ಬರೋಬ್ಬರಿ 90,000ಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆಯಲಿರುವ ಹೋಂಡಾ.. ಏನಿರಬಹುದು ಸಮಸ್ಯೆ ?
ಹೋಂಡಾ ಸಿಟಿ ಗಾಗಿ dipan ಮೂಲಕ ಅಕ್ಟೋಬರ್ 28, 2024 04:46 pm ರಂದು ಪ್ರಕಟಿಸಲಾಗಿದೆ
- 234 Views
- ಕಾಮೆಂಟ್ ಅನ್ನು ಬರೆಯಿರಿ
ಹಿಂಪಡೆಯಲಾದ ಕಾರುಗಳಿಗೆ ದೋಷಯುಕ್ತ ಇಂಧನ ಪಂಪ್‌ಗಳನ್ನು ಉಚಿತವಾಗಿ ಬದಲಾಯಿಸಲಾಗುತ್ತದೆ
-
2017ರ ಆಗಸ್ಟ್‌ನಿಂದ 2018ರ ಜೂನ್ ವರೆಗೆ ತಯಾರಿಸಲಾದ ಕಾರುಗಳು ಈ ಹಿಂಪಡೆಯುವಿಕೆಯಿಂದ ಪ್ರಭಾವಿತವಾಗಿವೆ.
-
ದೋಷಯುಕ್ತ ಇಂಧನ ಪಂಪ್ ಇಂಪೆಲ್ಲರ್‌ನಿಂದಾಗಿ ಕಾರುಗಳನ್ನು ಹಿಂಪಡೆಯಲಾಗುತ್ತಿದ್ದು, ಇದು ಎಂಜಿನ್ ಅನ್ನು ಸ್ಟಾಪ್ ಆಗಿಸುವುದು ಅಥವಾ ಸ್ಟಾರ್ಟ್ ಆಗದಿರಲು ಕಾರಣವಾಗಬಹುದು.
-
ಹೋಂಡಾ ತನ್ನ ಅಧಿಕೃತ ಡೀಲರ್‌ಶಿಪ್‌ಗಳ ಮೂಲಕ 2024 ನವೆಂಬರ್ 5ರಿಂದ ದೋಷಯುಕ್ತ ಭಾಗವನ್ನು ಉಚಿತವಾಗಿ ಬದಲಾಯಿಸುತ್ತಿದೆ.
-
ಕಾರು ತಯಾರಕರು ದೋಷಯುಕ್ತ ಭಾಗಗಳನ್ನು ಹೊಂದಿರುವ ಕಾರುಗಳ ಕಾರ್ ಮಾಲೀಕರನ್ನು ಪ್ರತ್ಯೇಕವಾಗಿ ಸಂಪರ್ಕಿಸುತ್ತಿದ್ದಾರೆ.
-
2017 ಜೂನ್‌ನಿಂದ 2023ರ ಅಕ್ಟೋಬರ್ ನಡುವೆ ಸ್ಪೇರ್ ಪಾರ್ಟ್ಸ್ ಆಗಿ ಬದಲಾಯಿಸಲಾದ ಇಂಧನ ಪಂಪ್‌ಗಳನ್ನು ಸಹ ಪರಿಶೀಲಿಸಲಾಗುತ್ತಿದೆ.
2017ರ ಆಗಸ್ಟ್‌ನಿಂದ 2018ರ ಜೂನ್ ವರೆಗೆ ಉತ್ಪಾದಿಸಲಾದ 92,672 ಯೂನಿಟ್ ಹಳೆಯ ಹೋಂಡಾ ಕಾರುಗಳನ್ನು ದೋಷಯುಕ್ತ ಇಂಧನ ಪಂಪ್ ಸಮಸ್ಯೆಯ ಕಾರಣದಿಂದಾಗಿ ತಯಾರಕರು ಸ್ವಯಂಪ್ರೇರಣೆಯಿಂದ ಹಿಂಪಡೆದಿದ್ದಾರೆ. ಹೋಂಡಾ ಸಿಟಿ, ಹೋಂಡಾ ಅಮೇಜ್, ಹೋಂಡಾ ಡಬ್ಲ್ಯುಆರ್-ವಿ, ಹೋಂಡಾ ಬಿಆರ್-ವಿ, ಹೋಂಡಾ ಬ್ರಿಯೋ ಮತ್ತು ಹೋಂಡಾ ಅಕಾರ್ಡ್‌ನ ಹಳೆಯ ಆವೃತ್ತಿಗಳನ್ನು ಮೇಲೆ ತಿಳಿಸಲಾದ ಟೈಮ್‌ಲೈನ್‌ನ ನಡುವೆ ಉತ್ಪಾದಿಸಲಾಗಿದೆ. ಪ್ರಸ್ತಾಪಿಸಲಾದ ಉತ್ಪಾದನಾ ದಿನಾಂಕದ ಒಳಗಿನ ಹೋಂಡಾ ಕಾರನ್ನು ನೀವು ಹೊಂದಿದ್ದರೆ, ಸಮಸ್ಯೆಯ ಬಗ್ಗೆ ಮತ್ತು ಅದನ್ನು ಹೇಗೆ ಪರಿಶೀಲಿಸುವುದು ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ:
ಹಿಂಪಡೆಯಲು ಕಾರಣ
ಮರುಪಡೆಯಲಾದ ಕಾರುಗಳಲ್ಲಿ ಬಳಸಲಾದ ಇಂಧನ ಪಂಪ್ ದೋಷಪೂರಿತ ಇಂಪೆಲ್ಲರ್ ಅನ್ನು ಹೊಂದಿದೆ. ಇಂಪೆಲ್ಲರ್ ಇಂಧನ ಟ್ಯಾಂಕ್‌ನಿಂದ ಎಂಜಿನ್‌ಗೆ ಇಂಧನವನ್ನು ಸಾಗಿಸುವ ಸಣ್ಣ, ತಿರುಗುವ ಭಾಗವಾಗಿದೆ. ದೋಷಪೂರಿತ ಇಂಪೆಲ್ಲರ್ ಇಂಜಿನ್‌ಗೆ ಇಂಧನ ಹರಿವನ್ನು ನಿರ್ಬಂಧಿಸಬಹುದು ಮತ್ತು ಎಂಜಿನ್ ಅನ್ನು ಸ್ಟಾಪ್ ಮಾಡಲು ಅಥವಾ ಸ್ಟಾರ್ಟ್ ಆಗದಿರಲು ಕಾರಣವಾಗಬಹುದು.
ಯಾವ ಕಾರುಗಳನ್ನು ಹಿಂಪಡೆಯಲಾಗುತ್ತದೆ ?
2017ರ ಆಗಸ್ಟ್‌ನಿಂದ 2018ರ ಜೂನ್‌ನ ನಡುವೆ ಉತ್ಪಾದಿಸಲಾದ ಹೋಂಡಾ ಸಿಟಿ, ಹೋಂಡಾ ಅಮೇಜ್, ಹೋಂಡಾ ಡಬ್ಲ್ಯುಆರ್-ವಿ, ಹೋಂಡಾ ಬಿಆರ್-ವಿ, ಹೋಂಡಾ ಬ್ರಿಯೊ ಮತ್ತು ಹೋಂಡಾ ಅಕಾರ್ಡ್‌ನ 90,000 ಹಳೆಯ ಮೊಡೆಲ್‌ಗಳು ಹಿಂಪಡೆಯುವ ಪ್ರಕ್ರಿಯೆಗೆ ಒಳಪಡಲಿದೆ. ವಿವರವಾದ ಪಟ್ಟಿ ಈ ಕೆಳಗಿನಂತಿರುತ್ತದೆ:
ಕಾರ್ ಮೊಡೆಲ್ |
ಉತ್ಪಾದನಾ ದಿನಾಂಕ |
ಕಾರುಗಳ ಸಂಖ್ಯೆ |
ಸಿಟಿ |
ಸೆಪ್ಟೆಂಬರ್ 4, 2017 ರಿಂದ ಜೂನ್ 19, 2018 ರವರೆಗೆ |
32,872 |
ಆಮೇಜ್ |
ಸೆಪ್ಟೆಂಬರ್ 19, 2017 ರಿಂದ ಜೂನ್ 30, 2018 ರವರೆಗೆ |
18,851 |
ಜಾಝ್ |
ಸೆಪ್ಟೆಂಬರ್ 5, 2017 ರಿಂದ ಜೂನ್ 29, 2018 ರವರೆಗೆ |
16,744 |
ಡಬ್ಲ್ಯೂಆರ್-ವಿ |
ಸೆಪ್ಟೆಂಬರ್ 5, 2017 ರಿಂದ ಜೂನ್ 30, 2018 ರವರೆಗೆ |
14,298 |
ಬಿಆರ್-ವಿ |
ಸೆಪ್ಟೆಂಬರ್ 26, 2017 ರಿಂದ ಜೂನ್ 14, 2018 ರವರೆಗೆ |
4,386 |
ಬ್ರಿಯೋ |
ಆಗಸ್ಟ್ 8, 2017 ರಿಂದ ಜೂನ್ 27, 2018 ರವರೆಗೆ |
3,317 |
ಈ ಅಭಿಯಾನವು, 2,204 ಹೆಚ್ಚುವರಿ ಕಾರುಗಳನ್ನು (ಮೇಲೆ ತಿಳಿಸಲಾದ ಎಲ್ಲಾ ಮೊಡೆಲ್‌ಗಳು ಮತ್ತು ಹೋಂಡಾ ಸಿವಿಕ್) ಒಳಗೊಂಡಿರುತ್ತದೆ, ಈ ಕಾರುಗಳ ದೋಷಯುಕ್ತ ಭಾಗವನ್ನು ಈ ಹಿಂದೆ ಬಿಡಿ ಭಾಗವಾಗಿ ಬದಲಾಯಿಸಲಾಗಿತ್ತು. ಜೂನ್ 2017 ಮತ್ತು ಅಕ್ಟೋಬರ್ 2023 ರ ನಡುವೆ ಇಂಧನ ಪಂಪ್ ಜೋಡಣೆಯನ್ನು ಖರೀದಿಸಿದ ಗ್ರಾಹಕರು ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಕಾರುಗಳನ್ನು ಪರಿಶೀಲಿಸುವಂತೆ ಹೋಂಡಾ ಮನವಿ ಮಾಡಿಕೊಂಡಿದೆ.
ಇದನ್ನೂ ಓದಿ: ಈ ದೀಪಾವಳಿ ವೇಳೆಗೆ ಯಾವುದೇ ವೈಟಿಂಗ್ ಪಿರೇಡ್ ಇಲ್ಲದೆ ಲಭ್ಯವಿರುವ 9 ಎಸ್‌ಯುವಿಗಳ ಪಟ್ಟಿ ಇಲ್ಲಿದೆ
ಮಾಲೀಕರು ಈಗ ಏನು ಮಾಡಬಹುದು?
ಹೋಂಡಾ ಕಾರ್ಸ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಕಾರಿನ ವೆಹಿಕಲ್ ಐಡೆಂಟಿಫಿಕೇಶನ್ ನಂಬರ್ ಅನ್ನು (ವಿಐಎನ್) ಸಲ್ಲಿಸುವ ಮೂಲಕ ಮಾಲೀಕರು ತಮ್ಮ ಕಾರುಗಳು ಈ ಅಭಿಯಾನದ ಅಡಿಯಲ್ಲಿ ಒಳಪಟ್ಟಿವೆಯೇ ಎಂಬುದನ್ನು ಪರಿಶೀಲಿಸಬಹುದು. ಹಾಗೆಯೇ, ತನ್ನ ಪ್ಯಾನ್-ಇಂಡಿಯಾ ಡೀಲರ್‌ಶಿಪ್‌ಗಳು ಈ ಹಿಂಪಡೆಯುವ ಕಾರುಗಳ ಮಾಲಕರನ್ನು ಪ್ರತ್ಯೇಕವಾಗಿ ಸಂಪರ್ಕಿಸಲಿದೆ ಎಂದು ಕಾರು ತಯಾರಕರು ಘೋಷಿಸಿದ್ದಾರೆ. 2024ರ ನವೆಂಬರ್ 5ರಿಂದ ಎಲ್ಲಾ ಹೋಂಡಾ ಡೀಲರ್‌ಶಿಪ್‌ಗಳಲ್ಲಿ ಇಂಧನ ಪಂಪ್ ಬದಲಾವಣೆಯನ್ನು ಉಚಿತವಾಗಿ ಕೈಗೊಳ್ಳಲಾಗುತ್ತದೆ.
ಹಿಂಪಡೆಯಲಾದ ಕಾರುಗಳನ್ನು ಡ್ರೈವ್ ಮಾಡುವುದನ್ನು ಮುಂದುವರಿಸಬೇಕೇ?
ಹಿಂಪಡೆಯುವ ಮೊಡೆಲ್‌ನ ಹಿಂಪಡೆಯುವ ಕಾರುಗಳ ಪ್ರಸ್ತುತ ಸ್ಥಿತಿಯಲ್ಲಿ ಓಡಿಸಲು ಸುರಕ್ಷಿತವಾಗಿದೆಯೇ ಎಂದು ಹೋಂಡಾ ಇನ್ನೂ ನಿರ್ದಿಷ್ಟಪಡಿಸಿಲ್ಲ, ಆದರೆ, ನಿಮ್ಮ ವಾಹನವು ಹಿಂಪಡೆಯುವಿಕೆಯ ಅಡಿಯಲ್ಲಿ ಇದ್ದರೆ, ನೀವು ಅದನ್ನು ಬೇಗನೆ ಸರಿಪಡಿಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ : ಹೋಂಡಾ ಸಿಟಿ ಆನ್‌ರೋಡ್ ಬೆಲೆ