ಮಾರುತಿ ಜಿಮ್ನಿ ಸಮ್ಮಿಟಿ ಸೀಕರ್ ಆಕ್ಸೆಸರಿ ಪ್ಯಾಕ್‌ನ ಬಗ್ಗೆ ಮಾಹಿತಿಯನ್ನು ಈ 8 ಚಿತ್ರಗಳಿಂದ ಪಡೆದುಕೊಳ್ಳೋಣ
ಹೆಚ್ಚಿನ ಲಗೇಜುಗಳನ್ನು ಇರಿಸಲು ಮತ್ತು ಹೆಚ್ಚಿನ ಅನುಕೂಲಕ್ಕಾಗಿ ಅಥವಾ ನಿಮ್ಮ ಜಿಮ್ನಿಯ ವಿನ್ಯಾಸವನ್ನು ಹೆಚ್ಚಿಸಲು ನೀವು ಆಕ್ಸೆಸರಿಗಳನ್ನು ಖರೀದಿಸಬಹುದು
ಮಾರುತಿ ಜಿಮ್ನಿ ಖರೀದಿಸಲು ತಯಾರಾದ ಅನೇಕ ಗ್ರಾಹಕರು ತಮ್ಮ ಹೊಚ್ಚಹೊಸ ಲೈಫ್‌ಸ್ಟೈಲ್ ಆಫ್-ರೋಡರ್ ಅನ್ನು ವಿಶೇಷವಾಗಿಸಲು ಯೋಜನೆಯನ್ನು ಮಾಡಿರಬಹುದು. ಆದರೆ ನಿಮ್ಮ ಸ್ಥಳೀಯ ಮಾರ್ಪಾಡು ಅಂಗಡಿಗೆ ಹೋಗುವ ಮೊದಲು, ನೀವು ಮಾರುತಿ ಸುಜುಕಿಯಿಂದ ನೇರವಾಗಿ ಖರೀದಿಸಬಹುದಾದ ಆಕ್ಸೆಸರಿಗಳ ಬಗ್ಗೆ ತಿಳಿದುಕೊಳ್ಳಿ. ಮಾರುಕಟ್ಟೆಯಲ್ಲಿ ಜಿಮ್ನಿಯನ್ನು ಪರಿಚಯಿಸುವುದಕ್ಕಿಂತ ಮೊದಲು, ಮಾರುತಿಯು ಸಮ್ಮಿತ್ ಸೀಕರ್ ಎಂಬ ಆಕ್ಸೆಸರಿ ಪ್ಯಾಕ್‌ನೊಂದಿಗೆ ಕಿಟ್ ಔಟ್ ಆವೃತ್ತಿಯನ್ನು ಪ್ರದರ್ಶಿಸಿದೆ.
ಜಿಮ್ನಿಯ ಈ ಆಕ್ಸೆಸರೈಸ್ಡ್ ಆವೃತ್ತಿಯು ಹಳದಿ ಶೇಡ್ ಅನ್ನು ಪಡೆದುಕೊಂಡಿದೆ ಮತ್ತು ರಗಡ್ ಲುಕ್‌ಗಾಗಿ ಕಸ್ಟಮೈಸೇಶನ್ ಆಯ್ಕೆಗಳನ್ನು ಪಡೆಯುತ್ತದೆ.
ಮುಂಭಾಗದಲ್ಲಿರುವ ಸ್ಕಿಡ್ ಪ್ಲೇಟ್ ಸ್ಟೈಲಿಶ್ ಗಾರ್ನಿಶ್ ಅನ್ನು ಪಡೆಯುತ್ತದೆ ಮತ್ತು ಇದು ಪ್ರಬಲ ಲೋಹದ ಲುಕ್ ಅನ್ನು ನೀಡುತ್ತದೆ.
ಜಿಮ್ನಿಯಲ್ಲಿ ಬಾಡಿ ಕ್ಲಾಡಿಂಗ್ ಪ್ರಮಾಣಿತವಾಗಿರುತ್ತದೆ. ಅಲ್ಲದೇ ನೀವು ಆಕ್ಸೆಸರಿಗಳ ಭಾಗವಾಗಿ ಹೆಚ್ಚುವರಿ ಡೋರ್ ಕ್ಲಾಡಿಂಗ್ ಅನ್ನು ಸಹ ಪಡೆಯಬಹುದು. ಇದಲ್ಲದೆ, 'ಜಿಮ್ನಿ' ಎಂದು ಕೆತ್ತಲಾದ ಡಾರ್ಕ್ ಕ್ರೋಮ್ ಅಪ್ಲಿಕ್ ಕೂಡ ಇದೆ. ಇದರೊಂದಿಗೆ ಮೌಂಟೇನ್ಸ್ ಡೆಕಾಲ್‌ಗಳನ್ನು ಕೂಡ ಇದರಲ್ಲಿ ನೀಡಲಾಗಿದ್ದು, ಇದು ಗುಡ್ಡಗಾಡು ಪ್ರದೇಶಗಳಲ್ಲಿ ಓಡಿಸಲು ಯೋಗ್ಯವಾದ ಕಾರು ಎಂದು ತೋರಿಸುತ್ತದೆ.
ಸಮ್ಮಿಟ್ ಸೀಕರ್ ಪ್ಯಾಕ್ ಡೋರ್ ವೈಸರ್‌ಗಳು ಮತ್ತು ಒಆರ್‌ವಿಎಂಗಳ ಗಾರ್ನಿಶ್ ಅನ್ನೂ ಸಹ ಪಡೆಯುತ್ತದೆ.
ಇದನ್ನೂ ಓದಿ: ಮಾರುತಿ ಜಿಮ್ನಿ ವಿರುದ್ಧ ಮಹೀಂದ್ರಾ ಥಾರ್ ಪೆಟ್ರೋಲ್ - ಇಂಧನ ದಕ್ಷತೆಯ ಅಂಕಿಅಂಶಗಳ ಹೋಲಿಕೆ
ಹಿಂಭಾಗದಲ್ಲಿ, ಬೂಟ್-ಮೌಂಟೆಡ್ ಸ್ಪೇರ್ ವ್ಹೀಲ್ ಕವರ್‌ಗಾಗಿ ನೀವು ಮತ್ತೊಂದು ಕಾಸ್ಮೆಟಿಕ್ ಗಾರ್ನಿಶ್ ಅನ್ನು ಪಡೆಯುತ್ತೀರಿ. ಆದಾಗ್ಯೂ, ಇದು ಸಮ್ಮಿಟ್ ಸೀಕರ್ ಪ್ಯಾಕ್‌ನ ಭಾಗವಲ್ಲ.
ಇದಲ್ಲದೇ, ಜಿಮ್ನಿಯಲ್ಲಿ ಪ್ರದರ್ಶಿಸಲಾದ ಇತರ ಆಕ್ಸೆಸರಿಗಳಲ್ಲಿ ರೂಫ್ ರೈಲ್‌ಗಳೊಂದಿಗೆ ರೂಫ್ ಮೌಂಟೆಡ್ ಲಗೇಜ್ ರ್ಯಾಕ್ ಸೇರಿವೆ.
ಹೆಚ್ಚುವರಿಯಾಗಿ, ಗ್ರಾಹಕರು ರೂಫ್ ರೈಲ್‌ಗಳಿಂದ ಬೇರ್ಪಟ್ಟಂತೆ ಕಂಡುಬರುವ ಟೆಂಟ್/ಮೇಲಾವರಣವನ್ನು ಸಹ ಆಯ್ಕೆ ಮಾಡಬಹುದು. ಈ ಸೆಟಪ್‌ನೊಂದಿಗೆ, ಹವಾಮಾನವು ಹೇಗಿದ್ದರೂ ನೀವು ಸೂಕ್ತ ಕ್ಯಾಂಪಿಂಗ್ ಅನುಭವವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಕ್ಯಾಬಿನ್ ಅನ್ನು ಕೆಲವು ಗಾರ್ನಿಶ್ ಮತ್ತು ಸಿಲ್ ಪ್ಲೇಟ್‌ಗಳೊಂದಿಗೆ ಹೆಚ್ಚು ಸ್ಟೈಲಿಶ್ ಮಾಡಲಾಗಿದೆ. ನೀವು ಬಯಸಿದರೆ, ನೀವು ವಿವಿಧ ರೀತಿಯ ಸೀಟ್ ಕವರ್‌ಗಳನ್ನು ಸಹ ಆಯ್ಕೆ ಮಾಡಬಹುದು, ಅದರ ಚಿತ್ರವನ್ನು ಮೇಲೆ ನೀಡಲಾಗಿದೆ. ಕಪ್ಪು ಕಂದು ಬಣ್ಣದ ಥೀಮ್‌ನೊಂದಿಗೆ ಲೆಥೆರೆಟ್ ಅಪ್‌ಹೋಲೆಸ್ಟರಿಯನ್ನು ನೀಡಲಾಗಿದೆ. ಇದಲ್ಲದೇ ಕಂದು ಮತ್ತು ಕಪ್ಪು ಬಣ್ಣದ ಸೀಟ್ ಕುಶನ್‌ಗಳನ್ನೂ ಗಮನಿಸಬಹುದು.
ಆಕ್ಸೆಸರಿಗಳು ಮತ್ತು ಸಮ್ಮಿತ್ ಸೀಕರ್ ಪ್ಯಾಕ್‌ನ ಬೆಲೆಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಈ ಎಲ್ಲಾ ಆಕ್ಸೆಸರಿಗಳು ನಿಮ್ಮ ಜಿಮ್ನಿಯ ಬೆಲೆಯನ್ನು 70,000 ರೂ.ವರೆಗೆ ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಜಿಮ್ನಿ ಎಸ್‌ಯುವಿ 105PS 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ ಮತ್ತು 4WD ಪ್ರಮಾಣಿತವಾಗಿದೆ. ಈ ಎಂಜಿನ್‌ನೊಂದಿಗೆ, 5 ಸ್ಪೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಟಾರ್ಕ್ ಕನ್ವೆರ್ಟರ್ ಆಟೋಮ್ಯಾಟಿಕ್ ಆಯ್ಕೆಯನ್ನು ನೀಡಲಾಗುವುದು. ಈ ಆಫ್ ರೋಡರ್ ಕಾರು ಜೂನ್ 2023 ರ ಆರಂಭದಲ್ಲಿ ಬಿಡುಗಡೆಯಾಗಬಹುದು ಮತ್ತು ಬೆಲೆಗಳು ಸುಮಾರು ರೂ. 10 ಲಕ್ಷದಿಂದ (ಎಕ್ಸ್ ಶೋ ರೂಂ) ಆರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.