ಹೋಂಡಾ ಎಲಿವೇಟ್‌ಗೆ ಬುಕ್ಕಿಂಗ್‌ಗಳು ಪ್ರಾರಂಭವಾಗಿದ್ದು, ವೇರಿಯೆಂಟ್ ಶ್ರೇಣಿಗಳು ಬಹಿರಂಗ
ಹೋಂಡಾ ಎಲಿವೇಟ್ ಅನ್ನು ಆನ್‌ಲೈನ್ ಮತ್ತು ಕಾರುತಯಾರಕರ ಡೀಲರ್‌ಶಿಪ್‌ಗಳಲ್ಲಿ ರೂ. 5000 ಕ್ಕೆ ಕಾಯ್ದಿರಿಸಬಹುದಾಗಿದೆ
-
ಹೋಂಡಾ ಈ ಎಸ್‌ಯುವಿಯನ್ನು SV, V, VX ಮತ್ತು ZX ಎಂಬ ನಾಲ್ಕು ವಿಶಾಲ ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ.
-
ಇದು ಜಾಗತಿಕ ಮಾಡೆಲ್ ಆಗಿದ್ದು, ಭಾರತವು ಎಲಿವೇಟ್ ಎಸ್‌ಯುವಿಯನ್ನು ಪಡೆಯುತ್ತಿರುವ ಮೊದಲ ಮಾರುಕಟ್ಟೆಯಾಗಿದೆ.
-
ಈ ಎಸ್‌ಯುವಿಯು 10.25-ಇಂಚಿನ ಟಚ್‌ಸ್ಕ್ರೀನ್, ಸಿಂಗಲ್-ಪೇನ್ ಸನ್‌ರೂಫ್ ಮತ್ತು ADAS ಅನ್ನು ಪಡೆಯುತ್ತದೆ.
-
ಇದನ್ನು ಸಿಟಿಯ 1.5-ಲೀಟರ್ (121PS/145Nm) ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುತ್ತಿದ್ದು, ಇದರ ಇವಿ ಆವೃತ್ತಿಯು 2026 ರಲ್ಲಿ ಬರಲಿದೆ.
-
ಬೆಲೆಯು ರೂ.11 ಲಕ್ಷದಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗಬಹುದು.
ಹೋಂಡಾ ಎಲಿವೇಟ್‌ನ ಬುಕ್ಕಿಂಗ್‌ಗಳನ್ನು ಈಗ ಆನ್‌ಲೈನ್ ಮತ್ತು ಹೋಂಡಾ ಡೀಲರ್‌ಶಿಪ್‌ಗಳಲ್ಲಿ ರೂ. 5,000 ಗಳಿಗೆ ತೆರೆಯಲಾಗಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಸೆಪ್ಟೆಂಬರ್ 2023 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಜಪಾನಿನ ಕಾರುತಯಾರಕರು ತಿಳಿಸಿದ್ದು ಅದರ ವೇರಿಯೆಂಟ್ ಶ್ರೇಣಿಯನ್ನು ಬಿಡುಗಡೆಗೊಳಿಸಿದ್ದಾರೆ.
ಇಲ್ಲಿಯವರೆಗೆ ಹೋಂಡಾ ಎಸ್‌ಯುವಿ ಬಗ್ಗೆ ನಮಗೆ ತಿಳಿದಿರುವ ವಿಷಯಗಳು ಇಲ್ಲಿವೆ:
ಶುದ್ಧ ವಿನ್ಯಾಸ
ಈ ಹೋಂಡಾ ಎಸ್‌ಯುವಿಯು ನೂತನ ಮತ್ತು ಆಧುನಿಕ ವಿನ್ಯಾಸವನ್ನು ಪಡೆಯುತ್ತದೆ ಮತ್ತು ಎಕ್ಸ್‌ಟೀರಿಯರ್‌ನಲ್ಲಿ ದೊಡ್ಡ ಗ್ರಿಲ್, ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳು, 17-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳು, ಮತ್ತು ಗಟ್ಟಿಮುಟ್ಟಾದ ಬಾಡಿ ಕ್ಲಾಡಿಂಗ್ ಅನ್ನು ಹೊಂದಿದೆ. ಇದರಲ್ಲಿ ನಿರ್ದಿಷ್ಟ ವಿಶೇಷತೆಗಳನ್ನು ಗುರುತಿಸಲಾಗದಿದ್ದರೂ, ಇದರ ವಿನ್ಯಾಸವು ಈ ವಿಭಾಗದಲ್ಲಿಯೇ ಪ್ರಬುದ್ಧ ಮತ್ತು ವಿಶಿಷ್ಟವಾಗಿದೆ.
ಸಂಬಂಧಿತ: ಈ 10 ಚಿತ್ರಗಳಲ್ಲಿ ಹೋಂಡಾ ಎಲಿವೇಟ್‌ನ ಎಕ್ಸ್‌ಟೀರಿಯರ್ ಪರಿಶೀಲಿಸಿ
ಕ್ಯಾಬಿನ್ ಮತ್ತು ಸಲಕರಣಾ ವಿವರಗಳು
ಎಲಿವೇಟ್‌ನೊಂದಿಗೆ, ಇದರ ಕಾರುತಯಾರಕರು ಇಂಟೀರಿಯರ್ ಅನ್ನು ಸಿಟಿಗಿಂತ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈ ಎಸ್‌ಯುವಿಯ ಕ್ಯಾಬಿನ್ ಕಪ್ಪು ಮತ್ತು ಕಂದು ಬಣ್ಣದ ಥೀಮ್ ಅನ್ನು ಹೊಂದಿದ್ದು, ಇದರಲ್ಲಿನ ಲೆದರ್ ಮೇಲ್ಗವಸು ಪ್ರೀಮಿಯಂ ನೋಟವನ್ನು ನೀಡುತ್ತದೆ.
ಹೋಂಡಾ ಈ ಎಸ್‌ಯುವಿಯನ್ನು10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಕನೆಕ್ಟಿವಿಟಿ, ಸಿಂಗಲ್-ಪೇನ್ ಸನ್‌ರೂಫ್, 7-ಇಂಚಿನ ಸೆಮಿ-ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್, ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನೊಂದಿಗೆ ಸಜ್ಜುಗೊಳಿಸಿದೆ. ಇದರ ಸುರಕ್ಷತಾ ಕಿಟ್ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS), 360-ಡಿಗ್ರಿ ಕ್ಯಾಮರಾ, ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ.
ಕೇವಲ-ಪೆಟ್ರೋಲ್ ಆಯ್ಕೆ
ಈ ಎಲಿವೇಟ್ ಕೇವಲ ಸಿಟಿಯ 1.5-ಲೀಟರ್ ನೈಸರ್ಗಿಕ ಆ್ಯಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (121PS/145Nm) ನೊಂದಿಗೆ ಬರುತ್ತದೆ. ಇದು 6-ಸ್ಪೀಡ್ ಮ್ಯಾನ್ಯುವಲ್ ಅಥವಾ CVT ಆಟೋಮ್ಯಾಟಿಕ್‌ನೊಂದಿಗೆ ಜೊತೆಯಾಗಿದೆ. ಅನಾವರಣದ ಸ್ವಲ್ಪ ಸಮಯದ ನಂತರ ದೃಢೀಕರಿಸಿದಂತೆ, ಎಲಿವೇಟ್ ಹೈಬ್ರಿಡ್ ಆಯ್ಕೆಯನ್ನು ಬಿಡುತ್ತದೆ ಮತ್ತು 2026 ರಲ್ಲಿ ಬಿಡುಗಡೆಗೊಳಿಸಲು ಯೋಜಿಸಲಾದ ಇವಿ ಆವೃತ್ತಿಯನ್ನು ಪಡೆಯುತ್ತದೆ.
ಬಿಡುಗಡೆ ಮತ್ತು ಬೆಲೆ
ಹೋಂಡಾ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಎಲಿವೇಟ್ ಅನ್ನು ಬಿಡುಗಡೆ ಮಾಡಲಿದ್ದು ರೂ. 11 ಲಕ್ಷದಿಂದ (ಎಕ್ಸ್-ಶೋರೂಮ್) ಬೆಲೆಯನ್ನು ನಿಗದಿಪಡಿಸುವ ಸಾಧ್ಯತೆಯಿದೆ. ಇದು SV, V, VX ಮತ್ತು ZX ಎಂಬ ನಾಲ್ಕು ವಿಶಾಲ ಟ್ರಿಮ್‌ಗಳನ್ನು ಹೊಂದಲಿದೆ.
ಈ ಕಾಂಪ್ಯಾಕ್ಟ್ ಎಸ್‌ಯುವಿಯು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಎಂಜಿ ಆಸ್ಟರ್, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಮುಂಬರುವ ಸಿಟ್ರಾನ್ C3 ಏರ್‌ಕ್ರಾಸ್‌ಗೆ ಪ್ರತಿಸ್ಪರ್ಧಿಯಾಗಲಿದೆ.