• English
  • Login / Register

BYDಯ 11ನೇ ವರ್ಷದ ಆನಿವರ್ಸರಿ ಪ್ರಯುಕ್ತ Atto 3ಯ ಬೇಸ್ ವೇರಿಯಂಟ್‌ನ ಈ ಆಫರ್‌ ಇನ್ನಷ್ಟು ದಿನ ಲಭ್ಯ

ಬಿವೈಡಿ ಆಟ್ಟೋ 3 ಗಾಗಿ rohit ಮೂಲಕ ಆಗಸ್ಟ್‌ 21, 2024 04:25 pm ರಂದು ಪ್ರಕಟಿಸಲಾಗಿದೆ

  • 52 Views
  • ಕಾಮೆಂಟ್‌ ಅನ್ನು ಬರೆಯಿರಿ

ಅಟ್ಟೊ 3 ಹೊಸ ಬೇಸ್-ಸ್ಪೆಕ್ ಮತ್ತು ಕಾಸ್ಮೊ ಬ್ಲ್ಯಾಕ್ ಎಡಿಷನ್ ವೇರಿಯಂಟ್ ಗಳಿಗಾಗಿ ಕಾರು ತಯಾರಕರು 600 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದಿದ್ದಾರೆ

BYD Atto 3 introductory price extended

  • 2013 ರಲ್ಲಿ ಚೆನ್ನೈನಲ್ಲಿ ಎಲೆಕ್ಟ್ರಿಕ್ ಬಸ್ ಅನ್ನು ಪರಿಚಯಿಸುವುದರೊಂದಿಗೆ BYD ತನ್ನ ಭಾರತದ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿತು.
  •  ಇದು ಜುಲೈ 2024 ರಲ್ಲಿ ಆಟ್ಟೋ 3 ಯ ಹೊಸ ಬೇಸ್-ಸ್ಪೆಕ್ ಡೈನಾಮಿಕ್ ವೇರಿಯಂಟ್ ಅನ್ನು ಲಾಂಚ್ ಮಾಡಿದೆ.
  •  ಆಟ್ಟೋ 3 ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಲಭ್ಯವಿದೆ ಮತ್ತು 521 ಕಿ.ಮೀವರೆಗಿನ ಕ್ಲೈಮ್ ಮಾಡಿರುವ ರೇಂಜ್ ಅನ್ನು ನೀಡುತ್ತದೆ.
  •  ಇದು 12.8-ಇಂಚಿನ ರೊಟೇಟಿಂಗ್ ಟಚ್‌ಸ್ಕ್ರೀನ್, 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಒಳಗೊಂಡಿದೆ.
  •  BYD ತನ್ನ ಎಲೆಕ್ಟ್ರಿಕ್ SUV ಯ ಬೆಲೆಯನ್ನು ರೂ 24.99 ಲಕ್ಷದಿಂದ ರೂ 33.99 ಲಕ್ಷದವರೆಗೆ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇರಿಸಿದೆ.

ಆಗಸ್ಟ್ 20, 2013 ರಂದು ಚೆನ್ನೈನಲ್ಲಿ ಪರಿಚಯಿಸಲಾದ ತನ್ನ ಮೊದಲ ಎಲೆಕ್ಟ್ರಿಕ್ ಬಸ್‌ನೊಂದಿಗೆ BYD ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕೊಡುಗೆಗಳ ಪ್ರಯಾಣವನ್ನು ಪ್ರಾರಂಭಿಸಿ ಈಗಾಗಲೇ 11 ವರ್ಷಗಳು ಕಳೆದಿವೆ. ವಾರ್ಷಿಕೋತ್ಸವದ ಅಂಗವಾಗಿ, BYD ಆಟ್ಟೋ 3 ನ ಹೊಸ ಬೇಸ್-ಸ್ಪೆಕ್ ಡೈನಾಮಿಕ್ ವೇರಿಯಂಟ್ ಪರಿಚಯಾತ್ಮಕ ಬೆಲೆಯನ್ನು ಮತ್ತಷ್ಟು ದಿನಗಳ ಕಾಲ ವಿಸ್ತರಿಸಲಾಗಿದೆ. ಡೈನಾಮಿಕ್ ವೇರಿಯಂಟ್ ಮತ್ತು ಹೊಸ ಕಾಸ್ಮೊ ಬ್ಲಾಕ್ ಎಡಿಷನ್ ಲಾಂಚ್ ಆದ ಒಂದು ತಿಂಗಳೊಳಗೆ 600 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಚೀನಾದ EV ತಯಾರಕರು ಘೋಷಿಸಿದ್ದಾರೆ.

BYD ಅಟ್ಟೊ 3 ಬೆಲೆ ರೇಂಜ್

 ವೇರಿಯಂಟ್

 ಬೆಲೆ (ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ)

 ಡೈನಾಮಿಕ್

 ರೂ. 24.99 ಲಕ್ಷ (ಪರಿಚಯಾತ್ಮಕ)

 ಪ್ರೀಮಿಯಂ

 ರೂ. 29.85 ಲಕ್ಷ 

 ಸುಪೀರಿಯರ್

 ರೂ. 33.99 ಲಕ್ಷ

 ಬೇಸ್-ಸ್ಪೆಕ್ ವೇರಿಯಂಟ್ ಹೊರತಾಗಿ, ಮಿಡ್-ಸ್ಪೆಕ್ ಪ್ರೀಮಿಯಂ ಮತ್ತು ಟಾಪ್-ಸ್ಪೆಕ್ ಸುಪೀರಿಯರ್ ಟ್ರಿಮ್‌ಗಳ ಬೆಲೆಗಳು ಬದಲಾಗಿಲ್ಲ.  

 ಇದನ್ನು ಕೂಡ ಓದಿ: MG ವಿಂಡ್ಸರ್ EV ಅಪ್ಡೇಟ್: ಈ ದಿನಾಂಕದಂದು ಆಗಲಿದೆ ಭಾರತದಲ್ಲಿ ಲಾಂಚ್

 

ಎಲೆಕ್ಟ್ರಿಕ್ ಪವರ್‌ಟ್ರೇನ್ ವಿವರಗಳು

 SUV ಯ ಹೊಸ ಎಂಟ್ರಿ ಲೆವೆಲ್ ವೇರಿಯಂಟ್ ನೊಂದಿಗೆ, BYD ಅಟ್ಟೊ 3 ಗಾಗಿ ಸಣ್ಣ ಬ್ಯಾಟರಿ ಆಯ್ಕೆಯನ್ನು ಸಹ ಪರಿಚಯಿಸಿದೆ. ಟೆಕ್ನಿಕಲ್ ಸ್ಪೆಸಿಫಿಕೇಷನ್ ಗಳ ವಿವರಗಳನ್ನು ಕೆಳಗೆ ನೀಡಲಾಗಿದೆ:

 ಸ್ಪೆಸಿಫಿಕೇಷನ್

 ಡೈನಾಮಿಕ್

 ಪ್ರೀಮಿಯಂ

 ಸುಪೀರಿಯರ್

 ಬ್ಯಾಟರಿ ಪ್ಯಾಕ್

49.92 kWh

60.48 kWh

60.48 kWh

 ಒಟ್ಟು ಎಲೆಕ್ಟ್ರಿಕ್ ಮೋಟರ್ ಸಂಖ್ಯೆ

1

1

1

 ಪವರ್

204 PS

204 PS

204 PS

ಟಾರ್ಕ್

310 Nm

310 Nm

310 Nm

 ಕ್ಲೇಮ್ ಮಾಡಿರುವ ರೇಂಜ್ (ARAI)

 468 ಕಿ.ಮೀ

 521 ಕಿ.ಮೀ

 521 ಕಿ.ಮೀ

BYD ಬ್ಲೇಡ್ ಬ್ಯಾಟರಿಯನ್ನು DC ಫಾಸ್ಟ್ ಚಾರ್ಜರ್‌ನೊಂದಿಗೆ ಕೇವಲ 50 ನಿಮಿಷಗಳಲ್ಲಿ 0-80 ಪ್ರತಿಶತವರೆಗೆ ಚಾರ್ಜ್ ಮಾಡಬಹುದು. ಬೇಸ್ ವೇರಿಯಂಟ್ ಕೇವಲ 70 kW DC ಚಾರ್ಜಿಂಗ್ ಆಯ್ಕೆಯನ್ನು ಮಾತ್ರ ಸಪೋರ್ಟ್ ಮಾಡುತ್ತದೆ, ಆದರೆ ಇತರ ವೇರಿಯಂಟ್ ಗಳು 80 kW ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.

ಯಾವ ಯಾವ ಟೆಕ್ ಫೀಚರ್ ಗಳು ಇವೆ?

BYD Atto 3 cabin

 BYD ಅಟ್ಟೊ 3 ಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಜೊತೆಗೆ 12.8-ಇಂಚಿನ ರೊಟೇಟಿಂಗ್ ಟಚ್‌ಸ್ಕ್ರೀನ್, 8-ಸ್ಪೀಕರ್ ಸೌಂಡ್ ಸಿಸ್ಟಮ್, ಪನರೋಮಿಕ್ ಸನ್‌ರೂಫ್ ಮತ್ತು 6-ವೇ ಪವರ್-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್‌ ಅನ್ನು ನೀಡಿದೆ. ಸುರಕ್ಷತಾ ವಿಷಯದಲ್ಲಿ ಏಳು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಒಳಗೊಂಡಿದೆ.

BYD ಆಟ್ಟೋ 3 ಪ್ರತಿಸ್ಪರ್ಧಿಗಳು

BYD Atto 3 rear

 BYD ಆಟ್ಟೋ 3 MG ZS EV ಗೆ ನೇರ ಪ್ರತಿಸ್ಪರ್ಧಿಯಾಗಿದೆ ಮತ್ತು ಮುಂಬರುವ ಮಾರುತಿ eVX ಮತ್ತು ಹುಂಡೈ ಕ್ರೆಟಾ EV ಗೆ ಕೂಡ ಪ್ರತಿಸ್ಪರ್ಧಿಯಾಗಲಿದೆ.

 ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.

 ಇನ್ನಷ್ಟು ಓದಿ: ಅಟೊ 3 ಆಟೋಮ್ಯಾಟಿಕ್

was this article helpful ?

Write your Comment on BYD ಆಟ್ಟೋ 3

explore ಇನ್ನಷ್ಟು on ಬಿವೈಡಿ ಆಟ್ಟೋ 3

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ e vitara
    ಮಾರುತಿ e vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience