Citroen Basalt, Aircross ಮತ್ತು C3ಯ ಡಾರ್ಕ್ ಎಡಿಷನ್‌ಗಳು ಬಿಡುಗಡೆ, ಬೆಲೆಗಳು 8.38 ಲಕ್ಷ ರೂ.ನಿಂದ ಆರಂಭ
ಏಪ್ರಿಲ್ 14, 2025 05:40 pm ರಂದು kartik ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಮೂರು ಡಾರ್ಕ್ ಎಡಿಷನ್‌ಗಳು ಟಾಪ್ ಮ್ಯಾಕ್ಸ್ ವೇರಿಯೆಂಟ್‌ಅನ್ನು ಆಧರಿಸಿವೆ ಮತ್ತು ಸೀಮಿತ ಅವಧಿಗೆ ಲಭ್ಯವಿರುತ್ತವೆ
-
ಮೂರು ಮೊಡೆಲ್‌ಗಳ ಹೊರಭಾಗವು ಪೆರ್ಲಾ ನೆರಾ ಕಪ್ಪು ಬಣ್ಣದಲ್ಲಿ ಡಾರ್ಕ್ ಕ್ರೋಮ್ ಅಸ್ಸೆಂಟ್‌ಗಳೊಂದಿಗೆ ಫಿನಿಶ್ ಮಾಡಲಾಗಿದೆ.
-
ಇಂಟೀರಿಯರ್ ಕಪ್ಪು ಥೀಮ್ ಅನ್ನು ಹೊಂದಿದ್ದು, ಡ್ಯಾಶ್‌ಬೋರ್ಡ್ ಮತ್ತು ಸೀಟುಗಳ ಮೇಲೆ ಕೆಂಪು ಹೊಲಿಗೆಯನ್ನು ಹೊಂದಿದೆ.
-
ಮೂರು ಕಾರುಗಳ ಫೀಚರ್‌ಗಳು, ಸುರಕ್ಷತಾ ಸೂಟ್ ಮತ್ತು ಪವರ್‌ಟ್ರೇನ್ ಬದಲಾಗದೆ ಉಳಿದಿವೆ.
-
ಸಿಟ್ರೊಯೆನ್ ಬಸಾಲ್ಟ್, ಏರ್‌ಕ್ರಾಸ್ ಮತ್ತು C3 ನ ಡಾರ್ಕ್ ಎಡಿಷನ್‌ಗಳನ್ನು 23,000 ರೂ.ವರೆಗಿನ ಹೆಚ್ಚಿನ ಬೆಲೆಯನ್ನು ಹೊಂದಿದೆ.
ಸಿಟ್ರೊಯೆನ್ ಭಾರತದಲ್ಲಿ ಬಸಾಲ್ಟ್, ಸಿ3 ಮತ್ತು ಏರ್‌ಕ್ರಾಸ್‌ನ ಡಾರ್ಕ್ ಎಡಿಷನ್‌ಗಳನ್ನು ಹಲವು ಟೀಸರ್‌ಗಳ ನಂತರ ಬಿಡುಗಡೆ ಮಾಡಿದೆ. ಮೂರು ಮೊಡೆಲ್‌ಗಳು ಹೊಸ ಎಕ್ಸ್‌ಟೀರಿಯರ್ ಮತ್ತು ಇಂಟೀರಿಯರ್ ಥೀಮ್ ಅನ್ನು ಪಡೆಯುತ್ತವೆ ಮತ್ತು ಸೀಮಿತ ಸಂಖ್ಯೆಯಲ್ಲಿ ಲಭ್ಯವಿರುತ್ತವೆ. ಆದ್ದರಿಂದ ನೀವು ಒಂದನ್ನು ಖರೀದಿಸಲು ಆಲೋಚಿಸುತ್ತಿದ್ದರೆ, ಬೇಗನೆ ಖರೀದಿಸಲು ನಾವು ಸಲಹೆ ನೀಡುತ್ತೇವೆ. ಡಾರ್ಕ್ ಎಡಿಷನ್‌ಗಳು ಪ್ರತಿ ಮೊಡೆಲ್‌ನ ಟಾಪ್ ವೇರಿಯೆಂಟ್ ಆಗಿರುವ ಮ್ಯಾಕ್ಸ್ (ಬಸಾಲ್ಟ್ ಮತ್ತು ಏರ್‌ಕ್ರಾಸ್‌ಗಾಗಿ) ಮತ್ತು ಶೈನ್ (C3 ಗಾಗಿ) ವೇರಿಯೆಂಟ್‌ಅನ್ನು ಆಧರಿಸಿವೆ.
ಡಾರ್ಕ್ ಎಡಿಷನ್‌ಗಳ ವೇರಿಯಂಟ್ ಬೆಲೆಗಳು ಇಲ್ಲಿವೆ:
ಮೊಡೆಲ್ |
ಡಾರ್ಕ್ ಎಡಿಷನ್ ಬೆಲೆ |
ಸ್ಟ್ಯಾಂಡರ್ಡ್ ಬೆಲೆ |
ವ್ಯತ್ಯಾಸ |
ಸಿಟ್ರೊಯೆನ್ ಸಿ3 ಶೈನ್ ಡಾರ್ಕ್ ಎಡಿಷನ್ (ಮ್ಯಾನ್ಯುವಲ್) |
8.38 ಲಕ್ಷ ರೂ. |
8.15 ಲಕ್ಷ ರೂ. |
22500 ರೂ. |
ಸಿಟ್ರೊಯೆನ್ ಸಿ3 ಶೈನ್ ಟರ್ಬೊ ಡಾರ್ಕ್ ಎಡಿಷನ್ (ಮ್ಯಾನ್ಯುವಲ್) |
9.58 ಲಕ್ಷ ರೂ. |
9.35 ಲಕ್ಷ ರೂ. |
22500 ರೂ. |
ಸಿಟ್ರೊಯೆನ್ ಸಿ3 ಶೈನ್ ಟರ್ಬೊ ಡಾರ್ಕ್ ಎಡಿಷನ್ (ಆಟೋಮ್ಯಾಟಿಕ್) |
10.19 ಲಕ್ಷ ರೂ. |
9.99 ಲಕ್ಷ ರೂ. |
19500 ರೂ. |
ಸಿಟ್ರೊಯೆನ್ ಬಸಾಲ್ಟ್ ಟರ್ಬೊ ಮ್ಯಾಕ್ಸ್ ಡಾರ್ಕ್ ಎಡಿಷನ್ (ಮ್ಯಾನ್ಯುವಲ್) |
12.80 ಲಕ್ಷ ರೂ. |
12.57 ಲಕ್ಷ ರೂ. |
23000 ರೂ. |
ಸಿಟ್ರೊಯೆನ್ ಏರ್‌ಕ್ರಾಸ್ ಟರ್ಬೊ ಮ್ಯಾಕ್ಸ್ ಡಾರ್ಕ್ ಎಡಿಷನ್ (ಮ್ಯಾನ್ಯುವಲ್) |
13.13 ಲಕ್ಷ ರೂ. |
12.90 ಲಕ್ಷ ರೂ. |
22500 ರೂ. |
ಸಿಟ್ರೊಯೆನ್ ಬಸಾಲ್ಟ್ ಟರ್ಬೊ ಮ್ಯಾಕ್ಸ್ ಡಾರ್ಕ್ ಎಡಿಷನ್ (ಆಟೋಮ್ಯಾಟಿಕ್) |
14.10 ಲಕ್ಷ ರೂ. |
13.87 ಲಕ್ಷ ರೂ. |
23000 ರೂ. |
ಸಿಟ್ರೊಯೆನ್ ಏರ್‌ಕ್ರಾಸ್ ಟರ್ಬೊ ಮ್ಯಾಕ್ಸ್ ಡಾರ್ಕ್ ಎಡಿಷನ್ (ಆಟೋಮ್ಯಾಟಿಕ್) |
14.27 ಲಕ್ಷ ರೂ. |
14.04 ಲಕ್ಷ ರೂ. |
22500 ರೂ. |
ಸಿಟ್ರೊಯೆನ್ ಬಸಾಲ್ಟ್, ಏರ್‌ಕ್ರಾಸ್ ಮತ್ತು C3 ನ ಡಾರ್ಕ್ ಎಡಿಷನ್‌ಗಳೊಂದಿಗೆ ನೀವು ಏನನ್ನು ಪಡೆಯುತ್ತೀರಿ ಎಂಬುದನ್ನು ಇಲ್ಲಿ ನೋಡೋಣ.
