• English
  • Login / Register

Kia Seltos, Sonet, ಮತ್ತು Carensನ ಗ್ರಾವಿಟಿ ಎಡಿಷನ್‌ ಬಿಡುಗಡೆ, ಇಲ್ಲಿದೆ ಬೆಲೆ, ಎಂಜಿನ್‌ ಮತ್ತು ಫೀಚರ್‌ಗಳ ಮಾಹಿತಿ

modified on ಸೆಪ್ಟೆಂಬರ್ 05, 2024 12:07 pm by dipan for ಕಿಯಾ ಸೊನೆಟ್

  • 54 Views
  • ಕಾಮೆಂಟ್‌ ಅನ್ನು ಬರೆಯಿರಿ

ಸೆಲ್ಟೋಸ್, ಸೋನೆಟ್ ಮತ್ತು ಕ್ಯಾರೆನ್ಸ್‌ನ ಗ್ರಾವಿಟಿ ಎಡಿಷನ್‌ ಕೆಲವು ಕಾಸ್ಮೆಟಿಕ್ ಪರಿಷ್ಕರಣೆಗಳನ್ನು ಪಡೆಯುವುದು ಮಾತ್ರವಲ್ಲದೆ ಕೆಲವು ಹೆಚ್ಚುವರಿ ಫೀಚರ್‌ಗಳೊಂದಿಗೆ ಬರುತ್ತದೆ

Kia Seltos, Sonet and Carens gets Gravity Editions

ಕಿಯಾ ಇಂಡಿಯಾ ಸೋನೆಟ್ ಮತ್ತು ಸೆಲ್ಟೋಸ್ ಎಸ್‌ಯುವಿಗಳು ಮತ್ತು ಕ್ಯಾರೆನ್ಸ್ ಎಂಪಿವಿಯ ಹೊಸ ಗ್ರಾವಿಟಿ ಎಡಿಷನ್‌ ಅನ್ನು ಬಿಡುಗಡೆ ಮಾಡಿದೆ. ಈ ಎಡಿಷನ್‌ನ ಬೆಲೆಗಳು ಸೋನೆಟ್‌ಗೆ 10.50 ಲಕ್ಷ ರೂ.ನಿಂದ, ಸೆಲ್ಟೋಸ್‌ಗೆ 16.63 ಲಕ್ಷ ರೂ.ನಿಂದ ಮತ್ತು ಕ್ಯಾರೆನ್ಸ್‌ಗೆ 12.10 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತವೆ. ವಿಶೇಷ ಎಡಿಷನ್‌ ಪ್ರತಿ ಮೊಡೆಲ್‌ನ ಆಧಾರದ ಮೇಲೆ ಆಯಾ ಆವೃತ್ತಿಗಿಂತ ಬಹಳಷ್ಟು ಹೆಚ್ಚಿನ ಫೀಚರ್‌ಗಳೊಂದಿಗೆ ಬರುತ್ತದೆ. ಇದು ಮುಂಭಾಗದ ಬಾಗಿಲುಗಳಲ್ಲಿ ಹೊಸ ಗ್ರಾವಿಟಿ ಬ್ಯಾಡ್ಜಿಂಗ್‌ನೊಂದಿಗೆ ಬರುತ್ತದೆ. ಈ ಹೊಸ ಕಾರು ಆವೃತ್ತಿಗಳಲ್ಲಿ ನೀಡಲಾದ ಎಲ್ಲ ಆಫರ್‌ಗಳು ವಿವರವಾಗಿ ತಿಳಿಯೋಣ:

ಕಿಯಾ ಸೆಲ್ಟೋಸ್ ಗ್ರಾವಿಟಿ ಎಡಿಷನ್‌

Kia Seltos Gravity edition

ಕಿಯಾ ಸೆಲ್ಟೋಸ್ ಗ್ರಾವಿಟಿ ಆವೃತ್ತಿಯು 16.63 ಲಕ್ಷ ರೂಪಾಯಿಗಳಿಂದ ಪ್ರಾರಂವಾಗಿ 18.21 ಲಕ್ಷ ರೂಪಾಯಿಗಳವರೆಗಿನ ಬೆಲೆಯೊಂದಿಗೆ ಬಿಡುಗಡೆಯಾಗಿದೆ.

