Tata Altroz Racerನ ಮೊದಲ ಬಾರಿಗೆ ಡ್ರೈವ್ ಮಾಡಿದ ನಂತರ ನಾವು ಅರಿತ 5 ಸಂಗತಿಗಳು
ಟಾಟಾ ಆಲ್ಟ್ರೋಜ್ ರೇಸರ್ ಗಾಗಿ shreyash ಮೂಲಕ ಜೂನ್ 20, 2024 08:04 pm ರಂದು ಪ್ರಕಟಿಸಲಾಗಿದೆ
- 102 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಆಲ್ಟ್ರೋಜ್ ರೇಸರ್ ಹೆಚ್ಚು ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್, ಸ್ಪೋರ್ಟಿಯರ್ ಡಿಸೈನ್ ಮತ್ತು ಹೊಸ ಫೀಚರ್ ಗಳನ್ನು ಪಡೆಯುತ್ತದೆ
ಟಾಟಾ ಆಲ್ಟ್ರೊಜ್ ರೇಸರ್ ಈಗ ಆಲ್ಟ್ರೊಜ್‌ನ ಅತ್ಯಂತ ಶಕ್ತಿಶಾಲಿ ವರ್ಷನ್ ಆಗಿದ್ದು, ಇದು ಈ ಹಿಂದಿನ ಆಲ್ಟ್ರೊಜ್ ಐ-ಟರ್ಬೊ ಮಾಡೆಲ್ ನ ಬದಲಿಯಾಗಿ ಬಂದಿದೆ. ಈ ರೇಸರ್ ವೇರಿಯಂಟ್ ನೆಕ್ಸಾನ್‌ನಿಂದ ಪಡೆದ ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್ ಜೊತೆಗೆ ಕಾರಿನ ಒಳಗೆ ಮತ್ತು ಹೊರಗೆ ಸ್ಪೋರ್ಟಿಯಾಗಿರುವ ಡಿಸೈನ್ ಅಂಶಗಳನ್ನು ಕೂಡ ಒಳಗೊಂಡಿದೆ. ಹಾಗಾದರೆ, ಇದರ ಹೆಸರು ಸೂಚಿಸುವಂತೆ, ಆಲ್ಟ್ರೋಜ್ ರೇಸರ್ ಈಗ ಭಾರತದ ಟಾಪ್ ಹಾಟ್ ಹ್ಯಾಚ್‌ಬ್ಯಾಕ್ ಆಗಬಹುದೇ? ನಾವು ಇತ್ತೀಚೆಗೆ ಅದನ್ನು ಡ್ರೈವ್ ಮಾಡಿದ್ದೇವೆ, ಮತ್ತು ಅದರ ಬಗ್ಗೆ ನಮ್ಮ ಅಭಿಪ್ರಾಯ ಇಲ್ಲಿದೆ:
ನೋಡಲು ಆಕರ್ಷಕವಾಗಿದೆ ಆದರೆ ಅಪ್ಡೇಟ್ ನ ಅಗತ್ಯ
ಟಾಟಾ ಆಲ್ಟ್ರೋಜ್ 2020 ರಲ್ಲಿ ಬಿಡುಗಡೆಯಾದಾಗಿನಿಂದ ಆಕರ್ಷಕವಾಗಿ ಕಾಣುವ ಹ್ಯಾಚ್‌ಬ್ಯಾಕ್ ಆಗಿದೆ. ಈಗ ಬಂದಿರುವ ರೇಸರ್ ವೇರಿಯಂಟ್ ನೊಂದಿಗೆ, ಹೊಸ ಡುಯಲ್-ಟೋನ್ ಎಕ್ಸ್ಟಿರಿಯರ್ ಕಲರ್ ಗಳು, ಹುಡ್‌ನಿಂದ ರೂಫ್ ವರೆಗೆ ಇರುವ ಡ್ಯುಯಲ್ ವೈಟ್ ಸ್ಟ್ರೈಪ್‌ಗಳು ಮತ್ತು ಸಂಪೂರ್ಣ ಬ್ಲಾಕ್ ಆಗಿರುವ ಅಲೊಯ್ ವೀಲ್ಸ್ ಅನ್ನು ಹೊಂದಿದೆ, ಮತ್ತು ಇವೆಲ್ಲವೂ ಇದಕ್ಕೆ ಸ್ಪೋರ್ಟಿಯರ್ ಲುಕ್ ಅನ್ನು ನೀಡುತ್ತದೆ. ಆದರೆ, ಆಲ್ಟ್ರೋಜ್ ಈಗ ಸ್ವಲ್ಪ ಹಳೆಯದಾದಂತೆ ಕಾಣುತ್ತದೆ, ಇದಕ್ಕೆ ಒಂದು ಪ್ರಮುಖ ಅಪ್ಡೇಟ್ ನ ಅಗತ್ಯವಿದೆ ಮತ್ತು ಇದು LED ಲೈಟಿಂಗ್ ಫೀಚರ್ ಗಳನ್ನೂ ಕೂಡ ಹೊಂದಿಲ್ಲ.
