2013ರಿಂದ Honda Amazeನ ಬೆಲೆಗಳು ಹೇಗೆ ಏರಿಕೆ ಕಂಡಿದೆ ಎಂಬುವುದು ಇಲ್ಲಿದೆ..
ಹೋಂಡಾ ಅಮೇಜ್ ಗಾಗಿ shreyash ಮೂಲಕ ಡಿಸೆಂಬರ್ 26, 2024 04:23 pm ರಂದು ಪ್ರಕಟಿಸಲಾಗಿದೆ
- 63 Views
- ಕಾಮೆಂಟ್ ಅನ್ನು ಬರೆಯಿರಿ
2013ರಲ್ಲಿ ಬಿಡುಗಡೆಯಾದಗಿನಿಂದ ಹೋಂಡಾ ಅಮೇಜ್ ಎರಡು ಜನರೇಶನ್‌ನ ಆಪ್‌ಡೇಟ್‌ಗೆ ಒಳಗಾಗಿದೆ
ಹೋಂಡಾ ಅಮೇಜ್ ಇತ್ತೀಚೆಗೆ ಜನರೇಶನ್ ಅಪ್‌ಡೇಟ್ ಅನ್ನು ಪಡೆದುಕೊಂಡಿದೆ, ಇದರಿಂದಾಗಿ ಇದು ಈಗ ಒಳಗೆ ಮತ್ತು ಹೊರಗೆ ಹೊಸದಾಗಿ ಕಾಣುವುದು ಮಾತ್ರವಲ್ಲದೇ, ಸುಧಾರಿತ ಸುರಕ್ಷತಾ ವ್ಯವಸ್ಥೆಗಳನ್ನು ಒಳಗೊಂಡಂತೆ ಹೊಸ ಫೀಚರ್‌ಗಳನ್ನು ಸಹ ಪಡೆಯುತ್ತದೆ. 2013ರಲ್ಲಿ ಭಾರತದಲ್ಲಿ ಪರಿಚಯಿಸಲ್ಪಟ್ಟ ಅಮೇಜ್ ಪ್ರಸ್ತುತ ಅದರ 3 ನೇ ಜನರೇಶನ್‌ನ ಅವತಾರದಲ್ಲಿದೆ. ಪ್ರತಿ ಆಪ್‌ಡೇಟ್‌ನೊಂದಿಗೆ, ಅದರ ಬೆಲೆಗಳು ಸಹ ಹೆಚ್ಚುತ್ತಿವೆ. ಈ ಬೆಲೆಗಳು ಹೇಗೆ ಏರಿಕೆ ಕಂಡಿದೆ ಎಂಬುದನ್ನು ನೋಡೋಣ.
2013ರಿಂದ ಇಲ್ಲಿಯವರೆಗೆ ಬೆಲೆಗಳು
ಮೊಡೆಲ್ ವರ್ಷ |
ಬೆಲೆ ರೇಂಜ್ |
ಮೊದಲ ಜನರೇಶನ್‌ನ ಹೋಂಡಾ ಅಮೇಜ್ 2013 |
4.99 ಲಕ್ಷ ರೂ.ನಿಂದ 7.60 ಲಕ್ಷ ರೂ. |
ಮೊದಲ ಜನರೇಶನ್‌ನ ಹೋಂಡಾ ಅಮೇಜ್ ಫೇಸ್‌ಲಿಫ್ಟ್ 2016 |
5.30 ಲಕ್ಷ ರೂ.ನಿಂದ 8.20 ಲಕ್ಷ ರೂ. |
2ನೇ ಜನರೇಶನ್‌ನ ಹೋಂಡಾ ಅಮೇಜ್ 2018 |
5.60 ಲಕ್ಷ ರೂ.ನಿಂದ 9 ಲಕ್ಷ ರೂ. |
2 ನೇ-ಜನರೇಶನ್‌ನ ಹೋಂಡಾ ಅಮೇಜ್ ಫೇಸ್‌ಲಿಫ್ಟ್ 2021 |
6.32 ಲಕ್ಷ ರೂ.ನಿಂದ 11.15 ಲಕ್ಷ ರೂ. |
3ನೇ ಜನರೇಶನ್‌ನ ಹೋಂಡಾ ಅಮೇಜ್ 2024 |
8 ಲಕ್ಷ ರೂ.ನಿಂದ 10.90 ಲಕ್ಷ ರೂ. |
ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಆಗಿದೆ
ಕಳೆದ 11 ವರ್ಷಗಳಲ್ಲಿ ಹೋಂಡಾ ಅಮೇಜ್‌ನ ಎಂಟ್ರಿ ಲೆವೆಲ್‌ನ ಬೆಲೆಗಳು 3 ಲಕ್ಷ ರೂಪಾಯಿಗಳಷ್ಟು ಹೆಚ್ಚಾಗಿದೆ, ಹಾಗೆಯೇ 2021ರ ಎರಡನೇ ಜನರೇಶನ್‌ನ ಫೇಸ್‌ಲಿಫ್ಟ್ ಬಿಡುಗಡೆಯೊಂದಿಗೆ ಟಾಪ್-ಸ್ಪೆಕ್ ವೇರಿಯೆಂಟ್ ಆದ ಟಾಪ್-ಸ್ಪೆಕ್ ಡೀಸೆಲ್ ಸಿವಿಟಿಯ ಬೆಲೆಗಳು 11.15 ಲಕ್ಷ ರೂಪಾಯಿಗಳನ್ನು ತಲುಪಿದೆ. ಆಶ್ಚರ್ಯವೆಂಬಂತೆ, 2024ರಲ್ಲಿ ಅಮೇಜ್‌ನ ಟಾಪ್-ಸ್ಪೆಕ್ ಬೆಲೆಗಳು 25,000 ರೂ.ನಷ್ಟು ಕಡಿಮೆಯಾಗಿದೆ, ಏಕೆಂದರೆ ಈ ಮೊಡೆಲ್ ಈಗ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿದೆ. ಹೋಂಡಾ ಅಮೇಜ್ ಅನ್ನು 1.5-ಲೀಟರ್ i-DTEC ಡೀಸೆಲ್ ಎಂಜಿನ್‌ನೊಂದಿಗೆಯು ನೀಡಿತ್ತು, ಇದು 2013 ರಿಂದಲೇ ಲಭ್ಯವಿತ್ತು ಮತ್ತು ಕಟ್ಟುನಿಟ್ಟಾದ BS6 ಹೊರಸೂಸುವಿಕೆ ಮಾನದಂಡಗಳ ಅನುಷ್ಠಾನದಿಂದಾಗಿ 2023 ರಲ್ಲಿ ಸ್ಥಗಿತಗೊಂಡಿತು.
ಇದನ್ನೂ ಸಹ ಓದಿ: 7 ಚಿತ್ರಗಳಲ್ಲಿ ಹೊಸ Honda Amazeನ VX ವೇರಿಯೆಂಟ್‌ನ ಸಂಪೂರ್ಣ ಚಿತ್ರಣ
2024 ಹೋಂಡಾ ಅಮೇಜ್ ಫೀಚರ್‌ಗಳು
ಅಮೇಜ್‌ನಲ್ಲಿ ನೀಡಲಾಗುವ ಫೀಚರ್‌ಗಳಲ್ಲಿ ಈಗ ದೊಡ್ಡ 8-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಹಿಂಭಾಗದ ದ್ವಾರಗಳೊಂದಿಗೆ ಆಟೋ AC ಅನ್ನು ಒಳಗೊಂಡಿದೆ. ಇದು 6-ಸ್ಪೀಕರ್ ಸೌಂಡ್ ಸಿಸ್ಟಮ್, ಕೀಲೆಸ್ ಎಂಟ್ರಿ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಅನ್ನು ಸಹ ಪಡೆಯುತ್ತದೆ. ಆದರೆ, ಹೋಂಡಾ ತನ್ನ ನೇರ ಪ್ರತಿಸ್ಪರ್ಧಿಗಳಲ್ಲಿ ಒಂದಾದ 2024ರ ಮಾರುತಿ ಡಿಜೈರ್‌ನಲ್ಲಿ ಈಗಾಗಲೇ ಲಭ್ಯವಿರುವ ಸಿಂಗಲ್-ಪೇನ್ ಸನ್‌ರೂಫ್‌ಆನ್ನು ಅಮೇಜ್‌ನಲ್ಲಿ ಒದಗಿಸಬಹುದಿತ್ತು.
2024 ಅಮೇಜ್ ತನ್ನ ಬೃಹತ್ತಾದ ಸುರಕ್ಷತಾ ಸೂಟ್‌ನೊಂದಿಗೆ ತನ್ನ ಸೆಗ್ಮೆಂಟ್‌ನಲ್ಲಿ ಎದ್ದು ಕಾಣುತ್ತದೆ. ಇದು 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ) ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಲೇನ್‌ವಾಚ್ ಕ್ಯಾಮೆರಾ (ಹೋಂಡಾ ಸಿಟಿಯಲ್ಲಿ ನೋಡಿದಂತೆ) ಒಳಗೊಂಡಿದೆ. ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಫೀಚರ್‌ಗಳನ್ನು ಸಹ ಪಡೆಯುತ್ತದೆ.
2024 ಹೋಂಡಾ ಅಮೇಜ್ ಪವರ್‌ಟ್ರೇನ್
2024 ರ ಹೋಂಡಾ ಅಮೇಜ್ ತನ್ನ ಹಿಂದಿನ ಜನರೇಶನ್‌ನ ಮೊಡೆಲ್‌ನೊಂದಿಗೆ ನೀಡಲಾದ ಅದೇ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಇನ್ನೂ ಬಳಸುತ್ತದೆ. ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ 4 ಸಿಲಿಂಡರ್ |
ಪವರ್ |
90 ಪಿಎಸ್ |
ಟಾರ್ಕ್ |
110 ಎನ್‌ಎಮ್ |
ಟ್ರಾನ್ಸ್‌ಮಿಷನ್ |
5-ಸ್ಪೀಡ್ ಮ್ಯಾನ್ಯುವಲ್, 7-ಸ್ಟೆಪ್ ಸಿವಿಟಿ |
ಕ್ಲೈಮ್ ಮಾಡಲಾದ ಮೈಲೇಜ್ |
ಪ್ರತಿ ಲೀ.ಗೆ 18.65 ಕಿ.ಮೀ (ಮ್ಯಾನ್ಯುವಲ್) / ಪ್ರತಿ ಲೀ.ಗೆ 19.46 ಕಿ.ಮೀ(ಸಿವಿಟಿ) |
CVT - ಕಂಟಿನ್ಯೂವಸ್ಲೀ ವೇರಿಯೆಬಲ್ ಟ್ರಾನ್ಸ್‌ಮಿಷನ್
ಪ್ರತಿಸ್ಪರ್ಧಿಗಳು
ಮೂರನೇ ಜನರೇಶನ್‌ನ ಹೋಂಡಾ ಅಮೇಜ್ ಹ್ಯುಂಡೈ ಔರಾ, 2024 ಮಾರುತಿ ಡಿಜೈರ್ ಮತ್ತು ಟಾಟಾ ಟಿಗೋರ್‌ನೊಂದಿಗೆ ತನ್ನ ಪೈಪೋಟಿಯನ್ನು ಮುಂದುವರೆಸಿದೆ.
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