Login or Register ಅತ್ಯುತ್ತಮ CarDekho experience ಗೆ
Login

ಫ್ಲ್ಯಾಷ್‌ಬ್ಯಾಕ್ ಶುಕ್ರವಾರ: 2018 ಆಟೋ ಎಕ್ಸ್ಪೋ ನಂತರ EV ಗಳಿಗೆ ಏನು ಆಯಿತು?

modified on ಡಿಸೆಂಬರ್ 03, 2019 03:38 pm by sonny for ಹುಂಡೈ ಕೋನಾ

ಯಾವ ಮಾಡೆಲ್ ಗಳು ತಯಾರಿಕೆಗೆ ಒಳಪಟ್ಟಿತು, ಯಾವುದು ಇಲ್ಲ ಮತ್ತು ಯಾಕೆ? ನಾವು ತಿಳಿಯೋಣ.

ಎಲೆಕ್ರಿಕ್ ಕಾರು ಗಳ ಹಾಗು ವಿದ್ಯುದೀಕರಣಗೊಂಡ ಮೊಬಿಲಿಟಿ ಗಳಿಗೆ ಕಳೆದ ಹಲವು ವರ್ಷಗಳಿಂದ ಬೇಡಿಕೆ ಹೆಚ್ಚುತ್ತಿದೆ ಮತ್ತು ಅದು ಬಹಳಷ್ಟು ಆಟೋ ಶೋ ಗಳಲ್ಲಿ ಕಾಣಿಸತೊಡಗಿದೆ. ಮುಂಬರುವ ಭಾರತದಲ್ಲಿನ 2020 ಆಟೋ ಎಕ್ಸ್ಪೋ ದಲ್ಲಿ EV ಗಳು ಪ್ರಮುಖ ಪಾತ್ರ ವಹಿಸತೊಡಗುತ್ತದೆ, ಬಹಳಷ್ಟು ತಯಾರಿಕೆಗೆ ಮುಂಚಿನ ವಿದ್ಯುತ್ ಮಾಡೆಲ್ ಗಳನ್ನು 2018 ಆಟೋ ಎಕ್ಸ್ಪೋ ದಲ್ಲಿ ಪ್ರದರ್ಶಿಸಲಾಯಿತು. ಅವು ಮಾರುಕಟ್ಟೆಯಲ್ಲಿ ಹೇಗಿದೆ ಎಂದು ಈಗ ತಿಳಿಯೋಣ.

1 ಟಾಟಾ ಟಿಯಾಗೋ EV ಮತ್ತು ಟಿಗೋರ್ EV

ಟಿಯಾಗೋ ಹಾಗು ಟಿಗೋರ್ ಗಳು ಸಹೋದರಿ ಮಾಡೆಲ್ ಗಳು ಆಗಿದೆ ಒಂದೇ ವೇದಿಕೆ ಹಾಗು ಪವರ್ ಟ್ರೈನ್ ಆಯ್ಕೆ ಗಳಲ್ಲಿ ನಿರ್ಮಾಣವಾಗಿದೆ. ಟಿಯಾಗೋ EV ಇನ್ನು ಸಹ ದೊರದ ಕೊಡುಗೆಯಾಗಿದೆ, ಟಾಗೋರ್ EV ಯನ್ನು ಭಾರತದಲ್ಲಿ ಇತ್ತೀಚಿಗೆ ಬಿಡುಗಡೆ ಮಾಡಲಾಯಿತು. ಮೊದಲ ಆವೃತ್ತಿ ಯನ್ನು 16.2kWh ಬ್ಯಾಟರಿ ಪ್ಯಾಕ್ ಒಂದಿಗೆ ಕೊಡಲಾಯಿತು ಹಾಗು ನೂತನ ಆವೃತ್ತಿಯನ್ನು 21.5kWh ಗೆ ನವೀಕರಣ ಮಾಡಲಾಯಿತು ಹಾಗು ಬ್ಯಾಟರಿ ಪ್ಯಾಕ್ ಕ್ರಮಿಸಬಹುದಾದ ದೂರದ ವ್ಯಾಪ್ತಿಯನ್ನು 213km ವಿಸ್ತರಿಸಿತು.

ಆದರೆ, ಬೆಲೆ ಪಟ್ಟಿ ನಿರ್ಧರಿಸುವುದರಲ್ಲಿ ಸಮಸ್ಯೆ ಇದೆ. ಇದರ ಬೆಲೆ ಪಟ್ಟಿ ರೂ 12.59 ಲಕ್ಷ ಮತ್ತು ರೂ 13.91 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ). ಟಿಗೋರ್ EV ಹೆಚ್ಚು ಸಲಕರಣೆಗಳಿಂದ ಭರಿತವಾಗಿಲ್ಲ ಟಾಪ್ ಸ್ಪೆಕ್ ಪೆಟ್ರೋಲ್ -AT ವೇರಿಯೆಂಟ್ ಆವೃತ್ತಿಯ ಸಾಮಾನ್ಯ ಟಿಗೋರ್ ನಂತೆ ರೂ 7.45 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ). ಟಾಟಾ ಇನ್ನು ಹೆಚ್ಚು EV ಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಆದರೆ ಟಿಯಾಗೋ EV ಅವುಗಳಲ್ಲಿ ಒಂದು ಆಗಿರುವ ಸಾಧ್ಯತೆ ಕಡಿಮೆ ಇದೆ.

2 ಮಹಿಂದ್ರಾ eKUV100

KUV100 ಯು ಮಹಿಂದ್ರಾ ಅವರ ನೂತನ ಕೊಡುಗೆ ಆಗಿದೆ ಹಾಗು ತಯಾರಿಕೆಗೆ ಹತ್ತಿರವಾಗಿರುವ ಆವೃತ್ತಿಯನ್ನು ಪ್ರದರ್ಶಿಸಲಾಯಿತು, ಅದನ್ನು ಇನ್ನು ಬಿಡುಗಡೆ ಮಾಡಬೇಕಾಗಿದೆ. ಎಕ್ಸ್ಪೋ ದಲ್ಲಿ eKUV100 ನ ಅಧಿಕೃತ ವ್ಯಾಪ್ತಿ 140km ಆಗಿರುತ್ತದೆ ಶೇಕಡಾ 80 ಚಾರ್ಜ್ ಒಂದಿಗೆ, ಒಂದು ಘಂಟೆ ಯಲ್ಲಿ, ಅದಕ್ಕೆ ಫಾಸ್ಟ್ ಚಾರ್ಜಿನ್ಗ್ ಕಾರಣವಾಗಿದೆ. ಅದು ಮೂರು ಫೇಸ್ AC ಇಂಡಕ್ಷನ್ 31kW ಎಲೆಕ್ಟ್ರಿಕ್ ಮೋಟಾರ್ ಅನ್ನು ಪಡೆಯಲಿದೆ e ವೆರಿಟೊ ನಂತೆ. ಮಹಿಂದ್ರಾ ಘೋಷಿಸಿದಂತೆ eKUV100 ಅನ್ನು 2019 ಕೊನೆ ವೇಳೆಗೆ ನಿರೀಕ್ಷಿಸಬಹುದು ಜೊತೆಗೆ ಬೆಲೆ ಪಟ್ಟಿ ರೂ 10-12 ಲಕ್ಷ ವರೆಗೆ.

3 ಮಹಿಂದ್ರಾ e2o NXT

ಬಹಳ ಕಾಲದಿಂದ, ಮಹಿಂದ್ರಾ e2o ಭಾರತದಲ್ಲಿ ಲಭ್ಯ ಇರುವ ಎರೆಡು EV ಗಳಲ್ಲಿ ಒಂದು ಆಗಿತ್ತು. ಹೊಸ ಆವೃತ್ತಿಯನ್ನು e2o NXT ಎನ್ನಲಾಗಿದೆ ಮತ್ತು ಅದನ್ನು 2018 ಆಟೋ ಎಕ್ಸ್ಪೋ ದಲ್ಲಿ ಪ್ರದರ್ಶಿಸಲಾಯಿತು. ಅದು ದೊಡ್ಡದಾಗಿ ಇತ್ತು, ಹೆಚ್ಚು ಪ್ರೀಮಿಯಂ ಆಗಿ ಮತ್ತು ಅಧಿಕೃತ ಮೈಲೇಜ್ ಅನ್ನು 140km ಗೆ ಹೆಚ್ಚಿಸಿತ್ತು. ಆದರೆ, e2o ವನ್ನು ಸ್ಥಗಿತಗೊಳಿಸಲಾಗಿರಬಹುದು, ಏಕೆಂದರೆ ಅದರ ಡಿಸೈನ್ ಕ್ರ್ಯಾಶ್ ಟೆಸ್ಟ್ ನಾರ್ಮ್ಸ್ ಗೆ ಅನುಗುಣವಾಗಿರಲಿಲ್ಲ ಮತ್ತು ಅದರಲ್ಲಿ ಏರ್ಬ್ಯಾಗ್ ಸಹ ಲಭ್ಯವಿರಲಿಲ್ಲ.

4 ಹುಂಡೈ ಐಯೋನಿಕ್

ಐಯೋನಿಕ್ ಸೆಡಾನ್ ಹೈಬ್ರಿಡ್ ಹಾಗು ವಿದ್ಯುತ್ ಆವೃತ್ತಿಗಳನ್ನು ಪ್ರದರ್ಶಿಸಿತ್ತು ಆದರೆ ಅವೆರೆಡನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಲಿಲ್ಲ. ವಿದ್ಯುತ್ ಆವೃತ್ತಿ 28Wh ಬ್ಯಾಟರಿ ಯನ್ನು ಉಪಯೋಗಿಸಿತು ಮತ್ತು ಅದರ ಅಧಿಕೃತ ವ್ಯಾಪ್ತಿ 280km ಮತ್ತು ಎಲೆಕ್ಟ್ರಿಕ್ ಮೋಟಾರ್ ನ ಕಾರ್ಯದಕ್ಷತೆ ರೇಟಿಂಗ್ 120PS ಮತ್ತು 295Nm. ಹುಂಡೈ ಭಾರತದಲ್ಲಿ ಐಯೋನಿಕ್ ಅನ್ನು ಪರಿಚಯಿಸಲು ಹಿನ್ನಡೆದಿದೆ ಮತ್ತು ಎಲೆಕ್ಟ್ರಿಕ್ SUV ಪರಿಚಯಿಸಲು ಮುಂದಾಗಿದೆ.

5 ಕಿಯಾ ಸೋಲ್ EV

ಕಿಯಾ ಬ್ರಾಂಡ್ ತನ್ನನ್ನು ತಾನೇ ಭಾರತದ ಮಾರುಕಟ್ಟೆಯಲ್ಲಿ 2018 ಆಟೋ ಎಕ್ಸ್ಪೋ ದಲ್ಲಿ ಪರಿಚಯಿಸಿತು. ಮತ್ತು ಅದರ ಬಹಳಷ್ಟು ಜಾಗತಿಕ ಉತ್ಪನ್ನಗಳನ್ನು ಪರಿಚಯಿಸಿತು SP ಪರಿಕಲ್ಪನೆ ಜೊತೆಗೆ. ಕಿಯಾ ಸೋಲ್ EV ಅವುಗಳಲ್ಲಿ ಒಂದು ಆಗಿದೆ ಮತ್ತು ಹೊಸ ಪೀಳಿಗೆಯ ಮಾಡೆಲ್ ಅನ್ನು ಜಾಗತಿಕವಾಗಿ ಪರಿಚಯಿಸಲಾಗಿದೆ ಕೂಡ. ಅದನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿಲ್ಲ ಮತ್ತು ಕಿಯಾ ಅದರ ಬಗ್ಗೆ ಹೆಚ್ಚು ಅವಸರ ಪಡುತ್ತಿಲ್ಲ. ಕಾರ್ ಮೇಕರ್ ನೂತನ ಸೋಲ್ EV ಯನ್ನು ಅಂದ್ರ ಪ್ರದೇಶ ಸರ್ಕಾರಕ್ಕೆ ಕೊಡುಗೆ ನೀಡಿದೆ , ಅದರ EV ಗಳ ಬಗೆಗಿನ ನಿಲುವನ್ನು ಪ್ರೋತ್ಸಾಹಿಸಲು. ಅದರ ಹೊಸ ಅವತಾರದಲ್ಲಿ ಅದು 64kWh ಲಿತಿಯಮ್ ಅಯಾನ್ ಬ್ಯಾಟರಿ ಯನ್ನು ಎಮಿಷನ್ ಇಲ್ಲದಿರುವ ವ್ಯಾಪ್ತಿಯಾದ 450km ಗೆ ವಿಸ್ತರಿಸಿದೆ, ಅಧಿಕೃತ ಸಂಖ್ಯೆಗಳು ಭಾರತದ ಪರೀಕ್ಷೆ ಮಾಪನಕ್ಕಿಂತ ಹೆಚ್ಚು ಇದೆ.

