ಮಾರುತಿ ಫ್ರಾಂಕ್ಸ್ ಮತ್ತು ಬ್ರೆಝಾ ನಡುವಿನ ವ್ಯತ್ಯಾಸಗಳನ್ನು ಅನ್ವೇಷಿಸಿ
ಬ್ರೆಝಾಗೆ ಸ್ಟೈಲಿಶ್ ಪರ್ಯಾಯವಾಗಬಹುದು ಈ ಕಾರುತಯಾರಕರ ಇತ್ತೀಚಿನ ಎಸ್‌ಯುವಿ
ಮಾರುತಿ ತನ್ನ ಶ್ರೇಣಿಗೆ ಮತ್ತೊಂದು ‘ಎಸ್‌ಯುವಿ’ ಅನ್ನು ಸೇರಿಸಿದೆ, ಅದುವೇ ಫ್ರಾಂಕ್ಸ್. ಇದು ಬಲೆನೋ ಮತ್ತು ಗ್ರ್ಯಾಂಡ್ ವಿಟಾರಾದಿಂದ ವಿನ್ಯಾಸ ಅಂಶಗಳನ್ನು ಪಡೆದುಕೊಂಡಿದ್ದು, ಅವೆರಡನ್ನೂ ಒಟ್ಟುಸೇರಿಸಿ ಒಂದು ಸಬ್‌ಕಾಂಪ್ಯಾಕ್ಟ್ ಕ್ರಾಸ್‌ಓವರ್ ಆಗಿದೆ.
ಆಧುನಿಕ ಡಿಸೈನ್ ಲ್ಯಾಂಗ್ವೇಜ್ ಮತ್ತು ಪರಿಪೂರ್ಣವಲ್ಲದ ಭಾರತೀಯ ರಸ್ತೆ ಪರಿಸ್ಥಿತಿಗಳಲ್ಲಿ ಪ್ರಾಯೋಗಿಕ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಆದರೆ ಸಾಂಪ್ರದಾಯಿಕ ಎಸ್‌ಯುವಿ ಆಕಾರವಿಲ್ಲದ, ಬಲೆನೋ ಮತ್ತು ಬ್ರೆಝಾ ನಡುವಿನ ಮಾಡೆಲ್‌ಗಾಗಿ ಹುಡುಕುವವರಿಗಾಗಿ ಫ್ರಾಂಕ್ಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಇದನ್ನೂ ಓದಿ: ಮಾರುತಿ ಫ್ರಾಂಕ್ಸ್ ಮತ್ತು ಬಲೆನೋ ಒಂದೇ ಆದರೂ ವಿಭಿನ್ನವಾಗಿಸುವಂಥ ಸಂಗತಿ
ನಾವು ಈಗಾಗಲೇ ಫ್ರಾಂಕ್ಸ್ ಮತ್ತು ಬಲೆನೋ ನಡುವಿನ ವ್ಯತ್ಯಾಸದ ಬಗ್ಗೆ ಮಾತಾನಾಡಿದ್ದೇವೆ ಮತ್ತು ಈಗ, ಇದು ಮಾರುತಿ ಬ್ರೆಝಾದಿಂದ ಇನ್ನೊಂದು ಸಬ್-ಫೋರ್-ಮೀಟರ್ ಆಫರಿಂಗ್‌ನಿಂದ ಹೇಗೆ ವಿಭಿನ್ನವಾಗಿದೆ ಎಂಬುದನ್ನು ತಿಳಿದುಕೊಳ್ಳುವ ಸಮಯ:
ಕೂಪೆ vs ಬಾಕ್ಸಿ ಡಿಸೈನ್
ಬ್ರೆಝಾ ಬಾಕ್ಸ್ ಆಕಾರದ ಎಸ್‌ಯುವಿಯಾಗಿದ್ದು, ಫ್ರಾಂಕ್ಸ್ ವಿನ್ಯಾಸವು ಕೂಪೆಯಂತೆ ಇದ್ದು ತುಸು ಮೇಲಕ್ಕೆ ಎತ್ತಿದಂತಿದೆ. ಮುಂಭಾಗದಿಂದ ನೋಡುವಾಗ, ಬ್ರೆಝಾ ಪ್ರೀಮಿಯಮ್ ಆಗಿ ಆದರೆ ಸಾಧಾರಣವಾಗಿ ಕಾಣುತ್ತದೆ, ಆದರೆ ಫ್ರಾಂಕ್ಸ್‌ನ ಮುಂಭಾಗವು ಹೆಚ್ಚು ದುಬಾರಿಯಾದ ಗ್ರ್ಯಾಂಡ್ ವಿಟಾರಾವನ್ನು ಅನುಸರಿಸುತ್ತದೆ.
ಬ್ರೆಝಾದ ಸೈಡ್ ಫ್ರೊಫೈಲ್ ಅದರ ಹಿಂದಿನ ಪುನರಾವೃತ್ತಿಯಂತೆ ಕಾಣುತ್ತದೆ ಆದರೆ, ತನ್ನ ವಿನ್ಯಾಸದಿಂದೊಂದಿಗೆ ಹೆಚ್ಚು ಪ್ರಬುದ್ಧವಾಗಿದ್ದರೂ ತುಲನಾತ್ಮಕವಾಗಿ ನೇರ ಅಂಚನ್ನು ಹೊಂದಿದೆ. ಫ್ರಾಂಕ್ಸ್ ಮತ್ತೊಂದೆಡೆ ತನ್ನ ಸ್ಟೈಲ್ ಅನ್ನು ಬಲೆನೋದಿಂದ ಪಡೆದುಕೊಂಡಿದ್ದು, ಸ್ಪೋರ್ಟಿ ಸ್ಲ್ಯಾಂಟಿಗ್ ರೂಫ್‌ಲೈನ್ ಹೊಂದಿದೆ.
ಎರಡೂ ಎಸ್‌ಯುವಿಗಳ ಹಿಂದಿನ ಪ್ರೊಫೈಲ್‌ನಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಇಲ್ಲಿ ಬ್ರೆಝಾ ತನ್ನ ಬಾಕ್ಸಿ ನೋಟವನ್ನು ಹೊಂದಿದ್ದು ಫ್ರಾಂಕ್ಸ್ ತನ್ನ ಹಿಂದಿನ ಪ್ರೊಫೈಲ್ ಅನ್ನು ಬಲೆನೊ ಪ್ರೇರಣೆಯಿಂದ ಪಡೆದಿದೆ. ಬ್ರೆಝಾ ಮಧ್ಯದಲ್ಲಿ ‘ಬ್ರೆಝಾ’ ಅಕ್ಷರದೊಂದಿಗೆ ನಯವಾದ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಪಡೆಯುತ್ತದೆ ಮತ್ತು ಫ್ರಾಂಕ್ಸ್ ವಿಶಿಷ್ಟ ನೋಟ ನೀಡುವ ಕನೆಕ್ಟಿಂಗ್ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ.
ಗಾತ್ರ ವ್ಯತ್ಯಾಸ
ಆಯಾಮಗಳು |
ಬ್ರೆಝಾ |
ಫ್ರಾಂಕ್ಸ್ |
ಉದ್ದ |
3995mm |
3995mm |
ಅಗಲ |
1790mm |
1765mm |
ಎತ್ತರ |
1685mm |
1550mm |
ವ್ಹೀಲ್‌ಬೇಸ್ |
2500mm |
2520mm
|
ಎರಡೂ ಕೊಡುಗೆಗಳು ನಾಲ್ಕು ಮೀಟರ್‌ಗಳಷ್ಟು ಉದ್ದವಿದ್ದು, ಬ್ರೆಝಾ ಹೆಚ್ಚು ಅಗಲವಾಗಿ ಮತ್ತು ಎತ್ತರವಾಗಿದ್ದು, ಚಿಕ್ಕದಾದ ಆದರೆ ಗಮನಾರ್ಹ ಅಂತರ ಹೊಂದಿದೆ. ಅತ್ಯಂತ ದೊಡ್ಡ ವ್ಯತ್ಯಾಸವೆಂದರೆ ಅವುಗಳ ಎತ್ತರದಲ್ಲಿ, ಫ್ರಾಂಕ್ಸ್ ಸ್ಪೋರ್ಟಿಯರ್ ಆಕಾರದಲ್ಲಿದ್ದು ತುಸು ಉದ್ದದ ವ್ಹೀಲ್‌ಬೇಸ್ ಅನ್ನೂ ಹೊಂದಿದೆ.
ಒಳಗಿನ ವಿಭಿನ್ನ ವಿನ್ಯಾಸ
ಎರಡೂ ಕಾರ್‌ಗಳ ಇಂಟೀರಿಯರ್‌ಗೆ ಬಂದಾಗ, ಫ್ರಾಂಕ್ಸ್ ಮತ್ತು ಬ್ರೆಝಾ ವಿಭಿನ್ನ ವಿಧಾನಗಳನ್ನು ಬಳಸಿಕೊಂಡಿವೆ. ಬ್ರೆಝಾ ಡ್ಯುಯಲ್ ಟೋನ್ (ಬ್ಲ್ಯಾಕ್ ಮತ್ತು ಬ್ರೌನ್) ಇಂಟೀರಿಯರ್ ಥೀಮ್ ಹೊಂದಿದ್ದು, ಫ್ರಾಂಕ್ಸ್ ಬ್ಲ್ಯಾಕ್ ಮತ್ತು ಬರ್ಗಂಡಿ ಇಂಟೀರಿಯರ್ ಫಿನಿಷ್‌ನೊಂದಿಗೆ ಬರುತ್ತದೆ. ಸ್ಟೀರಿಂಗ್ ಮತ್ತು ಇನ್ಫೊಟೈನ್‌ಮೆಂಟ್ ಡಿಸ್‌ಪ್ಲೇ ಎರಡರಲ್ಲೂ ಒಂದೇ ರೀತಿ ಇದೆ ಆದರೆ, ಒಟ್ಟಾರೆ ಕ್ಯಾಬಿನ್ ಥೀಮ್ ವಿಭಿನ್ನವಾಗಿದೆ. ಬ್ರೆಝಾದ ಡ್ಯಾಶ್‌ಬೋರ್ಡ್ ಹೆಚ್ಚು ಮೊನಚಾಗಿ ಕಾಣುತ್ತದೆ, ಆದರೆ ಪ್ರಾಂಕ್ಸ್‌ನಲ್ಲಿ ಹೆಚ್ಚು ಬಾಗಿದ ವಿನ್ಯಾಸ ಪಡೆದುಕೊಂಡಿದೆ.
ಪವರಿಂಗ್ ಥೆಮ್ ಅಂದರೇನು
ನಿರ್ದಿಷ್ಟ ವಿವರಣೆಗಳು |
ಬ್ರೆಝಾ |
ಫ್ರಾಂಕ್ಸ್ |
|
ಇಂಜಿನ್ |
1.5-ಲೀಟರ್ ಪೆಟ್ರೋಲ್ |
1.0-ಲೀಟರ್ ಟರ್ಬೋ ಪೆಟ್ರೋಲ್ |
1.2-ಲೀಟರ್ ಪೆಟ್ರೋಲ್ |
ಟ್ರಾನ್ಸ್‌ಮಿಶನ್ |
ಫೈವ್-ಸ್ಪೀಡ್ MT/ ಸಿಕ್ಸ್-ಸ್ಪೀಡ್ AT |
ಫೈವ್-ಸ್ಪೀಡ್ MT/ ಸಿಕ್ಸ್-ಸ್ಪೀಡ್ AT |
ಫೈವ್-ಸ್ಪೀಡ್ MT/ ಫೈವ್-ಸ್ಪೀಡ್ AT |
ಪವರ್ |
103PS |
100PS |
90PS |
ಟಾರ್ಕ್ |
137Nm |
148Nm |
113Nm |
ಬ್ರೆಝಾ 1.5-ಲೀಟರ್‌ನ ದೊಡ್ಡದಾದ ಪೆಟ್ರೋಲ್ ಇಂಜಿನ್ ಹೊಂದಿದ್ದರೆ, ಫ್ರಾಂಕ್ಸ್ ಇದೇ ರೀತಿಯ ಔಟ್‌ಪುಟ್ ಅಂಕಿಅಂಶಗಳೊಂದಿಗೆ 1.0 ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ. ಎರಡೂ ಇಂಜಿನ್‌ಗಳೂ ಒಂದೇ ರೀತಿಯ ಟ್ರಾನ್ಸ್‌ಮಿಶನ್ ಆಯ್ಕೆಗಳನ್ನು ಹೊಂದಿವೆ:ಫೈವ್ ಸ್ಪೀಡ್ ಮ್ಯಾನುವಲ್ ಮತ್ತು ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್. ಆದರೆ ಪ್ರಾಂಕ್ಸ್ ಬಲೆನೋದ 1.2-ಲೀಟರ್ ಪೆಟ್ರೋಲ್ ಇಂಜಿನ್ ಹಾಗೂ ಫೈವ್-ಸ್ಪೀಡ್ ಮ್ಯಾನುವಲ್ ಮತ್ತು AMT ಆಯ್ಕೆಗಳನ್ನು ಹೊಂದಿದೆ.
ಫೀಚರ್-ಪ್ಯಾಕ್ಡ್
ಇಲ್ಲಿ ಪ್ರಾಯಶಃ ಬ್ರೆಝಾ ಮತ್ತು ಫ್ರಾಂಕ್ಸ್ ಬಹುತೇಕ ಒಂದೇ ರೀತಿಯಾಗಿವೆ. ಎರಡರಲ್ಲಿಯೂ ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇನೊಂದಿಗೆ ಒಂಭತ್ತು-ಇಂಚಿನ ಟಚ್‌ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಮ್, ARKAMYS ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಹೆಡ್ಸ್-ಅಪ್ ಡಿಸ್‌ಪ್ಲೇ ಬರುತ್ತದೆ. ಅಲ್ಲದೇ ಬ್ರೆಝಾದಲ್ಲಿ ಸನ್‌ರೂಫ್ ಮತ್ತು ಆ್ಯಂಬಿಯೆಂತಟ್ ಲೈಟಿಂಗ್ ಬರುತ್ತದೆ ಮತ್ತು ಫ್ರಾಂಕ್ಸ್‌ನಲ್ಲಿ ಇದು ಇರುವುದಿಲ್ಲ.
ಸುರಕ್ಷತೆಯ ವಿಚಾರಕ್ಕೆ ಬಂದಾಗ, ಎರಡರಲ್ಲಿಯೂ ಆರು ಏರ್‌ಬ್ಯಾಗ್‌ಗಳು ಬರುತ್ತದೆ ಮತ್ತು ಬ್ರೆಝಾದಲ್ಲಿ ಟಾಪ್ ಎಂಡ್‌ಗಳಿಗೆ ಸೀಮಿತವಾಗಿದ್ದು, ಫ್ರಾಂಕ್ಸ್‌ನಲ್ಲಿ ಇದು ಸ್ಟಾಂಡರ್ಡ್ ಆಗಿದೆ. ಇತರ ಸುರಕ್ಷತೆಯ ಫೀಚರ್‌ಗಳಾದ ABS ಮತ್ತು EBD, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್ (ESP), ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು 360-ಡಿಗ್ರಿ ಕ್ಯಾಮರಾ ಎರಡರಲ್ಲಿಯೂ ಬರುತ್ತದೆ.
ಬೆಲೆಗಳು ಏನು ಹೇಳುತ್ತವೆ
ಬೆಲೆ |
|
ಬ್ರೆಝಾ |
ರೂ 7.99 ಲಕ್ಷದಿಂದ ರೂ 13.96 (ಎಕ್ಸ್-ಶೋರೂಂ) |
ಫ್ರಾಂಕ್ಸ್ |
ರೂ 8 ಲಕ್ಷದಿಂದ (ನಿರೀಕ್ಷಿತ ಎಕ್ಸ್-ಶೋರೂಂ) |
ಫ್ರಾಂಕ್ಸ್‌ನ ಬೆಲೆಗಳು ಇನ್ನೂ ಬಹಿರಂಗವಾಗಿಲ್ಲವಾದರೂ, ಅವುಗಳು ರೂ 8 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ. ಇದು ಬ್ರೆಝಾ ಬೆಲೆಗೆ ಸಂಬಂಧಿಸಿದಂತೆ ಅದೇ ಶ್ರೇಣಿಯಲ್ಲೇ ಇರುತ್ತದೆ, ಆದರೆ, ಅದರ ಟಾಪ್ ಎಂಡ್‌ಗಳು ಬ್ರೆಝಾದ ಟಾಪ್ ಎಂಡ್‌ಗಳಿಗಿಂತ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಇರುವ ಸಾಧ್ಯತೆ ಇದೆ.
ಆಟೋ ಎಕ್ಸ್‌ಪೋ 2023ಯ ಇನ್ನಷ್ಟು ವಿಷಯಗಳನ್ನು ಇಲ್ಲಿ ಪರಿಶೀಲಿಸಿ
ಫ್ರಾಂಕ್ಸ್, ನೆಕ್ಸಾದ ಕೊಡುಗೆಯಾಗಿರುತ್ತದೆ ಆದರೆ ಬ್ರೆಝಾವು ಅರೆನಾ ಉತ್ಪನ್ನವಾಗಿರುತ್ತದೆ. ಇದು ಖರೀದಿದಾರರಿಗೆ ಕ್ರಾಸ್ಓವರ್ ಎಸ್‌ಯುವಿ ರೂಪದಲ್ಲಿ ಹೊಸ ಆಯ್ಕೆಯನ್ನು ನೀಡುತ್ತದೆ ಮತ್ತು ಪ್ರೀಮಿಯಮ್ ಹ್ಯಾಚ್ ಬ್ಯಾಕ್, ಬಲೆನೋ ಮತ್ತು ಬ್ರೆಝಾ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ನಡುವಿನ ಅಂತರವನ್ನು ತುಂಬುತ್ತದೆ. ಕೆಳಗಿನ ಕಮೆಂಟ್ ಸೆಕ್ಷನ್‍ನಲ್ಲಿ ನೀವು ಫ್ರಾಂಕ್ಸ್ ಬಗ್ಗೆ ಏನಂದುಕೊಂಡಿದ್ದೀರಿ ಎಂಬುದರ ಬಗ್ಗೆ ತಿಳಿಯೋಣ.
ಇನ್ನಷ್ಟು ಓದಿ: ಬ್ರೆಝಾದ ಆನ್ ರೋಡ್ ಬೆಲೆ