ಇಂಜಿನ್

ಟ್ರಾನ್ಸ್‌ಮಿಷನ್‌ ಆಯ್ಕೆ

ಕಿಯಾ ಸೆಲ್ಟೋಸ್ HTX

ಹೊಸ ಕಿಯಾ ಸೆಲ್ಟೋಸ್ ಗ್ರಾವಿಟಿ ಎಡಿಷನ್‌

ವ್ಯತ್ಯಾಸ

1.5-ಲೀಟರ್ ಎನ್/ಎ ಪೆಟ್ರೋಲ್

6-ಸ್ಪೀಡ್ ಮ್ಯಾನ್ಯುವಲ್

15.45 ಲಕ್ಷ ರೂ.

16.63 ಲಕ್ಷ ರೂ.

1.18 ಲಕ್ಷ ರೂ.

ಸಿವಿಟಿ

16.87 ಲಕ್ಷ ರೂ.

18.06 ಲಕ್ಷ ರೂ.

1.19 ಲಕ್ಷ ರೂ.

1.5-ಲೀಟರ್ ಡೀಸೆಲ್

6-ಸ್ಪೀಡ್ ಮ್ಯಾನ್ಯುವಲ್

16.96 ಲಕ್ಷ ರೂ.

18.21 ಲಕ್ಷ ರೂ.

1.25 ಲಕ್ಷ ರೂ.

ಇದು ಮಿಡ್-ಸ್ಪೆಕ್ ಹೆಚ್‌ಟಿಎಕ್ಸ್‌ ಆವೃತ್ತಿಯನ್ನು ಆಧರಿಸಿದೆ ಮತ್ತು 1.5-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್ (115 ಪಿಎಸ್‌/144 ಎನ್‌ಎಮ್‌, 6-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ) ಮತ್ತು 1.5-ಲೀಟರ್ ಡೀಸೆಲ್ (116 ಪಿಎಸ್‌/250 ಎನ್‌ಎಮ್‌, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ) ನೊಂದಿಗೆ ಬರುತ್ತದೆ. ಇದು ಗ್ಲೇಶಿಯಲ್ ವೈಟ್ ಪರ್ಲ್, ಅರೋರಾ ಬ್ಲ್ಯಾಕ್ ಪರ್ಲ್ ಮತ್ತು ಡಾರ್ಕ್ ಗನ್ ಮೆಟಲ್ (ಮ್ಯಾಟ್) ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

 ಇದು HTX ನಲ್ಲಿ ನೀಡಲಾದ ಕೆಲವು ಹೆಚ್ಚುವರಿ ಫೀಚರ್‌ಗಳನ್ನು ಪಡೆಯುತ್ತದೆ. ಎಲ್ಲಾ ಹೊಸ ಫೀಚರ್‌ಗಳ ಪಟ್ಟಿ ಇಲ್ಲಿದೆ:

  • ಡ್ಯಾಶ್‌ಕ್ಯಾಮ್

  •  ಮುಂಭಾಗದ ಸೀಟ್‌ಗಳಲ್ಲಿ ವೆಂಟಿಲೇಶನ್‌

  • ಬೋಸ್ ಆಡಿಯೋ ಸಿಸ್ಟಮ್

  • ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (CVT ಗೇರ್‌ಬಾಕ್ಸ್‌ನೊಂದಿಗೆ)

  • Zbara ಕವರ್ (ಸಿವಿಟಿ)

  • 17-ಇಂಚಿನ ಮರುವಿನ್ಯಾಸಗೊಳಿಸಲಾದ ಅಲಾಯ್ ವೀಲ್‌ಗಳು

  • ಹಿಂಭಾಗದ ಸ್ಪಾಯ್ಲರ್‌ಗೆ ಗ್ಲಾಸ್-ಬ್ಲ್ಯಾಕ್ ಫಿನಿಶ್

  • ಬಾಡಿ ಕಲರ್‌ನ ಡೋರ್‌ ಹ್ಯಾಂಡಲ್‌ಗಳು

  • ಗ್ರ್ಯಾವಿಟಿ ಬ್ಯಾಡ್ಜ್‌ಗಳು

HTX ಟ್ರಿಮ್‌ನಿಂದ ಎರವಲು ಪಡೆದ ಇತರ ಫೀಚರ್‌ಗಳೆಂದರೆ ಪನೋರಮಿಕ್ ಸನ್‌ರೂಫ್, 10.25-ಇಂಚಿನ ಟಚ್‌ಸ್ಕ್ರೀನ್ ಮತ್ತು ಡ್ಯುಯಲ್-ಝೋನ್ ಎಸಿಯನ್ನು ಸಹ ಎರವಲು ಪಡೆಯಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿಯರ್‌ವ್ಯೂ ಕ್ಯಾಮೆರಾ ಮತ್ತು ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ.

ಇದನ್ನೂ ಓದಿ: ನಿಮ್ಮ ಹೊಸ ಕಾರಿನ ಮೇಲೆ ಈಗ ಪಡೆಯಿರಿ ರೂ 20,000 ವರೆಗೆ ರಿಯಾಯಿತಿ, ಏನಿದು? ಇಲ್ಲಿದೆ ವಿವರ..

ಕಿಯಾ ಸೋನೆಟ್ ಗ್ರಾವಿಟಿ ಎಡಿಷನ್

Kia Sonet Gravity edition

ಕಿಯಾ ಸೋನೆಟ್ ಗ್ರಾವಿಟಿ ಎಡಿಷನ್ ಅನ್ನು 10.50 ಲಕ್ಷ ರೂ.ನಿಂದ 12 ಲಕ್ಷ ರೂ.ವರೆಗಿನ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಮಿಡ್-ಸ್ಪೆಕ್ ಹೆಚ್‌ಟಿಕೆ ಪ್ಲಸ್ ಆವೃತ್ತಿಯನ್ನು ಆಧರಿಸಿದೆ.

ಇಂಜಿನ್

ಟ್ರಾನ್ಸ್‌ಮಿಷನ್ ಆಯ್ಕೆ

ಕಿಯಾ ಸೋನೆಟ್ ಹೆಚ್‌ಟಿಕೆ ಪ್ಲಸ್

ಹೊಸ ಕಿಯಾ ಸೋನೆಟ್ ಗ್ರಾವಿಟಿ ಎಡಿಷನ್‌

ವ್ಯತ್ಯಾಸ

1.5-ಲೀಟರ್ ಎನ್/ಎ ಪೆಟ್ರೋಲ್

5-ಸ್ಪೀಡ್ ಮ್ಯಾನುಯಲ್‌

10.12 ಲಕ್ಷ ರೂ.

10.50 ಲಕ್ಷ ರೂ.

38000 ರೂ.

1-ಲೀಟರ್ ಟರ್ಬೊ-ಪೆಟ್ರೋಲ್

6-ಸ್ಪೀಡ್ iMT

10.72 ಲಕ್ಷ ರೂ.

11.20 ಲಕ್ಷ ರೂ.

48000 ರೂ.

1.5-ಲೀಟರ್ ಡೀಸೆಲ್

6-ಸ್ಪೀಡ್ ಮ್ಯಾನ್ಯುವಲ್

11.62 ಲಕ್ಷ ರೂ.

12 ಲಕ್ಷ ರೂ.

38000 ರೂ.

ಇದು ಎಲ್ಲಾ ಮೂರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ: 1.2-ಲೀಟರ್ ಪೆಟ್ರೋಲ್ (83 ಪಿಎಸ್‌ ಮತ್ತು 115 ಎನ್‌ಎಮ್‌) 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ, 1-ಲೀಟರ್ ಟರ್ಬೊ-ಪೆಟ್ರೋಲ್ (120 ಪಿಎಸ್‌ ಮತ್ತು 172 ಎನ್‌ಎಮ್‌) 6-ಸ್ಪೀಡ್ ಕ್ಲಚ್‌-ಪೆಡಲ್‌ ಇಲ್ಲದ ಮ್ಯಾನುವಲ್‌ (iMT) ನೊಂದಿಗೆ ಜೋಡಿಸಲಾಗಿದೆ ಮತ್ತು 1.5-ಲೀಟರ್ ಡೀಸೆಲ್ (115 ಪಿಎಸ್‌ ಮತ್ತು 250 ಎನ್‌ಎಮ್‌), ಕೇವಲ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

ಇದು HTK ಪ್ಲಸ್‌ನಲ್ಲಿ ನೀಡಲಾದ ಕೆಲವು ಹೆಚ್ಚುವರಿ ಫೀಚರ್‌ಗಳನ್ನು ಪಡೆಯುತ್ತದೆ. ಎಲ್ಲಾ ಹೊಸ ಫೀಚರ್‌ಗಳ ಪಟ್ಟಿ ಇಲ್ಲಿದೆ:

  • ಬಿಳಿ ಬ್ರೇಕ್ ಕ್ಯಾಲಿಪರ್‌ಗಳು

  • ನೇವಿ ಸ್ಟಿಚ್ಚಿಂಗ್‌ನೊಂದಿಗೆ ಇಂಡಿಗೊ ಪೆರಾ ಸೀಟ್‌ಗಳು

  • ಲೆದರ್ ಸುತ್ತಿದ ಗೇರ್ ಲಿವರ್

  • ಹಿಂದಿನ ಸ್ಪಾಯ್ಲರ್

  • 16 ಇಂಚಿನ ಅಲಾಯ್ ವೀಲ್‌ಗಳು

  • ವೈರ್‌ಲೆಸ್ ಫೋನ್ ಚಾರ್ಜರ್

  • ಡ್ಯಾಶ್ ಕ್ಯಾಮ್ (ಪಿಐಒ)

  • ಹಿಂಬದಿಯಲ್ಲಿ ಅಡ್ಜಸ್ಟಬಲ್ ಹೆಡ್‌ರೆಸ್ಟ್‌ಗಳು

  • ಕಪ್ ಹೋಲ್ಡರ್‌ಗಳೊಂದಿಗೆ ಹಿಂಭಾಗದ ಮಧ್ಯದ ಆರ್ಮ್‌ರೆಸ್ಟ್

  • ಗ್ರ್ಯಾವಿಟಿ ಬ್ಯಾಡ್ಜ್‌ಗಳು

ಹೆಚ್‌ಟಿಕೆ ಪ್ಲಸ್ ಆವೃತ್ತಿಯಿಂದ, ಇದು 8-ಇಂಚಿನ ಟಚ್‌ಸ್ಕ್ರೀನ್, 6 ಸ್ಪೀಕರ್‌ಗಳು, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಎಲೆಕ್ಟ್ರಿಕಲ್ ಫೋಲ್ಡಿಂಗ್ ORVM ಗಳು ಮತ್ತು ಆಟೋ ಎಸಿಯನ್ನು ಅನ್ನು ಎರವಲು ಪಡೆಯುತ್ತದೆ. ಸುರಕ್ಷತಾ ಫೀಚರ್‌ಗಳಲ್ಲಿ ಇದು  6 ಏರ್‌ಬ್ಯಾಗ್‌ಗಳು, ರಿಯರ್‌ವ್ಯೂ ಕ್ಯಾಮೆರಾ, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, TPMS ಮತ್ತು ಹಿಂಭಾಗದ ಡಿಫಾಗರ್ ಸೇರಿವೆ.

