ಈ 8 ಚಿತ್ರಗಳಲ್ಲಿ Hyundai Creta S(O) ಆವೃತ್ತಿಯ ಸಂಪೂರ್ಣ ವಿವರ
ಹುಂಡೈ ಕ್ರೆಟಾ ಗಾಗಿ ansh ಮೂಲಕ ಫೆಬ್ರವಾರಿ 05, 2024 05:32 pm ರಂದು ಪ್ರಕಟಿಸಲಾಗಿದೆ
- 38 Views
- ಕಾಮೆಂಟ್ ಅನ್ನು ಬರೆಯಿರಿ
ಮಿಡ್-ಸ್ಪೆಕ್ ಎಸ್(ಒಪ್ಶನಲ್) ಆವೃತ್ತಿಗಳ ಎಕ್ಸ್-ಶೋರೂಂ ಬೆಲೆಗಳು 14.32 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ ಮತ್ತು ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ
ಫೇಸ್‌ಲಿಫ್ಟೆಡ್ ಹ್ಯುಂಡೈ ಕ್ರೆಟಾವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ ಮತ್ತು ಇದು ಹೊಚ್ಚ ಹೊಸ ಬಾಹ್ಯ ವಿನ್ಯಾಸ, ಪರಿಷ್ಕರಿಸಿದ ಕ್ಯಾಬಿನ್, ಹೊಸ ವೈಶಿಷ್ಟ್ಯಗಳ ಹೂರಣದೊಂದಿಗೆ ಬರುತ್ತದೆ ಮತ್ತು ಇನ್ನೂ ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ಗಳ ಆಯ್ಕೆಯನ್ನು ಪಡೆಯುತ್ತದೆ. ಇದನ್ನು ಏಳು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ ಮತ್ತು ನೀವು ಮಿಡ್-ಸ್ಪೆಕ್ ಕ್ರೆಟಾಗೆ ಹೋಗಲು ಆಲೋಚಿಸುತ್ತಿದ್ದರೆ, ಈ ವಿವರವಾದ ಗ್ಯಾಲರಿಯಲ್ಲಿ ನೀವು ಅದರ ಎಸ್(ಒಪ್ಶನಲ್) ವೇರಿಯೆಂಟ್‌ನ್ನು ಪರಿಶೀಲಿಸಬಹುದು.
ವಿನ್ಯಾಸ
ಮುಂಭಾಗದಲ್ಲಿ, ಇದು ಕ್ರೋಮ್ ಇನ್ಸರ್ಟ್‌ನೊಂದಿಗೆ ಹೊಸ ಪ್ಯಾರಾಮೆಟ್ರಿಕ್ ಗ್ರಿಲ್ ಅನ್ನು ಪಡೆಯುತ್ತದೆ. ಗ್ರಿಲ್ ಮೇಲೆ, ನೀವು ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಗುರುತಿಸಬಹುದು ಮತ್ತು ಹೊಸ ಹೆಡ್‌ಲೈಟ್‌ಗಳು ಬಂಪರ್‌ಗಳಲ್ಲಿ ಮರ್ಜ್ ಆಗುತ್ತದೆ. ಬಂಪರ್‌ಅನ್ನು ಕಪ್ಪು ಬಣ್ಣದಲ್ಲಿ ನೀಡಲಾಗುತ್ತಿದೆ, ಜೊತೆಗೆ ಬೆಳ್ಳಿಯ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ.
ಸೈಡ್ ಪ್ರೊಫೈಲ್ ಫೇಸ್‌ಲಿಫ್ಟ್ ಗಿಂತ ಹಿಂದಿನ ಆವೃತ್ತಿಯಂತೆಯೇ ಅದೇ ಸಿಲೂಯೆಟ್ ಅನ್ನು ಹೊಂದಿರುತ್ತದೆ. ಈ ವೇರಿಯೆಂಟ್ ಕ್ರೋಮ್ ರೂಫ್ ರೈಲ್‌ಗಳನ್ನು ಪಡೆಯುತ್ತದೆ, ಬಾಗಿಲುಗಳ ಕೆಳಗೆ ಸಿಲ್ವರ್ ಪ್ಲೇಟ್‌ನೊಂದಿಗೆ ಬ್ಲ್ಯಾಕ್ ಡೋರ್ ಕ್ಲ್ಯಾಡಿಂಗ್ ಅನ್ನು ಹೊಂದಿದೆ ಮತ್ತು ಇದು ಸಿ-ಪಿಲ್ಲರ್‌ನಿಂದ ಪ್ರಾರಂಭವಾಗುವ ಮತ್ತು ರೂಫ್ ಲೈನ್ ಉದ್ದಕ್ಕೂ ಚಲಿಸುವ ಸಿಲ್ವರ್ ವಿನ್ಯಾಸದ ಅಂಶವನ್ನು ನೀಡುವುದನ್ನು ಮುಂದುವರೆಸಿದೆ.
ಫೇಸ್‌ಲಿಫ್ಟೆಡ್ ಕ್ರೆಟಾ 17-ಇಂಚಿನ ಅಲಾಯ್ ವೀಲ್‌ಗಳನ್ನು ಸಂಪೂರ್ಣ ಕಪ್ಪು ಬಣ್ಣದಲ್ಲಿ ಪಡೆಯುತ್ತದೆ, ಇದು ಎಸ್( ಒಪ್ಶನಲ್) ಆವೃತ್ತಿಯಲ್ಲಿ ಎಕ್ಸ್‌ಕ್ಲೂಸಿವ್ ಆಗಿದೆ ಮತ್ತು ಕನೆಕ್ಟೆಡ್ ಎಲ್‌ಇಡಿ ಟೈಲ್ ಲೈಟ್‌ಗಳ ಉಪಸ್ಥಿತಿಯೊಂದಿಗೆ ಹಿಂಭಾಗದ ಪ್ರೊಫೈಲ್ ಇತರ ಆವೃತ್ತಿಗಳನ್ನು ಹೋಲುತ್ತದೆ.
ಕ್ಯಾಬಿನ್
ಕ್ರೆಟಾ ಎಸ್(ಒಪ್ಶನಲ್‌ನ) ಒಳಗೆ, ನೀವು ಫ್ಯಾಬ್ರಿಕ್ ಅಪ್ಹೋಲ್ಸ್‌ಟೆರಿಯೊಂದಿಗೆ ಕಪ್ಪು ಮತ್ತು ಬೂದು ಬಣ್ಣದ ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತೀರಿ. ಇದು ಫ್ಲಾಟ್ ಬಾಟಮ್ ಸ್ಟೀರಿಂಗ್ ವೀಲ್, ಗ್ಲೋಸ್ ಬ್ಲ್ಯಾಕ್ ಟಚ್‌ಗಳು ಮತ್ತು ಎಸಿ ವೆಂಟ್‌ಗಳು, ಡ್ಯಾಶ್‌ಬೋರ್ಡ್, ಡೋರ್ಸ್ ಹ್ಯಾಂಡಲ್‌ಗಳು ಮತ್ತು ಸ್ಟೀರಿಂಗ್ ವೀಲ್‌ನಲ್ಲಿ ಕ್ರೋಮ್ ಇನ್ಸರ್ಟ್‌ಗಳನ್ನು ಪಡೆಯುತ್ತದೆ.
ಹಿಂಬದಿಯ ಸೀಟ್
ಇಲ್ಲಿ ನೀವು ಸೀಟುಗಳಲ್ಲಿ ಡ್ಯುಯಲ್-ಟೋನ್ ಫಿನಿಶ್ ಅನ್ನು ಗಮನಿಸಬಹುದು. ಈ ಆವೃತ್ತಿಯು ಕಪ್‌ಹೋಲ್ಡರ್‌ಗಳೊಂದಿಗೆ ಮಡಚಬಹುದಾದ ಸೆಂಟರ್ ಆರ್ಮ್‌ರೆಸ್ಟ್ ಅನ್ನು ಸಹ ನೀಡುತ್ತದೆ.
ತಂತ್ರಜ್ಞಾನಗಳು
ಎಸ್(ಒ) ವೇರಿಯೆಂಟ್‌ವು ಹ್ಯುಂಡೈ ಕ್ರೆಟಾದ ಬಹಳಷ್ಟು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಅದು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ಕೀಲೆಸ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳನ್ನು ಒಳಗೊಂಡಿದೆ. ನೀವು ಆಟೋಮ್ಯಾಟಿಕ್ ವೇರಿಯೆಂಟ್‌ನ ಆಯ್ಕೆ ಮಾಡಿಕೊಂಡರೆ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಡ್ರೈವ್ ಮೋಡ್‌ಗಳು ಮತ್ತು ಪ್ಯಾಡಲ್ ಶಿಫ್ಟರ್‌ಗಳಂತಹ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀವು ಪಡೆಯುತ್ತೀರಿ.
ಇದನ್ನೂ ನೋಡಿ: ಟಾಟಾ ಸಫಾರಿ ರೆಡ್ ಡಾರ್ಕ್ Vs ಟಾಟಾ ಸಫಾರಿ ಡಾರ್ಕ್: ಚಿತ್ರಗಳಲ್ಲಿ ಹೋಲಿಕೆ
ಸುರಕ್ಷತೆಗಾಗಿ, ಈ ವೇರಿಯೆಂಟ್ ಆರು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಮ್‌ಎಸ್), ಎಲ್ಲಾ ಪ್ರಯಾಣಿಕರಿಗೆ ಮೂರು-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಐಎಸ್‌ಒಎಫ್‌ಐಎಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ರಿಯರ್‌ವ್ಯೂ ಕ್ಯಾಮೆರಾವನ್ನು ನೀಡುತ್ತದೆ.
ಪವರ್‌ಟ್ರೇನ್
ಕ್ರೆಟಾದ ಎಸ್(ಒಪ್ಶನಲ್) ವೇರಿಯೆಂಟ್‌ನೊಂದಿಗೆ, ನೀವು 1.5-ಲೀಟರ್ ಪೆಟ್ರೋಲ್ ಎಂಜಿನ್ (115 ಪಿಎಸ್ ಮತ್ತು 144 ಎನ್‌ಎಮ್) ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ (116 ಪಿಎಸ್ ಮತ್ತು 250 ಎನ್‌ಎಮ್) ಆಯ್ಕೆಯನ್ನು ಪಡೆಯುತ್ತೀರಿ. ಈ ಎರಡೂ ಎಂಜಿನ್‌ಗಳು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಯಾಗಿ ಬರುತ್ತವೆ. ಆಟೋಮ್ಯಾಟಿಕ್ ಆಯ್ಕೆಗಳಿಗಾಗಿ, ಪೆಟ್ರೋಲ್ ಎಂಜಿನ್ ಸಿವಿಟಿಯನ್ನು ಪಡೆಯುತ್ತದೆ ಮತ್ತು ಡೀಸೆಲ್ ಎಂಜಿನ್ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿ ಬರುತ್ತದೆ.
ಬೆಲೆ
ಹ್ಯುಂಡೈ ಕ್ರೆಟಾ ಎಸ್(ಒಪ್ಶನಲ್) ವೇರಿಯೆಂಟ್‌ನ ಎಕ್ಸ್ ಶೋರೂಂ ಬೆಲೆಗಳು 14.32 ಲಕ್ಷ ರೂ. ನಿಂದ ಪ್ರಾರಂಭವಾಗುತ್ತವೆ ಮತ್ತು ಇಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳ ಆಧಾರದ ಮೇಲೆ ಎಕ್ಸ್ ಶೋ ರೂಂ ಬೆಲೆ 17.32 ಲಕ್ಷ ರೂ.ವರೆಗೆ ಇರಲಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಯು ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರ್ಡರ್, ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಇಲ್ಲಿ ಇನ್ನಷ್ಟು ಓದಿ: ಕ್ರೆಟಾದ ಆನ್ ರೋಡ್ ಬೆಲೆ