ಹುಂಡೈ ಕೋನ ಎಲೆಕ್ಟ್ರಿಕ್

ತಾಂತ್ರಿಕವಾಗಿ, ಕೋನ ಎಲೆಕ್ಟ್ರಿಕ್ ಅನ್ನು 2018 ಆಟೋ ಎಕ್ಸ್ಪೋ ದಲ್ಲಿ ನಿರೀಕ್ಷಿಸಲಾಗಿರಲಿಲ್ಲ. ಬದಲಿಗೆ ಕಾರ್ ಮೇಕರ್ ಸಾಮಾನ್ಯ ಪೆಟ್ರೋಲ್ ಪವರ್ ಹೊಂದಿರುವ ಆವೃತ್ತಿಯ ಕೋನ SUV ಯನ್ನು ಪ್ರದರ್ಶಿಸಿತು. ಆದಷ್ಟೇ, ಕೋಣ ಎಲೆಕ್ಟ್ರಿಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ಅದು ಭಾರತದಲ್ಲಿನ ಮೊದಲ ದೂರದ ವ್ಯಾಪ್ತಿಯ ಎಲೆಕ್ಟ್ರಿಕ್ SUV ಆಗಿದೆ. ಅದರ ಬೆಲೆ ಪಟ್ಟಿ ರೂ 23.71 ಲಕ್ಷ ಮತ್ತು ರೂ 23.9 ಲಕ್ಷ (ಎಕ್ಸ್ ಶೋ ರೂಮ್) ಆಗಿದೆ. ARAI ಅಧಿಕೃತ ವ್ಯಾಪ್ತಿ 39kWh ಬ್ಯಾಟರಿ ಗಾಗಿ 452km ಆಗಿರುತ್ತದೆ ಪೂರ್ಣ ಚಾರ್ಜ್ ಗೆ ಅನುಗುಣವಾಗಿ.

ಬಹಳಷ್ಟು 2018 ಆಟೋ ಎಕ್ಸ್ಪೋ ದಲ್ಲಿ ಕಂಡುಬಂದ EV ಗಳು ತಯಾರಿಕೆಗೆ ಒಳಪಟ್ಟಿಲ್ಲ. ಮುಂಬರುವ ಎಕ್ಸ್ಪೋ ದಲ್ಲಿ ಇದಕ್ಕಿಂತ ಬಿನ್ನವಾಗಿರಲಿದೆ. ಬಹಳಷ್ಟು ಉತ್ಪನ್ನಕ್ಕೆ ತಯಾರಾಗಿರುವ EV ಮಾಡೆಲ್ ಗಳು ಪ್ರದರ್ಶನಕ್ಕೆ ಒಳಪಟ್ಟು ನಂತರ ಶೋ ರೂಮ್ ಗಳಿಗೆ ತ್ವರಿತವಾಗಿ ತಲುಪಲಿದೆ.

s
ಅವರಿಂದ ಪ್ರಕಟಿಸಲಾಗಿದೆ

sonny

  • 16 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ ಕೋನಾ

U
uday s
Nov 30, 2019, 8:22:26 PM

While the buyers are still not sure about the value of investment in EV, a lot of awareness education is needed. If the size of market increases including the first time buyers,costs will be down

Read Full News

explore similar ಕಾರುಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