ಪೇಂಟೆಡ್ ಬ್ರೇಕ್ ಕ್ಯಾಲಿಪರ್‌ಗಳನ್ನು ಸೇರಿಸುವ ಮೂಲಕ ಟಾಟಾ ಆಲ್ಟ್ರೋಜ್ ರೇಸರ್ ಸ್ಟೈಲಿಂಗ್ ಅನ್ನು ಸುಧಾರಿಸಬಹುದಿತ್ತು ಎಂದು ನಾವು ಭಾವಿಸುತ್ತೇವೆ. ಇವು ಬ್ಲಾಕ್ ಅಲೊಯ್ ವೀಲ್ಸ್ ನೊಂದಿಗೆ ನೋಡಲು ಚೆನ್ನಾಗಿ ಕಾಣುವ ಸಾಧ್ಯತೆ ಇತ್ತು.
ಮೊದಲಿಗಿಂತ ಹೆಚ್ಚು ಶಕ್ತಿಶಾಲಿ, ಆದರೆ ಥ್ರಿಲ್ ನ ಕೊರತೆ
ಹೌದು, ಟಾಟಾ ಆಲ್ಟ್ರೋಜ್ ರೇಸರ್ ಈಗ ಟಾಟಾ ನೆಕ್ಸಾನ್‌ನಿಂದ ಪಡೆದ ಹೆಚ್ಚು ಶಕ್ತಿಶಾಲಿ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 120 PS ಮತ್ತು 170 Nm ಅನ್ನು ಉತ್ಪಾದಿಸುತ್ತದೆ ಮತ್ತು ಇದನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಇದು ಖಂಡಿತವಾಗಿ ಉತ್ತಮ ಬದಲಾವಣೆಯಾಗಿದೆ ಏಕೆಂದರೆ ಈ ಇಂಜಿನ್ ಮೊದಲಿಗಿಂತ ಹೆಚ್ಚು ಶಕ್ತಿಯುತವಾಗಿದೆ. ಆದರೆ, ಆಲ್ಟ್ರೋಜ್ ರೇಸರ್ ಅನ್ನು ಅತ್ಯಾಕರ್ಷಕವೆಂದು ಹೇಳುವಷ್ಟು ಇದು ವೇಗವಾಗಿಲ್ಲ. ಇದು ಪ್ರತಿ ಗಂಟೆಗೆ 0-100 ಕಿ.ಮೀ ತಲುಪಲು 11 ಸೆಕೆಂಡ್‌ಗಳನ್ನು ಮಾತ್ರ ತೆಗೆದುಕೊಂಡರೂ ಕೂಡ, ಇದು ನಿಜವಾದ ಹಾಟ್ ಹ್ಯಾಚ್‌ಬ್ಯಾಕ್‌ನ ಅನುಭವವನ್ನು ನೀಡುವುದಿಲ್ಲ. ಆದರೆ, ಈ ಹೊಸ ಎಂಜಿನ್‌ನ ಡ್ರೈವಿಂಗ್ ಸಾಮರ್ಥ್ಯ ಮಾತ್ರ ಅದ್ಭುತವಾಗಿದೆ. ಓವರ್‌ಟೇಕಿಂಗ್ ಅಥವಾ ಹೈ-ಸ್ಪೀಡ್ ಕ್ರೂಸಿಂಗ್‌ಗಾಗಿ ನಿಮಗೆ ಅಗತ್ಯವಿರುವ ಪವರ್ ಯಾವಾಗಲೂ ಲಭ್ಯವಿದೆ.
ಕಂಫರ್ಟ್ ಮತ್ತು ಹ್ಯಾಂಡ್ಲಿಂಗ್ ಬ್ಯಾಲೆನ್ಸ್
ಟಾಟಾ ಆಲ್ಟ್ರೋಜ್ ರೇಸರ್‌ನ ಸಸ್ಪೆನ್ಷನ್ ಮತ್ತು ಸ್ಟೀರಿಂಗ್‌ಗೆ ಸಣ್ಣ ಬದಲಾವಣೆಗಳನ್ನು ಮಾಡಿದೆ, ಹಾಗಾಗಿ ಇದು ಮೂಲೆಗಳಲ್ಲಿ ತಿರುಗಿಸುವಾಗ ಹೆಚ್ಚು ಬ್ಯಾಲೆನ್ಸ್ ಅನ್ನು ನೀಡುತ್ತದೆ. ಆದರೆ, ಈ ವ್ಯತ್ಯಾಸವು ಅಷ್ಟೇನೂ ಪ್ರಮುಖವಾಗಿಲ್ಲ ಮತ್ತು ಹಾಗೆ ನೋಡಿದರೆ ರೆಗ್ಯುಲರ್ ಆಲ್ಟ್ರೊಜ್ ಕೂಡ ಉತ್ತಮ ಸ್ಥಿರತೆ ಮತ್ತು ಬ್ಯಾಲೆನ್ಸ್ ಅನ್ನು ಹೊಂದಿದೆ. ಈ ಬದಲಾವಣೆಗಳು ಆರಾಮದ ಮೇಲೆ ಪರಿಣಾಮ ಬೀರಿಲ್ಲ, ಮತ್ತು ಆಲ್ಟ್ರೋಜ್ ರೇಸರ್ ರಸ್ತೆಯ ಮೇಲೆ ಸುಗಮವಾಗಿ ಸಾಗುತ್ತದೆ ಮತ್ತು ಪ್ರಯಾಣಿಕರಿಗೆ ಆರಾಮದಾಯಕವಾಗಿದೆ.
ಪ್ರೀಮಿಯಂ ಕ್ಯಾಬಿನ್ ಮತ್ತು ಹೊಸ ಫೀಚರ್ ಗಳು
ಆಲ್ಟ್ರೊಜ್‌ನ ರೇಸರ್ ವರ್ಷನ್ ಬ್ಲಾಕ್ ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿಯೊಂದಿಗೆ ಆಲ್ ಬ್ಲಾಕ್ ಡ್ಯಾಶ್‌ಬೋರ್ಡ್ ಅನ್ನು ಪಡೆಯುತ್ತದೆ. ಒಳಗಿನ ಆಲ್-ಬ್ಲಾಕ್ ಥೀಮ್ ಗೆ ಪೂರಕವಾಗಿ ಡ್ಯಾಶ್‌ಬೋರ್ಡ್‌ನಲ್ಲಿ ಆರೆಂಜ್ ಕಲರ್ ನ ಇನ್ಸರ್ಟ್ ಗಳು ಮತ್ತು ಸ್ಟೀರಿಂಗ್ ವೀಲ್, ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್ ಮತ್ತು ಸೀಟ್ ಕವರ್‌ಗಳ ಮೇಲೆ ಆರೆಂಜ್ ಕಲರ್ ನ ಬಣ್ಣದ ಕಾಂಟ್ರಾಸ್ಟ್ ಸ್ಟಿಚಿಂಗ್‌ಗಳನ್ನು ನೀಡಲಾಗಿದೆ. ಅದರೊಂದಿಗೆ ನೀಡಿರುವ ಥೀಮ್ ಆಧಾರಿತ ಆಂಬಿಯೆಂಟ್ ಲೈಟಿಂಗ್ ಕೂಡ ಕ್ಯಾಬಿನ್ ನ ಲುಕ್ ಅನ್ನು ಹೆಚ್ಚಿಸುತ್ತದೆ, ಇದು ಮೊದಲಿಗಿಂತ ಹೆಚ್ಚು ಪ್ರೀಮಿಯಂ ಅನುಭವವನ್ನು ನೀಡುತ್ತದೆ.
ಟಾಟಾ ತನ್ನ ರೆಗ್ಯುಲರ್ ಆಲ್ಟ್ರೋಝ್ ಅನ್ನು ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಅಪ್‌ಗ್ರೇಡ್ ಮಾಡಿದೆ, ಇದು ಹಳೆಯ 7-ಇಂಚಿನ ಸ್ಕ್ರೀನ್ ಗಿಂತ ಉತ್ತಮವಾಗಿದೆ. ಇದು ಉತ್ತಮ ಡಿಸ್ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಮತ್ತು ಸುಧಾರಿತ ಡಿಸೈನ್ ಅನ್ನು ಹೊಂದಿದೆ. ಇದು ಹೊಸ 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಕೂಡ ಒಳಗೊಂಡಿದೆ, ಅದು ಮ್ಯಾಪ್ ಗಳನ್ನು ತೋರಿಸುತ್ತದೆ ಮತ್ತು ವೆಂಟಿಲೇಟೆಡ್ ಮುಂಭಾಗದ ಸೀಟ್ ಗಳನ್ನು (ಈ ಸೆಗ್ಮೆಂಟ್ ನಲ್ಲಿ ಮೊದಲನೇ ಬಾರಿಗೆ) ಒಳಗೊಂಡಿದೆ. ಇದರ ಸುರಕ್ಷತಾ ಕಿಟ್ 6 ಏರ್‌ಬ್ಯಾಗ್‌ಗಳು ಮತ್ತು ಬ್ಲೈಂಡ್ ವ್ಯೂ ಮಾನಿಟರಿಂಗ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಇನ್ನೂ ಉತ್ತಮವಾದ ಎಕ್ಸಾಸ್ಟ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನ ಅಗತ್ಯ
ಟಾಟಾ ಆಲ್ಟ್ರೊಜ್ ರೇಸರ್‌ಗೆ ಡ್ಯುಯಲ್-ಟಿಪ್ ಎಕ್ಸಾಸ್ಟ್ ಸೆಟಪ್ ಅನ್ನು ಸೇರಿಸಿದೆ, ಇದು ಉತ್ತಮವಾದ ಸೌಂಡ್ ಅನ್ನು ನೀಡುತ್ತದೆ ಆದರೆ ಕಾರಿನ ಹೊರಗೆ ನಿಂತರೂ ಕೂಡ ಸೌಂಡ್ ಅಷ್ಟೇನೂ ಗಮನಾರ್ಹವಾಗಿ ಕೇಳಿಸುವುದಿಲ್ಲ. ಕಾರನ್ನು ಚಾಲನೆ ಮಾಡುವಾಗ ಕೂಡ ನಿಮಗೆ ಎಕ್ಸಾಸ್ಟ್ ಸೌಂಡ್ ಕೇಳುವುದಿಲ್ಲ, ಆದ್ದರಿಂದ ಜೋರಾಗಿ ಸೌಂಡ್ ಮಾಡುವ ಎಕ್ಸಾಸ್ಟ್ ನೀಡಿದ್ದರೆ ಚಾಲನೆಯ ಅನುಭವವು ಇನ್ನಷ್ಟು ರೋಮಾಂಚನವಾಗುತಿತ್ತು.
ಅಲ್ಲದೆ, ಆಲ್ಟ್ರೋಜ್ ರೇಸರ್ ಸದ್ಯಕ್ಕೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಲಭ್ಯವಿಲ್ಲ. ಆದರೆ, ಟಾಟಾ ನಂತರದ ದಿನಗಳಲ್ಲಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (DCT) ಆಯ್ಕೆಯನ್ನು ನೀಡುವ ಸಾಧ್ಯತೆಯಿದೆ.
ಅಂತಿಮ ಟೇಕ್ಅವೇ
ಆಲ್ಟ್ರೋಜ್ ರೇಸರ್ ತನ್ನ ಉತ್ತಮ ಲುಕ್ ಮತ್ತು ಕಾರ್ಯಕ್ಷಮತೆಯೊಂದಿಗೆ ಟಾಟಾದಿಂದ ಒಂದು ಸುಧಾರಿತ ಕೊಡುಗೆಯಾಗಿದೆ. ಆದರೆ, ಹಾಟ್ ಹ್ಯಾಚ್‌ಬ್ಯಾಕ್‌ನಿಂದ ನೀವು ನಿರೀಕ್ಷಿಸುವ ಥ್ರಿಲ್ ಅನ್ನು ಇದು ನೀಡುವುದಿಲ್ಲ ಮತ್ತು ಇದು ಸ್ವಲ್ಪ ಹಳೆಯದಾಗಿ ಕೂಡ ಕಾಣುತ್ತಿದೆ. ಆದರೆ, ಅದರ ಅಪ್ಡೇಟ್ ಆಗಿರುವ ಫೀಚರ್ ಗಳ ಕಾರಣ ಈಗ ಅದನ್ನು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದು ಕರೆಯಲು ಅರ್ಹವಾಗಿದೆ.
ಇನ್ನಷ್ಟು ಅಪ್ಡೇಟ್ ಗಳು ಮತ್ತು ರಿವ್ಯೂಗಳಿಗಾಗಿ ಕಾರ್ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ಟಾಟಾ ಆಲ್ಟ್ರೋಜ್ ರೇಸರ್ ಆನ್ ರೋಡ್ ಬೆಲೆ