ಇಲ್ಲಿವೆ 2025ರ ಅಂತ್ಯದಲ್ಲಿ ಬಿಡುಗಡೆಯಾಗುವ ಎಲ್ಲಾ Tata EVಗಳು
ಈ ಎಲ್ಲಾ ಮಾಡೆಲ್‌ಗಳು ಹೊಸ ಟಾಟಾ ಆ್ಯಕ್ಟಿ.ಇವಿ ಸಂಪೂರ್ಣ ಇಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುತ್ತದೆ
ಟಾಟಾದ ಹೊಚ್ಚ ಹೊಸ ಆ್ಯಕ್ಟಿ.ಇವಿ ಪ್ಯೂರ್-ಇಲೆಕ್ಟ್ರಿಕ್ ಆರ್ಕಿಟೆಕ್ಚರ್ ಆಧಾರಿತ ಮೊದಲ ಮಾಡೆಲ್ ಆಗಿರುವ ಟಾಟಾ ಪಂಚ್ EV ಈಗಷ್ಟೇ ಬಿಡುಗಡೆಯಾಗಿದೆ. ಪ್ಯಾಸೆಂಜರ್ ಇಲೆಕ್ಟ್ರಿಕ್ ಮೊಬಿಲಿಟಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಶೈಲೇಶ್ ಚಂದ್ರ ಅವರೊಂದಿಗಿನ ಸಂವಾದದಲ್ಲಿ, ಆ್ಯಕ್ಟಿ.ಇವಿ ಅನ್ನು ಆಧರಿಸಿ ಇನ್ನೂ ನಾಲ್ಕು ಇವಿಗಳಿದ್ದು 2025ರ ಅಂತ್ಯದ ವೇಳೆಗೆ ಇವುಗಳು ಬಿಡುಗಡೆಯಾಗಲಿವೆ ಎಂಬುದನ್ನು ದೃಢಪಡಿಸಿದ್ದಾರೆ. ಮುಂದೇನು ಬರಲಿದೆ ಎಂಬುದನ್ನು ನೋಡೋಣ
ಟಾಟಾ ಕರ್ವ್ ಇವಿ
ನಿರೀಕ್ಷಿತ ಬಿಡುಗಡೆ: 2024ರ ಮಧ್ಯ
ನಿರೀಕ್ಷಿತ ಬೆಲೆಗಳು: ರೂ 20 ಲಕ್ಷದಿಂದ ಪ್ರಾರಂಭ
2021 ರ ನಂತರ, ಟಾಟಾದ ಪ್ರಥಮ ಹೊಚ್ಚಹೊಸ ಕರ್ವ್ ಇವಿ ಕೂಪ್-ವಿನ್ಯಾಸದ ಕಾಂಪ್ಯಾಕ್ಟ್ SUV ಆಗಿದ್ದು ಈ ಕಾರುತಯಾರಕರ ಲೈನ್ ಅಪ್‌ನಲ್ಲಿ ನೆಕ್ಸಾನ್ ಮತ್ತು ಹ್ಯಾರಿಯರ್ SUVಯ ನಡುವೆ ಬರುತ್ತದೆ. ಟಾಟಾ ಇದನ್ನು 2022ರಲ್ಲಿ ಪರಿಕಲ್ಪನೆ ರೂಪದಲ್ಲಿ ತೋರಿಸಿದ್ದು, ಇತ್ತೀಚಿನ ತಿಂಗಳುಗಳಲ್ಲಿ ಅನೇಕ ಬಾರಿ ಪರೀಕ್ಷಾರ್ಥ ಕಾರುಗಳನ್ನು ಸ್ಪೈ ಮಾಡಲಾಗಿದೆ.
ಟಾಟಾ ಹ್ಯಾರಿಯರ್ ಇವಿ
ನಿರೀಕ್ಷಿತ ಬಿಡುಗಡೆ: 2024ರ ಅಂತ್ಯದಲ್ಲಿ
ನಿರೀಕ್ಷಿತ ಬೆಲೆಗಳು: ರೂ 25 ಲಕ್ಷದಿಂದ ಪ್ರಾರಂಭ
ಪ್ರಾಯಶಃ ಹ್ಯಾರಿಯರ್ ಮಧ್ಯಮ-ಗಾತ್ರದ SUVಯ ಸಂಪೂರ್ಣ-ಇಲೆಕ್ಟ್ರಿಕ್ ಆವೃತ್ತಿಯು 2024 ರಲ್ಲಿ ಟಾಟಾದ ಅತ್ಯಂತ ದೊಡ್ಡ ಹೊಚ್ಚ ಹೊಸ SUV ಆಗಲಿದೆ. ಇದು ಮಾರಾಟಕ್ಕೆ ಬರುವಾಗ ಟಾಟಾದ ಮುಂಚೂಣಿ ಇವಿಯಾಗಲಿದ್ದು, ಆಲ್-ವ್ಹೀಲ್ ಡ್ರೈವ್ ಟ್ರೇನ್ ಅನ್ನೂ ನೀಡುತ್ತಿರುವುದು ಹ್ಯಾರಿಯರ್ EV ಯ ಅತ್ಯಂತ ರೋಮಾಂಚಕಾರಿ ಪ್ರತೀಕ್ಷೆಯಾಗಲಿದೆ. ಇದು ಆಟೋ ಎಕ್ಸ್‌ಪೋ 2023 ರಲ್ಲಿ ಪರಿಕಲ್ಪನೆ ರೂಪದಲ್ಲಿ ಪಾದಾರ್ಪಣೆ ಮಾಡಿದ್ದು ಹೊಸ ಆ್ಯಕ್ಟಿ.ಇವಿ ಪ್ಲಾಟ್‌ಫಾರ್ಮ್ ಆಧರಿಸಿದ ಅತ್ಯಂತ ದೊಡ್ಡ ಆಫರಿಂಗ್‌ಗಳಲ್ಲಿ ಒಂದಾಗಲಿದೆ.
ಸಂಬಂಧಿತ: ಟಾಟಾ ಹ್ಯಾರಿಯರ್ ಮತ್ತು ಹ್ಯಾರಿಯರ್ ಇವಿ ಪರಿಕಲ್ಪನೆ ನಡುವಿನ ಡಿಸೈನ್ ವ್ಯತ್ಯಾಸಗಳನ್ನು ಅನ್ವೇಷೀಸಿ 12 ಚಿತ್ರಗಳಲ್ಲಿ
ಟಾಟಾ ಸಿಯಾರಾ ಇವಿ
ನಿರೀಕ್ಷಿತ ಬಿಡುಗಡೆ: 2025ರ ಮಧ್ಯ
ನಿರೀಕ್ಷಿತ ಬೆಲೆಗಳು: ರೂ 25 ಲಕ್ಷದಿಂದ ಪ್ರಾರಂಭ
ಮತ್ತೊಮ್ಮೆ ಸಂಪೂರ್ಣ-ಇಲೆಕ್ಟ್ರಿಕ್ ಅವತಾರದಲ್ಲಿ ಬಂದಿರುವುದರಿಂದ ಸಾಂಪ್ರದಾಯಿಕ ಟಾಟಾ ಸಿಯಾರಾ ಹೆಸರು ಬಂದಿದ್ದು, ಇದನ್ನು ಕೂಡಾ ಆಟೋ ಎಕ್ಸ್‌ಪೋ 2023 ರಲ್ಲಿ ಇದನ್ನೂ ಕೂಡಾ ಪರಿಕಲ್ಪನೆಯಾಗಿ ತೋರಿಸಲಾಗಿತ್ತು. ಇದು ಮೂಲ ಸಿಯಾರಾದ ಕೆಲವು ಸಾಂಪ್ರದಾಯಿಕ ಸ್ಟೈಲಿಂಗ್ ಅಂಶಗಳನ್ನು ಹೊಂದಿದ್ದು ಆಧುನಿಕ ದಿನಗಳಿಗೆ ತಕ್ಕಂತೆ ರೂಪುಗೊಳ್ಳಲಿದೆ. ಸಿಯಾರಾ ಇವಿಯು ಕರ್ವ್ ಇವಿಗೆ ಜೀವನಶೈಲಿ ಪರ್ಯಾಯವಾಗಲಿದೆ
ಟಾಟಾ ಆಲ್ಟ್ರೋಝ್ ಇವಿ
ನಿರೀಕ್ಷಿತ ಬಿಡುಗಡೆ: 2025ರ ಅಂತ್ಯ
ನಿರೀಕ್ಷಿತ ಬೆಲೆಗಳು: ರೂ 15 ಲಕ್ಷದಿಂದ ಪ್ರಾರಂಭ
ಪ್ರಾಯಶಃ ಮುಂಬರುವ ಟಾಟಾ ಇವಿಗಳಿಗೆ ಅಲ್ಟ್ರೋಝ್ ಇವಿ ಅತ್ಯಂತ ಆಶ್ಚರ್ಯಕರ ಘೋಷಣೆಯಾಗಿರುತ್ತದೆ. ಮೂಲತಃ 2021 ರಲ್ಲಿ ಉತ್ಪಾದನೆಗೆ ಹತ್ತಿರದ ಪರಿಕಲ್ಪನೆಯ ಪ್ರದರ್ಶನದ ನಂತರ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು ಮತ್ತು ಅನೇಕ ಪರೀಕ್ಷಾರ್ಥ ಕಾರುಗಳನ್ನು ನೋಡಿ ಈ ಇಲೆಕ್ಟ್ರಿಕ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಟಾಟಾದ ಇವಿ ಯೋಜನೆಯಲ್ಲಿ ಇರುವುದಿಲ್ಲ ಎಂದು ನಾವು ಭಾವಿಸಿದ್ದೆವು. ಆದಾಗ್ಯೂ ಆ್ಯಕ್ಟಿ.ಇವಿ ಪ್ಲಾಟ್‌ಫಾರ್ಮ್ ಆಧಾರಿತ ಆಲ್ಟ್ರೋಝ್ ಇವಿ ಮುಂದಿನ ವರ್ಷ ಆಗಮಿಸಲಿದೆ ಎಂಬ ದೃಢೀಕರಣವನ್ನು ನಾವು ಪಡೆದಿದ್ದೇವೆ. ಇದು ಆಲ್ಟ್ರೋಝ್ ICE (ಇಂಟರ್ನಲ್ ಕಂಬಶನ್ ಇಂಜಿನ್) ಮಾಡೆಲ್‌ನ ನವೀಕೃತ ಆವೃತ್ತಿಯನ್ನು ಆಧರಿಸಿರಬಹುದು, ಹಾಗೂ ಹೊಸ ಡಿಸೈನ್ ಮತ್ತು ಅನೇಕ ಫೀಚರ್ ಅಪ್‌ಡೇಟ್‌ಗಳೊಂದಿಗೆ 2024ರ ವೇಳೆಗೆ ಪಾದಾರ್ಪಣೆ ಮಾಡಬಹುದು
ಯಾವ ಹೊಸ ಟಾಟಾ ಇವಿ ನಿಮಗೆ ಹೆಚ್ಚು ಆಕರ್ಷಕವಾಗಿದೆ? ಕೆಳಗಿನ ಕಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ.