• English
  • Login / Register

XUV700 ನಿಂದ Mahindra Thar 5-door ಪಡೆಯಬಹುದಾದ 7 ಆಕರ್ಷಕ ಫೀಚರ್‌ಗಳು

published on ಜುಲೈ 03, 2024 08:32 pm by shreyash for ಮಹೀಂದ್ರ ಥಾರ್‌ 5-ಡೋರ್‌

  • 128 Views
  • ಕಾಮೆಂಟ್‌ ಅನ್ನು ಬರೆಯಿರಿ

ಥಾರ್ 5-ಡೋರ್ ಅದರ 3-ಡೋರ್ ವರ್ಷನ್ ಗೆ ಹೋಲಿಸಿದರೆ ದೊಡ್ಡ ಟಚ್‌ಸ್ಕ್ರೀನ್ ನಿಂದ ಹಿಡಿದು ಆರು ಏರ್‌ಬ್ಯಾಗ್‌ ನಂತಹ ಹಲವಾರು ಟೆಕ್ ಫೀಚರ್ ಗಳೊಂದಿಗೆ ಬರಲಿದೆ

7 Features Mahindra Thar 5-door Could Borrow From Mahindra XUV700

ಮಹೀಂದ್ರಾ ಥಾರ್ 5-ಡೋರ್ ಅನ್ನು ಆಗಸ್ಟ್ 2024 ರಲ್ಲಿ ಪರಿಚಯಿಸಲಾಗುವುದು ಮತ್ತು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಇತ್ತೀಚಿನ ಸ್ಪೈ ಶಾಟ್‌ಗಳು ಥಾರ್ 5-ಡೋರ್ ವರ್ಷನ್ ಅದರ 3-ಡೋರ್ ಮಾಡೆಲ್ ಗಿಂತ ಹೆಚ್ಚಿನ ಟೆಕ್ನಾಲಜಿಯನ್ನು ಪಡೆಯಲಿದೆ ಎಂದು ಸೂಚಿಸುತ್ತದೆ. ಥಾರ್ 5-ಡೋರ್ ಹೆಚ್ಚು ಐಷಾರಾಮಿ ಮತ್ತು ಸದ್ಯದ ಟಾಪ್ ಮಾಡೆಲ್ ಆಗಿರುವ ಮಹೀಂದ್ರಾ XUV700 ನಿಂದ ಪಡೆಯಬಹುದಾದ 7 ಹೊಸ ಫೀಚರ್ ಗಳು ಇಲ್ಲಿವೆ.

ದೊಡ್ಡ ಟಚ್‌ಸ್ಕ್ರೀನ್

ಹಿಂದಿನ ಸ್ಪೈ ಶಾಟ್ ಗಳಲ್ಲಿ ನೋಡಿದಂತೆ, ಮಹೀಂದ್ರ ಥಾರ್ 5-ಡೋರ್ ದೊಡ್ಡ ಟಚ್‌ಸ್ಕ್ರೀನ್ ಅನ್ನು ಪಡೆಯುವ ಸಾಧ್ಯತೆಯಿದೆ, ಮತ್ತು ಬಹುಶಃ ಇದು XUV700 ನಲ್ಲಿರುವ ಸುಮಾರು 10.25 ಇಂಚಿನ ಡಿಸ್ಪ್ಲೇ ಆಗಿರಬಹುದು. ಈ ಇನ್ಫೋಟೈನ್‌ಮೆಂಟ್ ಸಿಸ್ಟಮ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಕೂಡ ಸಪೋರ್ಟ್ ಮಾಡುತ್ತದೆ. ಈಗ ಇರುವ ಥಾರ್ 3-ಡೋರ್ ಸಣ್ಣ 7-ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದ್ದು ಅದು ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಸಪೋರ್ಟ್ ಮಾಡುತ್ತದೆ.

ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

 ಥಾರ್ 5-ಡೋರ್ ಮಹೀಂದ್ರಾದ ಟಾಪ್ SUV ಮಾಡೆಲ್ ನಲ್ಲಿ ಕಂಡುಬರುವ ದೊಡ್ಡ 10.25-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಕೂಡ ಪಡೆಯಬಹುದು. ಉದ್ದವಾದ ಥಾರ್ ವರ್ಷನ್ ನ ಟೆಸ್ಟ್ ಕಾರ್ ನಲ್ಲಿ ಈ ಫೀಚರ್ ಅನ್ನು ಈಗಾಗಲೇ ನೋಡಲಾಗಿದೆ. ಈಗಿರುವ ಥಾರ್ ಎರಡು ರೌಂಡ್ ಡಯಲ್ ಗಳೊಂದಿಗೆ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಡ್ಯುಯಲ್-ಝೋನ್ AC

 ಮಹೀಂದ್ರಾ XUV700 ನಿಂದ ಉದ್ದವಾದ ಥಾರ್ ಡ್ಯುಯಲ್-ಜೋನ್ AC ಫೀಚರ್ ಅನ್ನು ಕೂಡ ಪಡೆದುಕೊಳ್ಳಬಹುದು. ಈ ಫೀಚರ್ ಮುಂಭಾಗದ ಪ್ರಯಾಣಿಕರ ಸೀಟ್ ಗಳಿಗೆ ವಿಭಿನ್ನ ತಾಪಮಾನವನ್ನು ಸೆಟ್ ಮಾಡಲು ಸಹಾಯ ಮಾಡುತ್ತದೆ.

ವೈರ್‌ಲೆಸ್ ಫೋನ್ ಚಾರ್ಜಿಂಗ್

 ಮಹೀಂದ್ರಾದ 5-ಡೋರ್ ಆಫ್ರೋಡರ್ XUV700 ನಲ್ಲಿರುವ ವೈರ್‌ಲೆಸ್ ಫೋನ್ ಚಾರ್ಜರ್‌ ಅನ್ನು ಪಡೆಯುವ ನಿರೀಕ್ಷೆಯಿದೆ. ಈ ಫೀಚರ್ ಸೆಂಟರ್ ಕನ್ಸೋಲ್ ನ ಸುತ್ತಲೂ ನೇತಾಡುವ ಕೇಬಲ್‌ಗಳ ಸಮಸ್ಯೆಯನ್ನು ತೆಗೆದುಹಾಕುವ ಮೂಲಕ ಗೇರ್‌ಗಳನ್ನು ಬದಲಾಯಿಸುವಾಗ ಉಂಟಾಗುತ್ತಿದ್ದ ತೊಂದರೆಯನ್ನು ತೆಗೆದುಹಾಕುತ್ತದೆ.

6 ಏರ್‌ಬ್ಯಾಗ್‌ಗಳು

 ಸುರಕ್ಷತೆಗಾಗಿ, ಥಾರ್ 5-ಡೋರ್ ಆರು ಏರ್‌ಬ್ಯಾಗ್‌ಗಳನ್ನು ಎಲ್ಲಾ ವರ್ಷನ್ ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡುವ ನಿರೀಕ್ಷೆಯಿದೆ. ಈಗಿರುವ 3-ಡೋರ್ ಥಾರ್ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಮಾತ್ರ ಹೊಂದಿದೆ. ಮುಂಬರುವ ಸರ್ಕಾರದ ಸುರಕ್ಷತಾ ಆದೇಶವನ್ನು ಪೂರೈಸಲು ಮಹೀಂದ್ರಾ ಲಾಂಚ್ ಸಮಯದಲ್ಲೇ ಆರು ಏರ್‌ಬ್ಯಾಗ್‌ಗಳೊಂದಿಗೆ ಥಾರ್ 5-ಡೋರ್ ಅನ್ನು ಸಜ್ಜುಗೊಳಿಸಬಹುದು.

360-ಡಿಗ್ರಿ ಕ್ಯಾಮೆರಾ

 XUV700 ನಿಂದ ಥಾರ್ ಪಡೆಯಬಹುದಾದ ಮತ್ತೊಂದು ಸುರಕ್ಷತಾ ಫೀಚರ್ ಎಂದರೆ 360-ಡಿಗ್ರಿ ಕ್ಯಾಮೆರಾ. ಈ ಫೀಚರ್ ಡ್ರೈವರ್ ಗಳಿಗೆ ಕಡಿದಾದ ಪಾರ್ಕಿಂಗ್ ಸ್ಥಳಗಳು ಮತ್ತು ಭಾರೀ ಟ್ರಾಫಿಕ್ ನಲ್ಲಿ ಸುಲಭವಾಗಿ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ.

ADAS

 ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು, ಮಹೀಂದ್ರಾ ಥಾರ್ ತನ್ನ 5-ಡೋರ್‌ನಲ್ಲಿ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಕೂಡ ನೀಡುವ ಸಾಧ್ಯತೆಯಿದೆ. SUV ಯ ಟೆಸ್ಟ್ ಗಾಡಿಯನ್ನು ಈಗಾಗಲೇ ರಾಡಾರ್ ಮಾಡ್ಯೂಲ್‌ನೊಂದಿಗೆ ನೋಡಲಾಗಿದೆ. ಲೇನ್ ಕೀಪಿಂಗ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಫೀಚರ್ ಗಳೊಂದಿಗೆ ಥಾರ್ 5-ಡೋರ್ ADAS ಸಿಸ್ಟಮ್ ಹೆಚ್ಚು ಕಡಿಮೆ XUV700 ನಂತೆಯೇ ಇರುತ್ತದೆ.

ಬೋನಸ್ - ಪನೋರಮಿಕ್ ಸನ್‌ರೂಫ್

 ಥಾರ್ 5-ಡೋರ್ ದೊಡ್ಡ ಪನೋರಮಿಕ್ ಸನ್‌ರೂಫ್ ಅನ್ನು ಕೂಡ ಪಡೆಯುವ ಸಾಧ್ಯತೆಯಿದೆ. ಈ ಮೊದಲು SUV ಯ ಟೆಸ್ಟ್ ಮಾಡೆಲ್ ಅನ್ನು ರೆಗ್ಯುಲರ್ ಸನ್‌ರೂಫ್ ನೊಂದಿಗೆ ನೋಡಲಾಗಿತ್ತು, ಆದರೆ ಇತ್ತೀಚಿನ ಸ್ಪೈ ಫೋಟೋಗಳು XUV700 ನಲ್ಲಿರುವ ಪನೋರಮಿಕ್ ಸನ್‌ರೂಫ್ ಅನ್ನು ಇದು ಪಡೆಯಬಹುದು ಎಂದು ಸೂಚಿಸುತ್ತದೆ.

 ಥಾರ್ 5-ಡೋರ್ ಮಹೀಂದ್ರಾ XUV700 ನಿಂದ ಪಡೆಯಬಹುದಾದ ಕೆಲವು ಪ್ರಮುಖ ಫೀಚರ್ ಗಳ ಬಗ್ಗೆ ನಿಮಗೆ ತಿಳಿಸಿದ್ದೇವೆ. XUV700 ನಲ್ಲಿರುವ ಇತರ ಯಾವ ಫೀಚರ್ ಗಳನ್ನು ನೀವು ಹೊಸ ಮಹೀಂದ್ರ SUV ನಲ್ಲಿ ನೋಡಲು ಬಯಸುತ್ತೀರಿ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ

 ನಿರಂತರ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

 ಇನ್ನಷ್ಟು ಓದಿ: ಮಹೀಂದ್ರ ಥಾರ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಹೀಂದ್ರ ಥಾರ್‌ 5-Door

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience