ಬಹುನೀರಿಕ್ಷಿತ Honda Elevate ಬಿಡುಗಡೆ: 11 ಲಕ್ಷ ರೂ.ನಿಂದ ಬೆಲೆ ಪ್ರಾರಂಭ
ಸೆಪ್ಟೆಂಬರ್ 04, 2023 01:45 pm ರಂದು tarun ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಹೋಂಡಾ ಸಿಟಿಗೆ ಹೋಲಿಸಿದರೆ ಎಲಿವೇಟ್ ನ ಬೆಲೆ ಕಡಿಮೆ ಇದ್ದು, ಆದರೆ ಇದರಲ್ಲಿ ಹೈಬ್ರಿಡ್ ಪವರ್‌ಟ್ರೇನ್ ನ ಆಯ್ಕೆ ಲಭ್ಯವಿರುವುದಿಲ್ಲ.
- ಎಲಿವೇಟ್ ನ ಎಕ್ಸ್ ಶೋರೂಂ ಬೆಲೆಗಳು 11 ಲಕ್ಷ ರೂ. ನಿಂದ 16 ಲಕ್ಷ ರೂ.ವರೆಗೆ ಇರಲಿದೆ.
- SV, V, VX, ಮತ್ತು ZX ವೇರಿಯೆಂಟ್ ಗಳಲ್ಲಿ ಲಭ್ಯವಿದೆ.
- ಎಲೆಕ್ಟ್ರಿಕ್ ಸನ್‌ರೂಫ್, 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆರು ಏರ್‌ಬ್ಯಾಗ್‌ಗಳು ಮತ್ತು ADAS ಅನ್ನು ಒಳಗೊಂಡಿದೆ.
- ಮ್ಯಾನುಯಲ್ ಮತ್ತು CVT ಟ್ರಾನ್ಸ್‌ಮಿಷನ್‌ಗಳೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ.
ಕಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ನೂತನ ಪ್ರತಿಸ್ಪರ್ಧಿಯಾಗಿ ಜಪಾನಿನ ಕಾರು ತಯಾರಕರಾದ ಹೋಂಡಾ ಕಂಪೆನಿ ತನ್ನ ಎಲಿವೇಟ್ ನ್ನು ಅಂತಿಮವಾಗಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈಗಾಗಲೇ ಇದರ ಬುಕಿಂಗ್‌ಗಳು ಚಾಲ್ತಿಯಲ್ಲಿದ್ದು, ವಿತರಣೆಗಳು ಇಂದಿಂದಲೇ ಪ್ರಾರಂಭವಾಗಲಿವೆ.
ವೇರಿಯಂಟ್-ವಾರು ಬೆಲೆಗಳು
ಎಲಿವೇಟ್ |
ಮಾನ್ಯುಯಲ್ |
CVT |
ಎಸ್ ವಿ(SV) |
10.99 ಲಕ್ಷ ರೂ. |
ಇಲ್ಲ |
ವಿ(V) |
12.11 ಲಕ್ಷ ರೂ. |
13.21 ಲಕ್ಷ ರೂ. |
ವಿಎಕ್ಸ್(VX) |
13.50 ಲಕ್ಷ ರೂ. |
14.60 ಲಕ್ಷ ರೂ. |
ಜೆಡ್ಎಕ್ಸ್(ZX) |
14.90 ಲಕ್ಷ ರೂ. |
16 ಲಕ್ಷ ರೂ. |
(*ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳು)
ಆಟೋಮ್ಯಾಟಿಕ್ ವೇರಿಯೆಂಟ್ ಗಳು 1.1 ಲಕ್ಷ ರೂಪಾಯಿಗಳ ಬೆಲೆ ವ್ಯತ್ಯಾಸವನ್ನು ಹೊಂದಿವೆ.
ವೈಶಿಷ್ಟ್ಯ ಪರಿಶೀಲನೆ
ಹೋಂಡಾ ಎಲಿವೇಟ್ ಅನ್ನು ಹಲವಾರು ಪ್ರೀಮಿಯಂ ವೈಶಿಷ್ಟ್ಯಗಳನ್ನೂ ಹೊಂದಿದ್ದು, ಅವುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
-
ಸಂಪೂರ್ಣ ಎಲ್ಇಡಿ ಲೈಟಿಂಗ್
-
ಎಲೆಕ್ಟ್ರಿಕ್ ಸನ್‌ರೂಫ್
-
10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್
-
ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ
-
7-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ
-
ವೈರ್‌ಲೆಸ್ ಚಾರ್ಜಿಂಗ್
-
8-ಸ್ಪೀಕರ್ ಸೌಂಡ್ ಸಿಸ್ಟಮ್
ವೈಶಿಷ್ಟ್ಯಗಳ ದೊಡ್ಡ ಪಟ್ಟಿ ಇದ್ದರೂ ಸಹ ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಇದು ಪನರೊಮಿಕ್ ಸನ್‌ರೂಫ್, ಪವರ್ಡ್ ಡ್ರೈವರ್ ಸೀಟ್ ಮತ್ತು ಮುಂಭಾಗದ ಆಸನಗಳಲ್ಲಿ ವೆಂಟಿಲೇಷನ್ ನ ಸೌಕರ್ಯ ಸೇರಿದಂತೆ ಹಲವಾರು ಸೌಕರ್ಯಗಳು ಇದರಲ್ಲಿ ಲಭ್ಯವಿರುವುದಿಲ್ಲ.
ಇದನ್ನೂ ಓದಿ: ಹೋಂಡಾ ಎಲಿವೇಟ್ ವಿಮರ್ಶೆ: ಇಷ್ಟು ಸಾಕು
ಸುರಕ್ಷತೆಯ ಬಗ್ಗೆ
ಸುರಕ್ಷತೆಯ ದೃಷ್ಟಿಯಿಂದ, ಎಲಿವೇಟ್ ಸುಸಜ್ಜಿತವಾಗಿದೆ ಮತ್ತು ಈ ಕೆಳಗಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ:
-
6 ಏರ್ ಬ್ಯಾಗ್ ಗಳು (ಸ್ಟ್ಯಾಂಡರ್ಡ್)
-
ಲೇನ್-ವಾಚ್ ಕ್ಯಾಮೆರಾ
-
ISOFIX ಚೈಲ್ಡ್ ಸೀಟ್ ಮೌಂಟ್ಸ್
-
ಹಿಲ್ ಹೋಲ್ಡ್ ಅಸಿಸ್ಟ್‌ನೊಂದಿಗೆ ESP
-
ADAS (ಲೇನ್-ಕೀಪ್ ಅಸಿಸ್ಟ್, ಆಟೊನೊಮಸ್ ತುರ್ತು ಬ್ರೇಕಿಂಗ್, ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್)
ಎಂಜಿ ಆಸ್ಟರ್ ಮತ್ತು ಕಿಯಾ ಸೆಲ್ಟೋಸ್ ನಂತರ ಇದು ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ರಾಡಾರ್ ಮತ್ತು ಕ್ಯಾಮೆರಾ ಆಧಾರಿತ ಎಡಿಎಎಸ್ (ADAS) ವೈಶಿಷ್ಟ್ಯವನ್ನು ಪಡೆಯುವ ಮೂರನೇ ಕಾರು. ಹೋಂಡಾ ಆಂತರಿಕವಾಗಿ ಎಲಿವೇಟ್ ಅನ್ನು ಕ್ರ್ಯಾಶ್ ಟೆಸ್ಟ್ ಮಾಡಿದೆ ಮತ್ತು ಇದರ ಫಲಿತಾಂಶವನ್ನು ಗಮನಿಸಿದಾಗ, ಇದು ಬಲವಾದ ಸುರಕ್ಷತಾ ರೇಟಿಂಗ್ ಅನ್ನು ಪಡೆಯಬಹುದು ಎಂದು ಕಂಡುಬರುತ್ತದೆ.
ಪವರ್ಟ್ರೈನ್ ಗಳು
ವಿಶೇಷಣಗಳು |
ಹೋಂಡಾ ಎಲಿವೇಟ್ |
ಇಂಜಿನ್ |
1.5-ಲೀಟರ್ ಪೆಟ್ರೋಲ್ |
ಪವರ್ |
121 ಪಿಎಸ್ |
ಟಾರ್ಕ್ |
145 ಎನ್ಎಂ |
ಟ್ರಾನ್ಸ್ಮಿಷನ್ |
6-ಸ್ಪೀಡ್ ಮಾನ್ಯುಯಲ್ / CVT |
ಮೈಲೇಜ್ |
ಪ್ರತಿ ಲೀ.ಗೆ 15.31 ಕಿ.ಮೀ / ಪ್ರತಿ ಲೀ.ಗೆ 16.92 ಕಿ.ಮೀ |
ಹೋಂಡಾ ಸಿಟಿಯ 1.5-ಲೀಟರ್ i-VTEC ಪೆಟ್ರೋಲ್ ಎಂಜಿನ್ ಅನ್ನು ಎಲಿವೇಟ್ ಪಡೆಯುತ್ತದೆ, ಇದು 121PS ಮತ್ತು 145Nm ನಷ್ಟು ಶಕ್ತಿಯನ್ನು ಉತ್ಪಾದಿಸಬಲ್ಲದು. ಟ್ರಾನ್ಸ್ಮಿಷನ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಮತ್ತು CVT ಅನ್ನು ಒಳಗೊಂಡಿವೆ, ಎರಡನೆಯದು ಪ್ಯಾಡಲ್ ಶಿಫ್ಟರ್ಗಳನ್ನು ಸಹ ಪಡೆಯುತ್ತದೆ. ಆಫರ್‌ನಲ್ಲಿ ಯಾವುದೇ ಹೈಬ್ರಿಡ್ ಪವರ್‌ಟ್ರೇನ್ ಇಲ್ಲ, ಆದರೆ ಎಲಿವೇಟ್ 2026 ರ ವೇಳೆಗೆ ಎಲೆಕ್ಟ್ರಿಫೈಡ್ ಆವೃತ್ತಿಯನ್ನು ಪಡೆಯಲಿದೆ.
ಪ್ರತಿಸ್ಪರ್ಧಿಗಳು
ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್, ಫೋಕ್ಸ್ ವ್ಯಾಗನ್ ಟೈಗುನ್, ಕಿಯಾ ಸೆಲ್ಟೊಸ್, ಟೊಯೊಟಾ ಹೈರೈಡರ್, ಸಿಟ್ರೊನ್ ಸಿ3 ಏರ್ ಕ್ರಾಸ್, ಎಂಜಿ ಅಸ್ಟೋರ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರುಗಳಿಗೆ ಹೋಂಡಾ ಎಲಿವೇಟ್ ಭರ್ಜರಿ ಪೈಪೋಟಿ ನೀಡಲಿದೆ.