ಇದನ್ನೂ ಓದಿ: ಈ ಹಬ್ಬದ ಸೀಸನ್‌ನಲ್ಲಿ ಬಿಡುಗಡೆಯಾಗಲಿರುವ EV ಕಾರುಗಳ ಪಟ್ಟಿ

ಕಿಯಾ ಕ್ಯಾರೆನ್ಸ್ ಗ್ರಾವಿಟಿ ಎಡಿಷನ್

Kia Carens Gravity edition

ಕಿಯಾ ಕ್ಯಾರೆನ್ಸ್‌ಗೆ ಗ್ರಾವಿಟಿ ಎಡಿಷನ್‌ ಅನ್ನು ಸಹ ಒದಗಿಸಲಾಗಿದೆ, ಇದರ ಬೆಲೆಗಳು 12.10 ಲಕ್ಷ ರೂ.ನಿಂದ 14 ಲಕ್ಷ ರೂ.ವರೆಗೆ ಇರುತ್ತದೆ. ಇದು ಲೊವರ್‌-ಸ್ಪೆಕ್ ಪ್ರೀಮಿಯಂ (ಒಪ್ಶನಲ್‌) ಆವೃತ್ತಿಯನ್ನು ಆಧರಿಸಿದೆ.

ಇಂಜಿನ್

ಟ್ರಾನ್ಸ್‌ಮಿಷನ್‌ ಆಯ್ಕೆ

ಕಿಯಾ ಕ್ಯಾರೆನ್ಸ್ ಪ್ರೀಮಿಯಂ (ಒಪ್ಶನಲ್‌)

ಹೊಸ ಕಿಯಾ ಕ್ಯಾರೆನ್ಸ್ ಗ್ರಾವಿಟಿ ಎಡಿಷನ್‌

ವ್ಯತ್ಯಾಸ

1.5-ಲೀಟರ್ ಎನ್/ಎ ಪೆಟ್ರೋಲ್

6-ಸ್ಪೀಡ್ ಮ್ಯಾನ್ಯುವಲ್

11.06 ಲಕ್ಷ ರೂ.

12.10 ಲಕ್ಷ ರೂ.

1.04 ಲಕ್ಷ ರೂ.

1.5-ಲೀಟರ್ ಟರ್ಬೊ-ಪೆಟ್ರೋಲ್

6-ಸ್ಪೀಡ್ iMT

12.56 ಲಕ್ಷ ರೂ.

13.50 ಲಕ್ಷ ರೂ.

94000 ರೂ.

1.5-ಲೀಟರ್ ಡೀಸೆಲ್

6-ಸ್ಪೀಡ್ ಮ್ಯಾನ್ಯುವಲ್

13.06 ಲಕ್ಷ ರೂ.

14 ಲಕ್ಷ ರೂ.

94000 ರೂ.

ಇದು ಎಲ್ಲಾ ಮೂರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ: 1.5-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್ (115 ಪಿಎಸ್‌/144 ಎನ್‌ಎಮ್‌) 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಎಕ್ಸ್‌ಕ್ಲೂಸಿವ್‌ ಆಗಿ ಸಂಯೋಜಿಸಲ್ಪಟ್ಟಿದೆ, 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 ಪಿಎಸ್‌/253 ಎನ್‌ಎಮ್‌) 6-ಸ್ಪೀಡ್ iMTಗೆ ಜೋಡಿಸಲಾಗಿದೆ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ (116 ಪಿಎಸ್‌/250 Nm) ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಯೋಜಿಸಲಾಗಿದೆ.

ಇದು ಪ್ರೀಮಿಯಂ (ಒಪ್ಶನಲ್‌) ನಲ್ಲಿ ನೀಡಲಾದ ಕೆಲವು ಹೆಚ್ಚುವರಿ ಫೀಚರ್‌ಗಳನ್ನು ಪಡೆಯುತ್ತದೆ. ಎಲ್ಲಾ ಹೊಸ ಫೀಚರ್‌ಗಳ ಪಟ್ಟಿ ಇಲ್ಲಿದೆ:

  • ಡ್ಯಾಶ್‌ಕ್ಯಾಮ್

  • ಸಿಂಗಲ್ ಪೇನ್ ಸನ್‌ರೂಫ್

  • ಕಪ್ಪು ಲೆಥೆರೆಟ್ ಸೀಟ್ ಕವರ್‌ಗಳು

  • ಲೆದರ್‌ನಿಂದ ಸುತ್ತಿದ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್‌

  • ಡೋರ್‌ಗಳ ಮೇಲೆ ಸಾಫ್ಟ್‌ ಟಚ್‌ ಮೆಟಿರಿಯಲ್‌ಗಳು

  • ಎಲ್ಇಡಿ ಕ್ಯಾಬಿನ್ ಲೈಟ್‌ಗಳು

  • ಗ್ರ್ಯಾವಿಟಿ ಬ್ಯಾಡ್ಜ್‌ಗಳು

ಪ್ರೀಮಿಯಂ (ಒಪ್ಶನಲ್‌) ಆವೃತ್ತಿಯಿಂದ, ಇದು ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಮತ್ತು ಟೈಲ್ ಲೈಟ್‌ಗಳನ್ನು ಎರವಲು ಪಡೆಯುತ್ತದೆ. ಇದು 8-ಇಂಚಿನ ಟಚ್‌ಸ್ಕ್ರೀನ್, ಸೆಮಿ-ಡಿಜಿಟಲ್ ಡ್ರೈವರ್ ಡಿ‌ಸ್‌ಪ್ಲೇ, 6 ಸ್ಪೀಕರ್‌ಗಳು, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಮತ್ತು ಮಡಿಸಬಹುದಾದ ORVM ಗಳು ಮತ್ತು ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಬರುತ್ತದೆ. ಸುರಕ್ಷತೆಯ ದೃಷ್ಟಿಯಿಂದ, ಇದು 4 ಏರ್‌ಬ್ಯಾಗ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬರುತ್ತದೆ.

ಇದನ್ನೂ ಓದಿ: 2024 Hyundai Creta Knight ಎಡಿಷನ್‌ ಬಿಡುಗಡೆ, ಬೆಲೆಗಳು 14.51 ಲಕ್ಷ ರೂ.ನಿಂದ ಪ್ರಾರಂಭ

ಇವುಗಳ ಪ್ರತಿಸ್ಪರ್ಧಿಗಳತ್ತ ಒಂದು ನೋಟ

ಕಿಯಾ ಸೋನೆಟ್ ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ 3XO, ಟಾಟಾ ನೆಕ್ಸಾನ್ ಮತ್ತು ಮಾರುತಿ ಬ್ರೆಝಾಗೆ ಸ್ಪರ್ಧೆಯನ್ನು ನೀಡುತ್ತದೆ, ಆದರೆ ಸೆಲ್ಟೋಸ್ ಹ್ಯುಂಡೈ ಕ್ರೆಟಾ ಮತ್ತು ಟೊಯೋಟಾ ಹೈರೈಡರ್ ಸೇರಿದಂತೆ ಕಾಂಪ್ಯಾಕ್ಟ್  ಎಸ್‌ಯುವಿಗಳ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ. ಮತ್ತೊಂದೆಡೆ, ಕಿಯಾ ಕ್ಯಾರೆನ್ಸ್, ಮಾರುತಿ ಎರ್ಟಿಗಾ ಮತ್ತು ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಹೈಕ್ರಾಸ್‌ಗಳಿಗೆ ಪರ್ಯಾಯವಾಗಿದೆ.

ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್ ಶೋರೂಂ ಆಗಿದೆ.

 ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : ಕಿಯಾ ಸೋನೆಟ್‌ ಆನ್‌ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Kia ಸೊನೆಟ್

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience