• English
  • Login / Register

ಹೋಂಡಾ ಎಲಿವೇಟ್ Vs ಹ್ಯುಂಡೈ ಕ್ರೆಟಾ Vs ಕಿಯಾ ಸೆಲ್ಟೋಸ್ Vs ಮಾರುತಿ ಗ್ರ್ಯಾಂಡ್ ವಿಟಾರಾ Vs ಟೊಯೋಟಾ ಹೈರೈಡರ್- ಸ್ಪೆಸಿಫಿಕೇಶನ್ ಹೋಲಿಕೆ

ಹೊಂಡಾ ಇಲೆವಟ್ ಗಾಗಿ tarun ಮೂಲಕ ಆಗಸ್ಟ್‌ 02, 2023 10:24 pm ರಂದು ಪ್ರಕಟಿಸಲಾಗಿದೆ

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಹೋಂಡಾ ಎಲಿವೇಟ್ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯೋಣ.

Honda Elevate vs rivals

ಕಾಂಪ್ಯಾಕ್ಟ್ SUV ಸ್ಥಾನದಲ್ಲಿ ಹೋಂಡಾ ಎಲಿವೇಟ್ ಕಾರು ತಯಾರಕರ ಮೊದಲ ಮತ್ತು ಬಹುನಿರೀಕ್ಷಿತ ಕಾರಾಗಿದೆ. ಈ ವಿಭಾಗವು ಈಗಾಗಲೇ ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್, ಸ್ಕೋಡಾ ಕುಶಕ್, ಫೋಕ್ಸ್‌ವಾಗನ್ ಟೈಗನ್, ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ ಮತ್ತು MG ಎಸ್ಟರ್‌ನಂತಹ ಮಾಡೆಲ್‌ಗಳಿಂದ ತುಂಬಿದೆ. 

 ಈ ಲೇಖನದಲ್ಲಿ ನಾವು ಎಲಿವೇಟ್ ಅನ್ನು ಅದರ ನೇರ ಪ್ರತಿಸ್ಪರ್ಧಿಗಳಿಗಿಂತ ಮೇಲಿಡುತ್ತೇವೆ. ಈ ಎಲ್ಲಾ ಮಾಡೆಲ್‌ಗಳಲ್ಲಿ ಹ್ಯುಂಡೈ ಕ್ರೆಟಾ ಈ ವಿಭಾಗದಲ್ಲಿ ದೀರ್ಘ ಸಮಯದಿಂದಲೂ ಪ್ರಾಬಲ್ಯವನ್ನು ಹೊಂದಿದ್ದು, ಇದರ ಮಾರಾಟಕ್ಕೆ ಇತ್ತೀಚೆಗೆ ಗ್ರ್ಯಾಂಡ್ ವಿಟಾರಾ ಪೈಪೋಟಿ ನೀಡುತ್ತಿದೆ; ಇದೇವೇಳೆ ಇತ್ತೀಚೆಗೆ ನವೀಕೃತಗೊಂಡ ಸೆಲ್ಟೋಸ್ ಕೂಡಾ ಹೆಚ್ಚು ಮಾರಾಟವಾಗುತ್ತಿರುವ ಪ್ರತಿಸ್ಪರ್ಧಿಯಾಗಿದೆ. ಹೈರೈಡರ್ ಗ್ರ್ಯಾಂಡ್ ವಿಟಾರಾವನ್ನು ಹೋಲುವ ಕಾರಣ ಇದನ್ನೂ ಕೂಡಾ ಈ ಹೋಲಿಕೆಯಲ್ಲಿ ಸೇರಿಸಲಾಗಿದೆ.

  

ಇಂಜಿನ್ ನಿರ್ದಿಷ್ಟತೆಗಳು

ಸ್ಪೆಕ್‌ಗಳು

ಹೋಂಡಾ 

ಎಲಿವೇಟ್ 

ಮಾರುತಿ ಗ್ರ್ಯಾಂಡ್ ವಿಟಾರಾ /ಟೊಯೋಟಾ ಹೈರೈಡರ್

ಹ್ಯುಂಡೈ ಕ್ರೆಟಾ

ಕಿಯಾ ಸೆಲ್ಟೋಸ್

ಇಂಜಿನ್

1.5-ಲೀಟರ್ ಪೆಟ್ರೋಲ್

1.5- ಲೀಟರ್ ಪೆಟ್ರೋಲ್

1.5- ಲೀಟರ್ ಪೆಟ್ರೋಲ್ -ಹೈಬ್ರಿಡ್

1.5- ಲೀಟರ್ ಪೆಟ್ರೋಲ್

1.5- ಲೀಟರ್ ಪೆಟ್ರೋಲ್

1.5- ಲೀಟರ್ ಪೆಟ್ರೋಲ್

ಪವರ್

121PS

103PS

116PS

115PS

115PS

160PS

ಟಾರ್ಕ್

145Nm

137Nm

141Nm

144Nm

144Nm

253Nm

ಟ್ರಾನ್ಸ್‌ಮಿಷನ್

6-ಸ್ಪೀಡ್ MT / CVT

5-ಸ್ಪೀಡ್ MT / 6-ಸ್ಪೀಡ್ AT

e-CVT

6- ಸ್ಪೀಡ್ MT / CVT

6- ಸ್ಪೀಡ್ MT / CVT

6- ಸ್ಪೀಡ್ iMT / 7- ಸ್ಪೀಡ್ DCT

Honda Elevate

 ಎಲ್ಲಾ ಐದು SUVಗಳು 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಪಡೆದರೆ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ಹೆಚ್ಚು ಮಿತವ್ಯಯದ ಪೆಟ್ರೋಲ್-ಹೈಬ್ರಿಡ್ ಯೂನಿಟ್ ಅನ್ನು ಪಡೆಯುತ್ತವೆ. ಸೌಮ್ಯ ಆಫ್‌ರೋಡಿಂಗ್ ಕೌಶಲ್ಯ ಉಳ್ಳವರು ಮಾರುತಿ ಟೊಯೋಟಾ ಜೋಡಿಯ AWD ಅನ್ನು ಆಯ್ಕೆ ಮಾಡಬಹುದು ಆದರೆ ಇದು ಮ್ಯಾನುವಲ್ ಶಿಫ್ಟರ್‌ಗೆ ಮಾತ್ರ ಸೀಮಿತವಾಗಿದೆ. ಈ ಪಟ್ಟಿಯಲ್ಲಿ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಹೊಂದಿರುವ ಏಕೈಕ ಮಾಡೆಲ್ ಎಂದರೆ ಸೆಲ್ಟೋಸ್. ಅಷ್ಟೇ ಅಲ್ಲ, ಇದು ಅತ್ಯಂತ ಶಕ್ತಿಶಾಲಿ ಆಯ್ಕೆಯೂ ಆಗಿದೆ.

 ಈ ಎಲ್ಲವೂ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ಲಭ್ಯವಿದೆ. ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ತಮ್ಮ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ e-CVTಯನ್ನೂ ಪಡೆದಿವೆ. ಸೆಲ್ಟೋಸ್ ಟರ್ಬೋ-ಪೆಟ್ರೋಲ್ ವೇರಿಯೆಂಟ್‌ಗಳು ಸಾಮಾನ್ಯ ಮ್ಯಾನುವಲ್ ಸ್ಟಿಕ್‌ಗೆ ಬದಲಾಗಿ iMT (ಕ್ಲಚ್ ಪೆಡಲ್ ಹೊರತುಪಡಿಸಿ ಮ್ಯಾನುವಲ್) ಅನ್ನು ಪಡೆದಿವೆ.

Kia Seltos Engine

ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಮಾತ್ರ ಈ ಪಟ್ಟಿಯಲ್ಲಿ ಡೀಸೆಲ್ ಪವರ್‌ಟ್ರೇನ್‌ನಲ್ಲೂ ಲಭ್ಯವಿದೆ.

 

ಇಂಧನ ದಕ್ಷತೆ

ಸ್ಪೆಕ್‌ಗಳು

ಹೋಂಡಾ 

ಎಲಿವೇಟ್ 

ಮಾರುತಿ ಗ್ರ್ಯಾಂಡ್ ವಿಟಾರಾ / ಟೊಯೋಟಾ ಹೈರೈಡರ್

ಹ್ಯುಂಡೈ ಕ್ರೆಟಾ #

ಕಿಯಾ ಸೆಲ್ಟೋಸ್

ಇಂಜಿನ್

1.5-ಲೀಟರ್ ಪೆಟ್ರೋಲ್ l MT / CVT

1.5- ಲೀಟರ್ ಪೆಟ್ರೋಲ್ MT / AT

1.5- ಲೀಟರ್ ಪೆಟ್ರೋಲ್ -ಹೈಬ್ರಿಡ್

1.5- ಲೀಟರ್ ಪೆಟ್ರೋಲ್ MT / CVT

1.5- ಲೀಟರ್ ಪೆಟ್ರೋಲ್ MT / CVT

1.5-ಲೀಟರ್ ಟರ್ಬೋ -ಪೆಟ್ರೋಲ್ iMT / DCT

ಮೈಲೇಜ್

15.31kmpl / 16.92kmpl

21.1kmpl / 20.58kmpl

27.97kmpl

16.8 kmpl / 16.9kmpl

17 kmpl / 17.7kmpl

17.7kmpl / 17.9kmpl

ಇವುಗಳು BS6 ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿರುವ ಕಾರುಗಳ ಅಪ್‌ಡೇಟ್‌ಗೆ ಮೊದಲು ಕ್ಲೈಮ್ ಮಾಡಲಾದ ಅಂಕಿಅಂಶಗಳಾಗಿವೆ.

Toyota Hyryder strong-hybrid powertrain

 ಈ ಲಾಟ್‌ನಲ್ಲಿ ಸೆಲ್ಟೋಸ್‌ನ ಟರ್ಬೋ ಪೆಟ್ರೋಲ್ ಇಂಜಿನ್‌ನೊಂದಿಗೆ ಹೋಲಿಸಿದರೆ ಎಲಿವೇಟ್ ಅತ್ಯಂತ ಕಡಿಮೆ ದಕ್ಷತೆ ಹೊಂದಿದೆ. ಅತ್ಯಂತ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದ SUV ಎಂಬ ಶೀರ್ಷಿಕೆಯು 27.97kmpl ಕ್ಲೈಮ್ ಮಾಡಲಾದ ಇಂಧನ ದಕ್ಷತೆಯನ್ನು ಹೊಂದಿದ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್‌ ಪಾಲಿಗೆ ಬರುತ್ತದೆ. ಆದಾಗ್ಯೂ ಹೋಂಡಾ SUVಯ ಮಾಡೆಲ್‌ಗಳು ತಮ್ಮ ಕ್ಲೇಮ್ ಮಾಡಲಾದ ಅಂಕಿಗಳಿಗಿಂತ ಸಾಕಷ್ಟು ಕಡಿಮೆ ತೋರಿಸಿರುವಾಗ ಇದು ವಾಸ್ತವದಲ್ಲಿ ಇಂಧನ ದಕ್ಷತೆಯ ಪರೀಕ್ಷೆಯ ಕಾರ್ಯಕ್ಷಮತೆಯನ್ನು ಹೇಗೆ ನೀಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಇತ್ತೀಚಿನ WR-V Be ಅನ್ನು ಹೋಂಡಾ ಎಲಿವೇಟ್‌ನೊಂದಿಗೆ ನೀಡಬೇಕೆ?

ಆಯಾಮಗಳು

ಆಯಾಮಗಳು

ಎಲಿವೇಟ್

ಗ್ರ್ಯಾಂಡ್ ವಿಟಾರಾ

ಹೈರೈಡರ್

ಕ್ರೆಟಾ

ಸೆಲ್ಟೋಸ್

ಉದ್ದ

4,312mm

4,345mm

4,365mm

4,300mm

4,365mm

ಅಗಲ

1,790mm

1,795mm

1,795mm

1,790mm

1,800mm

ಎತ್ತರ

1,650mm

1,645mm

1,635mm

1,635mm

1,645mm

ವ್ಹೀಲ್ ಬೇಸ್

2,650mm

2,600mm

2,600mm

2,610mm

2,610mm

ಬೂಟ್ ಸ್ಪೇಸ್

458 ಲೀಟರ್

373 ಲೀಟರ್ *

373 ಲೀಟರ್ *

-

433 ಲೀಟರ್

*ಬೂಟ್ ಸ್ಪೇಸ್ ಅಂಕಿಗಳು OEMನೊಂದಿಗೆ ದೃಢಪಡಿಸಲಾಗಿಲ್ಲ.

Kia Seltos

 ಹೋಂಡಾ ಎಲಿವೇಟ್ ತುಲನಾತ್ಮಕವಾಗಿ ಸರಳವಾದ ಡಿಸೈನ್ ಲ್ಯಾಂಗ್ವೇಜ್ ಹೊಂದಿದ್ದು ತನ್ನ ಪ್ರತಿಸ್ಪರ್ಧಿಗಳಿಗಿಂತ ಉತ್ತಮವಾಗಿದೆ ಮತ್ತು ಉದ್ದದ ವ್ಹೀಲ್‌ಬೇಸ್ ಅನ್ನು ನೀಡುತ್ತದೆ. ಇವೆರಡೂ ಅಂಶಗಳು ಕ್ಯಾಬಿನ್ ಸ್ಪೇಸ್ ಅನ್ನು ಹೆಚ್ಚಿಸುತ್ತದೆ. ಹೈರೈಡರ್ ಮತ್ತು ಸೆಲ್ಟೋಸ್ ಈ ಹೋಲಿಕೆಯಲ್ಲಿ ಅತ್ಯಂತ ಉದ್ದದ SUVಗಳಾಗಿದ್ದು, ಗ್ರ್ಯಾಂಡ್ ವಿಟಾರಾ ನಂತರದ ಸ್ಥಾನವನ್ನು ಪಡೆಯುತ್ತದೆ. ಅಗಲದ ವಿಷಯಕ್ಕೆ ಬಂದಾಗ, ಸೆಲ್ಟೋಸ್ ಇತರ ಮಾಡೆಲ್‌ಗಳಿಗಿಂತ ಅತಿ ಸಣ್ಣ ಅಂತರದಿಂದ ಮುಂದಿದೆ.

Honda Elevate boot space

 ಕ್ರೆಟಾ, ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್‌ನ ಅಧಿಕೃತ ಬೂಟ್ ಸಾಮರ್ಥ್ಯವನ್ನು ಬಹಿರಂಗಪಡಿಸಲಾಗಿಲ್ಲ, ಆದರೆ ಎಲಿವೇಟ್ ಇಲ್ಲಿ ಹೆಚ್ಚಿನ ಸ್ಪೇಸ್ ಹೊಂದಿದೆ.

  ಫೀಚರ್‌ಗಳು

ಸಾಮಾನ್ಯ ಫೀಚರ್‌ಗಳು

ಎಲಿವೇಟ್

ಗ್ರ್ಯಾಂಡ್ ವಿಟಾರಾ / ಹೈರೈಡರ್

ಕ್ರೆಟಾ

ಸೆಲ್ಟೋಸ್

17-ಇಂಚು ಅಲಾಯ್  ವ್ಹೀಲ್‌ಗಳು

LED ಹೆಡ್‌ಲ್ಯಾಂಪ್‌ಗಳು

ಆಟೋ AC

ಕ್ರೂಸ್ ಕಂಟ್ರೋಲ್

ಲೆದರೆಟ್ ಸೀಟುಗಳು

ವೈರ್‌ಲೆಸ್ ಫೋನ್ ಚಾರ್ಜರ್

ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

10.25-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್

ವೈರ್‌ಲೈಸ್  ಆ್ಯಂಡ್ರಾಯ್ಡ್ ಆಟೋ/ ಆ್ಯಪಲ್ ಕಾರ್‌ಪ್ಲೇ

ಇಲೆಕ್ಟ್ರಿಕ್ ಸನ್‌ರೂಫ್

ಪನೋರಮಿಕ್ ಸನ್‌ರೂಫ್

9- ಇಂಚು ಟಚ್‌ಸ್ಕ್ರೀನ್ ಸಿಸ್ಟಮ್

ವೈರ್‌ಲೈಸ್  ಆ್ಯಂಡ್ರಾಯ್ಡ್ ಆಟೋ/ ಆ್ಯಪಲ್ ಕಾರ್‌ಪ್ಲೇ

 

ಮುಂಭಾಗದ ವೆಂಟಿಲೇಟಡ್ ಸೀಟುಗಳು

ಹೆಡ್ಸ್ ಅಪ್ ಡಿಸ್‌ಪ್ಲೇ

ಕ್ಲೇರಿಯಾನ್‌ನ ಪ್ರೀಮಿಯಂ ಸೌಂಡ್ ಸಿಸ್ಟಮ್

10.25- ಇಂಚು ಟಚ್‌ಸ್ಕ್ರೀನ್ ಸಿಸ್ಟಮ್

ವೈರ್‌ಲೈಸ್  ಆ್ಯಂಡ್ರಾಯ್ಡ್ ಆಟೋ/ ಆ್ಯಪಲ್ ಕಾರ್‌ಪ್ಲೇ

 

ವಿಹಂಗಮ ಸನ್‌ರೂಫ್

ಮುಂಭಾಗದ ವೆಂಟಿಲೇಟಡ್ ಸೀಟುಗಳು

ಪವರ್ ಡ್ರೈವರ್ ಸೀಟು

ಆಟೋ ಏರ್ ಪ್ಯೂರಿಫೈಯರ್

ಬೋಸ್ ಪ್ರೀಮಿಯಂ ಸೌಂಡ್ ಸಿಸ್ಟಮ್

ವಿಹಂಗಮ ಸನ್‌ರೂಫ್

ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ಇನ್ಸ್‌ಟ್ರುಮೆಂಟ್ ಕ್ಲಸ್ಟರ್‌ಗೆ 10.25- ಇಂಚು ಡ್ಯುಯಲ್ ಡಿಸ್‌ಪ್ಲೇಗಳು 

ಡ್ಯುಯಲ್-ಝೋನ್ AC

ಆಟೋ ಏರ್ ಪ್ಯೂರಿಫೈಯರ್

ಮುಂಭಾಗದ ವೆಂಟಿಲೇಟಡ್ ಸೀಟುಗಳು

ಪವರ್ ಡ್ರೈವರ್ ಸೀಟು

ಬೋಸ್ ಪ್ರೀಮಿಯಂ ಸೌಂಡ್ ಸಿಸ್ಟಮ್

Kia Seltos cabin

ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಎರಡು 10.25-ಇಂಚು ಇಂಟೆಗ್ರೇಟಡ್ ಡಿಸ್‌ಪ್ಲೇಗಳಂತಹ ವಿಭಾಗದಲ್ಲೇ ಮೊದಲ ಹೈಲೈಟ್‌ಗಳನ್ನು ಸೇರಿಸುವ ಮೂಲಕ ಕಿಯಾ ಸೆಲ್ಟೋಸ್ ಅತ್ಯಂತ ಫೀಚರ್‌ಭರಿತ ಕಾಂಪ್ಯಾಕ್ಟ್ SUV ಆಗಿದೆ. ಎಲ್ಲಾ ನಾಲ್ಕು SUVಗಳು ಹೋಂಡಾ ಎಲಿವೇಟ್‌ಗಿಂತ ಹೆಚ್ಚಿನ ಪ್ರಯಾಣಿಕ ಸೌಕರ್ಯಗಳನ್ನು ನೀಡುತ್ತದೆ, ಮುಂಭಾಗದ ವೆಂಟಿಲೇಟಡ್ ಸೀಟುಗಳು, ವಿಹಂಗಮ ಸನ್‌ರೂಫ್ ಮತ್ತು ಪ್ರೀಮಿಯಂ ಸೌಂಡ್ ಸಿಸ್ಟಮ್ ಹೋಂಡಾ ಎಲಿವೇಟ್‌ನಲ್ಲಿ ಇರುವುದಿಲ್ಲ.

 ಸುರಕ್ಷತಾ ಫೀಚರ್‌ಗಳು

Honda Elevate ADAS

ಸಾಮಾನ್ಯ ಫೀಚರ್‌ಗಳು 

ಎಲಿವೇಟ್

ಗ್ರ್ಯಾಂಡ್ ವಿಟಾರಾ / ಹೈರೈಡರ್

ಕ್ರೆಟಾ

ಸೆಲ್ಟೋಸ್

ESC

ಹಿಲ್ ಹೋಲ್ಡ್ ಅಸಿಸ್ಟ್

ರಿಯರ್ ಪಾರ್ಕಿಂಗ್ ಕ್ಯಾಮರಾ

ISOFIX ಚೈಲ್ಡ್ ಸೀಟ್ ಮೌಂಟ್‌ಗಳು

ABS ಜೊತೆಗೆ EBD

ADAS

ಆರರ ತನಕ ಏರ್‌ಬ್ಯಾಗ್‌ಗಳು

ಲೇನ್ ವಾಚ್ ಕ್ಯಾಮರಾ

ಆರರ ತನಕ ಏರ್‌ಬ್ಯಾಗ್‌ಗಳು

360-ಡಿಗ್ರಿ ಕ್ಯಾಮರಾ

ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್

ಹಿಲ್ ಡಿಸೆಂಟ್ ಕಂಟ್ರೋಲ್ (AWD)

ಆರು ಏರ್‌ಬ್ಯಾಗ್‌ಗಳು (ಸ್ಟಾಂಡರ್ಡ್)

ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್

ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು

ADAS 

ಆರು ಏರ್‌ಬ್ಯಾಗ್‌ಗಳುs (ಸ್ಟಾಂಡರ್ಡ್)

ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್

ಮುಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು

360- ಡಿಗ್ರಿ ಕ್ಯಾಮರಾ

ರೈನ್-ಸೆನ್ಸಿಂಗ್ ವೈಪರ್‌ಗಳು

ಎಲ್ಲಾ SUVಗಳು ಸಾಕಷ್ಟು ಸುರಕ್ಷತಾ ಫೀಚರ್‌ಗಳನ್ನು ಹೊಂದಿವೆ. ಕ್ರೆಟಾ ಮತ್ತು ಸೆಲ್ಟೋಸ್‌ನಲ್ಲಿ ಸದ್ಯಕ್ಕೆ ಆರು ಏರ್‌ಬ್ಯಾಗ್‌ಗಳು ಸ್ಟಾಂಡರ್ಡ್ ಆಗಿವೆ. ರಡಾರ್-ಆಧಾರಿತ ತಂತ್ರಜ್ಞಾನ ADAS, ಎಲಿವೇಟ್ ಮತ್ತು ಸೆಲ್ಟೋಸ್‌ಗೆ ಮಾತ್ರ ಸೀಮಿತವಾಗಿದೆ. ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ, ಹೋಂಡಾದಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, 360 ಡಿಗ್ರಿ ಕ್ಯಾಮರಾ, ಮುಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರೈನ್ ಸೆನ್ಸಿಂಗ್ ವೈಪರ್‌ಗಳು ಇರುವುದಿಲ್ಲ

ಸಂಬಂಧಿತ:  ಹೋಂಡಾ ಎಲಿವೇಟ್ ಭಾರತದಲ್ಲಿ  5-ಸ್ಟಾರ್ ರೇಟ್ ಮಾಡಲಾದ SUV ಆಗಲಿದೆಯೇ?

 ಬೆಲೆ ಶ್ರೇಣಿ

ಹೋಂಡಾ ಎಲಿವೇಟ್

ಮಾರುತಿ ಗ್ರ್ಯಾಂಡ್ ವಿಟಾರಾ

ಟೊಯೋಟಾ ಹೈರೈಡರ್

ಹ್ಯುಂಡೈ ಕ್ರೆಟಾ

ಕಿಯಾ ಸೆಲ್ಟೋಸ್

ರೂ 12 ಲಕ್ಷದಿಂದ ರೂ 17 ಲಕ್ಷ (ನಿರೀಕ್ಷಿತ)

ರೂ 10.70 ಲಕ್ಷದಿಂದ ರೂ 19.95 ಲಕ್ಷ

ರೂ 10.86 ಲಕ್ಷದಿಂದ ರೂ 19.99 ಲಕ್ಷ

ರೂ 10.87 ಲಕ್ಷದಿಂದ ರೂ 19.20 ಲಕ್ಷ

ರೂ 10.90 ಲಕ್ಷದಿಂದ ರೂ 20 ಲಕ್ಷ

ತನ್ನ ಪ್ರಮುಖ ಪ್ರತಿಸ್ಪರ್ಧಿಗಳಿಗಿಂತ ಎಲಿವೇಟ್ ಸ್ಪರ್ಧಾತ್ಮಕ ಬೆಲೆ ಹೊಂದಿರಬಹುದೆಂಬುದು ನಮ್ಮ ನಿರೀಕ್ಷೆಯಾಗಿದೆ ಮತ್ತು ಆಕರ್ಷಕ ಫೀಚರ್‌ಗಳ ಕೊರತೆಯು ಇದನ್ನು ಟಾಪ್-ಸ್ಪೆಕ್ ವೇರಿಯೆಂಟ್‌ಗಳಲ್ಲಿ ಇತರ ಕಾರುಗಳಿಗಿಂತ ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ.

(ಎಲ್ಲಾ ಬೆಲೆಗಳು ಎಕ್ಸ್-ಶೋರೂಂ)

ಹೋಂಡಾ ಎಲಿವೇಟ್ ಬೆಲೆಗಳು ಸೆಪ್ಟೆಂಬರ್‌ನಲ್ಲಿ ಪ್ರಕಟಗೊಳ್ಳಲಿದ್ದು, ಬುಕಿಂಗ್‌ಗಳು ತೆರೆದುಕೊಂಡಿವೆ ಮತ್ತು ಉತ್ಪಾದನೆಯು ಪ್ರಗತಿಯಲ್ಲಿದೆ. 

 ಇನ್ನಷ್ಟು ಓದಿ : ಸೆಲ್ಟೋಸ್ ಡೀಸೆಲ್

was this article helpful ?

Write your Comment on Honda ಇಲೆವಟ್

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience