Login or Register ಅತ್ಯುತ್ತಮ CarDekho experience ಗೆ
Login

ಈ ನವೆಂಬರ್‌ನಲ್ಲಿ ಬಿಡುಗಡೆ ಅಥವಾ ಅನಾವರಣಗೊಳ್ಳಲಿರುವ ಹೊಸ ಕಾರುಗಳ ವಿವರ ಇಲ್ಲಿದೆ..

ಮಾರುತಿ ಡಿಜೈರ್ ಗಾಗಿ anonymous ಮೂಲಕ ಅಕ್ಟೋಬರ್ 31, 2024 07:39 pm ರಂದು ಪ್ರಕಟಿಸಲಾಗಿದೆ

ಮುಂಬರುವ ತಿಂಗಳು ಸ್ಕೋಡಾವು ನೆಕ್ಸಾನ್‌ನ ಪ್ರತಿಸ್ಪರ್ಧಿಯನ್ನು ಜಾಗತಿಕವಾಗಿ ಅನಾವರಣಗೊಳಿಸಲಿದೆ, ಹಾಗೆಯೇ ಮಾರುತಿಯು ತನ್ನ ಜನಪ್ರಿಯ ಸೆಡಾನ್‌ನ ಹೊಸ-ಜನರೇಷನ್‌ನ ಮೊಡೆಲ್‌ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ

ಈ ತಿಂಗಳು ಭಾರತದಲ್ಲಿ ಪ್ರೀಮಿಯಂ ಅಥವಾ ಪರ್ಫಾರ್ಮೆನ್ಸ್‌-ಆಧಾರಿತ ಸೆಗ್ಮೆಂಟ್‌ನಿಂದ ಹೆಚ್ಚಾಗಿ ಹೊಸ ಕಾರುಗಳ ಬಿಡುಗಡೆಯಾದವು, ಫೇಸ್‌ಲಿಫ್ಟೆಡ್ ನಿಸ್ಸಾನ್ ಮ್ಯಾಗ್ನೈಟ್ ಮಾಸ್‌-ಮಾರ್ಕೆಟ್‌ನಲ್ಲಿ ಏಕೈಕ ಪ್ರಮುಖ ಪ್ರವೇಶವಾಗಿದೆ. ಹಬ್ಬದ ಮಾರಾಟವನ್ನು ಹೆಚ್ಚಿಸಲು, ಕಾರು ತಯಾರಕರು ತಮ್ಮ ಜನಪ್ರಿಯ ಮೊಡೆಲ್‌ಗಳ ಸ್ಪೇಷಕ್‌ ಎಡಿಷನ್‌ಗಳನ್ನು ಸಹ ಪರಿಚಯಿಸಿದರು.

ಆದರೆ, ಮುಂದಿನ ತಿಂಗಳು ವಿಭಿನ್ನವಾಗಿರುತ್ತದೆ ಮತ್ತು ಮುಂಬರುವ ಕಾರು ಬಿಡುಗಡೆಗಳು ಮತ್ತು 2024ರ ನವೆಂಬರ್‌ನಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯ ಮಾಡೆಲ್‌ನ ಅನಾವರಣಗೊಳಿಸುವಿಕೆಯ ಪಟ್ಟಿಯನ್ನು ನಾವು ನಿಮಗಾಗಿ ತಂದಿದ್ದೇವೆ.

2024 ರಮಾರುತಿ ಸುಜುಕಿ ಡಿಜೈರ್

ಬಿಡುಗಡೆ ದಿನಾಂಕ: ನವೆಂಬರ್ 11, 2024

ನಿರೀಕ್ಷಿತ ಬೆಲೆ: 6.70 ಲಕ್ಷ ರೂ.(ಎಕ್ಸ್ ಶೋರೂಂ)

