ಹೋಂಡಾ ಎಲಿವೇಟ್ ನ ಬಿಡುಗಡೆಯ ವೇಳಾಪಟ್ಟಿಗಳ ವಿವರಗಳು
ಈ ಕಾರುತಯಾರಕರ ಹೊಚ್ಚಹೊಸ ಕಾಂಪ್ಯಾಕ್ಟ್ SUV ಹೋಂಡಾ ಎಲಿವೇಟ್‌ನ ಬೆಲೆಗಳು ಈ ವರ್ಷ ಸೆಪ್ಟೆಂಬರ್‌ನ ಮೊದಲ ವಾರದಲ್ಲಿ ಪ್ರಕಟಿಸಲಾಗುತ್ತದೆ
-
ಹೋಂಡಾ ಎಲಿವೇಟ್ ಬುಕಿಂಗ್‌ಗಳು ರೂ 5,000 ಮುಂಗಡ ಮೊತ್ತಕ್ಕೆ ಜುಲೈ ಆರಂಭದಿಂದ ತೆರೆದುಕೊಂಡಿವೆ
-
ಎಲಿವೇಟ್ ಅನ್ನು ಹೋಂಡಾ, SV, V, VX ಮತ್ತು ZX ಎಂಬ ನಾಲ್ಕು ವಿಶಾಲ ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡುತ್ತದೆ.
-
ಈ SUV ಆಗಸ್ಟ್ ಮಧ್ಯದಲ್ಲಿ ಶೋರೂಂಗಳಿಗೆ ತಲುಪುತ್ತದೆ.
-
ಸಿಟಿಯ1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳೆರಡರಲ್ಲೂ ಬಳಸುತ್ತದೆ.
-
ಪ್ರಮುಖ ಫೀಚರ್‌ಗಳು 10.25-ಇಂಚು ಟಚ್‌ಸ್ಕ್ರೀನ್, ಸಿಂಗಲ್-ಪೇನ್ ಸನ್‌ರೂಫ್ ಮತ್ತು ADAS ಅನ್ನು ಒಳಗೊಂಡಿದೆ.
-
ಬೆಲೆಗಳು ರೂ 11 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.
ಜೂನ್ ಪ್ರಾರಂಭದಲ್ಲಿ, ಭಾರತದಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಿದ ಹೋಂಡಾ ಎಲಿವೇಟ್ SUVಯ ಮೊದಲ ನೋಟವನ್ನು ನಾವು ಪಡೆದಿದ್ದೇವೆ. ಜುಲೈ ಪ್ರಾರಂಭದಲ್ಲಿ ರೂ 5,000 ಕ್ಕೆ ಇದರ ಬುಕಿಂಗ್‌ಗಳು ತೆರೆದುಕೊಂಡಿವೆ ಮತ್ತು ಈ ಎಲಿವೇಟ್ ಸೆಪ್ಟೆಂಬರ್ ಮೊದಲ ವಾರದಲ್ಲಿ ಮಾರಾಟಕ್ಕೆ ಬರಲಿದೆ ಎಂಬದನ್ನು ಈಗ ದೃಢಪಡಿಸಲಾಗಿದೆ. ಆಗಸ್ಟ್ ಮಧ್ಯದಲ್ಲಿ ಇದು ಡೀಲರ್‌ಶಿಪ್‌ಗೆ ತಲುಪಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಅದೇ ಪರಿಚಿತ ಇಂಜಿನ್
ಈ ಎಲಿವೇಟ್‌ಗೆ ಹೋಂಡಾ, ಸಿಟಿಯಲ್ಲಿರುವ 121PS ಮತ್ತು 145Nm ಉತ್ಪಾದಿಸುವ 1.5-ಲೀಟರ್ ನೈಸರ್ಗಿಕವಾಗಿ ಆಸ್ಪಿರೇಟ್ ಮಾಡುವ ಪೆಟ್ರೋಲ್ ಇಂಜಿನ್ ಅನ್ನು ಬಳಸಿದೆ. ಸೆಡಾನ್‌ನಂತೆಯೇ, ಈ SUV ಕೂಡಾ 6-ಸ್ಪೀಡ್ ಮ್ಯಾನುವಲ್ ಅಥವಾ CVT ಜೊತೆಗೆ ಬರುತ್ತದೆ. ಕ್ಲೈಮ್ ಮಾಡಲಾದ ಮೈಲೇಜ್ ಅಂಕಿಗಳನ್ನು ಇತ್ತೀಚೆಗೆ ಬಹಿರಂಗಪಡಿಸಲಾಗಿದ್ದು ಆಟೋಮ್ಯಾಟಿಕ್ ಹೆಚ್ಚಿನ ಇಂಧನ ದಕ್ಷತೆಯ ಭರವಸೆ ನೀಡುತ್ತದೆ. ಆದಾಗ್ಯೂ, ಈ ಎಲಿವೇಟ್ ಅನ್ನು ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ನೀಡಲಾಗುವುದಿಲ್ಲ (ಸಿಟಿ ಹೈಬ್ರಿಡ್‌ನಲ್ಲಿ ಇರುವಂತೆ) ಮತ್ತು ಇದು ನೇರವಾಗಿ 2026ರ ಒಳಗಾಗಿ EV ಡಿರೈವೇಟಿವ್ ಅನ್ನು ಪಡೆಯುತ್ತದೆ.
ಪ್ರೀಮಿಯಂ ಸಾಧನಗಳನ್ನು ಪಡೆಯುತ್ತದೆ
ಈ ಕಾಂಪ್ಯಾಕ್ಟ್ SUVಯ ಫೀಚರ್ ಪಟ್ಟಿಯು 10.25-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್, ಇದರೊಂದಿಗೆ ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್‌ಪ್ಲೇ, 7-ಇಂಚು ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಮತ್ತು ಸಿಂಗಲ್ ಪೇನ್ ಸನ್‌ರೂಫ್ ಅನ್ನು ಒಳಗೊಂಡಿದೆ. ಇತರ ಫೀಚರ್‌ಗಳೆಂದರೆ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ಕ್ರ್ಯೂಸ್ ಕಂಟ್ರೋಲ್.
ಹೋಂಡಾ ಈ ಎಲಿವೇಟ್ ಅನ್ನು ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS), ಆರು ಏರ್‌ಬ್ಯಾಗ್‌ಗಳು, ಲೇನ್‌ವಾಚ್ ಕ್ಯಾಮರಾ (ಎಡ ORVMನಲ್ಲಿ ಮೌಂಟ್ ಮಾಡಲಾಗಿದೆ) ಮತ್ತು ISOFIX ಚೈಲ್ಡ್ ಸೀಟ್ ಆ್ಯಂಕೋರೇಜ್ ಮುಂತಾದ ಸುರಕ್ಷತಾ ತಂತ್ರಜ್ಞಾನಗಳಿಂದ ಸಜ್ಜುಗೊಳಿಸಿದೆ. ಈ ಹೊಸ ಹೋಂಡಾ SUVಯು, SV, V, VX ಮತ್ತು ZX ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ: ಭಾರತದಲ್ಲಿ ಇತ್ತೀಚಿನ WR-V ಅನ್ನು ಹೋಂಡಾ ಎಲಿವೇಟ್ ಜೊತೆಗೇ ನೀಡಬೇಕೆ?
ಪ್ರತಿಸ್ಪರ್ಧಿಗಳ ವಿವರ
ಈ ಎಲಿವೇಟ್ ಬೆಲೆಯನ್ನು ರೂ11 ಲಕ್ಷಕ್ಕೆ (ಎಕ್ಸ್-ಶೋರೂಂ) ನಿಗದಿಪಡಿಸಬಹುದೆಂಬುದು ನಮ್ಮ ನಿರೀಕ್ಷೆಯಾಗಿದೆ. ಈ ಹೋಂಡಾ SUVಯು ವಿಭಾಗದ ದೈತ್ಯರುಗಳಾದ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್, ಜೊತೆಗೆ ಫೋಕ್ಸ್‌ವಾಗನ್ ಟೈಗನ್, ಸ್ಕೋಡಾ ಕುಶಕ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್ ಮತ್ತು MG ಗೆ ಪ್ರತಿಸ್ಪರ್ಧಿಯಾಗಿದೆ. ಅಲ್ಲದೇ ಇದು ಮುಂಬರುವ ಸಿಟ್ರನ್ C3 ಏರ್‌ಕ್ರಾಸ್‌ಗೂ ಪೈಪೋಟಿ ನೀಡುತ್ತದೆ.