ಭಾರೀ ಡಿಸೈನ್ ಬದಲಾವಣೆಯೊಂದಿಗೆ ಮತ್ತೊಮ್ಮೆ ಕಂಡುಬಂದ ನವೀಕೃತ ಟಾಟಾ ನೆಕ್ಸಾನ್
ಟಾಟಾ ನೆಕ್ಸಾನ್ ಗಾಗಿ rohit ಮೂಲಕ ಮಾರ್ಚ್ 07, 2023 05:32 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ನವೀಕೃತ SUV ಯು ಸಂಪರ್ಕಿತ ಟೈಲ್‌ಲೈಟ್‌ನೊಂದಿಗೆ ಕಾರುಗಳ ಪ್ರಸ್ತುತ ಟ್ರೆಂಡ್‌ಗೆ ಸೇರ್ಪಡೆಯಾಗುತ್ತಿದೆ.
-
ಟಾಟಾ ತುಂಬಾ ನವೀಕರಣಗೊಂಡ ನೆಕ್ಸಾನ್ ಅನ್ನು ಸಿದ್ಧಪಡಿಸಿದ್ದು, ಇದು 2024 ರಲ್ಲಿ ಬಿಡುಗಡೆಯಾಗಲಿದೆ.
-
ಇದು 2023 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲ್ಪಟ್ಟ ಕರ್ವ್ ಮತ್ತು ಸಿಯೆರಾ EV ಯ ಸ್ಟೈಲಿಂಗ್‌ನಿಂದ ಪ್ರೇರಣೆ ಪಡೆದಿದೆ.
-
ದೊಡ್ಡದಾದ 10.25-ಇಂಚಿನ ಡಿಸ್‌ಪ್ಲೇಯೊಂದಿಗೆ ಇಂಟೀರಿಯರ್ ಸಹ ಬದಲಾವಣೆಗೊಳ್ಳಲಿದೆ.
-
ಹ್ಯಾರಿಯರ್/ಸಫಾರಿ ಜೋಡಿಯಿಂದ ಪಡೆಯಲ್ಪಟ್ಟ ಕೆಲವು ADAS ಫೀಚರ್‌ಗಳೊಂದಿಗೆ ಟಾಟಾ ಇದನ್ನು ಸಜ್ಜುಗೊಳಿಸಬಹುದು.
-
ಡಿಸೇಲ್ ಪುನರಾವರ್ತನೆಯನ್ನು ಹಾಗೆಯೇ ಉಳಿಸಿಕೊಂಡು, ಹೊಸ 1.2-ಲೀಟರ್ ಟರ್ಬೋ-ಪೆಟ್ರೋಲ್ ಯೂನಿಟ್ ಅನ್ನು ಪಡೆಯಬಹುದು.
-
ರೂ. 8 ಲಕ್ಷಗಳಷ್ಟು (ಎಕ್ಸ್-ಶೋರೂಮ್) ಬೆಲೆ ನಿಗದಿಪಡಿಸಬಹುದೆಂದು ನಿರೀಕ್ಷಿಸಲಾಗಿದೆ.
ಈ ವರ್ಷದ ಆರಂಭದಲ್ಲಿ, ನವೀಕೃತ ಟಾಟಾ ನೆಕ್ಸಾನ್‌ನ ಸ್ಪೈ ಶಾಟ್‌ಗಳ ಇಮೇಜ್‌ಗಳನ್ನು ನಿಮಗಾಗಿ ಇಲ್ಲಿ ತೋರಿಸಿದ್ದೆವು. ಈಗ 2024 ರಲ್ಲಿ ಬಿಡುಗಡೆಗೊಳಿಸುವ ಮೊದಲು ಹೊಸ ಮಾಡೆಲ್ ಅನ್ನು ಮತ್ತೊಮ್ಮೆ ಪರೀಕ್ಷಿಸಲಾಗಿದೆ.
ಕಂಡುಬಂದ ಹೊಸ ವಿವರಗಳು
ಇತ್ತೀಚಿನ ಟ್ರೆಂಡ್‌ಗೆ ಅನುಗುಣವಾಗಿ ಈ ನವೀಕೃತ ನೆಕ್ಸಾನ್ ಸಂಪರ್ಕಿತ ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ ಎಂಬುದನ್ನು ಹೊಸ ಟೆಸ್ಟ್ ಮ್ಯೂಲ್ ಬಹಿರಂಗಪಡಿಸುತ್ತದೆ. ಪ್ರಸ್ತುತ ಮಾಡೆಲ್‌ನಲ್ಲಿರುವ “Y” ತರಹದ ವಿನ್ಯಾಸದ ಪರವಾಗಿ ಈ ಸಬ್-4m SUV ಯು “X-ಶೇಪ್” ಲೈಟಿಂಗ್ ಎಲಿಮೆಂಟ್‌ಗಳನ್ನು ಪಡೆಯುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.
ಇತ್ತೀಚೆಗೆ ಕಂಡುಬಂದ ಇಮೇಜ್‌ಗಳು ಟಾಟಾ SUV ಯ ನವೀಕೃತ ಅಲಾಯ್ ವ್ಹೀಲ್ ವಿನ್ಯಾಸದ ಕಿರು ನೋಟವನ್ನು ನೀಡುತ್ತದೆ. ಇದರ ಹೊರತಾಗಿ ಇದರಲ್ಲಿ ಇನ್ನಾವುದೇ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಲಾಗಿಲ್ಲ. ಮುಂಭಾಗದಲ್ಲಿ, ಈ ನವೀಕೃತ ನೆಕ್ಸಾನ್ ಟಾಟಾ ಕರ್ವ್- ಮತ್ತು ಸಿಯೆರಾ EV-ತರಹದ ವಿನ್ಯಾಸವನ್ನು ಪಡೆದಿದ್ದು, LED DRL ಸ್ಟ್ರೈಪ್‌ಗಳನ್ನು ಹೊಂದಿದ್ದರೆ, ಇನ್ನೊಂದೆಡೆ ಹೆಡ್‌ಲೈಟ್‌ಗಳನ್ನು ಬಂಪರ್‌ನ ಕೆಳಗೆ ಇರಿಸಲಾಗಿದೆ.
ಇದನ್ನೂ ಓದಿ: 50 ಲಕ್ಷ ಪ್ರಯಾಣಿಕ ವಾಹನಗಳ ಮೈಲಿಗಲ್ಲು ದಾಟಿದ ಟಾಟಾ
ಬದಲಾವಣೆಗೊಳಪಟ್ಟ ಕ್ಯಾಬಿನ್
ಮೊದಲು ಕಂಡುಬಂದ ನವೀಕೃತ ನೆಕ್ಸಾನ್‌ನ ಇಮೇಜ್, ಈ SUV ಪರಿಷ್ಕೃತ ಇಂಟಿರಿಯರ್ ಅನ್ನು ಪಡೆಯಲಿದೆ ಎಂಬುದನ್ನು ಈಗಾಗಲೇ ದೃಢಪಡಿಸಿದೆ. ವೆಂಟಿಲೇಟ್ ಆಗಿರುವ ಮುಂಭಾಗದ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಆಟೋ ಎಸಿಯಂತಹ ಫೀಚರ್‌ಗಳನ್ನು ಹಾಗೆಯೇ ಇರಿಸಿಕೊಳ್ಳಲಿದೆ. ತನ್ನ ದೊಡ್ಡ 10.25-ಇಂಚಿನ್ ಟಚ್‌ಸ್ಕ್ರೀನ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಮತ್ತು ಬಹುಶಃ ಪರಿಷ್ಕೃತ ಕುಶನ್‌ಗಳೊಂದಿಗೆ ಇದನ್ನು ಸಜ್ಜುಗೊಳಿಸಲು ಟಾಟಾ ತಯಾರಾಗಿದೆ.
ಸುರಕ್ಷತೆಯ ವಿಷಯದಲ್ಲಿ, ಈ ನೆಕ್ಸಾನ್ ತನಗಿಂತ ಮೊದಲ SUV ಆಗಿರುವ ಹ್ಯಾರಿಯರ್ ಮತ್ತು ಸಫಾರಿಯಂತೆ ಆರು ಏರ್‌ಬ್ಯಾಗ್‌ಗಳು ಮತ್ತು ಕೆಲವು ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಗಳನ್ನು ಪಡೆಯಬಹುದು.
ಪ್ರಶಸ್ತಗೊಳಿಸಿದ ಎಂಜಿನ್
ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (DCT) ಹೊಂದಿರುವ ಮತ್ತು 12PS ಮತ್ತು 225Nm ನಲ್ಲಿ ರೇಟ್ ಮಾಡಲಾದ ಹೊಸ E20-ಕಾಂಪ್ಲಿಯೆಂಟ್ 1.2-ಲೀಟರ್ TGDi (ಟರ್ಬೋ-ಪೆಟ್ರೋಲ್) ಇಂಜಿನ್ ಅನ್ನು ನವೀಕೃತ ಟಾಟಾ ನೆಕ್ಸಾನ್ ಹೊಂದಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ). ಇದು 1.5-ಲೀಟರ್ ಡಿಸೇಲ್ ಯೂನಿಟ್ (110PS/260Nm) ಜೊತೆಗೆ CNG ಕಿಟ್ ಆಯ್ಕೆಯನ್ನು ಸಹ ಪಡೆಯಬಹುದಾಗಿದೆ. ಎಲೆಕ್ಟ್ರಾನಿಕ್ ಪುನರಾವರ್ತನೆಗಳು (ಪ್ರೈಮ್ ಮತ್ತು ಮ್ಯಾಕ್ಸ್) ಅದೇ ಕಾಸ್ಮೆಟಿಕ್ ಮತ್ತು ಫೀಚರ್ ಅಪ್‌ಡೇಟ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಪೆಟ್ರೋಲ್ ಮತ್ತು ಡಿಸೇಲ್ ವರ್ಷನ್ ಜೊತೆಗೆ ಟಾಟಾ EV ರೂಪದಲ್ಲಿ ಈ ನವೀಕೃತ ವರ್ಷನ್ ಅನ್ನು ಪ್ರಾರಂಭಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ತನ್ನ 1ನೇ ನೋಂದಾಯಿತ ವೆಹಿಕಲ್ ಸ್ಕ್ರ್ಯಾಪಿಂಗ್ ಫೆಸಿಲಿಟಿ Re.Wi.Re ಅನ್ನು ಉದ್ಘಾಟಿಸಿದ ಟಾಟಾ
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಈ ನವೀಕೃತ ನೆಕ್ಸಾನ್ ರೂ. 8 ಲಕ್ಷ (ಎಕ್ಸ್-ಶೋರೂಮ್) ಆರಂಭಿಕ ಬೆಲೆಯನ್ನು ಪಡೆಯಬಹುದು. ಇದು ಹ್ಯುಂಡೈ ವೆನ್ಯು, ಮಾರುತಿ ಬ್ರೆಝಾ, ಕಿಯಾ ಸೊನೆಟ್ ಮತ್ತು ನಿಸಾನ್ ಮ್ಯಾಗ್ನೈಟ್ ಸೇರಿದಂತೆ ಸಬ್-4m SUVಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಇನ್ನಷ್ಟು ಇಲ್ಲಿ ಓದಿ : ನೆಕ್ಸಾನ್ AMT
0 out of 0 found this helpful