ಮಾರುತಿಯು ಕೆಲವು ಸಮಯದಿಂದ ಹೊಸ-ಜನರೇಶನ್‌ನ ಡಿಜೈರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ ಮತ್ತು ನವೆಂಬರ್ 11 ರಂದು ಬೆಲೆಯನ್ನು ಘೋಷಿಸುವ ಮೊದಲು ಕಾರು ತಯಾರಕರು ನವೆಂಬರ್ 4 ರಂದು 2024ರ ಮೊಡೆಲ್‌ ಅನ್ನು ಅನಾವರಣಗೊಳಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಇದು ಈಗಾಗಲೇ ಹಲವಾರು ಬಾರಿ ಪರೀಕ್ಷಿಸಲ್ಪಟ್ಟಿದೆ, ಹೊಸ ಫೀಚರ್‌ಗಳ ಜೊತೆಗೆ ನಾಲ್ಕನೇ-ಜನರೇಶನ್‌ನ ಸ್ವಿಫ್ಟ್‌ನಿಂದ ಸಂಪೂರ್ಣವಾಗಿ ವಿಭಿನ್ನವಾಗಿರುವ ರಿಫ್ರೆಶ್ ವಿನ್ಯಾಸವನ್ನು ಹೊಂದಿದೆ.

ಹೊಸ ಡಿಜೈರ್‌ನ ಕ್ಯಾಬಿನ್ 2024ರ ಸ್ವಿಫ್ಟ್‌ನಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ, ಆದರೂ ವಿಭಿನ್ನ ಇಂಟಿರಿಯರ್‌ ಥೀಮ್ ಹೊಂದಿದೆ. ಮುಂದಿನ-ಜನರೇಶನ್‌ನ ಡಿಜೈರ್‌ನಲ್ಲಿನ ಹೊಸ ವೈಶಿಷ್ಟ್ಯಗಳು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಿಂಗಲ್-ಪೇನ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಒಳಗೊಂಡಿರುತ್ತದೆ. ಬಾನೆಟ್‌ನ ಅಡಿಯಲ್ಲಿ, ಡಿಜೈರ್ ಹೊಸ 1.2-ಲೀಟರ್ ಮೂರು-ಸಿಲಿಂಡರ್ Z-ಸೀರಿಸ್‌ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ, ಇದು 82 ಪಿಎಸ್‌ ಮತ್ತು 112 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ. ಬಿಡುಗಡೆಯಾದ ನಂತರ, 2024 ಡಿಜೈರ್ ಮಾರುಕಟ್ಟೆಯಲ್ಲಿ ಹೋಂಡಾ ಅಮೇಜ್, ಹ್ಯುಂಡೈ ಔರಾ ಮತ್ತು ಟಾಟಾ ಟಿಗೋರ್‌ನಂತಹ ಸೆಡಾನ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಸ್ಕೋಡಾ ಕೈಲಾಕ್

ಜಾಗತಿಕ ಅನಾವರಣ ದಿನಾಂಕ: 202 ರ ನವೆಂಬರ್ 6, (ಭಾರತದ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ)

ನಿರೀಕ್ಷಿತ ಬೆಲೆ: 8.50 ಲಕ್ಷ ರೂ. (ಎಕ್ಸ್ ಶೋರೂಂ)

ಸ್ಕೋಡಾ ತನ್ನ ಸಬ್-4ಎಮ್‌ ಎಸ್‌ಯುವಿಯಾದ ಕೈಲಾಕ್ ಅನ್ನು ನವೆಂಬರ್ 6 ರಂದು ಜಾಗತಿಕವಾಗಿ ಅನಾವರಣಗೊಳಿಸಲು ಸಿದ್ಧವಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಅದರ ಭಾರತ ಬಿಡುಗಡೆಯನ್ನು ನೀವು ನಿರೀಕ್ಷಿಸಬಹುದು. ಅದರ ವಿನ್ಯಾಸವು ಕುಶಾಕ್‌ನಿಂದ ಪ್ರೇರಿತವಾಗಿದೆ ಎಂದು ಇದರ ಸ್ಪೈ ಶಾಟ್‌ಗಳಲ್ಲಿ ನಾವು ಗಮನಿಸಬಹುದು, ಇದರಲ್ಲಿ ಸ್ಪ್ಲಿಟ್ ಹೆಡ್‌ಲೈಟ್‌ಗಳು, ಸಿಗ್ನೇಚರ್ ಬಟರ್‌ಫ್ಲೈ ಗ್ರಿಲ್ ಮತ್ತು ಸುತ್ತುವ ಟೈಲ್ ಲೈಟ್‌ಗಳಿವೆ.

ತನ್ನ ಜಾಗತಿಕ ಚೊಚ್ಚಲ ಬಿಡುಗಡೆಗೆ ಮುಂಚಿತವಾಗಿ, ಸ್ಕೋಡಾ ತನ್ನ ಕೆಲವು ಫೀಚರ್‌ಗಳು, ಆಯಾಮಗಳು ಮತ್ತು ಎಂಜಿನ್ ವಿಶೇಷಣಗಳನ್ನು ದೃಢಪಡಿಸಿದೆ. ಕೈಲಾಕ್‌ನ ಫೀಚರ್ ಸೆಟ್‌ನಲ್ಲಿ ಎಲೆಕ್ಟ್ರಿಕ್ ಆಗಿ ಅಡ್ಜೆಸ್ಟ್ ಮಾಡಬಹುದಾದ ಸೀಟುಗಳು, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್‌ ಆಗಿ ಒಳಗೊಂಡಿರುತ್ತದೆ. ಇದು 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲಿದ್ದು, 115 ಪಿಎಸ್‌ ಮತ್ತು 178 ಎನ್‌ಎಮ್‌ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಮ್ಯಾನ್ಯುವಲ್ ಮತ್ತು ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಬೆಲೆಗಳು 8.50 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಈ 7 ವಿಷಯಗಳಲ್ಲಿ ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್ ಅನ್ನು ಮೀರಿಸಲಿರುವ Skoda Kylaq

2024 ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್

ನಿರೀಕ್ಷಿತ ಬೆಲೆ: 40 ಲಕ್ಷ ರೂ. (ಎಕ್ಸ್ ಶೋರೂಂ)

2024ರ ನವೆಂಬರ್‌ನಲ್ಲಿ MG ತನ್ನ ಪೂರ್ಣ-ಗಾತ್ರದ ಎಸ್‌ಯುವಿ ಗ್ಲೋಸ್ಟರ್‌ನ ಆಪ್‌ಡೇಟ್‌ ಮಾಡಲಾದ ಆವೃತ್ತಿಯನ್ನು ಬಿಡುಗಡೆಗೊಳಿಸಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಫೇಸ್‌ಲಿಫ್ಟೆಡ್ ಮಾಡೆಲ್ ದೊಡ್ಡದಾದ ಗ್ರಿಲ್, ಲಂಬವಾಗಿ ಜೋಡಿಸಲಾದ ಎಲ್‌ಇಡಿ ಹೆಡ್‌ಲೈಟ್‌ಗಳು ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟ್ವೀಕ್ ಮಾಡಿದ ಬಂಪರ್‌ಗಳೊಂದಿಗೆ ರಿಫ್ರೆಶ್ ವಿನ್ಯಾಸವನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಒಳಭಾಗದಲ್ಲಿ, ನೀವು ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್‌ನೊಂದಿಗೆ ಹೆಚ್ಚು ಪ್ರೀಮಿಯಂ ಕ್ಯಾಬಿನ್ ಅನ್ನು ನಿರೀಕ್ಷಿಸಬಹುದು. ಆಪ್‌ಡೇಟ್‌ ಮಾಡಲಾದ ಗ್ಲೋಸ್ಟರ್ ಅನ್ನು ಎರಡು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುವುದು, ಇದರಲ್ಲಿ 161 ಪಿಎಸ್‌ ಮತ್ತು 374 ಎನ್‌ಎಮ್‌ಅನ್ನು ಉತ್ಪಾದಿಸುವ 2-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ ಮತ್ತು 216 ಪಿಎಸ್‌ ಮತ್ತು 479 ಎನ್‌ಎಮ್‌ ಉತ್ಪಾದಿಸುವ ಹೆಚ್ಚು ಶಕ್ತಿಶಾಲಿ 2-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಯುನಿಟ್ ಅನ್ನು ಒಳಗೊಂಡಿದೆ. ಬೆಲೆಯು ಸುಮಾರು 40 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಟೊಯೋಟಾ ಫಾರ್ಚುನರ್‌ನೊಂದಿಗೆ ತನ್ನ ಪೈಪೋಟಿಯನ್ನು ಮುಂದುವರಿಸಲಿದ್ದು, ಜೀಪ್ ಮೆರಿಡಿಯನ್ ಮತ್ತು ಸ್ಕೋಡಾ ಕೊಡಿಯಾಕ್‌ನಂತಹ ಇತರ ಏಳು-ಸೀಟರ್‌ಗಳ ಎಸ್‌ಯುವಿಗಳೊಂದಿಗೆಯೂ ಸ್ಪರ್ಧೆಯನ್ನು ನೀಡಲಿದೆ.

ಮರ್ಸಿಡೀಸ್‌-ಬೆಂಝ್‌ ಎಎಮ್‌ಜಿ ಸಿ 63 ಎಸ್‌ ಇ ಪರ್ಫಾರ್ಮೆನ್ಸ್‌

ನಿರೀಕ್ಷಿತ ಬೆಲೆ: 1.5 ಕೋಟಿ ರೂ

ನೀವು ಹೆಚ್ಚಿನ ಪರ್ಫಾರ್ಮೆನ್ಸ್‌ ಸೆಡಾನ್‌ಗಾಗಿ ಮಾರುಕಟ್ಟೆಯಲ್ಲಿದ್ದರೆ, ಮರ್ಸಿಡೀಸ್‌-ಬೆಂಜ್‌ ಮುಂದಿನ ತಿಂಗಳು ಎಎಮ್‌ಜಿ ಸಿ 63 ಎಸ್‌ ಇ ಪರ್ಫಾರ್ಮೆನ್ಸ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದು ಪ್ಲಗ್-ಇನ್ ಹೈಬ್ರಿಡ್ ಮೊಡೆಲ್‌ ಆಗಿದ್ದು, ಇದು 2-ಲೀಟರ್ ನಾಲ್ಕು-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೊತೆಗೆ ಡ್ಯುಯಲ್ ಎಲೆಕ್ಟ್ರಿಕ್ ಮೋಟರ್‌ಗಳನ್ನು ಹೊಂದಿದೆ. ಒಟ್ಟಾಗಿ, ಅವುಗಳು 680 ಪಿಎಸ್‌ ಮತ್ತು 1,020 ಎನ್‌ಎಮ್‌ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅದರ ಶಕ್ತಿಯುತ ಪರ್ಫಾರ್ಮೆನ್ಸ್‌ ಜೊತೆಗೆ, ಸಿ 63 ಎಸ್‌ ಇ ಪರ್ಫಾರ್ಮೆನ್ಸ್‌ ಆಧುನಿಕ ತಂತ್ರಜ್ಞಾನದೊಂದಿಗೆ ಐಷಾರಾಮಿ ಕ್ಯಾಬಿನ್ ಅನ್ನು ಹೊಂದಿದೆ. ಇದು 12.3-ಇಂಚಿನ ಡ್ರೈವರ್ ಡಿಸ್‌ಪ್ಲೇ, 11.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್ ಮತ್ತು ಚಾಲಿತ ಮುಂಭಾಗದ ಸಾಲಿನ ಆಸನಗಳಂತಹ ಕೆಲವು ಅಸಾಧಾರಣ ಫೀಚರ್‌ಗಳನ್ನು ಒಳಗೊಂಡಿವೆ.

ಮೇಲೆ ತಿಳಿಸಿದ ಮೊಡೆಲ್‌ಗಳಲ್ಲಿ ನೀವು ಯಾವ ಮೊಡೆಲ್‌ಅನ್ನು ಎದುರುನೋಡುತ್ತಿರುವಿರಿ ಎಂಬುದರ ಕುರಿತು ಕೆಳಗಿನ ಕಾಮೆಂಟ್‌ಗಳಲ್ಲಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on Maruti ಡಿಜೈರ್

explore similar ಕಾರುಗಳು

ಸ್ಕೋಡಾ kylaq

ಪೆಟ್ರೋಲ್19.68 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಾರುತಿ ಡಿಜೈರ್

ಪೆಟ್ರೋಲ್24.79 ಕೆಎಂಪಿಎಲ್
ಸಿಎನ್‌ಜಿ33.73 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಎಂಜಿ ಗ್ಲೋಸ್ಟರ್ 2025

Rs.39.50 ಲಕ್ಷ* Estimated Price
ಜನವರಿ 18, 2036 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.6.54 - 9.11 ಲಕ್ಷ*
ಫೇಸ್ ಲಿಫ್ಟ್
ಹೊಸ ವೇರಿಯೆಂಟ್
Rs.11.82 - 16.55 ಲಕ್ಷ*
ಹೊಸ ವೇರಿಯೆಂಟ್
Rs.6 - 9.50 ಲಕ್ಷ*
ಹೊಸ ವೇರಿಯೆಂಟ್
Rs.11.07 - 17.55 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