ಇಲ್ಲಿದೆ ಮಾರುತಿ ಜಿಮ್ನಿ ಬೇಸ್-ಸ್ಪೆಕ್ ಆಟೋಮ್ಯಾಟಿಕ್ ವೇರಿಯೆಂಟ್‌ನ ಮೊದಲ ನೋಟ

published on ಜನವರಿ 24, 2023 03:09 pm by tarun for ಮಾರುತಿ ಜಿಮ್ನಿ

  • 32 Views
  • ಕಾಮೆಂಟ್‌ ಅನ್ನು ಬರೆಯಿರಿ

ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಎರಡೂ ಆಯ್ಕೆಗಳನ್ನು ಹೊಂದಿದ ಆಫ್-ರೋಡರ್ ಅನ್ನು ಎರಡು ವೇರಿಯೆಂಟ್‌ಗಳಲ್ಲಿ ಪಡೆಯಬಹುದು.

Maruti Jimny Zeta Automatic Variant

ಮಾರುತಿ ಸುಝುಕಿ ಜಿಮ್ನಿ ಅಂತಿಮವಾಗಿ ಇಲ್ಲಿದೆ ಮತ್ತು ಇದರ ಮಾಲೀಕರು ಬಹುಶಃ ಈಗಾಗಲೇ ಆಫ್-ರೋಡರ್‌ಗಾಗಿ 10,000 ಬುಕಿಂಗ್‌ಗಳನ್ನು ಪಡೆದುಕೊಂಡಿದ್ದಾರೆ. ಈ ಫೈವ್-ಡೋರ್ ಜಿಮ್ನಿಯು 105PS 1.5-ಲೀಟರ್ ಪೆಟ್ರೋಲ್ ಇಂಜಿನ್‌ಗೆ ಜೊತೆಯಾಗಿ ಫೈವ್-ಸ್ಪೀಡ್ ಮ್ಯಾನ್ಯುವಲ್ ಮತ್ತು ಫೋರ್-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ಗಳನ್ನು ಪಡೆದಿದೆ. ಕಡಿಮೆ ರೇಂಜ್‌ನ ಗೇರ್ ಬಾಕ್ಸ್‌ನೊಂದಿಗೆ ಫೋರ್-ವ್ಹೀಲ್ ಡ್ರೈವ್ (4WD) ಇದರಲ್ಲಿ ಪ್ರಮಾಣಿತವಾಗಿದೆ.

ಸಜ್ಜುಗೊಳಿಸಲಾದ ಜಿಮ್ನಿಯನ್ನು ನೀವು ಆಫರ್‌ನಲ್ಲಿ ಝೆಟಾ ಮತ್ತು ಆಲ್ಫಾ ಎಂಬ ಯಾವುದೇ ಎರಡು ಆಯ್ಕೆಗಳಲ್ಲಿ ಆಯ್ದುಕೊಳ್ಳಬಹುದು. ಟಾಪ್-ಸ್ಪೆಕ್ ಆಲ್ಫಾ ವೇರಿಯೆಂಟ್ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಾಗಿನಿಂದ ನಾವು ಅದನ್ನು ನೋಡುತ್ತಿದ್ದೇವೆ, ಬೆಸ್-ಸ್ಪೆಕ್ ಝೆಟಾದ ಒಳ-ಹೊರ ನೋಟವನ್ನು ಈಗ ನೋಡೋಣ: 

ಎಕ್ಸ್‌ಟೀರಿಯರ್

Maruti Jimny Zeta Automatic Variant

ನೀವು, ಮುಂಭಾಗದ ಗ್ರಿಲ್‌ನಲ್ಲಿ ಪ್ರಮಾಣಿತವಾದ ಕ್ರೋಮ್ ಅಂಶವನ್ನು ನೋಡಬಹುದು. ಆದರೆ ಟಾಪ್-ಸ್ಪೆಕ್ ಆಲ್ಫಾ ವೇರಿಯೆಂಟ್‌ನಲ್ಲಿ ಎಲ್‌ಇಡಿ ಯೂನಿಟ್‌ಗೆ ಬದಲಾಗಿ ಹ್ಯಾಲೋಜೆನ್ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗುತ್ತದೆ. ಹೆಡ್‌ಲ್ಯಾಂಪ್ ವಾಷರ್ ಮತ್ತು ಫಾಗ್ ಲ್ಯಾಂಪ್‌ಗಳು ಝೆಟಾ ವೇರಿಯೆಂಟ್‌ನಲ್ಲಿ ಕಾಣಸಿಗುವುದಿಲ್ಲ.

ಇದನ್ನೂ ಓದಿ:  ಈ 20 ಚಿತ್ರಗಳಲ್ಲಿ ಪಡೆಯಿರಿ ಮಾರುತಿ ಜಿಮ್ನಿಯ ವಿಸ್ತೃತ ನೋಟ

Maruti Jimny Zeta Automatic Variant

ಜಿಮ್ನಿಯ ಬೇಸ್-ಸ್ಪೆಕ್ ವೇರಿಯೆಂಟ್ ಅಲೋಯ್‌ಗಳ ಬದಲಿಗೆ 15-ಇಂಚಿನ ಸ್ಟೀಲ್ ವ್ಹೀಲ್‌ಗಳನ್ನು ಹೊಂದಿರುವುದರಿಂದ ಪ್ರೊಫೈಲ್‌ನಲ್ಲಿ ಇದನ್ನು ಸುಲಭವಾಗಿ ಗುರುತಿಸಬಹುದು. ಈ ವೇರಿಯೆಂಟ್‌ನ ರಿಯರ್ ಕೂಡಾ ಟಾಪ್ ವೇರಿಯಂಟ್‌ನಂತೆಯೇ ಇದೆಯಾದರೂ, ಕೀ-ರಹಿತ ಪ್ರವೇಶ ಬಟನ್ ಅನ್ನು ಕೇವಲ ಸೂಕ್ಷ್ಮ ದೃಷ್ಟಿಯುಳ್ಳವರು ಮಾತ್ರ ಗಮನಿಸಬಹುದಾಗಿದೆ.

ಇಂಟೀರಿಯರ್

Maruti Jimny Zeta Automatic Variant

ಕೆಲವು ವೈಶಿಷ್ಟ್ಯಗಳನ್ನು ಹೊರತುಪಡಿಸಿದರೆ ಇದರ ಎಲ್ಲಾ-ಕಪ್ಪು ಕ್ಯಾಬಿನ್ ಟಾಪ್-ಸ್ಪೆಕ್ ಆಲ್ಫಾ ವೇರಿಯೆಂಟ್‌ನಂತೆಯೇ ಕಾಣುತ್ತದೆ. ಜಿಮ್ನಿ ಝೆಟಾ ವೇರಿಯೆಂಟ್ ಏಳು-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದ್ದು, ಇದು ಟಾಪ್-ಎಂಡ್‌ನ ಒಂಬತ್ತು-ಇಂಚಿನ ಯೂನಿಟ್‌ಗಿಂತ ಚಿಕ್ಕದಾಗಿರುತ್ತದೆ. ಇದು ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇಯನ್ನು ಹೊಂದಿದ್ದು, ವೈರ್‌ಲೆಸ್ ಕನೆಕ್ಟಿವಿಟಿಯನ್ನು ಪಡೆದಿಲ್ಲ.

ಬೇಸ್ ವೇರಿಯೆಂಟ್ ಕ್ರೂಸ್ ನಿಯಂತ್ರಣ ಬಟನ್, ಸ್ಟಾರ್ಟ್-ಸ್ಟಾಪ್ ಮತ್ತು ಆಟೋ ಎಸಿಯನ್ನು ಹೊಂದಿಲ್ಲ ಮತ್ತು ಆಲ್ಫಾ ವೇರಿಯೆಂಟ್‌ನಲ್ಲಿ ಈ ಎಲ್ಲಾ ಸೌಕರ್ಯಗಳು ಲಭ್ಯವಿದ್ದು ಹೆಚ್ಚು ಆರಾಮದಾಯಕವೆನಿಸುತ್ತದೆ. ಧನಾತ್ಮಕ ಅಂಶಗಳ ಕುರಿತು ಹೇಳುವುದಾದರೆ, ಜಿಮ್ನಿಯು ಆರು ಏರ್ ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮರಾ, ಇಎಸ್‌ಪಿ, ಹಿಲ್ ಹಿಡಿತ/ಏರಿಕೆ ನಿಯಂತ್ರಣ ಮತ್ತು ಬ್ರೇಕ್ ಲಿಮಿಟೆಡ್-ಸ್ಲಿಪ್ ಡಿಫರೆನ್ಶಿಯಲ್‌ನಂತಹ ಸುರಕ್ಷತಾ ಕಿಟ್‌ ಅನ್ನು ಪ್ರಮಾಣಿತವಾಗಿ ಪಡೆಯುತ್ತದೆ.

Maruti Jimny Zeta Automatic Variant

ಇದನ್ನೂ ಓದಿ:  ಇಲ್ಲಿದೆ ಮಾರುತಿ ಜಿಮ್ನಿಯ ಪ್ರತಿ ವೇರಿಯೆಂಟ್ ಹೊಂದಿರುವ ವೈಶಿಷ್ಟ್ಯಗಳ ಮಾಹಿತಿ

ಮಾರುತಿಯ ಫೈವ್-ಡೋರ್ ಜಿಮ್ನಿಯನ್ನು ಮಾರುಕಟ್ಟೆಯಲ್ಲಿ ನೋಡಲು ನಾವು ನಿರೀಕ್ಷಿಸುತ್ತಿದ್ದೇವೆ, ರೂ. 11,000 ಕ್ಕೆ ಬುಕಿಂಗ್ ಲಭ್ಯವಿದ್ದು, ರೂ.10 ಲಕ್ಷದಿಂದ (ಎಕ್ಸ್-ಶೋರೂಮ್) ಬೆಲೆಯು ಪ್ರಾರಂಭವಾಗುತ್ತದೆ. ಇದು ಮಾರ್ಚ್ ವೇಳೆಗೆ ಬಿಡುಗಡೆಯಾಗಲಿದ್ದು, ಈ ಎಸ್‌ಯುವಿಯು ಪ್ರಬಲ ಮಹೀಂದ್ರಾ ಥಾರ್‌ಗೆ ಪ್ರತಿಸ್ಪರ್ಧಿಯಾಗಲಿದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಜಿಮ್ನಿ

Read Full News

explore ಇನ್ನಷ್ಟು on ಮಾರುತಿ ಜಿಮ್ನಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience