2024 ರ Tata Altrozನಲ್ಲಿ ಶೀಘ್ರದಲ್ಲೇ ಪರಿಚಯಿಸಲಾಗುವ 5 ಪ್ರಮುಖ ಅಪ್ಡೇಟ್ ಗಳು
ಟಾಟಾ ಆಲ್ಟ್ರೋಝ್ ಗಾಗಿ ansh ಮೂಲಕ ಜೂನ್ 05, 2024 07:16 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಆಲ್ಟ್ರೋಜ್ ನಾಲ್ಕು ಪ್ರಮುಖ ಹೊಸ ಫೀಚರ್ ಗಳನ್ನು ಪಡೆಯಲಿದೆ ಮತ್ತು ಅದರ ಪವರ್‌ಟ್ರೇನ್ ಆಯ್ಕೆಗಳಲ್ಲಿ ಒಂದನ್ನು ಮುಂಬರುವ ಆಲ್ಟ್ರೋಜ್ ರೇಸರ್‌ನಲ್ಲಿ ಬಳಸಲಾಗುವ ಹೊಸ ಯೂನಿಟ್ ನೊಂದಿಗೆ ಬದಲಾಯಿಸುವ ಸಾಧ್ಯತೆಯಿದೆ.
ಮುಂಬರುವ ದಿನಗಳಲ್ಲಿ ಟಾಟಾ ತನ್ನ ಆಲ್ಟ್ರೊಜ್ ರೇಸರ್ ಅನ್ನು ಬಿಡುಗಡೆ ಮಾಡಲಿದೆ, ಇದು ಬಹಳಷ್ಟು ಹೊಸ ಫೀಚರ್ ಗಳನ್ನು ಪಡೆಯಲಿದೆ ಮತ್ತು ಅವುಗಳಲ್ಲಿ ಕೆಲವು ಫೀಚರ್ ಗಳನ್ನು ಸ್ಟ್ಯಾಂಡರ್ಡ್ ಟಾಟಾ ಆಲ್ಟ್ರೋಜ್‌ಗೆ ಕೂಡ ನೀಡಲಾಗುತ್ತದೆ. OEM ವೆಬ್‌ಸೈಟ್ ನಲ್ಲಿ ಹೊಸ ವಿವರಗಳನ್ನು ಇನ್ನೂ ಅಪ್ಡೇಟ್ ಮಾಡಲಾಗಿಲ್ಲ, ಆದರೆ ಅಪ್ಡೇಟ್ ಆಗಿರುವ ಹ್ಯಾಚ್‌ಬ್ಯಾಕ್‌ನ ಹೊಸ ಬ್ರೋಷರ್ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ, ಮತ್ತು ಇದು ಬಹಳಷ್ಟು ಹೊಸ ಮಾಹಿತಿಯನ್ನು ಬಹಿರಂಗಪಡಿಸಿದೆ. 2024 ಆಲ್ಟ್ರೋಜ್ ನಲ್ಲಿ ನೀಡಲಾಗುವ 5 ದೊಡ್ಡ ಬದಲಾವಣೆಗಳು ಇಲ್ಲಿವೆ.
ದೊಡ್ಡ ಟಚ್‌ಸ್ಕ್ರೀನ್
ಅಪ್ಡೇಟ್ ಆಗಿರುವ ಆಲ್ಟ್ರೋಜ್ ನ ಟಾಪ್-ಸ್ಪೆಕ್ ವರ್ಷನ್ ಗಳು ಈಗಿರುವ 7-ಇಂಚಿನ ಯೂನಿಟ್ ಬದಲು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತವೆ. ಹೊಸ ಸ್ಕ್ರೀನ್ ಟಾಟಾ ಪಂಚ್ EV ಯಲ್ಲಿರುವ ಸ್ಕ್ರೀನ್ ನಂತೆಯೇ ಇದೆ. ದೊಡ್ಡ ಸ್ಕ್ರೀನ್ ಜೊತೆಗೆ, ಆಲ್ಟ್ರೊಜ್ ತನ್ನ ಇನ್ಫೋಟೈನ್‌ಮೆಂಟ್ ಯೂನಿಟ್‌ಗೆ ಟಾಟಾದ ಹೊಸ OS ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಕೂಡ ನೀಡಿದೆ.
ಹೊಸ ಡ್ರೈವರ್ ಡಿಸ್ಪ್ಲೇ
ಟಾಟಾ ತನ್ನ ಆಲ್ಟ್ರೊಜ್‌ನ ಕ್ಯಾಬಿನ್‌ನಲ್ಲಿ ಎರಡೂ ಸ್ಕ್ರೀನ್ ಗಳನ್ನು (ಇನ್ಫೋಟೈನ್‌ಮೆಂಟ್ ಮತ್ತು ಡ್ರೈವರ್‌ಸ್ ಡಿಸ್‌ಪ್ಲೇ) ಕೂಡ ಬದಲಾಯಿಸಿದೆ ಮತ್ತು ಈಗ ಅದರ ಟಾಪ್-ಸ್ಪೆಕ್ ವೇರಿಯಂಟ್ ಗಳು 7-ಇಂಚಿನ ಫುಲ್-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಪಡೆದಿದೆ.
6 ಏರ್‌ಬ್ಯಾಗ್ ಗಳು
ಇಲ್ಲಿಯವರೆಗೆ, ಟಾಪ್-ಸ್ಪೆಕ್ ಆಲ್ಟ್ರೋಜ್ ಕೂಡ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಮಾತ್ರ ಹೊಂದಿತ್ತು. ಆಲ್ಟ್ರೊಜ್ ರೇಸರ್ ಬಿಡುಗಡೆಯೊಂದಿಗೆ, ಟಾಟಾ ಶೀಘ್ರದಲ್ಲೇ ತನ್ನ ಈ ಹ್ಯಾಚ್‌ಬ್ಯಾಕ್‌ನ ಸಾಮಾನ್ಯ ವರ್ಷನ್ ಗಳಿಗೆ ಕೂಡ ಆರು ಏರ್‌ಬ್ಯಾಗ್‌ಗಳನ್ನು ಸೇರಿಸಲಿದೆ.
360-ಡಿಗ್ರಿ ಕ್ಯಾಮೆರಾ
ಟಾಟಾದ ಹೊಸ ಕಾರುಗಳಿಂದ ಪಡೆದಿರುವ ಮತ್ತೊಂದು ಫೀಚರ್ ಎಂದರೆ 360-ಡಿಗ್ರಿ ಕ್ಯಾಮೆರಾ. ಈ ಫೀಚರ್ ಟಾಪ್-ಸ್ಪೆಕ್ XZ ಲಕ್ಸ್ ವೇರಿಯಂಟ್ ನಿಂದ ಲಭ್ಯವಿದೆ ಮತ್ತು ಬ್ಲೈಂಡ್ ವ್ಯೂ ಮಾನಿಟರ್‌ನೊಂದಿಗೆ ಬರುತ್ತದೆ. ಡ್ರೈವರ್ ಟರ್ನ್ ಇಂಡಿಕೇಟರ್ ಅನ್ನು ಬಳಸಿದಾಗಲೆಲ್ಲಾ ಟಚ್‌ಸ್ಕ್ರೀನ್ ಬ್ಲೈಂಡ್ ವ್ಯೂ ಮಾನಿಟರ್ ಫೀಡ್ ಅನ್ನು ತೋರಿಸುತ್ತದೆ.
ಬದಲಾದ ಪವರ್‌ಟ್ರೇನ್
ಹ್ಯಾಚ್‌ಬ್ಯಾಕ್‌ಗೆ ಇದೊಂದು ದೊಡ್ಡ ಬದಲಾವಣೆಯಾಗಿದೆ. ಇಲ್ಲಿಯವರೆಗೆ, ಆಲ್ಟ್ರೋಜ್ ಮೂರು ಎಂಜಿನ್ ಆಯ್ಕೆಗಳನ್ನು ನೀಡುತ್ತಿತ್ತು: 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು 110 PS 1.2-ಲೀಟರ್ ಟರ್ಬೊ-ಪೆಟ್ರೋಲ್. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಇನ್ನೂ ಕೂಡ ನೀಡಲಾಗುತ್ತಿದೆ, ಆದರೆ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ನೆಕ್ಸನ್‌ನ 1.2-ಲೀಟರ್ ಯೂನಿಟ್ ನೊಂದಿಗೆ ಬದಲಾಯಿಸಲಾಗಿದೆ (ಇದನ್ನು ಆಲ್ಟ್ರೋಜ್ ರೇಸರ್‌ನಲ್ಲಿಯೂ ನೀಡಲಾಗುವುದು), ಇದು ಈಗಿರುವ ಎಂಜಿನ್ ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ.
ಇದನ್ನು ಕೂಡ ಓದಿ: ಟಾಟಾ ಆಲ್ಟ್ರೋಜ್ ರೇಸರ್‌ನ ಪ್ರತಿಯೊಂದು ವೇರಿಯಂಟ್ ನ ವಿವರಗಳು ಇಲ್ಲಿವೆ
ಆದರೆ, ಈ ಟರ್ಬೊ-ಪೆಟ್ರೋಲ್ ಎಂಜಿನ್ ಆಲ್ಟ್ರೋಜ್ ರೇಸರ್‌ನೊಂದಿಗೆ ಮಾತ್ರ ಲಭ್ಯವಿರುತ್ತದೆ ಮತ್ತು ಸ್ಟ್ಯಾಂಡರ್ಡ್ ಆಲ್ಟ್ರೊಜ್ ಅನ್ನು ಟರ್ಬೊ-ಪೆಟ್ರೋಲ್ ಪವರ್‌ಟ್ರೇನ್‌ನೊಂದಿಗೆ ನೀಡುವ ಸಾಧ್ಯತೆ ಇಲ್ಲ.
ಟಾಟಾ ಆಲ್ಟ್ರೋಜ್ ರೇಸರ್ ಜೂನ್ 7 ರಂದು ಮಾರುಕಟ್ಟೆಗೆ ಬರಲಿದೆ ಮತ್ತು ಅಪ್ಡೇಟ್ ಆಗಿರುವ ಆಲ್ಟ್ರೋಜ್ ಶೀಘ್ರದಲ್ಲೇ ಸ್ಪೋರ್ಟಿಯರ್ ವರ್ಷನ್ ನ ಜೊತೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆಲ್ಟ್ರೋಜ್ ರೇಸರ್ ಬೆಲೆಯು ರೂ 10 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಲಿದೆ ಎಂಬ ನಿರೀಕ್ಷೆಯಿದೆ ಮತ್ತು ಅಪ್ಡೇಟ್ ಆಗಿರುವ ಆಲ್ಟ್ರೋಜ್ ಈಗಿರುವ ಮಾಡೆಲ್ ಗಿಂತ ಹೆಚ್ಚು ದುಬಾರಿಯಾಗಿದೆ, ಮತ್ತು ಇದರ ಬೆಲೆ ರೂ 6.65 ಲಕ್ಷದಿಂದ ರೂ 10.80 ಲಕ್ಷದವರೆಗೆ (ಎಕ್ಸ್ ಶೋರೂಂ) ಇದೆ.
ಇನ್ನಷ್ಟು ಓದಿ: ಆಲ್ಟ್ರೋಜ್ ಆನ್ ರೋಡ್ ಬೆಲೆ