತುತ ಮಾರಾಟದಲ್ಲಿರುವ ಅತ್ಯಂತ ಶಕ್ತಿಶಾಲಿ ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ. ಇದೇ ಎಂಜಿನ್ ವರ್ನಾ ಮತ್ತು ಕಾರೆನ್ಸ್‌ನಲ್ಲಿಯೂ ಕಂಡುಬರುತ್ತದೆ ಮತ್ತು 2024 ರ ಕ್ರೆಟಾದಲ್ಲಿಯೂ ಸಹ ನಾವಿದನ್ನು ನೋಡಬಹುದು. ಸೆಲ್ಟೋಸ್‌ನಲ್ಲಿರುವ ಈ ಎಂಜಿನ್ ಅನ್ನು 6-ಸ್ಪೀಡ್ iMT ಮತ್ತು 7-ಸ್ಪೀಡ್ DCT ಯೊಂದಿಗೆ ಜೋಡಿಸಲಾಗಿದೆ. ಆದಾಗ್ಯೂ, ಕ್ರೆಟಾ, iMT (ಕ್ಲಚ್ ಪೆಡಲ್ ಇಲ್ಲದ ಮ್ಯಾನ್ಯುವಲ್) ಆಯ್ಕೆಯನ್ನು ಪಡೆಯದೇ ಇರಬಹುದು, ಆದರೆ ಬದಲಿಗೆ ಮೂರು-ಪೆಡಲ್ ಮ್ಯಾನ್ಯುವಲ್ ಸ್ಟಿಕ್ ಅನ್ನು ಪಡೆಯಬಹುದಾಗಿದೆ. 

ಇದನ್ನೂ ಓದಿ: ಚಿತ್ರ ಹೋಲಿಕೆ: ಹೊಸ ವರ್ಸಸ್ ಹಳೆಯ ಕಿಯಾ ಸೆಲ್ಟೋಸ್

 ಸ್ಪೋರ್ಟಿ ನೋಟವನ್ನು ನೀಡುವ ಹಿಂಭಾಗ

Kia Seltos New Vs Old

 ಮೊದಲೇ ಹೇಳಿದಂತೆ, ಕ್ರೆಟಾ ಮತ್ತು ಸೆಲ್ಟೋಸ್ ತಮ್ಮ ವಿಭಿನ್ನ ಗೋಚರ ಗುರುತುಗಳನ್ನು ಹೊಂದಿವೆಯಾದರೂ ರೂಪದಲ್ಲಿ ತುಸು ಸಾಮ್ಯತೆಯಿರಲಿದೆ. ನವೀಕೃತ ಸೆಲ್ಟೋಸ್‌ನ ಎಕ್ಸ್‌ಟೀರಿಯರ್‌ನಲ್ಲಿನ ಒಂದು ಪ್ರಮುಖ ಬದಲಾವಣೆಯೆಂದರೆ ಅದರ ಹೊಸ ಹಿಂಭಾಗವು ಸಂಪರ್ಕಿತ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು ಹೊಸ ಡ್ಯುಯಲ್-ಟಿಪ್ ಎಕ್ಸಾಸ್ಟ್ ಅನ್ನು ಒಳಗೊಂಡಿವೆ.

ನವೀಕೃತ ಕ್ರೆಟಾ ಹಿಂಭಾಗದಲ್ಲಿ ಸಂಪರ್ಕಿತ ಲೈಟಿಂಗ್ ಸೆಟಪ್ ಅನ್ನು ಸಹ ಪಡೆಯಬಹುದು . ಹ್ಯುಂಡೈ ಎಸ್‌ಯುವಿಯ ಟರ್ಬೋ-ಪೆಟ್ರೋಲ್ ವೇರಿಯೆಂಟ್‌ಗಳು ಈಗಾಗಲೇ ಹ್ಯುಂಡೈ-ಟಿಪ್ ಎಕ್ಸಾಸ್ಟ್‌ನೊಂದಿಗೆ ಬಂದಿದ್ದರೆ, ಬಂಪರ್‌ನ ಪ್ರತಿ ತುದಿಯಲ್ಲಿ ಇನ್ನೊಂದು ಟಿಪ್ ಅನ್ನು ಹೊಂದುವ ಮೂಲಕ ನವೀಕೃತ ಸೆಲ್ಟೋಸ್ ವಿಭಿನ್ನ ರೀತಿಯ ಸೆಟಪ್ ಅನ್ನು ಹೊಂದಿದೆ. ಇದು 160PS ಟರ್ಬೋ-ಪೆಟ್ರೋಲ್ ಎಂಜಿನ್‌ನ ಕಾರ್ಯಕ್ಷಮತೆಯನ್ನು ಹೊಂದಿಸಲು ಹೊಸ ಕ್ರೆಟಾದಲ್ಲಿ ನೀಡಬಹುದಾದ ವಿಭಿನ್ನ ರೀತಿಯ ಎಕ್ಸಾಸ್ಟ್ ನೋಟ್‌ಗೆ ಕಾರಣವಾಗಬಹುದು.

ಇವು ನವೀಕೃತ ಕಿಯಾ ಸೆಲ್ಟೋಸ್‌ನಿಂದ 2024 ಹ್ಯುಂಡೈ ಕ್ರೆಟಾ ಎರವಲು ಪಡೆಯಬಹುದಾದ ಕೆಲವು ಪ್ರಮುಖ ಅಪ್‌ಡೇಟ್‌ಗಳಾಗಿವೆ. ಈ ನವೀಕರಣಗಳೊಂದಿಗೆ, ಹ್ಯುಂಡೈ ಎಸ್‌ಯುವಿ ಪ್ರಸ್ತುತ ಬೆಲೆಗಿಂತ ಪ್ರೀಮಿಯಂ ಅನ್ನು ಹೊಂದುಬಹುದಾಗಿದ್ದು, ಅದು ರೂ.10.87 ಲಕ್ಷದಿಂದ ರೂ. 19.20 ಲಕ್ಷದವರೆಗೆ (ಎಕ್ಸ್-ಶೋರೂಮ್) ಬೆಲೆಯನ್ನು ನಿಗದಿಪಡಿಸಬಹುದಾಗಿದೆ.

ಇನ್ನಷ್ಟು ಇಲ್ಲಿ ಓದಿ : ಸೆಲ್ಟೋಸ್ ಡಿಸೇಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Kia ಸೆಲ್ಟೋಸ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience