ಪರೀಕ್ಷೆ ವೇಳೆ ಮತ್ತೊಮ್ಮೆ ಪ್ರತ್ಯಕ್ಷವಾದ Tata Curvv

published on ನವೆಂಬರ್ 23, 2023 04:45 pm by shreyash for ಟಾಟಾ ಕರ್ವ್‌ ಇವಿ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಟಾಟಾ ಕರ್ವ್‌ ಕಾನ್ಸೆಪ್ಟ್‌ ನಲ್ಲಿ ತೋರಿಸಿರುವಂತೆಯೇ ಇದು ಅದೇ ಆಂಗುಲರ್ LED‌ ಟೇಲ್‌ ಲೈಟ್‌ ಗಳು ಮತ್ತು ದಪ್ಪನೆಯ ಟೇಲ್‌ ಗೇಟ್‌ ವಿನ್ಯಾಸವನ್ನು ಹೊಂದಿದೆ.

Tata Curvv EV Spied

  • ಟಾಟಾ ಕರ್ವ್‌ EV ಯು 2024ರಲ್ಲಿ ಬಿಡುಗಡೆಯಾಗಲಿದೆ.
  • ಎಲೆಕ್ಟ್ರಿಕ್‌ ಆವೃತ್ತಿಯಾಗಿರುವ Curvv Evಯು 500 km ತನಕದ ಶ್ರೇಣಿಯನ್ನು ಹೊಂದಿರಲಿದೆ.
  •  ಟಾಟಾ ಕರ್ವ್‌ ವಾಹನದ ICE ಆವೃತ್ತಿಯು 2023 ಅಟೋ ಎಕ್ಸ್‌ ಪೊ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಹೊಸ  1.2-ಲೀಟರ್ T-GDi (ಟರ್ಬೊ) ಪೆಟ್ರೋಲ್‌ ಎಂಜಿನ್‌ ಅನ್ನು ಬಳಸಲಿದೆ.
  • ಇದು 12.3 ಇಂಚಿನ ಇನ್ಫೊಟೈನ್‌ ಮೆಂಟ್‌ ಸಿಸ್ಟಂ, 10.25 ಇಂಚಿನ ಚಾಲಕನ ಡಿಸ್ಪ್ಲೇ ಮತ್ತು ಮಿನುಗುವ ಟಾಟಾ ಲೋಗೋ ಜೊತೆಗೆ ಹೊಸ ಸ್ಟೀಯರಿಂಗ್‌ ವೀಲ್‌ ಅನ್ನು ಪಡೆಯಲಿದೆ.
  • ಆರು ಏರ್‌ ಬ್ಯಾಗುಗಳು, 360-ಡಿಗ್ರಿ ಕ್ಯಾಮರಾ, ಮತ್ತು ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS) ಇತ್ಯಾದಿಗಳ ಮೂಲಕ ಸುರಕ್ಷತೆಗೆ ಸಾಕಷ್ಟು ಒತ್ತು ನೀಡಲಾಗಿದೆ.

 ಟಾಟಾ ಕರ್ವ್‌ EV ವಾಹನವು 2024ರಲ್ಲಿ ಬಿಡುಗಡೆಯಾಗಲಿದ್ದು, ಇದಕ್ಕೂ ಮೊದಲು ಇದರ ಪರೀಕ್ಷಾರ್ಥ ವಾಹನವು ರಸ್ತೆಯಲ್ಲಿ ಸುತ್ತಾಡುವುದು ಕಂಡು ಬಂದಿದೆ. ಇತ್ತೀಚಿನ ಸ್ಪೈ ಶಾಟ್‌ ಗಳು, ಇದರ ಹಿಂಭಾಗವು ಹೇಗೆ ಕಾಣಿಸುತ್ತದೆ ಎಂಬುದರ ಸ್ಪಷ್ಟ ಚಿತ್ರಣವನ್ನು ನೀಡುತ್ತವೆ.

 

ಕಾನ್ಸೆಪ್ಟ್‌ ನಂತೆಯೇ ಲುಕ್‌

 ಟಾಟಾ ಕರ್ವ್‌ ವಾಹನದ ಹಿಂಭಾಗದ ವಿನ್ಯಾಸವು, 2023ರ ಅಟೋ ಎಕ್ಸ್‌ ಪೋ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಕಾನ್ಸೆಪ್ಟ್‌ ಆವೃತ್ತಿಯಂತೆಯೇ ಕಾಣಿಸಿಕೊಳ್ಳುತ್ತದೆ. ಹೊದಿಕೆಗಳ ಅಡಿಯಲ್ಲಿ ಆಂಗುಲರ್‌ LED ಟೇಲ್‌ ಲೈಟ್‌ ಗಳನ್ನು ಕಾಣಬಹುದಾಗಿದ್ದ ಇದರ ಕೂಪೆ ರೂಫ್‌ ಲೈನ್‌ ಮತ್ತು ಉದ್ದನೆಯ ಟೇಲ್‌ ಗೇಟ್‌ ಗಳನ್ನು ಸಹ ಚಿತ್ರದಲ್ಲಿ ಗಮನಿಸಬಹುದು. ಈ ಬಾರಿಯ ಚಿತ್ರಗಳಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳದೆ ಇದ್ದರೂ ಟಾಟಾ ಕರ್ವ್‌ ವಾಹನದಲ್ಲಿ ಫ್ಲಶ್‌ ಪ್ರಕಾರದ ಡೋರ್‌ ಹ್ಯಾಂಡಲ್‌ ಗಳನ್ನು ಒಳಗೊಂಡಿರುವುದನ್ನು ಹಿಂದಿನ ಸ್ಪೈ ಶಾಟ್‌ ಗಳು ದೃಢೀಕರಿಸಿವೆ.

 ಇದನ್ನು ಸಹ ಓದಿರಿ: ಪರೀಕ್ಷೆ ವೇಳೆ ಕಾಣಿಸಿಕೊಂಡ ಮಹೀಂದ್ರಾ XUV.e8 (XUV700 ಎಲೆಕ್ಟ್ರಿಕ್)‌, ಹೊಸ ವಿವರಗಳು ಬಹಿರಂಗ

ಈ ಹಿಂದೆ ಕಾಣಿಸಿಕೊಂಡ ಮುಂಭಾಗದ ಸ್ಪೈ ಶಾಟ್‌ ಗಳ ಪ್ರಕಾರ, ಕರ್ವ್‌ ವಾಹನವು ಟಾಟಾ ನೆಕ್ಸನ್‌, ಟಾಟಾ ಹ್ಯಾರಿಯರ್‌ ಮತ್ತು ಟಾಟಾ ಸಫಾರಿಯಲ್ಲಿ ಕಂಡಂತೆಯೇ ವಿಭಜಿತ ಮತ್ತು ಲಂಬಾಂತರವಾಗಿ ಇರಿಸಿದ ಹೆಡ್‌ ಲೈಟ್‌ ವ್ಯವಸ್ಥೆಯನ್ನು ಹೊಂದಿರಲಿದೆ. ಪ್ರೊಫೈಲ್‌ ಕುರಿತು ಮಾತನಾಡುವುದಾದರೆ ಇದು ಏರೋಡೈನಾಮಿಕಲ್‌ ಶೈಲಿಯ ಅಲೋಯ್‌ ವೀಲ್‌ ಗಳನ್ನು ಪಡೆಯಲಿದೆ.

ಒಳಗಡೆ ಇದು ಹೇಗಿದೆ?

 ಉತ್ಪಾದನೆಗೆ ಸಿದ್ಧವಾಗಿರುವ ಟಾಟಾ ಕರ್ವ್‌ ವಾಹನದ ಒಳಾಂಗಣವನ್ನು ನಾವು ಇನ್ನಷ್ಟೇ ನೋಡಬೇಕು. ಆದರೆ ಟಾಟಾ ನೆಕ್ಸನ್‌, ಟಾಟಾ ಹ್ಯಾರಿಯರ್‌ ಮತ್ತು ಟಾಟಾ ಸಫಾರಿಯ ಇತ್ತೀಚಿನ ಪರಿಷ್ಕರಣೆಗಳ ಪ್ರಕಾರ ಇದು ಮಿನುಗುವ ಟಾಟಾ ಲೋಗೊ ಜೊತೆಗೆ 2 ಸ್ಪೋಕ್‌ ಸ್ಟೀಯರಿಂಗ್‌ ವೀಲ್‌ ಅನ್ನು ಹೊಂದಿರಲಿದೆ.

 ಟಾಟಾ ಕರ್ವ್‌ ವಾಹನವು 12.3 ಇಂಚಿನ ಇನ್ಫೊಟೈನ್‌ ಮೆಂಟ್‌ ಸಿಸ್ಟಂ, 10.25 ಇಂಚಿನ ಚಾಲಕನ ಡಿಜಿಟಲ್‌ ಡಿಸ್ಪ್ಲೇ, ಅಟೋಮ್ಯಾಟಿಕ್‌ ಎ.ಸಿ ಮತ್ತು ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ ಗಳನ್ನು ಪಡೆಯಲಿದೆ. ಸುರಕ್ಷತೆಯ ಕುರಿತು ಮಾತನಾಡುವುದಾದರೆ, ಇದು ಆರು ಏರ್‌ ಬ್ಯಾಗ್‌ ಗಳು, ಮುಂಭಾಗದ ಮತ್ತು ಹಿಂಭಾಗದ ಪಾರ್ಕಿಂಗ್‌ ಸೆನ್ಸಾರ್‌ ಗಳು ಮತ್ತು 360 ಡಿಗ್ರಿ ಕ್ಯಾಮರಾವನ್ನು ಪಡೆಯಲಿದೆ. ಟಾಟಾ ಸಂಸ್ಥೆಯು ಕರ್ವ್‌ ವಾಹನದಲ್ಲಿ ಅಟೋನೋಮಸ್‌ ಎಮರ್ಜೆನ್ಸಿ ಬ್ರೇಕಿಂಗ್‌ (AEB) ಸೇರಿದಂತೆ ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS), ಮತ್ತು ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ ಇತ್ಯಾದಿಗಳನ್ನು ಸಹ ಅಳವಡಿಸಲಿದೆ.

ಪವರ್‌ಟ್ರೇನ್‌ ಕುರಿತು..

 ಕರ್ವ್‌ EV ವಾಹನವು 500 km ತನಕದ ಶ್ರೇಣಿಯನ್ನು ನೀಡಲಿದೆ. ಆದರೆ ಬ್ಯಾಟರಿ ಪ್ಯಾಕ್‌ ಮತ್ತು ಎಲೆಕ್ಟ್ರಿಕ್‌ ಮೋಟಾರ್‌ ನ ವಿವರಗಳನ್ನು ಇನ್ನಷ್ಟೇ ಬಹಿರಂಗಪಡಿಸಬೇಕಾಗಿದೆ. 

 ಇನ್ನೊಂದೆಡೆ ಟಾಟಾ ಕರ್ವ್‌ ವಾಹನದ ICE ಆವೃತ್ತಿಯು 125 PS ಮತ್ತು 225 Nm ಉಂಟು ಮಾಡುವ ಹೊಸ 1.2 ಲೀಟರ್‌ T-GDi (ಟರ್ಬೊ) ಮೂಲಕ ಚಲಿಸಲಿದೆ. ಟ್ರಾನ್ಸ್‌ ಮಿಶನ್‌ ಆಯ್ಕೆಗಳನ್ನು ಇನ್ನಷ್ಟೇ ದೃಢೀಕರಿಸಬೇಕು. ಆದರೆ ಇದು 7 ಸ್ಪೀಡ್‌ ಡ್ಯುವಲ್‌ ಕ್ಲಚ್‌ ಟ್ರಾನ್ಸ್‌ ಮಿಶನ್‌ (DCT) ಅನ್ನು ಪಡೆಯಲಿದೆ. 

 ಇದನ್ನು ಸಹ ನೋಡಿರಿ: ಕಳೆದ ತಿಂಗಳಿನಲ್ಲಿ ರೂ. 14 ಕೋಟಿ ಮೊತ್ತದ ಕಾರುಗಳನ್ನು ಖರೀದಿಸಿದ 5 ಸೆಲೆಬ್ರಿಟಿಗಳು

 

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಟಾಟಾ ಕರ್ವ್‌ EV ವಾಹನವು ರೂ. 20 ಲಕ್ಷಕ್ಕೆ ದೊರೆಯಲಿದ್ದು ಈ SUV ಕೂಪೆಯ ICE ಆವೃತ್ತಿಯು ರೂ. 10.5 ಲಕ್ಷದಷ್ಟು ಆರಂಭಿಕ ಬೆಲೆಯನ್ನು (ಎಲ್ಲಾ ಬೆಲೆಗಳು ಎಕ್ಸ್‌ - ಶೋರೂಂ ಬೆಲೆಗಳಾಗಿವೆ) ಹೊಂದಿರಲಿದೆ. ಕರ್ವ್ EV ಯು MG ZS EV ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ ಜೊತೆಗೆ ಸ್ಪರ್ಧಿಸಲಿದ್ದು ಇದರ ICE ಆವೃತ್ತಿಯು ಮಾರುತಿ ಗ್ರಾಂಡ್‌ ವಿಟಾರಟೊಯೊಟಾ ಹೈರೈಡರ್ಹ್ಯುಂಡೈ ಕ್ರೆಟಕಿಯಾ ಸೆಲ್ಟೋಸ್ಸ್ಕೋಡಾ ಕುಶಕ್ಫೋಕ್ಸ್‌ ವ್ಯಾಗನ್‌ ಟೈಗುನ್MG ಆಸ್ಟರ್ಹೋಂಡಾ ಎಲೆವೇಟ್, ಮತ್ತು ಸಿಟ್ರನ್ C3 ಏರ್‌ ಕ್ರಾಸ್ ಇತ್ಯಾದಿಗಳೊಂದಿಗೆ ಸ್ಪರ್ಧಿಸಲಿದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಕರ್ವ್‌ EV

Read Full News

explore ಇನ್ನಷ್ಟು on ಟಾಟಾ ಕರ್ವ್‌ ಇವಿ

space Image

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience