ಆಸ್ಟ್ರೇಲಿಯಾದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 5-ಡೋರ್ ಸುಝುಕಿ ಜಿಮ್ನಿ
ಮಾರುತಿ ಜಿಮ್ನಿ ಗಾಗಿ shreyash ಮೂಲಕ ಜೂನ್ 27, 2023 02:33 pm ರಂದು ಪ್ರಕಟಿಸಲಾಗಿದೆ
- 17 Views
- ಕಾಮೆಂಟ್ ಅನ್ನು ಬರೆಯಿರಿ
ಸುಝುಕಿ ಜಿಮ್ನಿಯ 3-ಡೋರ್ ಆವೃತ್ತಿ ಆಸ್ಟ್ರೇಲಿಯಾದಲ್ಲಿ ಈಗಾಗಲೇ ಮಾರಾಟವಾಗುತ್ತಿದೆ
-
ಈ ಆಸ್ಟ್ರೇಲಿಯನ್-ಸ್ಪೆಕ್ 5-ಡೋರ್ ಸುಝುಕಿ ಜಿಮ್ನಿಯ ಬಿಡುಗಡೆ ದಿನಾಂಕ ಮತ್ತು ಸ್ಪೆಸಿಫಿಕೇಶನ್‌ಗಳನ್ನು ಇನ್ನಷ್ಟೇ ಬಹಿರಂಗಪಡಿಸಬೇಕಿದೆ.
-
ಇದರ 3-ಡೋರ್ ಆವೃತ್ತಿಯು ಅದೇ 1.5-ಲೀಟರ್ ಪೆಟ್ರೋಲ್ ಇಂಜಿನ್ ಮತ್ತು 4-ವ್ಹೀಲ್ ಡ್ರೈವ್ (4WD) ಸ್ಟಾಂಡರ್ಡ್ ಆಗಿ ಇರಿಸಿ ಈಗಾಗಲೇ ಮಾರಾಟದಲ್ಲಿದೆ.
-
ಆಸ್ಟ್ರೇಲಿಯಾದಲ್ಲಿನ ಈ 5-ಡೋರ್ ಜಿಮ್ನಿ ಭಾರತ-ಸ್ಪೆಕ್ ಆಫ್-ರೋಡರ್‌ನ ಫೀಚರ್‌ಗಳನ್ನೇ ಪಡೆದಿರಬಹುದು ಎಂಬುದು ನಮ್ಮ ನಿರೀಕ್ಷೆಯಾಗಿದೆ.
-
ಈ ಆಸ್ಟ್ರೇಲಿಯನ್-ಸ್ಪೆಕ್ 3-ಡೋರ್ ಜಿಮ್ನಿ ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಫೀಚರ್(ADAS)ಗಳೊಂದಿಗೂ ಬರುತ್ತದೆ.
3-ಡೋರ್ ಸುಝುಕಿ ಜಿಮ್ನಿ ಭಾರತಕ್ಕೆ ಯಾವತ್ತೂ ಬಂದಿರಲಿಲ್ಲ ಆದರೆ ನಾವೀಗ 5-ಡೋರ್ ಮಾರುತಿ ಜಿಮ್ನಿಯನ್ನು ಪಡೆದಿದ್ದೇವೆ. ತನ್ನ ಹೆಚ್ಚುವರಿ ಡೋರ್‌ಗಳು, ದೊಡ್ಡದಾದ ಬೂಟ್ ಮತ್ತು ನವೀಕೃತ ಫೀಚರ್ ಪಟ್ಟಿಯೊಂದಿಗೆ, ಈ ಉದ್ದದ ಜಿಮ್ನಿಯು ವಿಶ್ವ ವಿಖ್ಯಾತವಾಗುತ್ತಿದೆ ಮತ್ತು ಈಗ ಆಸ್ಟ್ರೇಲಿಯಾಗೆ ಬರುತ್ತಿದೆ (ಜತಗೆ ಬಲ-ಬದಿ-ಚಾಲನೆ ಮಾರುಕಟ್ಟೆ ಕೂಡಾ).ಇದರ ಸ್ಪೆಸಿಫಿಕೇಶನ್‌ಗಳು ಮತ್ತು ಫೀಚರ್‌ಗಳನ್ನು ಸುಝುಕಿ ಇನ್ನಷ್ಟೇ ಬಹಿರಂಗಪಡಿಸಬೇಕಿದ್ದರೂ, ನಾವು ಏನನ್ನು ನಿರೀಕ್ಷಿಸುತ್ತೇವೆ ಎಂಬುದರ ವಿವರ ಇಲ್ಲಿದೆ.
ಇದರ ಎಂಜಿನ್ ಹೇಗಿದೆ?
ಆಸ್ಟ್ರೇಲಿಯಾದಲ್ಲಿನ ಸಾಮಾನ್ಯ 3-ಡೋರ್ ಜಿಮ್ನಿಯು ಭಾರತ-ಸ್ಪೆಕ್ 5-ಡೋರ್ ಜಿಮ್ನಿಯ ಪವರ್‌ಟ್ರೇನ್ ಅನ್ನೇ ಪಡೆಯುವುದರಿಂದ ಬೋನೆಟ್ ಒಳಗೆ ಯಾವುದೇ ಬದಲಾವಣೆಯನ್ನು ನಿರೀಕ್ಷಿಸಲಾಗುವುದಿಲ್ಲ. ಆಸ್ಟ್ರೇಲಿಯನ್-ಸ್ಪೆಕ್ 5-ಡೋರ್ ಜಿಮ್ನಿ ಅದೇ 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮ್ಯಟಿಕ್ ಟ್ರಾನ್ಸ್‌ಮಿಶನ್ ಅನ್ನು ಜೋಡಿಸಲಾದ ಅದೇ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಬಳಸುತ್ತದೆ ಮತ್ತು ಇದರಲ್ಲಿ 4-ವ್ಹೀಲ್ ಡ್ರೈವ್ (4WD) ಸ್ಟಾಂಡರ್ಡ್ ಆಗಿದೆ. ಭಾರತ-ಸ್ಪೆಕ್ ಜಿಮ್ನಿಯನ್ನು 105PS ಮತ್ತು 134Nm ಗೆ ರೇಟ್ ಮಾಡಲಾಗಿದ್ದು ಇದು ಆಸ್ಟ್ರೇಲಿಯಾದ 3-ಡೋರ್ ಜಿಮ್ನಿಗಿಂತ 4Nm ಹೆಚ್ಚು ಇರುವುದರಿಂದ ತುಸು ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ.
ನಿರೀಕ್ಷಿತ ಫೀಚರ್‌ಗಳು
ಈ ಮಾರುತಿ ಜಿಮ್ನಿಯು 9-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್, ಜೊತೆಗೆ ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಅನ್ನು ಪಡೆದಿದೆ. ಸುರಕ್ಷತೆಯ ವಿಚಾರದಲ್ಲಿ, ಇದು ಆರು ಏರ್‌ಬ್ಯಾಗ್‌ಗಳು, ABS ಜೊತೆಗಿನ EBD, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್(ESP), ಮತ್ತು ರಿಯರ್‌ವ್ಯೂ ಕ್ಯಾಮರಾವನ್ನು ಹೊಂದಿದೆ. ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲೂ ಈ 5-ಡೋರ್ ಮಾರುತಿ ಜಿಮ್ನಿಗೆ ಇದೇ ರೀತಿಯ ಫೀಚರ್‌ಗಳನ್ನು ಮುಂದುವರಿಸಲಾಗುತ್ತದೆ ಎಂಬ ನಿರೀಕ್ಷೆ ಇದೆ.
ಆದಾಗ್ಯೂ, ಈ ಆಸ್ಟ್ರೇಲಿಯನ್-ಸ್ಪೆಕ್ 3-ಡೋಸ್ ಜಿಮ್ನಿಯ ಸುರಕ್ಷತಾ ಕಿಟ್ ಲೇನ್ ಡಿಪರ್ಚರ್ ವಾರ್ನಿಂಗ್, ಆಟೋನೋಮಸ್ ಎಮರ್ಜನ್ಸಿ ಬ್ರೇಕಿಂಗ್ ಮತ್ತು ಹೈಬೀಮ್ ಅಸಿಸ್ಟ್ ಮುಂತಾದ ಭಾರತದ ಮಾರುತಿ ಸುಝುಕಿ ಮಾಡೆಲ್‌ಗಳಲ್ಲಿ ಇಲ್ಲದ ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಫೀಚರ್‌ಗಳನ್ನು ಅಳವಡಿಸುವ ಮೂಲಕ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ.
ಇದನ್ನೂ ಓದಿ: ಮಾರುತಿ ಜಿಮ್ನಿಯ ಬೆಲೆಗಳು ದುಬಾರಿಯಾಗಿವೆಯೇ?
ಅಲ್ಲದೇ, ಆಸ್ಸ್ಟ್ರೇಲಿಯಾದಲ್ಲಿನ ಆರಂಭಿಕ-ಸ್ಪೆಕ್ 3-ಡೋರ್ ಜಿಮ್ನಿ ಟಚ್‌ಸ್ಕ್ರೀನ್ ಯೂನಿಟ್ ಅನ್ನು ಪಡೆಯುವುದಿಲ್ಲ, ಇದೇವೇಳೆ ಅದರ ಟಾಪ್-ಸ್ಪೆಕ್ ಆವೃತ್ತಿಯು ಸಣ್ಣ 7-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಪಡೆಯುತ್ತದೆ ಎಂಬದು ಇಲ್ಲಿ ಗಮನಾರ್ಹ. ಅಂದರೆ ಅದೇ ಯೂನಿಟ್ ಅನ್ನೇ ಈ ಆರಂಭಿಕ-ಸ್ಪೆಕ್ ಜಿಮ್ನಿಯಲ್ಲಿ ನೀಡಲಾಗಿದೆ.
ಜಿಮ್ನಿ ಪ್ರತಿಸ್ಪರ್ಧಿಗಳು
ಭಾರತದಲ್ಲಿ, ಈ ಮಾರುತಿ ಜಿಮ್ನಿ ಫೋರ್ಸ್ ಗುರ್ಖಾ ಮತ್ತು ಮಹೀಂದ್ರಾ ಥಾರ್ ಜೊತೆಗೆ ಸ್ಪರ್ಧೆಗಿಳಿಯುತ್ತದೆ. ಆಸ್ಟ್ರೇಲಿಯಾದಲ್ಲಿ, 3-ಡೋರ್ ಅಥವಾ 5-ಡೋರ್ ಜಿಮ್ನಿಗೆ ಅದೇ ಗಾತ್ರ ಮತ್ತು ಬೆಲೆಯ SUVಗಳ ಹೊರತಾಗಿ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ. ಇಲ್ಲಿ ಜಿಮ್ನಿಯ ಬೆಲೆ ರೂ 12.74 ಲಕ್ಷದಿಂದ ರೂ 15.05 ಲಕ್ಷದ (ಎಕ್ಸ್-ಶೋರೂಂ ಪಯಾನ್ ಇಂಡಿಯಾ) ತನಕ ಇದ್ದು ಆಸ್ಟ್ರೇಲಿಯಾದ 3-ಡೋರ್ ಜಿಮ್ನಿಯ ಬೆಲೆ AUD 33,500, ಅಂದರೆ ಸುಮಾರು ರೂ 18.28 ಲಕ್ಷದಷ್ಟು ಇದೆ.
ಇನ್ನಷ್ಟು ಓದಿ : ಮಾರುತಿ ಜಿಮ್ನಿಯ ಆನ್‌ರೋಡ್ ಬೆಲೆ
0 out of 0 found this helpful