• English
  • Login / Register

Tata Altroz Racer ಮಿಡ್-ಸ್ಪೆಕ್ R2 ಆವೃತ್ತಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು: 7 ಚಿತ್ರಗಳಲ್ಲಿ..

published on ಜೂನ್ 14, 2024 03:15 pm by shreyash for ಟಾಟಾ ಆಲ್ಟ್ರೋಜ್ ರೇಸರ್

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

ಆಲ್ಟ್ರೊಜ್ ರೇಸರ್‌ನ ಮಿಡ್-ಸ್ಪೆಕ್ R2 ಆವೃತ್ತಿಯು ಟಾಪ್-ಸ್ಪೆಕ್ R3 ಆವೃತ್ತಿಯಂತೆಯೇ ಕಾಣುತ್ತದೆ ಮತ್ತು 10.25-ಇಂಚಿನ ಟಚ್‌ಸ್ಕ್ರೀನ್, 360-ಡಿಗ್ರಿ ಕ್ಯಾಮೆರಾ ಮತ್ತು ಸನ್‌ರೂಫ್‌ನಂತಹ ಫೀಚರ್‌ಗಳೊಂದಿಗೆ ಬರುತ್ತದೆ

All You Need To Know About Tata Altroz Racer Mid-spec R2 Variant: In 7 Images

ಟಾಟಾ ಆಲ್ಟ್ರೋಜ್‌ ರೇಸರ್‌ ಈವರೆಗಿನ ಆಲ್ಟ್ರೋಜ್‌​​ನ ಅತ್ಯಂತ ಶಕ್ತಿಶಾಲಿ ಆವೃತ್ತಿಯಾಗಿದೆ, ಇದರ 120 ಪಿಎಸ್‌ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಆಲ್ಟ್ರೋಜ್‌ನ ಈ ಸ್ಪೋರ್ಟಿಯರ್ ಆವೃತ್ತಿಯನ್ನು R1, R2 ಮತ್ತು R3 ಎಂಬ ಮೂರು ಮೊಡೆಲ್‌ಗಳಲ್ಲಿ ನೀಡುತ್ತಿದೆ.  ಈ 7 ಚಿತ್ರಗಳಲ್ಲಿ ಟಾಟಾ ಆಲ್ಟ್ರೋಜ್ ರೇಸರ್‌ನ ಮಿಡ್-ಸ್ಪೆಕ್ ಆರ್‌2 ಆವೃತ್ತಿಯು ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದನ್ನು ನೋಡೋಣ.

ಮುಂಭಾಗ

All You Need To Know About Tata Altroz Racer Mid-spec R2 Variant: In 7 Images

ಟಾಟಾ ಆಲ್ಟ್ರೋಜ್ ರೇಸರ್‌ನ ಮಿಡ್-ಸ್ಪೆಕ್ ಆರ್‌2 ಆವೃತ್ತಿಯು ಅದರ ಟಾಪ್-ಸ್ಪೆಕ್ ಆರ್‌3 ಪ್ರತಿರೂಪಕ್ಕೆ ಹೋಲುತ್ತದೆ. ಇದು ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಮುಂಭಾಗದ ಫಾಗ್‌ ಲ್ಯಾಂಪ್‌ಗಳೊಂದಿಗೆ ಅದೇ ಆಟೋಮ್ಯಾಟಿಕ್‌ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ಒಳಗೊಂಡಿದೆ.  ಈ ಆವೃತ್ತಿಯು 360-ಡಿಗ್ರಿ ಕ್ಯಾಮೆರಾವನ್ನು ಪಡೆಯುವುದರಿಂದ, ಮುಂಭಾಗದ ಕ್ಯಾಮೆರಾವನ್ನು ಟಾಟಾ ಲೋಗೋ ಅಡಿಯಲ್ಲಿ ಗ್ರಿಲ್‌ನಲ್ಲಿ ಸೆಟ್‌ ಮಾಡಲಾಗಿದೆ.

ಸೈಡ್‌

All You Need To Know About Tata Altroz Racer Mid-spec R2 Variant: In 7 Images

ಆರ್‌2 ಮತ್ತು  ಆಲ್ಟ್ರೋಜ್‌ ರೇಸರ್‌ನ ಇತರ ಆವೃತ್ತಿಗಳ ನಡುವೆ ಯಾವುದೇ ಕಾಣುವ ರೀತಿಯ ವ್ಯತ್ಯಾಸವಿಲ್ಲ. ಇತರ  ಆವೃತ್ತಿಗಳಂತೆ, ಆಲ್ಟ್ರೊಜ್ ರೇಸರ್ ಆರ್‌2 ಅದೇ 16-ಇಂಚಿನ ಕಪ್ಪು ಆಲಾಯ್‌ ವೀಲ್‌ಗಳು, ಕಪ್ಪು-ಬಣ್ಣದ ಪಿಲ್ಲರ್‌ಗಳು ಮತ್ತು ವಿಂಡೋ ಲೈನ್ ಮತ್ತು ಮುಂಭಾಗದ ಫೆಂಡರ್‌ಗಳಲ್ಲಿ 'ರೇಸರ್' ಬ್ಯಾಡ್ಜ್ ಅನ್ನು ಪಡೆಯುತ್ತದೆ. ORVM ಗಳು 360-ಡಿಗ್ರಿ ಸೆಟಪ್‌ನ ಸೈಡ್ ಕ್ಯಾಮೆರಾಗಳನ್ನು ಸಹ ಹೊಂದಿವೆ.

All You Need To Know About Tata Altroz Racer Mid-spec R2 Variant: In 7 Images

ಇತರ ಆಲ್ಟ್ರೊಜ್ ರೇಸರ್ ಆವೃತ್ತಿಗಳಲ್ಲಿ ಕಂಡುಬರುವಂತೆ, ಅದರ ಆರ್‌2 ಟ್ರಿಮ್ ಕಪ್ಪು ಬಾನೆಟ್‌ ಮತ್ತು ಡ್ಯುಯಲ್ ವೈಟ್ ಸ್ಟ್ರೈಪ್‌ಗಳನ್ನು ಬಾನೆಟ್‌ನಿಂದ ರೂಫ್‌ನ ಅಂತ್ಯದವರೆಗೆ ಹೊಂದಿದೆ. ಎಂಟ್ರಿ ಲೆವೆಲ್‌ನ R1 ಟ್ರಿಮ್‌ಗಿಂತ ಭಿನ್ನವಾಗಿ, ಹ್ಯಾಚ್‌ಬ್ಯಾಕ್‌ನ ಈ ಆವೃತ್ತಿಯು ಸಿಂಗಲ್-ಪೇನ್ ಸನ್‌ರೂಫ್ ಅನ್ನು ಪಡೆಯುತ್ತದೆ.

ಇದನ್ನು ಸಹ ಓದಿ: Tata Altroz Racerನ ಎಂಟ್ರಿ-ಲೆವೆಲ್ R1 ವೇರಿಯಂಟ್ ನ 7 ಚಿತ್ರಗಳು ನಿಮಗಾಗಿ

ಹಿಂಭಾಗ

All You Need To Know About Tata Altroz Racer Mid-spec R2 Variant: In 7 Images

ಆಲ್ಟ್ರೊಜ್‌ನ 'ರೇಸರ್' ರೇಂಜ್‌ನಾದ್ಯಂತ ಸ್ಟ್ಯಾಂಡರ್ಡ್‌ ಆಗಿ, ಇದು ವಿಸ್ತೃತ ರೂಫ್ ಸ್ಪಾಯ್ಲರ್, ಹಿಂಭಾಗದ ಡಿಫಾಗರ್ ಮತ್ತು ವಾಷರ್‌ನೊಂದಿಗೆ ಹಿಂಭಾಗದ ವೈಪರ್ ಅನ್ನು ಪಡೆಯುತ್ತದೆ. ಟೈಲ್‌ಗೇಟ್‌ನಲ್ಲಿ 'i-turbo+' ಮಾನಿಕರ್ ಕೂಡ ಇದೆ, ಇದು ಹಿಂದೆ ಲಭ್ಯವಿರುವ Altroz ​​i-turbo ಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ಸೂಚಿಸುತ್ತದೆ.

ಇದು ಡ್ಯುಯಲ್-ಟಿಪ್ ಎಕ್ಸಾಸ್ಟ್ ಅನ್ನು ಸಹ ಪಡೆಯುತ್ತದೆ, ಇದು ಹ್ಯಾಚ್‌ಬ್ಯಾಕ್‌ನ ರೆಗುಲರ್‌ ಆವೃತ್ತಿಗಿಂತ ಸ್ಪೋರ್ಟಿಯರ್ ಅಂಶವನ್ನು ಹೊಂದಿದೆ.

ಇಂಟಿರೀಯರ್‌

All You Need To Know About Tata Altroz Racer Mid-spec R2 Variant: In 7 Images

​​ಆಲ್ಟ್ರೋಜ್‌ ರೆಸರ್‌ ಆರ್‌2 ನ ಡ್ಯಾಶ್‌ಬೋರ್ಡ್ ಅದರ ಟಾಪ್-ಸ್ಪೆಕ್ ಆರ್‌3 ಆವೃತ್ತಿಯಂತೇ ಕಾಣುತ್ತದೆ. ಇದರ ಸೌಕರ್ಯಗಳ ಪಟ್ಟಿಯು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು  ಆಪಲ್‌ ಕಾರ್‌ಪ್ಲೇ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8-ಸ್ಪೀಕರ್ ಸೌಂಡ್ ಸಿಸ್ಟಮ್ (ನಾಲ್ಕು ಟ್ವೀಟರ್‌ಗಳನ್ನು ಒಳಗೊಂಡಂತೆ), 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇಯನ್ನು ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ಆರೆಂಜ್‌ ಥೀಮ್ ಆಂಬಿಯೆಂಟ್ ಲೈಟಿಂಗ್ ಅನ್ನು ಒಳಗೊಂಡಿದೆ.

All You Need To Know About Tata Altroz Racer Mid-spec R2 Variant: In 7 Images

ಆಲ್ಟ್ರೋಜ್‌ ರೇಸರ್ ಆರ್‌2 ಸಹ ಆಟೋಮ್ಯಾಟಿಕ್‌ ಎಸಿ ಜೊತೆಗೆ ಹಿಂಭಾಗದ ವೆಂಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್ ಮತ್ತು ಸಿಂಗಲ್-ಪೇನ್ ಸನ್‌ರೂಫ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಆದಾಗಿಯೂ, ಇದು ಇನ್ನೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಏರ್ ಪ್ಯೂರಿಫೈಯರ್ ಮತ್ತು ಕನೆಕ್ಟೆಡ್‌ ಕಾರ್ ತಂತ್ರಜ್ಞಾನದಂತಹ ವೈಶಿಷ್ಟ್ಯಗಳನ್ನು ನೀಡುತ್ತಿಲ್ಲ. ಆದರೆ, ಇವುಗಳನ್ನು ಆಲ್ಟ್ರೋಜ್ ರೇಸರ್‌ನ ಟಾಪ್‌-ಎಂಡ್‌ ಆರ್‌3 ಮೊಡೆಲ್‌ನೊಂದಿಗೆ ನೀಡಲಾಗುತ್ತದೆ.

ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, ಬ್ಲೈಂಡ್ ವ್ಯೂ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ, ರೈನ್ ಸೆನ್ಸಿಂಗ್ ವೈಪರ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಅನ್ನು ಒಳಗೊಂಡಿದೆ.

All You Need To Know About Tata Altroz Racer Mid-spec R2 Variant: In 7 Images

ಹ್ಯಾಚ್‌ಬ್ಯಾಕ್‌ನ ಈ ಮಿಡ್-ಸ್ಪೆಕ್ ಆರ್‌2 ಆವೃತ್ತಿಯು ಎಲ್ಲಾ-ಕಪ್ಪು ಲೆಥೆರೆಟ್ ಸೀಟ್ ಕವರ್, ಜೊತೆಗೆ ಲೆಥೆರೆಟ್-ಸುತ್ತಿದ ಸ್ಟೀರಿಂಗ್ ವೀಲ್ ಮತ್ತು ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್ ಅನ್ನು ಪಡೆಯುತ್ತದೆ. ಸ್ಪೋರ್ಟಿಯರ್ ಆಕರ್ಷಣೆಗಾಗಿ ಸೀಟುಗಳು ಕಾಂಟ್ರಾಸ್ಟ್ ಆರೆಂಜ್ ಸ್ಟಿಚ್ಚಿಂಗ್‌ ಅನ್ನು ಹೊಂದಿದೆ.

ಇದನ್ನು ಓದಿ: Tata Altroz Racer R1 ವರ್ಸಸ್‌ Hyundai i20 N Line N6: ಯಾವುದು ಬೆಸ್ಟ್‌ ? ಇಲ್ಲಿದೆ ಹೋಲಿಕೆ..

ಪವರ್‌ಟ್ರೈನ್‌ ಕುರಿತು

ಅಲ್ಟ್ರೋಜ್‌ನ ಈ ಸ್ಪೋರ್ಟಿಯರ್ ಎಡಿಷನ್‌ ಟಾಟಾ ನೆಕ್ಸಾನ್‌ನಿಂದ ಪಡೆದ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ. ಈ ಎಂಜಿನ್ 120 ಪಿಎಸ್‌ ಮತ್ತು 170 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಜೋಡಿಯಾಗಿ ಬರುತ್ತದೆ. ಹಾಗೆಯೇ, ಟಾಟಾ ಭವಿಷ್ಯದಲ್ಲಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಆಯ್ಕೆಯೊಂದಿಗೆ ಅಲ್ಟ್ರೋಜ್‌ ​​ರೇಸರ್ ಅನ್ನು ನೀಡಬಹುದು.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಟಾಟಾ ಆಲ್ಟ್ರೋಜ್ ರೇಸರ್‌ನ ಆರ್‌2 ಆವೃತ್ತಿಯ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಯು 10.49 ಲಕ್ಷ ರೂ.ನಿಂದ ಪ್ರಾರಂಭವಾಗಬಹುದು. ಇದು ಹ್ಯುಂಡೈ ಐ20 ಎನ್‌ ಲೈನ್‌ಗೆ ನೇರ ಪ್ರತಿಸ್ಪರ್ಧಿಯಾಗಿದೆ.  

ಇನ್ನಷ್ಟು ಓದಿ : ಟಾಟಾ ಆಲ್ಟ್ರೋಜ್ ರೇಸರ್ ಆನ್‌ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಆಲ್ಟ್ರೋಝ್ Racer

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience