ಭಾರತದಲ್ಲಿ ಪ್ರಥಮ ಬಾರಿಗೆ ಪರೀಕ್ಷೆಗೆ ಸಜ್ಜಾದ ಫೇಸ್ ಲಿಫ್ಟೆಡ್ ಹ್ಯುಂಡೈ ಕ್ರೆಟಾ
ಹುಂಡೈ ಕ್ರೆಟಾ ಗಾಗಿ rohit ಮೂಲಕ ಜುಲೈ 04, 2023 05:25 pm ರಂದು ಪ್ರಕಟಿಸಲಾಗಿದೆ
- 35 Views
- ಕಾಮೆಂಟ್ ಅನ್ನು ಬರೆಯಿರಿ
ಫೇಸ್ ಲಿಫ್ಟೆಡ್ ಹ್ಯುಂಡೈ ಕ್ರೆಟಾ 2024 ರ ಆರಂಭದಲ್ಲಿ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ
-
ಸ್ಪೈ ವೀಡಿಯೊದಲ್ಲಿ ಕ್ರೋಮ್ ಸ್ಟಡ್‌ಗಳು ಮತ್ತು ಹೊಸ 18-ಇಂಚಿನ ಆಲಾಯ್ ವ್ಹೀಲ್‌ಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಗ್ರಿಲ್ ಕಂಡುಬಂದಿವೆ.
-
ಎಸ್‌ಯುವಿ ಹೊಸ ಎಲ್‌ಇಡಿ ಲೈಟಿಂಗ್ ಮತ್ತು ಟ್ವೀಕ್ ಮಾಡಿದ ಬಂಪರ್‌ಗಳನ್ನು ಸಹ ಪಡೆಯಬಹುದು.
-
ಒಳಭಾಗದಲ್ಲಿ, ಇದು ಹೊಸ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಹೀಟೆಡ್ ಸೀಟುಗಳನ್ನು ಹೊಂದಿರಬಹುದು.
-
ಹೆಚ್ಚುವರಿ ಹೊಸ ಫೀಚರ್‌ಗಳು 360-ಡಿಗ್ರಿ ಕ್ಯಾಮರಾ ಮತ್ತು ADAS ಅನ್ನು ಒಳಗೊಂಡಿರುತ್ತದೆ.
-
ಹೊಸ ಕಿಯಾ ಸೆಲ್ಟೋಸ್‌ನಲ್ಲಿ ಇರುವಂತಹ 1.5-ಲೀಟರ್ ಪೆಟ್ರೋಲ್, ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಪಡೆಯುತ್ತದೆ.
-
ಬೆಲೆಗಳು 10.50 ಲಕ್ಷ ರೂ.ದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋರೂಂ).
2021 ರ ಅಂತ್ಯದ ವೇಳೆಗೆ, ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ನವೀಕೃತ ಹ್ಯುಂಡೈ ಕ್ರೆಟಾವನ್ನು ಬಿಡುಗಡೆ ಮಾಡಲಾಯಿತು. ಕಂಪನಿಯು ಅದೇ ಇಂಡೋನೇಷಿಯನ್ ಮಾದರಿಯನ್ನು ಭಾರತದಲ್ಲಿಯೂ ಬಿಡುಗಡೆ ಮಾಡುತ್ತದೆ ಎಂಬ ಊಹಾಪೋಹಗಳು ಹರಡಿದ್ದವು, ಆದರೆ ನಂತರ ಮಾರುಕಟ್ಟೆಗೆ ಅನುಗುಣವಾಗಿ ಹಲವಾರು ಮಾರ್ಪಾಡುಗಳೊಂದಿಗೆ ಹೊಸ ಮಾಡೆಲ್ ಅನ್ನು ಇಲ್ಲಿ ಬಿಡುಗಡೆ ಮಾಡಲಾಗುತ್ತದೆ ಎನ್ನುವುದನ್ನು ಖಚಿತಪಡಿಸಲಾಯಿತು. ಈಗ ನವೀಕೃತ ಕ್ರೆಟಾದ ಸ್ಪೈಡ್ ಟೆಸ್ಟಿಂಗ್ ಅನ್ನು ಪ್ರಥಮ ಬಾರಿಗೆ ಭಾರತದ ರಸ್ತೆಗಳಲ್ಲಿ ನಡೆಸಲಾಗಿದೆ.
ವೀಡಿಯೊದಲ್ಲಿ ಏನನ್ನು ಗಮನಿಸಲಾಗಿದೆ?
ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಮಾಡೆಲ್ ಕಪ್ಪು ಕವರ್ ಧರಿಸಿ ಕಾಣಿಸಿಕೊಂಡಿದೆ, ಆದರೂ ನವೀಕೃತ ಕ್ರೆಟಾ ಕ್ರೋಮ್ ಸ್ಟಡ್‌ಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಗ್ರಿಲ್ ಅನ್ನು ಹೊಂದಿರುತ್ತದೆ ಎಂದು ವೀಡಿಯೊದಿಂದ ದೃಢಪಟ್ಟಿದೆ. ಇದು ಮುಂಬರುವ ಹ್ಯುಂಡೈ ಎಸ್‌ಯುವಿ ಹೊಸ ಜೋಡಿ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಮರುವಿನ್ಯಾಸಗೊಳಿಸಲಾದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ರೆಡ್‌ಡ್ ಫ್ರಂಟ್ ಬಂಪರ್ ಅನ್ನು ಪಡೆಯಬಹುದು ಎನ್ನುವುದನ್ನು ಸೂಚಿಸುತ್ತದೆ.
2024 ಕ್ರೆಟಾದ ಸೈಡ್ ಪ್ರೊಫೈಲ್‌ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ, ದೊಡ್ಡದಾದ 18-ಇಂಚಿನ ಅಲಾಯ್ ವ್ಹೀಲ್‌ಗಳನ್ನು (ಅಲ್ಕಾಜರ್‌ನಿಂದ ಎರವಲು ಪಡೆದಿರಬಹುದು) ಜೊತೆಗೆ ರಿಯರ್ ಡಿಸ್ಕ್ ಬ್ರೇಕ್‌ಗಳು ಮತ್ತು ORVM-ಮೌಂಟೆಡ್ ಸೈಡ್ ಕ್ಯಾಮೆರಾಗಳೊಂದಿಗೆ ಇದರಲ್ಲಿ 360 ಡಿಗ್ರಿ ಕ್ಯಾಮೆರಾ ಸೆಟಪ್ ನೀಡಬಹುದೆಂಬ ಸೂಚನೆಗಳಿವೆ. ಈ ವಾಹನದ ಹಿಂಬದಿಯ ಬದಲಾವಣೆಗಳ ವಿವರಗಳು ಇನ್ನೂ ಬಹಿರಂಗವಾಗಿಲ್ಲ, ಆದರೆ ಅವುಗಳಲ್ಲಿ ಸಂಪರ್ಕಿತ ಎಲ್ಇಡಿ ಟೈಲೈಟ್‌ಗಳು ಮತ್ತು ಮಾರ್ಪಡಿಸಿದ ಬಂಪರ್ ಸೇರಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಬಿಡುಗಡೆಗೆ ಮುಂಚಿತವಾಗಿ ಉತ್ಪಾದನಾ ಶ್ರೇಣಿಯನ್ನು ಪ್ರಾರಂಭಿಸುತ್ತಿರುವ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ
ನಿರೀಕ್ಷಿತ ಒಳಭಾಗದ ಅಪ್‌ಡೇಟ್‌ಗಳು
ಸ್ಪೈ ವೀಡಿಯೊದಲ್ಲಿ ಅಪ್‌ಡೇಟ್ ಮಾಡಲಾದ ಎಸ್‌ಯುವಿ ಕಾರಿನ ಒಳಭಾಗದ ವಿವರಗಳು ದೊರೆತಿಲ್ಲವಾದರೂ, ಕ್ರೆಟಾ ನವೀಕೃತ ಹೊಸ ವಿನ್ಯಾಸದ ಡ್ಯಾಶ್‌ಬೋರ್ಡ್ ಲೇಔಟ್ ಮತ್ತು ಹೊಸ ಸೀಟ್ ಅಪ್‌ಹೋಲೆಸ್ಟರಿಯನ್ನು ನೀಡಬಹುದೆನ್ನುವುದು ನಮ್ಮ ನಿರೀಕ್ಷೆಯಾಗಿದೆ.
360-ಡಿಗ್ರಿ ಕ್ಯಾಮೆರಾದ ಹೊರತಾಗಿ, ನವೀಕೃತ ಕ್ರೆಟಾ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (ಅಲ್ಕಾಜರ್‌ನಂತೆಯೇ), ಹೀಟೆಡ್ ಸೀಟುಗಳು ಮತ್ತು ಡ್ಯಾಶ್‌ಕ್ಯಾಮ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದರ ಹೊರತಾಗಿ, ಇದು 10.25-ಇಂಚಿನ ಟಚ್‌ಸ್ಕ್ರೀನ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳಂತಹ ಪ್ರಸ್ತುತ ಮಾಡೆಲ್‌ನಿಂದ ಫೀಚರ್‌ಗಳನ್ನು ಪಡೆದುಕೊಳ್ಳುತ್ತದೆ.
ಸುರಕ್ಷತೆಗಾಗಿ, ಹೊಸ ವೆರ್ನಾದಲ್ಲಿ ಕಂಡುಬರುವಂತಹ ಅಡ್ವಾನ್ಸ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಂ (ADAS) ಅನ್ನು ನೀಡಲಾಗುವುದು, ಇದು ಲೇನ್-ಕೀಪ್ ಅಸಿಸ್ಟ್, ಆಟೋನೋಮಸ್ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ಒಳಗೊಂಡಿರುತ್ತದೆ. ಇದಲ್ಲದೆ, ಇದು ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆಂಕಾರೇಜ್ ಮತ್ತು ರಿವರ್ಸ್ ಕ್ಯಾಮೆರಾದಂತಹ ಸುರಕ್ಷತಾ ಫೀಚರ್‌ಗಳನ್ನು ಸಹ ಪಡೆಯುತ್ತದೆ.
ಸಾಕಷ್ಟು ಎಂಜಿನ್-ಗೇರ್ ಬಾಕ್ಸ್ ಆಯ್ಕೆಗಳು
ನವೀಕೃತ ಕ್ರೆಟಾ ತನ್ನ ಪವರ್‌ಟ್ರೇನ್‌ಗಳನ್ನು ಕಿಯಾ ಸೆಲ್ಟೋಸ್‌ನೊಂದಿಗೆ ಹಂಚಿಕೊಳ್ಳುವುದನ್ನು ಮುಂದುವರಿಸುತ್ತದೆ:
ನಿರ್ದಿಷ್ಟ ವಿವರಣೆ |
1.5-ಲೀಟರ್ N.A. ಪೆಟ್ರೋಲ್ |
1.5- ಲೀಟರ್ ಟರ್ಬೊ-ಪೆಟ್ರೋಲ್ |
1.5- ಲೀಟರ್ ಡೀಸೆಲ್ |
ಪವರ್ |
115PS |
160PS |
116PS |
ಟಾರ್ಕ್ |
144Nm |
253Nm |
250Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್/ CVT |
6- ಸ್ಪೀಡ್ iMT/ 7- ಸ್ಪೀಡ್ DCT |
6- ಸ್ಪೀಡ್ MT/ 6- ಸ್ಪೀಡ್ AT |
ಬಿಡುಗಡೆ, ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ ಮುಂದಿನ ವರ್ಷದ ಆರಂಭದಲ್ಲಿ ನವೀಕೃತ ಕ್ರೆಟಾವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ, ಇದರ ಬೆಲೆಗಳು 10.50 ಲಕ್ಷ ರೂ.ದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ (ಎಕ್ಸ್ ಶೋರೂಂ). ಈ ಎಸ್‌ಯುವಿ ಕಾರು ಮಾರುತಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, MG ಆಸ್ಟರ್, ಫೋಕ್ಸ್‌ವ್ಯಾಗನ್ ಟೈಗನ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಮುಂಬರುವ ಹೋಂಡಾ ಎಲಿವೇಟ್ ಮತ್ತು ಸಿಟ್ರೊಯೆನ್ C3 ಏರ್‌ಕ್ರಾಸ್‌ಗಳೊಂದಿಗೆ ಸ್ಪರ್ಧಿಸಲಿದೆ.
ಇನ್ನಷ್ಟು ಓದಿ: ಕ್ರೆಟಾ ಆನ್ ರೋಡ್ ಬೆಲೆ