ಈ ಜನವರಿಯಲ್ಲಿ ಕೆಲವು ಹ್ಯುಂಡೈ ಕಾರುಗಳ ಖರೀದಿಯೊಂದಿಗೆ ರೂ 3 ಲಕ್ಷದವರೆಗೆ ಉಳಿತಾಯ ಮಾಡಿ
ಹುಂಡೈ ಗ್ರ್ಯಾಂಡ್ ಐ 10 ನಿಯೋಸ್ ಗಾಗಿ shreyash ಮೂಲಕ ಜನವರಿ 15, 2024 06:52 pm ರಂದು ಪ್ರಕಟಿಸಲಾಗಿದೆ
- 94 Views
- ಕಾಮೆಂಟ್ ಅನ್ನು ಬರೆಯಿರಿ
MY23 (ಮಾಡೆಲ್ ವರ್ಷ) ಹ್ಯುಂಡೈ ಮಾಡೆಲ್ ಗಳ ಖರೀದಿಯೊಂದಿಗೆ ಅತಿ ಹೆಚ್ಚು ಪ್ರಯೋಜನಗಳನ್ನು ನೀಡಲಾಗುತ್ತಿದೆ
-
ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ನೊಂದಿಗೆ ಗರಿಷ್ಠ ರೂ.3 ಲಕ್ಷದವರೆಗಿನ ಪ್ರಯೋಜನಗಳನ್ನು ನೀಡಲಾಗುತ್ತಿದೆ.
-
ಹ್ಯುಂಡೈ ಟಕ್ಸನ್‌ನ ಖರೀದಿಯೊಂದಿಗೆ ಗ್ರಾಹಕರು 2 ಲಕ್ಷದವರೆಗೆ ಉಳಿಸಬಹುದು.
-
ಹ್ಯುಂಡೈ i20 ಯೊಂದಿಗೆ ರೂ.63,000 ವರೆಗಿನ ಪ್ರಯೋಜನಗಳನ್ನು ನೀಡಲಾಗುತ್ತಿದೆ.
-
ಹ್ಯುಂಡೈ ಗ್ರಾಂಡ್ i10 ನಿಯೋಸ್ ಮೇಲೆ ರೂ.48,000 ಮತ್ತು ಹ್ಯುಂಡೈ ಔರಾ ಮೇಲೆ ರೂ.33,000 ವರೆಗಿನ ರಿಯಾಯಿತಿ ಪಡೆಯಿರಿ
-
ಹ್ಯುಂಡೈ ಅಲ್ಕಾಜರ್ ನೊಂದಿಗೆ ರೂ.45,000 ವರೆಗಿನ ಉಳಿತಾಯವನ್ನು ಪಡೆಯಿರಿ.
-
ಹ್ಯುಂಡೈ ವೆನ್ಯೂನ ಖರೀದಿಯೊಂದಿಗೆ ಗ್ರಾಹಕರು ರೂ 30,000 ವರೆಗೆ ಪ್ರಯೋಜನಗಳನ್ನು ಪಡೆಯಬಹುದು.
-
ಎಲ್ಲಾ ಕೊಡುಗೆಗಳು ಜನವರಿ 2024 ರ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.
ಹ್ಯುಂಡೈ ಕಾರುಗಳಿಗೆ ಈ ಜನವರಿಯಲ್ಲಿ 3 ಲಕ್ಷದವರೆಗಿನ ರಿಯಾಯಿತಿಯನ್ನು ನೀಡಲಾಗುತ್ತಿದೆ. ಹ್ಯುಂಡೈ ಕ್ರೆಟಾ, ಹ್ಯುಂಡೈ ಎಕ್ಸ್‌ಟರ್ ಮತ್ತು ಹ್ಯುಂಡೈ ಐಯೊನಿಕ್ 5 ಮಾಡೆಲ್ ಗಳನ್ನು ಹೊರತುಪಡಿಸಿ, ಎಲ್ಲಾ ಇತರ ಮಾಡೆಲ್ ಗಳೊಂದಿಗೆ ಕೊಡುಗೆಗಳನ್ನು ನೀಡಲಾಗುತ್ತಿದೆ. MY23 ಯೂನಿಟ್‌ಗಳ ಜೊತೆಗೆ, ಕೆಲವು MY24 ಮಾಡೆಲ್‌ಗಳ ಮೇಲೆ ಕೂಡ ಈ ತಿಂಗಳು ಪ್ರಯೋಜನಗಳನ್ನು ಪಡೆಯಬಹುದು, ಆದರೆ MY23 ಕಾರುಗಳು ಹೆಚ್ಚಿನ ಕೊಡುಗೆಗಳನ್ನು ನೀಡಲಿವೆ. ಜನವರಿ 2024 ರ ಅಂತ್ಯದವರೆಗೆ ಮಾನ್ಯವಾಗಿರುವ ಮಾಡೆಲ್-ವಾರು ಆಫರ್ ವಿವರಗಳನ್ನು ನೋಡೋಣ:
ಹ್ಯುಂಡೈ ಗ್ರಾಂಡ್ i10 ನಿಯೋಸ್
ಕೊಡುಗೆಗಳು |
ಮೊತ್ತ |
|
MY23 |
MY24 |
|
ಕ್ಯಾಶ್ ಡಿಸ್ಕೌಂಟ್ |
ರೂ.35,000 ವರೆಗೆ |
ರೂ.20,000 ವರೆಗೆ |
ಎಕ್ಸ್ಚೇಂಜ್ ಬೋನಸ್ |
ರೂ.10,000 ವರೆಗೆ |
ರೂ.10,000 ವರೆಗೆ |
ಕಾರ್ಪೊರೇಟ್ ಡಿಸ್ಕೌಂಟ್ |
ರೂ.3,000 ವರೆಗೆ |
ರೂ.3,000 ವರೆಗೆ |
ಒಟ್ಟು ಪ್ರಯೋಜನಗಳು |
ರೂ.48,000 ವರೆಗೆ |
ರೂ.33,000 ವರೆಗೆ |
-
ಹ್ಯಾಚ್‌ಬ್ಯಾಕ್‌ನ MY23 ಯೂನಿಟ್ ಗಳಿಗೆ ನೀಡಲಾಗಿರುವ ರಿಯಾಯಿತಿಗಳು ಅದರ CNG ವೇರಿಯಂಟ್ ಗಳಿಗೆ ಮಾತ್ರ ಅನ್ವಯವಾಗಿರುತ್ತವೆ. ಪೆಟ್ರೋಲ್-ಮ್ಯಾನ್ಯುವಲ್ ವೇರಿಯಂಟ್ ಗಳಿಗೆ, ನಗದು ರಿಯಾಯಿತಿಯು ರೂ 20,000 ಆಗಿದೆ, ಮತ್ತು AMT ಟ್ರಿಮ್‌ಗಳಿಗೆ ಇದು ರೂ 10,000 ಕ್ಕೆ ಇಳಿಯುತ್ತದೆ.
-
ಅದೇ ರೀತಿ, ಗ್ರಾಂಡ್ i10 ನಿಯೋಸ್ ನ MY24 ಯೂನಿಟ್ ಗಳಿಗೆ ತಿಳಿಸಲಾದ ಪ್ರಯೋಜನಗಳನ್ನು ಅದರ CNG ವೇರಿಯಂಟ್ ಗಳೊಂದಿಗೆ ಮಾತ್ರ ಪಡೆಯಬಹುದು. ರೆಗ್ಯುಲರ್ ಪೆಟ್ರೋಲ್-ಮ್ಯಾನ್ಯುವಲ್ ವೇರಿಯಂಟ್ ಗಳಿಗೆ ನಗದು ರಿಯಾಯಿತಿಯು ರೂ.10,000 ಆಗಿದೆ, ಮತ್ತು AMT ವೇರಿಯಂಟ್ ಗಳಿಗೆ ರೂ.5,000
-
ಎಕ್ಸ್ಚೇಂಜ್ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಯಂತಹ ಇತರ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.
-
ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬೆಲೆಯು 5.93 ಲಕ್ಷದಿಂದ ಶುರುವಾಗಿ ರೂ.8.56 ಲಕ್ಷದವರೆಗೆ ಇದೆ.
ಹ್ಯುಂಡೈ ಔರಾ
ಕೊಡುಗೆಗಳು |
ಮೊತ್ತ |
|
MY23 |
MY24 |
|
ಕ್ಯಾಶ್ ಡಿಸ್ಕೌಂಟ್ |
ರೂ.20,000 ವರೆಗೆ |
ರೂ.15,000 ವರೆಗೆ |
ಎಕ್ಸ್ಚೇಂಜ್ ಬೋನಸ್ |
ರೂ.10,000 ವರೆಗೆ |
ರೂ.10,000 ವರೆಗೆ |
ಕಾರ್ಪೊರೇಟ್ ಡಿಸ್ಕೌಂಟ್ |
ರೂ.3,000 ವರೆಗೆ |
ರೂ.3,000 ವರೆಗೆ |
ಒಟ್ಟು ಪ್ರಯೋಜನಗಳು |
ರೂ.33,000 ವರೆಗೆ |
ರೂ.28,000 ವರೆಗೆ |
-
ಹ್ಯುಂಡೈ ಔರಾದ MY23 ಯೂನಿಟ್‌ಗಳಿಗಾಗಿ ಟೇಬಲ್‌ನಲ್ಲಿ ನೀಡಲಾಗಿರುವ ಕೊಡುಗೆಗಳು CNG ವೇರಿಯಂಟ್ ಗಳಿಗೆ ಮಾತ್ರ ಅನ್ವಯಿಸುತ್ತವೆ. ರೆಗ್ಯುಲರ್ ಪೆಟ್ರೋಲ್-ಮ್ಯಾನ್ಯುವಲ್ ವೇರಿಯಂಟ್ ಗಳಿಗೆ ನಗದು ರಿಯಾಯಿತಿಯು ರೂ.10,000 ಕ್ಕೆ ಇಳಿಯುತ್ತದೆ.
-
ಹಾಗೆಯೇ, ಮೇಲೆ ತಿಳಿಸಲಾದ MY24 ಕೊಡುಗೆಗಳು ಔರಾದ CNG ವೇರಿಯಂಟ್ ಗಳೊಂದಿಗೆ ಮಾತ್ರ ಲಭ್ಯವಿದೆ. ಪೆಟ್ರೋಲ್ ಟ್ರಿಮ್‌ಗಳಿಗೆ, ನಗದು ಲಾಭವು ರೂ.5,000 ಕ್ಕೆ ಇಳಿಯುತ್ತದೆ.
-
ಹ್ಯುಂಡೈ ಔರಾ ಬೆಲೆಯು ರೂ.6.49 ಲಕ್ಷದಿಂದ ರೂ.9.04 ಲಕ್ಷದವರೆಗೆ ಇದೆ
ಇದನ್ನು ಕೂಡ ಓದಿ: ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಬಿಡುಗಡೆಗೆ ಮುಂಚೆ ಡೀಲರ್‌ಶಿಪ್‌ಗಳನ್ನು ತಲುಪಿವೆ
ಹ್ಯುಂಡೈ i20
ಕೊಡುಗೆಗಳು |
ಮೊತ್ತ |
|
MY23 |
MY24 |
|
ಕ್ಯಾಶ್ ಡಿಸ್ಕೌಂಟ್ |
ರೂ.50,000 ವರೆಗೆ |
ಅನ್ವಯಿಸುವುದಿಲ್ಲ |
ಎಕ್ಸ್ಚೇಂಜ್ ಬೋನಸ್ |
ರೂ.10,000 ವರೆಗೆ |
ರೂ.10,000 ವರೆಗೆ |
ಕಾರ್ಪೊರೇಟ್ ಡಿಸ್ಕೌಂಟ್ |
ರೂ.3,000 ವರೆಗೆ |
ಅನ್ವಯಿಸುವುದಿಲ್ಲ |
ಒಟ್ಟು ಪ್ರಯೋಜನಗಳು |
ರೂ.63,000 ವರೆಗೆ |
ರೂ.10,000 ವರೆಗೆ |
-
ಮೇಲೆ ತಿಳಿಸಲಾದ ಗರಿಷ್ಠ ಪ್ರಯೋಜನಗಳು ಹ್ಯುಂಡೈ i20 ನ ಪ್ರಿ-ಫೇಸ್‌ಲಿಫ್ಟ್ DCT (ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್) ವೇರಿಯಂಟ್ ಗಳಿಗೆ ಮಾತ್ರ ಅನ್ವಯಿಸುತ್ತವೆ. ಪ್ರಿ-ಫೇಸ್‌ಲಿಫ್ಟ್ i20 ಯ ಸ್ಪೋರ್ಟ್ಜ್ ಮ್ಯಾನುವಲ್ ಟ್ರಿಮ್‌ಗಾಗಿ ನಗದು ರಿಯಾಯಿತಿಯು ರೂ.25,000 ಕ್ಕೆ ಇಳಿಯುತ್ತದೆ, ಆದರೆ ಇತರ ಎಲ್ಲಾ ವೇರಿಯಂಟ್ ಗಳಿಗೆ ಇದು ರೂ.10,000 ಆಗಿದೆ. ಕಾರ್ಪೊರೇಟ್ ರಿಯಾಯಿತಿಯನ್ನು ಹ್ಯಾಚ್‌ಬ್ಯಾಕ್‌ನ DCT ಮತ್ತು ಸ್ಪೋರ್ಟ್ಜ್ ಮ್ಯಾನುಯಲ್ ವೇರಿಯಂಟ್ ಗಳಲ್ಲಿ ಮಾತ್ರ ಲಭ್ಯವಿದೆ ಎಂಬುದನ್ನು ದಯವಿಟ್ಟು ಗಮನಿಸಿ.
-
i20 ಯ ಫೇಸ್‌ಲಿಫ್ಟ್ ಆಗಿರುವ MY23 ಯುನಿಟ್‌ಗಳನ್ನು ರೂ. 15,000 ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 10,000 ಎಕ್ಸ್ಚೇಂಜ್ ಬೋನಸ್‌ನೊಂದಿಗೆ ಪಡೆಯಬಹುದು.
-
MY24 ಹ್ಯುಂಡೈ i20 ಅನ್ನು 10,000 ರೂಪಾಯಿಗಳ ಎಕ್ಸ್ಚೇಂಜ್ ಬೋನಸ್‌ನೊಂದಿಗೆ ಮಾತ್ರ ಪಡೆಯಬಹುದು.
-
ಹ್ಯುಂಡೈ i20 ಬೆಲೆಯು ರೂ.7.04 ಲಕ್ಷದಿಂದ ರೂ.11.21 ಲಕ್ಷದವರೆಗೆ ಇದೆ
ಹ್ಯುಂಡೈ i20 N ಲೈನ್
ಕೊಡುಗೆಗಳು |
ಮೊತ್ತ (MY23) |
ಕ್ಯಾಶ್ ಡಿಸ್ಕೌಂಟ್ |
ರೂ.50,000 ವರೆಗೆ |
ಎಕ್ಸ್ಚೇಂಜ್ ಬೋನಸ್ |
ರೂ.10,000 ವರೆಗೆ |
ಕಾರ್ಪೊರೇಟ್ ಡಿಸ್ಕೌಂಟ್ |
ಅನ್ವಯಿಸುವುದಿಲ್ಲ |
ಒಟ್ಟು ಪ್ರಯೋಜನಗಳು |
ರೂ.60,000 ವರೆಗೆ |
-
ಈ ರಿಯಾಯಿತಿಗಳು ಹ್ಯುಂಡೈ i20 N ಲೈನ್ MY23 ಯುನಿಟ್‌ಗಳ ಪ್ರೀ-ಫೇಸ್‌ಲಿಫ್ಟ್ ವರ್ಷನ್ ಗಳಿಗೆ ಸಿಗಲಿದೆ.
-
ಫೇಸ್‌ಲಿಫ್ಟ್ ಆಗಿರುವ MY23 ಮಾಡೆಲ್ ಗಳಿಗೆ, ಕ್ಯಾಶ್ ಡಿಸ್ಕೌಂಟ್ ಅನ್ನು ರೂ 15,000 ಕ್ಕೆ ಇಳಿಸಲಾಗಿದೆ, ಆದರೆ ಯಾವುದೇ ಎಕ್ಸ್ಚೇಂಜ್ ಬೋನಸ್ ಲಭ್ಯವಿಲ್ಲ.
-
ಹ್ಯುಂಡೈ ತನ್ನ i20 N ಲೈನ್‌ನ MY24 ಯೂನಿಟ್ ಗಳಿಗೆ ಯಾವುದೇ ಕೊಡುಗೆಗಳನ್ನು ನೀಡುತ್ತಿಲ್ಲ.
-
i20 N ಲೈನ್‌ನ ಬೆಲೆಯು ರೂ.10 ಲಕ್ಷದಿಂದ 12.52 ಲಕ್ಷದವರೆಗೆ ಇದೆ
ಹ್ಯುಂಡೈ ವೆನ್ಯೂ
ಕೊಡುಗೆಗಳು |
ಮೊತ್ತ (MY23) |
|
Venue |
Venue N Line |
|
ಕ್ಯಾಶ್ ಡಿಸ್ಕೌಂಟ್ |
ರೂ.15,000 ವರೆಗೆ |
ರೂ.30,000 ವರೆಗೆ |
ಎಕ್ಸ್ಚೇಂಜ್ ಬೋನಸ್ |
ರೂ.15,000 ವರೆಗೆ |
ಅನ್ವಯಿಸುವುದಿಲ್ಲ |
ಕಾರ್ಪೊರೇಟ್ ಡಿಸ್ಕೌಂಟ್ |
ಅನ್ವಯಿಸುವುದಿಲ್ಲ |
ಅನ್ವಯಿಸುವುದಿಲ್ಲ |
ಒಟ್ಟು ಪ್ರಯೋಜನಗಳು |
ರೂ.30,000 ವರೆಗೆ |
ರೂ.30,000 ವರೆಗೆ |
-
ಹ್ಯುಂಡೈ ವೆನ್ಯೂನ MY23 ಯೂನಿಟ್ ಗಳಿಗೆ ಮಾತ್ರ ಈ ತಿಂಗಳು ಕೊಡುಗೆಗಳು ಲಭ್ಯವಿವೆ.
-
ಮೇಲೆ ನೀಡಲಾದ ಕೊಡುಗೆಗಳು ರೆಗ್ಯುಲರ್ ಹ್ಯುಂಡೈ ವೆನ್ಯೂ SUV ಯ 1-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನುವಲ್ ವೇರಿಯಂಟ್ ಗಳಲ್ಲಿ ಮಾತ್ರ ಲಭ್ಯವಿರುತ್ತವೆ. DCT ಟ್ರಿಮ್‌ಗಳಿಗಾಗಿ ಕ್ಯಾಶ್ ಡಿಸ್ಕೌಂಟ್ ರೂ.10,000 ಕ್ಕೆ ಇಳಿಯುತ್ತದೆ.
-
ವೆನ್ಯೂ N ಲೈನ್‌ಗಾಗಿ, ಟೇಬಲ್‌ನಲ್ಲಿ ನೀಡಲಾದ ಕೊಡುಗೆಗಳು ಅದರ ಹಳೆಯ DCT ಮತ್ತು ಹೊಸ ಮ್ಯಾನುಯಲ್ ವೇರಿಯಂಟ್ ಗಳಿಗೆ ಮಾನ್ಯವಾಗಿರುತ್ತವೆ.
-
ಹ್ಯುಂಡೈ ವೆನ್ಯೂನ ಅಪ್ಡೇಟ್ ಆಗಿರುವ DCT ವೇರಿಯಂಟ್ ಗಳಿಗೆ ರೂ 20,000 ಕ್ಯಾಶ್ ಡಿಸ್ಕೌಂಟ್ ಅನ್ನು ಮಾತ್ರ ಪಡೆಯಬಹುದು.
-
ಹ್ಯುಂಡೈ ವೆನ್ಯೂ ಬೆಲೆಯು 7.94 ಲಕ್ಷದಿಂದ 13.44 ಲಕ್ಷದವರೆಗೆ ಇದೆ, ಹಾಗೂ ವೆನ್ಯೂ N ಲೈನ್ ಬೆಲೆಯು 12.08 ಲಕ್ಷದಿಂದ 13.90 ಲಕ್ಷದವರೆಗೆ ಇದೆ.
ಇದನ್ನು ಕೂಡ ಓದಿ: ಇಂಡಿಯಾ-ಸ್ಪೆಕ್ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಮತ್ತು ಇಂಟರ್ನ್ಯಾಷನಲ್ ಕ್ರೆಟಾ ಫೇಸ್‌ಲಿಫ್ಟ್: ಏನೇನು ವ್ಯತ್ಯಾಸಗಳಿವೆ?
-
ನಿಮ್ಮ ಬಾಕಿ ಇರುವ ಚಲನ್ ಅನ್ನು ಪರಿಶೀಲಿಸಿ
-
ಉಪಯೋಗಿಸಿದ ಕಾರಿನ ಮೌಲ್ಯಮಾಪನ
ಹ್ಯುಂಡೈ ವೆರ್ನಾ
ಕೊಡುಗೆಗಳು |
ಮೊತ್ತ |
|
MY23 |
MY24 |
|
ಕ್ಯಾಶ್ ಡಿಸ್ಕೌಂಟ್ |
ರೂ.30,000 ವರೆಗೆ |
ರೂ.10,000 ವರೆಗೆ |
ಎಕ್ಸ್ಚೇಂಜ್ ಬೋನಸ್ |
ರೂ.25,000 ವರೆಗೆ |
ರೂ.15,000 ವರೆಗೆ |
ಒಟ್ಟು ಪ್ರಯೋಜನಗಳು |
ರೂ.55,000 ವರೆಗೆ |
ರೂ.25,000 ವರೆಗೆ |
-
MY23 ಹ್ಯುಂಡೈ ವೆರ್ನಾ ಅದರ MY24 ಮಾಡೆಲ್ ಗೆ ಹೋಲಿಸಿದರೆ ಹೆಚ್ಚಿನ ನಗದು ಲಾಭ ಮತ್ತು ಎಕ್ಸ್ಚೇಂಜ್ ಬೋನಸ್‌ನೊಂದಿಗೆ ಬರುತ್ತದೆ.
-
ವೆರ್ನಾ ಬೆಲೆಯು 11 ಲಕ್ಷದಿಂದ 17.42 ಲಕ್ಷದವರೆಗೆ ಇದೆ.
ಹ್ಯುಂಡೈ ಅಲ್ಕಾಜರ್
ಕೊಡುಗೆಗಳು |
ಮೊತ್ತ |
|
MY23 |
MY24 |
|
ಕ್ಯಾಶ್ ಡಿಸ್ಕೌಂಟ್ |
ರೂ.25,000 ವರೆಗೆ |
ಅನ್ವಯಿಸುವುದಿಲ್ಲ |
ಎಕ್ಸ್ಚೇಂಜ್ ಬೋನಸ್ |
ರೂ.20,000 ವರೆಗೆ |
ರೂ.15,000 ವರೆಗೆ |
ಒಟ್ಟು ಪ್ರಯೋಜನಗಳು |
ರೂ.45,000 ವರೆಗೆ |
ರೂ.15,000 ವರೆಗೆ |
-
ಅಲ್ಕಾಜರ್‌ನ MY23 ಯೂನಿಟ್ ಗಳಿಗೆ ನೀಡಲಾಗಿರುವ ಪ್ರಯೋಜನಗಳು ಅದರ ಪೆಟ್ರೋಲ್ ವೇರಿಯಂಟ್ ಗಳಿಗೆ ಮಾತ್ರ ಲಭ್ಯವಿರುತ್ತವೆ. SUV ಯ ಡೀಸೆಲ್ ವೇರಿಯಂಟ್ ಗಳಿಗೆ ಯಾವುದೇ ಕ್ಯಾಶ್ ಡಿಸ್ಕೌಂಟ್ ಅನ್ನು ನೀಡಲಾಗಿಲ್ಲ.
-
ಹ್ಯುಂಡೈ ಅಲ್ಕಾಜಾರ್‌ನ MY24 ಯುನಿಟ್‌ಗಳು 15,000 ರೂಪಾಯಿಗಳ ಎಕ್ಸ್‌ಚೇಂಜ್ ಬೋನಸ್ ನೊಂದಿಗೆ ಮಾತ್ರ ಬರುತ್ತವೆ.
-
ಅಲ್ಕಾಜರ್‌ನ ಬೆಲೆಯು 16.78 ಲಕ್ಷದಿಂದ 21.28 ಲಕ್ಷದವರೆಗೆ ಇದೆ.
ಹ್ಯುಂಡೈ ಟಕ್ಸನ್
ಕೊಡುಗೆಗಳು |
ಮೊತ್ತ |
|
MY23 |
MY24 |
|
ಕ್ಯಾಶ್ ಡಿಸ್ಕೌಂಟ್ |
ರೂ.2 ಲಕ್ಷದವರೆಗೆ |
ಅನ್ವಯಿಸುವುದಿಲ್ಲ |
ಎಕ್ಸ್ಚೇಂಜ್ ಬೋನಸ್ |
ಅನ್ವಯಿಸುವುದಿಲ್ಲ |
ರೂ.15,000 ವರೆಗೆ |
ಒಟ್ಟು ಪ್ರಯೋಜನಗಳು |
ರೂ.2 ಲಕ್ಷದವರೆಗೆ |
ರೂ.15,000 ವರೆಗೆ |
-
ಟಕ್ಸನ್‌ನ MY23 ಯೂನಿಟ್ ಗೆ ಮೇಲೆ ನೀಡಲಾಗಿರುವ ನಗದು ಪ್ರಯೋಜನಗಳು ಡೀಸೆಲ್ ವೇರಿಯಂಟ್ ಗಳಿಗೆ ಮಾತ್ರ ಲಭ್ಯವಿದೆ. ಪೆಟ್ರೋಲ್ ಮಾಡೆಲ್ ಗಳಿಗೆ ನಗದು ಪ್ರಯೋಜನವು ರೂ.50,000 ಕ್ಕೆ ಇಳಿಯುತ್ತದೆ.
-
ಫ್ಲ್ಯಾಗ್‌ಶಿಪ್ ಹ್ಯುಂಡೈ SUV ಯ MY24 ಯೂನಿಟ್ ಗಳು ಕೇವಲ 15,000 ರೂಪಾಯಿಗಳ ಎಕ್ಸ್ಚೇಂಜ್ ಬೋನಸ್‌ನೊಂದಿಗೆ ಲಭ್ಯವಿದೆ.
-
ಹ್ಯುಂಡೈ ಟಕ್ಸನ್ ಬೆಲೆಯು 29.02 ಲಕ್ಷದಿಂದ 35.94 ಲಕ್ಷದವರೆಗೆ ಇದೆ.
ಹ್ಯುಂಡೈ ಕೋನಾ ಎಲೆಕ್ಟ್ರಿಕ್
ಕೊಡುಗೆಗಳು |
ಮೊತ್ತ (MY23) |
ಕ್ಯಾಶ್ ಡಿಸ್ಕೌಂಟ್ |
ರೂ.3 ಲಕ್ಷದವರೆಗೆ |
ಒಟ್ಟು ಪ್ರಯೋಜನಗಳು |
ರೂ.3 ಲಕ್ಷದವರೆಗೆ |
-
MY23 ಹ್ಯುಂಡೈ ಕೋನಾ ಎಲೆಕ್ಟ್ರಿಕ್ 3 ಲಕ್ಷ ರೂಪಾಯಿಗಳ ಅತ್ಯಧಿಕ ಕ್ಯಾಶ್ ಡಿಸ್ಕೌಂಟ್ ನೊಂದಿಗೆ ಲಭ್ಯವಿದೆ. -
ಎಲೆಕ್ಟ್ರಿಕ್ SUV ಯ MY24 ಟ್ರಿಮ್‌ಗಳಿಗೆ ಯಾವುದೇ ಉಳಿತಾಯ ಕೊಡುಗೆಗಳನ್ನು ನೀಡಲಾಗಿಲ್ಲ.
-
ಕೋನಾ ಬೆಲೆಯು 23.84 ಲಕ್ಷದಿಂದ 24.03 ಲಕ್ಷದವರೆಗೆ ಇದೆ.
ಗಮನಿಸಿ
-
ಟೇಬಲ್ ನಲ್ಲಿ ನೀಡಲಾಗಿರುವ ಕೊಡುಗೆಗಳು ಆಯಾ ನಗರ ಮತ್ತು ರಾಜ್ಯವನ್ನು ಅವಲಂಬಿಸಿ ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಹ್ಯುಂಡೈ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.
-
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ
ಇನ್ನಷ್ಟು ಓದಿ: ಗ್ರಾಂಡ್ i10 ನಿಯೋಸ್ AMT