ಜಪಾನ್‌ನಲ್ಲಿ Honda Elevate ನೀಡುತ್ತಿದೆ ಪೆಟ್-ಫ್ರೆಂಡ್ಲಿ ಆಕ್ಸೆಸರಿಗಳ ಆಯ್ಕೆ
ನಿಮ್ಮ ಸಾಕುಪ್ರಾಣಿಗಳು ನಿಮ್ಮೊಂದಿಗೆ ಆರಾಮದಾಯಕವಾಗಿ ಪ್ರಯಾಣಿಸಲು ಈ ಎಡಿಷನ್‌ನ ಒಳಭಾಗ ಮತ್ತು ಹೊರಭಾಗದಲ್ಲಿ ಕಸ್ಟಮೈಸ್ ಮಾಡಲಾಗಿದೆ.
- ಹೋಂಡಾ ಭಾರತದಲ್ಲಿ ತಯಾರಿಸಿದ ಎಲಿವೇಟ್ ಅನ್ನು ಹೊಸ WR-V ಎಂಬ ಹೆಸರಿನೊಂದಿಗೆ ಜಪಾನ್‌ನಲ್ಲಿ ಮಾರುಕಟ್ಟೆಗೆ ತಂದಿದೆ.
- ಮುಂಭಾಗದ ಸೀಟಿಗೆ ಕ್ಯಾರಿಯರ್ ಮತ್ತು ಹಿಂಭಾಗದ ಸೀಟಿಗೆ ಪೆಟ್ ಸೀಟ್ ನೀಡಲಾಗಿದೆ.
- ಇದು ಡೋರ್ ನ ಮೇಲೆ 'ಹೋಂಡಾ ಡಾಗ್' ಸ್ಟಿಕ್ಕರ್ ಮತ್ತು ನಿಮ್ಮ ಸಾಕುಪ್ರಾಣಿಗಳನ್ನು ಕಾರಿನೊಳಗೆ ಸಾಗಿಸಲು ಪೆಟ್ ಬಗ್ಗಿಯನ್ನು ಹೊಂದಿದೆ.
- ಈ ಜಪಾನ್-ಸ್ಪೆಕ್ ಎಲಿವೇಟ್ ಭಾರತ-ಸ್ಪೆಕ್ ಮಾಡೆಲ್ ನಲ್ಲಿರುವ ಅದೇ 1.5-ಲೀಟರ್ ಪವರ್‌ಟ್ರೇನ್ ಅನ್ನು ಪಡೆಯುತ್ತದೆ.
- ಇದು ಕೇವಲ CVT ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ ಮತ್ತು ಕಡಿಮೆ ಶಕ್ತಿಯನ್ನು ಹೊಂದಿದೆ.
- ಇಂಡಿಯಾ-ಸ್ಪೆಕ್ ಮಾಡೆಲ್‌ನ ಬೆಲೆಯು ರೂ 11.69 ಲಕ್ಷದಿಂದ ರೂ 16.51 ಲಕ್ಷದವರೆಗೆ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ.
ಹೋಂಡಾ ಎಲಿವೇಟ್ ಅನ್ನು WR-V ಎಂಬ ಹೆಸರಿನೊಂದಿಗೆ ಇತ್ತೀಚೆಗೆ ಅದರ ತಾಯ್ನಾಡಾದ ಜಪಾನಿನಲ್ಲಿ ಪರಿಚಯಿಸಲಾಯಿತು ಮತ್ತು ಅದನ್ನು ನಮ್ಮ ದೇಶದಿಂದ ಅಲ್ಲಿಗೆ ರಫ್ತು ಮಾಡಲಾಗುತ್ತಿದೆ. ಹೋಂಡಾ ಜಪಾನ್ ಈ SUVಯ ಹೊಸ ಸಾಕುಪ್ರಾಣಿ ಸ್ನೇಹಿ ವಿಶೇಷ ಎಡಿಷನ್ ಅನ್ನು ಇತ್ತೀಚೆಗೆ ಒಂದು ಮೇಳದಲ್ಲಿ ಪರಿಚಯಿಸಿದೆ. ಈ ಎಡಿಷನ್ ಸಾಕುಪ್ರಾಣಿಗಳ ಮೇಲೆ ಕೂಡ ಗಮನಹರಿಸಿದೆ.
ಈ ಸಾಕುಪ್ರಾಣಿ ಸ್ನೇಹಿ ಎಡಿಷನ್ ಕುರಿತು ಹೆಚ್ಚಿನ ವಿವರಗಳು
ಜಪಾನ್‌ನಲ್ಲಿ ಹೋಂಡಾ ಕಾರುಗಳಿಗೆ ಅಧಿಕೃತ ಬಿಡಿಭಾಗಗಳನ್ನು ತಯಾರಿಸುವ ಹೋಂಡಾ ಆಕ್ಸೆಸ್, ಎಲಿವೇಟ್ SUV ಗಾಗಿ ಕೆಲವು ಬಿಡಿಭಾಗಗಳನ್ನು ಪ್ರದರ್ಶಿಸಿತು. ಇವುಗಳನ್ನು ವಿಶೇಷವಾಗಿ 'ಹೋಂಡಾ ಡಾಗ್' ಬ್ರ್ಯಾಂಡ್‌ನ ಅಡಿಯಲ್ಲಿ ಸಾಕು ಪ್ರಾಣಿಗಳಿಗೆ ವಿನ್ಯಾಸಗೊಳಿಸಲಾಗಿದೆ. ಮೊದಲನೆಯದಾಗಿ, ಸಾಕುಪ್ರಾಣಿಗಳಿಗೆ ಆರಾಮದಾಯಕ ಅನುಭವ ನೀಡಲು ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಎರಡು ಸಣ್ಣ ನಾಯಿಗಳನ್ನು ಕೂರಿಸಲು ಕ್ಯಾರಿಯರ್ ಮತ್ತು ಡೋರ್ ಗೆ ಬೂದು ಬಣ್ಣದ ಸಾಕು ಪ್ರಾಣಿಗಳ ಕವರ್ ಇದೆ.
ಹಿಂಭಾಗದಲ್ಲಿ, ಸಣ್ಣ ಮತ್ತು ಮಧ್ಯಮ ಗಾತ್ರದ ನಾಯಿಗಳಿಗೆ ಪೆಟ್ ಸೀಟ್ ಸರ್ಕಲ್ ಇದೆ, ಮತ್ತು ಇದು ಅವುಗಳ ಲೀಶ್ ಗಳನ್ನು ಕಟ್ಟಲು ಆಂಕರೇಜ್ ಗಳೊಂದಿಗೆ ಬರುತ್ತದೆ. ಒಂದು ಪೆಟ್ ಸೀಟ್ ಬೆಲೆಯು ರೂ. 10 ಸಾವಿರಕ್ಕೂ ಹೆಚ್ಚಿದೆ (ಜಪಾನೀಸ್ ಯೆನ್‌ನಿಂದ ಪರಿವರ್ತಿಸಿದಾಗ). ನಿಮ್ಮ ಸಾಕುಪ್ರಾಣಿಗಳನ್ನು ಸುಲಭವಾಗಿ ಕಾರಿನೊಳಗೆ ಇರಿಸಲು ಇದು ಪೆಟ್ ಬಗ್ಗಿಯನ್ನು ಹೊಂದಿದೆ. ಈ ಸೆಗ್ಮೆಂಟ್ ನಲ್ಲಿ ಅತಿ ಹೆಚ್ಚು, ಅಂದರೆ 458 ಲೀಟರ್‌ನ ಸಾಮರ್ಥ್ಯವನ್ನು ಹೊಂದಿರುವ ಹೋಂಡಾ SUV ಯ ಬೂಟ್‌ನಲ್ಲಿ ನೀವು ಅದನ್ನು ಸುಲಭವಾಗಿ ಇಡಬಹುದು.
ಹೋಂಡಾ ತನ್ನ SUV ಯ ಹೊರಭಾಗ ಮತ್ತು ಒಳಭಾಗಕ್ಕೆ ಕೂಡ ಕೆಲವು ಬದಲಾವಣೆಗಳನ್ನು ಮಾಡಿದೆ. ಇದರಲ್ಲಿ ಸ್ಲೇಟ್ ಆಕಾರದ ಕಪ್ಪು ಗ್ರಿಲ್ ಮತ್ತು ಡೋರ್ ಗಳಲ್ಲಿ 'ಹೋಂಡಾ ಡಾಗ್' ಸ್ಟಿಕ್ಕರ್ ಮತ್ತು ಐಚ್ಛಿಕವಾಗಿರುವ ಡಾಗ್ ಪಾವ್-ಥೀಮಿನ ಅಲ್ಯೂಮಿನಿಯಂ ವೀಲ್ ಕ್ಯಾಪ್‌ಗಳು ಮತ್ತು ಡಾಗ್-ಥೀಮಿನ ಕೀ ಕವರ್‌ಗಳು ಸೇರಿವೆ. ಈ ಕಾಸ್ಮೆಟಿಕ್ ಬಿಡಿಭಾಗಗಳ ಬೆಲೆ ಸುಮಾರು ರೂ. 20,000 ಆಗಬಹುದು.
ಜಪಾನ್-ಸ್ಪೆಕ್ ಹೋಂಡಾ ಎಲಿವೇಟ್ (WR-V): ಸಂಕ್ಷಿಪ್ತ ವಿವರಗಳು
ಜಪಾನ್-ಸ್ಪೆಕ್ ಹೋಂಡಾ ಎಲಿವೇಟ್ ಭಾರತದಲ್ಲಿ ಮಾರಾಟವಾಗುವ ಮಾಡೆಲ್ ನಲ್ಲಿರುವ ಅದೇ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ ಆದರೆ ಸ್ವಲ್ಪ ಕಡಿಮೆ ಶಕ್ತಿಯನ್ನು ಹೊಂದಿದೆ. ಇದರ ವಿವರಗಳನ್ನು ಕೆಳಗೆ ನೀಡಲಾಗಿದೆ:
ಸ್ಪೆಸಿಫಿಕೇಷನ್ |
ಇಂಡಿಯಾ-ಸ್ಪೆಕ್ ಎಲಿವೇಟ್ |
ಜಪಾನ್-ಸ್ಪೆಕ್ ಎಲಿವೇಟ್ (WR-V) |
ಪವರ್ |
121 PS |
118 PS |
ಟಾರ್ಕ್ |
145 Nm |
142 Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ ಮ್ಯಾನುಯಲ್, ಸಿವಿಟಿ |
ಸಿವಿಟಿ |
ಇದು, ಭಾರತದ SUV ಯೊಂದಿಗೆ ಲಭ್ಯವಿರುವ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆಯುವುದಿಲ್ಲ.
ಫೀಚರ್ ಗಳ ವಿಷಯದಲ್ಲಿ, ಇದು ಭಾರತದಲ್ಲಿನ ಮಾಡೆಲ್ ನಂತೆಯೇ ಸುಸಜ್ಜಿತವಾಗಿದೆ ಆದರೆ ಇದು ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ (ಬದಲಿಗೆ 9-ಇಂಚಿನ ಟಚ್‌ಸ್ಕ್ರೀನ್ ನೀಡಲಾಗಿದೆ), ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಹೊಂದಿಲ್ಲ. ಆದರೆ, ಎರಡು ಮಾಡೆಲ್ ಗಳ ಸುರಕ್ಷತಾ ಫೀಚರ್ ಗಳ ವಿಷಯದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಎರಡೂ SUV ಗಳು ಆರು ಏರ್‌ಬ್ಯಾಗ್‌ಗಳು, ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ಸ್ (ADAS), ಮತ್ತು ಟ್ರಾಕ್ಷನ್ ಕಂಟ್ರೋಲ್ ಅನ್ನು ಹೊಂದಿವೆ.
ಸಂಬಂಧಿಸಿದ ಲೇಖನ: ಹೋಂಡಾ ಸಿಟಿ ವರ್ಸಸ್ ಹೋಂಡಾ ಎಲಿವೇಟ್: ಸ್ಪೇಸ್ ಮತ್ತು ಇತರ ವಿಷಯಗಳ ಹೋಲಿಕೆ
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹೋಂಡಾ ಎಲಿವೇಟ್ ಬೆಲೆಯು 11.69 ಲಕ್ಷದಿಂದ ಶುರುವಾಗಿ 16.51 ಲಕ್ಷದವರೆಗೆ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ. ಇದು ಮಾರುತಿ ಗ್ರ್ಯಾಂಡ್ ವಿಟಾರಾ, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್‌ವ್ಯಾಗನ್ ಟೈಗನ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಸ್ಕೋಡಾ ಕುಶಾಕ್ ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಇನ್ನಷ್ಟು ಓದಿ: ಎಲಿವೇಟ್ ಆಟೋಮ್ಯಾಟಿಕ್