ಸಿಟ್ರೊಯೆನ್ ಬ್ಲಾಕ್ ಎಡಿಷನ್
ಮಾರುಕಟ್ಟೆಯಲ್ಲಿರುವ ಇತರ ಡಾರ್ಕ್ ಎಡಿಷನ್‌ಗಳಂತೆಯೇ, ಬಸಾಲ್ಟ್, C3 ಮತ್ತು ಏರ್‌ಕ್ರಾಸ್ ಡಾರ್ಕ್ ಎಡಿಷನ್‌ಗಳು ಪೆರ್ಲಾ ನೆರಾ ಬ್ಲ್ಯಾಕ್ ಎಂಬ ಸಂಪೂರ್ಣ ಕಪ್ಪು ಬಾಡಿ ಕಲರ್‌ಅನ್ನು ಪಡೆದಿವೆ. ಬ್ಯಾಡ್ಜಿಂಗ್, ಗ್ರಿಲ್ ಮತ್ತು ಬಾಡಿ ಇನ್ಸರ್ಟ್‌ಗಳಂತಹ ಎಲ್ಲಾ ಕ್ರೋಮ್ ಅಂಶಗಳನ್ನು ಡಾರ್ಕ್ ಕ್ರೋಮ್‌ನಲ್ಲಿ ಫಿನಿಶ್ ಮಾಡಲಾಗಿದ್ದು, ಡಾರ್ಕ್ ಲುಕ್ ಜೊತೆಗೆ ಮಿಶ್ರಣ ಮಾಡಲಾಗಿದೆ. ಹಾಗೆಯೇ, ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಇದಕ್ಕೆ ಉತ್ತಮವಾದ ವ್ಯತಿರಿಕ್ತತೆಯನ್ನು ನೀಡುತ್ತವೆ.
ಇಂಟೀರಿಯರ್ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಬರುತ್ತದೆ, ಇದರಲ್ಲಿ ಹೊಸ ಮೆಟ್ರೋಪಾಲಿಟನ್ ಕಪ್ಪು ಲೆಥೆರೆಟ್-ಸುತ್ತಿದ ಸೀಟುಗಳು ಮತ್ತು ಲೆಥೆರೆಟ್‌ನಲ್ಲಿ ಕವರ್ ಆದ ಇನ್ಸ್‌ಟ್ರುಮೆಂಟ್ ಪ್ಯಾನೆಲ್ ಸೇರಿವೆ. ಈ ಮೊಡೆಲ್‌ಗಳ ಡ್ಯಾಶ್‌ಬೋರ್ಡ್ ಮತ್ತು ಸೀಟುಗಳ ಉದ್ದಕ್ಕೂ ಕೆಂಪು ಬಣ್ಣದ ಹೊಲಿಗೆಗಳನ್ನು ಹೊಂದಿದ್ದು, ಅವುಗಳ ಮೇಲೆ ಸಿಟ್ರೊಯೆನ್ ಲೋಗೋವನ್ನು ಕೆತ್ತಲಾಗಿದೆ.
ಯಾವುದೇ ಹೊಸ ಫೀಚರ್‌ಗಳಿಲ್ಲ
ಸಂಪೂರ್ಣವಾಗಿ ಕಾಸ್ಮೆಟಿಕ್ ಆಪ್‌ಡೇಟ್‌ಗಳಾಗಿರುವುದರಿಂದ, ಬಸಾಲ್ಟ್, C3 ಮತ್ತು ಏರ್‌ಕ್ರಾಸ್‌ನ ಡಾರ್ಕ್ ಎಡಿಷನ್‌ಗಳು ಯಾವುದೇ ಹೊಸ ಫೀಚರ್‌ಗಳೊಂದಿಗೆ ಬರುವುದಿಲ್ಲ. ಈ ಮೂರು ಮೊಡೆಲ್‌ಗಳ ಸಾಮಾನ್ಯ ಫೀಚರ್‌ಗಳೆಂದರೆ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 10.2-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡಿಸ್‌ಪ್ಲೇ, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು, ರಿಮೋಟ್ ಕೀಲೆಸ್ ಎಂಟ್ರಿ ಮತ್ತು ಆಟೋ ಎಸಿ ಆಗಿದೆ.
ಬಸಾಲ್ಟ್, ಸಿ3 ಮತ್ತು ಏರ್‌ಕ್ರಾಸ್‌ನಲ್ಲಿರುವ ಸುರಕ್ಷತಾ ಫೀಚರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಸೆನ್ಸರ್‌ಗಳೊಂದಿಗೆ ರಿಯರ್ ವ್ಯೂ ಕ್ಯಾಮೆರಾ ಸೇರಿವೆ
ಪವರ್‌ಟ್ರೇನ್
ಸಿಟ್ರೊಯೆನ್ ಬಸಾಲ್ಟ್, ಏರ್‌ಕ್ರಾಸ್ ಮತ್ತು C3 ಒಂದೇ ರೀತಿಯ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತವೆ. C3 ಮೊಡೆಲ್ ಟಾಪ್ ಟ್ರಿಮ್‌ನಲ್ಲಿ ಎರಡೂ ಎಂಜಿನ್ ಆಯ್ಕೆಗಳೊಂದಿಗೆ ಬಂದರೆ, ಏರ್‌ಕ್ರಾಸ್ ಮತ್ತು ಬಸಾಲ್ಟ್ ಟಾಪ್ ವೇರಿಯೆಂಟ್‌ನಲ್ಲಿ ಮಾತ್ರ ಟರ್ಬೊ ಪೆಟ್ರೋಲ್ ಆಯ್ಕೆಯನ್ನು ಪಡೆಯುತ್ತವೆ.
ವಿವರವಾದ ವಿಶೇಷಣಗಳನ್ನು ಇಲ್ಲಿ ತಿಳಿಸಲಾಗಿದೆ.
ಎಂಜಿನ್ |
1.2-ಲೀಟರ್ N/A ಪೆಟ್ರೋಲ್ |
1.2-ಲೀಟರ್ ಟರ್ಬೊ-ಪೆಟ್ರೋಲ್ |
ಪವರ್ |
82 ಪಿಎಸ್ |
110 ಪಿಎಸ್ |
ಟಾರ್ಕ್ |
115 ಎನ್‌ಎಮ್ |
205 ಎನ್‌ಎಮ್ |
ಗೇರ್‌ಬಾಕ್ಸ್ |
5-ಸ್ಪೀಡ್ ಮ್ಯಾನ್ಯುವಲ್ |
6-ಸ್ಪೀಡ್ ಮ್ಯಾನ್ಯುವಲ್/ 6 AT* |
*AT= ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್
ಡಾರ್ಕ್ ಎಡಿಷನ್‌ಗಳ ಪವರ್‌ಟ್ರೇನ್ ಆಯ್ಕೆಗಳು ರೆಗ್ಯುಲರ್ ಮೊಡೆಲ್‌ಗಳಲ್ಲಿ ನೀಡಲಾಗುವಂತೆಯೇ ಇರುತ್ತವೆ.
ಪ್ರತಿಸ್ಪರ್ಧಿಗಳು
ಸಿಟ್ರೊಯೆನ್ C3 ಹ್ಯಾಚ್‌ಬ್ಯಾಕ್ ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್‌ಗಳಿಗೆ ಪ್ರತಿಸ್ಪರ್ಧಿಯಾಗಿದ್ದರೆ, ಎಸ್‌ಯುವಿ ಕೂಪ್ ಬಸಾಲ್ಟ್ ಟಾಟಾ ಕರ್ವ್‌ಗೆ ನೇರ ಪ್ರತಿಸ್ಪರ್ಧಿಯಾಗಿದೆ. ಹಾಗೆಯೇ, ಸಿಟ್ರೊಯೆನ್ ಏರ್‌ಕ್ರಾಸ್ ಕಿಯಾ ಸೆಲ್ಟೋಸ್, ಟೊಯೋಟಾ ಹೈರೈಡರ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಹುಂಡೈ ಕ್ರೆಟಾ ನಂತಹ ಕಾರುಗಳೊಂದಿಗೆ ಪೈಪೋಟಿ ನಡೆಸಲಿದೆ.
(ಎಲ್ಲಾ ಬೆಲೆಗಳು ಭಾರತಾದ್ಯಂತ ಎಕ್ಸ್-ಶೋರೂಂ ಆಗಿದೆ)
ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್ ಮಾಡ್ಬೇಡಿ