ಎಕ್ಸ್‌ಕ್ಲೂಸಿವ್: ಪ್ರಪ್ರಥಮ ಬಾರಿಗೆ ಕಂಡುಬಂದಿದೆ ಕರ್ವ್‌ನಂತೆಯೇ ಸ್ಟೈಲಿಂಗ್ ಫೀಚರ್‌ಗಳನ್ನು ಹೊಂದಿರುವ ಟಾಟಾ ನೆಕ್ಸಾನ್
ಟಾಟಾ ನೆಕ್ಸಾನ್ 2020-2023 ಗಾಗಿ sonny ಮೂಲಕ ಫೆಬ್ರವಾರಿ 10, 2023 01:53 pm ರಂದು ಪ್ರಕಟಿಸಲಾಗಿದೆ
- 27 Views
- ಕಾಮೆಂಟ್ ಅನ್ನು ಬರೆಯಿರಿ
ಇದು ತಾಜಾ ನೋಟ ಮತ್ತು ಮರುವಿನ್ಯಾಸಗೊಂಡ ಕ್ಯಾಬಿನ್‌ನೊಂದಿಗೆ ಸಂಪೂರ್ಣ ನವೀಕೃತಗೊಂಡಿದೆ
-
ನೆಕ್ಸಾನ್‌ನ ಹೊಸ ಆವೃತ್ತಿಯು ಟಾಟಾದ ಇತ್ತೀಚಿನ ವಿನ್ಯಾಸ ಶೈಲಿಯನ್ನು ಹೊಂದಿದೆ
-
ಪರಿಚಿತ ಸಿಲೂಯೆಟ್‌ಗಳನ್ನು ಹೊಂದಿದ್ದು ಪರಿಷ್ಕೃತ ಫ್ರಂಟ್ ಮತ್ತು ರಿಯರ್ ಪ್ರೊಫೈಲ್‌ಗಳನ್ನು ಹೊಂದಿದೆ.
-
ದೊಡ್ಡ ಡಿಸ್‌ಪ್ಲೇ ಮತ್ತು ಹೆಚ್ಚಿನ ಫೀಚರ್‌ಗಳೊಂದಿಗೆ ನವೀಕೃತ ಕ್ಯಾಬಿನ್ ಅನ್ನು ಸಹ ಹೊಂದಿದೆ
-
ನೆಕ್ಸಾನ್ ಟಾಟಾದ ಹೊಸ 1.2-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಹೊಂದಿದ್ದು, ಡೀಸೆಲ್ ಅನ್ನು ಸಹ ಇರಿಸಿಕೊಳ್ಳುವ ಸಾಧ್ಯತೆಯಿದೆ.
-
ನವೀಕೃತ ನೆಕ್ಸಾನ್ ಇವಿಯಲ್ಲೂ ವಿನ್ಯಾಸ ಮತ್ತು ಫೀಚರ್ ಬದಲಾವಣೆಯನ್ನು ನೋಡಬಹುದು.
- ಬಹುಶಃ ನವೀಕೃತ ನೆಕ್ಸಾನ್ 2024ರಲ್ಲಿ ಕರ್ವ್‌ನ ನಂತರ ಬರಬಹುದು.
ಈ ಟಾಟಾ ನೆಕ್ಸಾನ್ ಗಮನಾರ್ಹವಾದ ಅಪ್‌ಡೇಟ್‌ಗೆ ಕಾರಣವಾಗಿದೆ ಮತ್ತು ಇದರ ಹೊಸ ಆವೃತ್ತಿಯು ತನ್ನ ಬೆಳವಣಿಗೆಯ ಮೂಲಕ ಹೊರ ಜಗತ್ತಿಗೆ ಪರಿಚಿತವಾಗಿರುವಂತಿದೆ. 2024 ರ ನೆಕ್ಸಾನ್‌ನ ಮರೆಮಾಚಲ್ಪಟ್ಟ ಟೆಸ್ಟ್ ಮ್ಯೂಲ್ ಕುರಿತು ನಾವು ಸಾಕಷ್ಟು ಪುರಾವೆಗಳನ್ನು ಪಡೆದಿದ್ದು ಮಾತ್ರವಲ್ಲದೇ ಉತ್ಸುಕರಾಗಲು ಬೇಕಷ್ಟು ವಿಷಯಗಳನ್ನು ಹೊಂದಿದ್ದೇವೆ.
ನವೀಕೃತ ಆದರೂ ಪರಿಚಿತ ವಿನ್ಯಾಸ
ಹೊಸ ನೆಕ್ಸಾನ್ ಅನ್ನು ಅದೇ ರೀತಿಯ ಪ್ರೊಫೈಲ್ ಮತ್ತು ಅದೇ ರೀತಿಯ ಸಿಲೂಯೆಟ್‌ಗಳನ್ನು ಹೊಂದಿರುವುದನ್ನು ಗುರುತಿಸಬಹುದಾದರೂ ಫ್ರಂಟ್ ಮತ್ತು ರಿಯರ್ ಪ್ರೊಫೈಲ್‌ಗಳು ಪ್ರಮುಖ ಸ್ಟೈಲಿಂಗ್ ಬದಲಾವಣೆಗಳನ್ನು ಒಳಗೊಂಡಿದೆ. ನವೀಕೃತ ಎಸ್‌ಯುವಿಯ ಪ್ಲ್ಯಾಟ್‌ಫಾರ್ಮ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲದ ಕಾರಣ ವ್ಹೀಲ್‌ಬೇಸ್‌ನಲ್ಲಿ ಯಾವುದೇ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಿಲ್ಲ.
ಮುಂಭಾಗದಲ್ಲಿ, ಕರ್ವ್ ಮತ್ತು ಸಿಯೆರಾ ಇವಿಯೊಂದಿಗೆ ಆಟೋ ಎಕ್ಸ್‌ಪೋದಲ್ಲಿ ಟಾಟಾ ಕಾನ್ಸೆಪ್ಟ್‌ನಲ್ಲಿ ಪ್ರದರ್ಶಿಸಲ್ಪಟ್ಟ ಅದೇ ಶೈಲಿಯನ್ನು ಹೊಂದಿದೆ. ಎಲ್‌ಇಡಿ ಡಿಆರ್‌ಎಲ್ ಬೊನೆಟ್‌ನಾದ್ಯಂತ ಇರಿಸಲ್ಪಟ್ಟ ಪಟ್ಟಿಯಾಗಿದ್ದು, ಹೆಡ್‌ಲ್ಯಾಂಪ್‌ಗಳನ್ನು ಬಂಪರ್‌ನ ಕೆಳಗಡೆ ಇರಿಸಲಾಗಿದೆ.
ಎಕ್ಸ್‌ಪೋದಲ್ಲಿ ವೀಕ್ಷಿಸಲ್ಪಟ್ಟ ಮತ್ತೊಂದು ವಿನ್ಯಾಸದ ವಿವರವೆಂದರೆ ಸಂಪರ್ಕಿತ ಟೈಲ್ ಲ್ಯಾಂಪ್‌ಗಳನ್ನು ರಿಯರ್ ವಿಂಡ್‌ಶೀಲ್ಡ್‌ನ ಕೆಳಗಡೆ ಎತ್ತರಿಸಿದ ಬೂಟ್‌ಲಿಪ್‌ನ ಉದ್ದಕ್ಕೂ ಇರಿಸಲಾಗಿದೆ.
ಹೊಸ ಇಂಟೀರಿಯರ್
ನಾವು ನೋಡಿರುವ ಸಂಗತಿಗಳಿಂದ, ಹೊಸ ನೆಕ್ಸಾನ್ ನವೀಕೃತ ಕ್ಯಾಬಿನ್ ಅನ್ನು ಹೊಂದಿದೆ ಎಂಬುದನ್ನು ತಿಳಿಯಬಹುದು. ನೆಕ್ಸಾನ್ ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಸ್‌ಯುವಿ ಆಗಿದ್ದರೂ (ಮಾಸಿಕ ಮಾರಾಟದ ಪ್ರಕಾರ) ಇದು ಹೆಚ್ಚು ಅಗತ್ಯವಿರುವ ನವೀಕರಣವಾಗಿದೆ.
ಈ ನವೀಕೃತ ಎಸ್‌ಯುವಿಯು ಟಾಟಾದ ಹೊಸ 10.25-ಇಂಚಿನ ಇನ್‌ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಅನ್ನು ಪಡೆದಿದ್ದು, ಬಹುಶಃ ಅದರ ಪ್ರತಿಸ್ಪರ್ಧಿಗಳಂತೆ ನವೀಕೃತ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಮತ್ತು ಹೆಚ್ಚು ಪ್ರೀಮಿಯಂ ಸೌಕರ್ಯಗಳನ್ನು ಪಡೆದಿದೆ.
ಸಂಬಂಧಿತ: ಆಟೋ ಎಕ್ಸ್‌ಪೋ 2023 ರಲ್ಲಿ ಟಾಟಾ ಹ್ಯಾರಿಯರ್ ಮತ್ತು ಸಫಾರಿಯಲ್ಲಿ ಪ್ರಾರಂಭವಾದ 5 ಹೊಸ ಫೀಚರ್‌ಗಳು
ವಿಶಾಲ ಬಗೆಯ ಪವರ್‌ಟ್ರೇನ್‌ಗಳು
ಭಾರತದಲ್ಲಿ ಪ್ರಸ್ತುತ ಎಲ್ಲಾ ಮೂರು ವಿಧದ ಅಂದರೆ –ಪೆಟ್ರೋಲ್, ಡಿಸೇಲ್, ಮತ್ತು ಎಲೆಕ್ಟ್ರಿಕ್ ಕಾರುಗಳ ಆಯ್ಕೆಯನ್ನು ನೀಡುತ್ತಿರುವುದು ನೆಕ್ಸಾನ್ ಮಾತ್ರವಾಗಿದೆ. ಇದರ ನವೀಕೃತ ರೂಪವು ಅದೇ ಕೊಡುಗೆಯನ್ನು ಮುಂದುವರಿಸುವ ನಿರೀಕ್ಷೆಯಿದೆ. ಹೌದು, ಸದ್ಯಕ್ಕೆ 1.5-ಲೀಟರ್ ಡಿಸೇಲ್ ಇರಬಹುದಾದ ನಿರೀಕ್ಷೆಯಿದ್ದರೂ ನೆಕ್ಸಾನ್‌ನ ಇವಿ ಮಾಡೆಲ್ ಹೆಚ್ಚಿನ ರೇಂಜ್ ಮತ್ತು ಕಾರ್ಯಕ್ಷಮತೆಯನ್ನು ಪಡೆಯಲು ಇನ್ನೂ ಅಧಿಕ ಅಪ್‌ಡೇಟ್ ಅನ್ನು ಪಡೆಯಬಹುದು. ನೆಕ್ಸಾನ್‌ಗಾಗಿ ವಿನ್ಯಾಸ ಮತ್ತು ಫೀಚರ್ ಅಪ್‌ಡೇಟ್‌ಗಳು ನೆಕ್ಸಾನ್ ಇವಿಗೂ ದಾರಿಮಾಡಿಕೊಡುತ್ತವೆ.
ಟಾಟಾ ತನ್ನ ಹೊಸ 1.2-ಲೀಟರ್ TGDi (ಟರ್ಬೋಚಾರ್ಜ್‌ಡ್ ಪೆಟ್ರೋಲ್) ಇಂಜಿನ್‌ನೊಂದಿಗೆ ನವೀಕೃತ ನೆಕ್ಸಾನ್ ಅನ್ನು ಬಿಡುಗಡೆಗೊಳಿಸಬಹುದಾಗಿದ್ದು, ಅದು E20 ಕಂಪ್ಲೈಂಟ್ ಮತ್ತು ಅದೇ ಸ್ಥಾನಾಂತರದೊಂದಿಗೆ ಪ್ರಸ್ತುತ ಯೂನಿಟ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಇದರ ಔಟ್‌ಪುಟ್ ಅನ್ನು 125PS ಮತ್ತು 225Nm ಎಂದು ರೇಟ್ ಮಾಡಲಾಗಿದ್ದು ಡ್ಯುಯಲ್-ಕ್ಲಚ್ ಸ್ವಯಂಚಾಲಿತ ಆಯ್ಕೆಯನ್ನು ಸಹ ನೀಡಲಾಗುವುದು. ಹೋಲಿಸಿದರೆ, ಬಿಡುಗಡೆಯಾದ ನಂತರ ನೆಕ್ಸಾನ್‌ನ ಸ್ವಯಂಚಾಲಿತ ಆಯ್ಕೆ AMT ಆಗಿದೆ (ಪೆಟ್ರೋಲ್ ಮತ್ತು ಡಿಸೈಲ್ ಇಂಜಿನ್ ಎರಡಕ್ಕೂ)
ನಿರೀಕ್ಷಿತ ಬಿಡುಗಡೆ
ಇದು ಹೊಸ ಟಾಟಾ ನೆಕ್ಸಾನ್‌ನ ಮೊದಲ ವೀಕ್ಷಣೆಯಾಗಿದ್ದು, 2024 ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ಧವಾಗಿದೆ ಎಂದು ನಾವು ಊಹಿಸುತ್ತೇವೆ. ಇದು ಕರ್ವ್ ಕಾಂಪ್ಯಾಕ್ಟ್ ಎಸ್‌ಯುವಿಯ ನಂತರ ಬರಬಹುದಾಗಿದೆ. ಈ ಸುಧಾರಿತ ಮತ್ತು ನವೀಕೃತ ನೆಕ್ಸಾನ್ ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯು ಮತ್ತು ಕಿಯಾ ಸೊನೆಟ್ ಗೆ ಪ್ರತಿಸ್ಪರ್ಧಿಯಾಗಿದೆ.
ಚಿತ್ರ ಕೃಪೆ: ರೋಹಿತ್ ಶಿಂಧೆ
ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ : ಟಾಟಾ ನೆಕ್ಸಾನ್ ಎಎಂಟಿ