ಅಂತಿಮವಾಗಿ ಬಹಿರಂಗಗೊಂಡಿದೆ ಹೋಂಡಾದ ಹೊಸ ಕಾಂಪ್ಯಾಕ್ಟ್ SUVಯ ಹೆಸರು

published on ಮೇ 07, 2023 06:59 am by rohit for ಹೊಂಡಾ ಇಲೆವಟ್

  • 13 Views
  • ಕಾಮೆಂಟ್‌ ಅನ್ನು ಬರೆಯಿರಿ

ಎಲಿವೇಟ್ ಸುಮಾರು ಆರು ವರ್ಷಗಳಲ್ಲೇ ಭಾರತದಲ್ಲಿ ಹೋಂಡಾದ ಮೊದಲ ಈ ಹೊಚ್ಚ ಹೊಸ ಮಾಡೆಲ್ ಆಗಿದ್ದು ಇದು ತನ್ನ ಲೈನ್‌ಅಪ್‌ನಲ್ಲಿ ಸಿಟಿಗಿಂತ ಮೇಲಿನ ಸ್ಥಾನದಲ್ಲಿ ಇರುತ್ತದೆ. 

Honda Elevate moniker

  • ಹೋಂಡಾ ಶೀಘ್ರದಲ್ಲೇ ಎಲಿವೇಟ್ ಅನ್ನು ಅನಾವರಣಗೊಳಿಸಲಿದ್ದು ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
  • ಈ SUVಗಾಗಿ ಈಗಾಗಲೇ ಕೆಲವು ಡೀಲರ್‌ಶಿಪ್‌ಗಳು ಬುಕಿಂಗ್‌ಗಳನ್ನು ಸ್ವೀಕರಿಸುತ್ತಿವೆ.
  •  ಎಕ್ಸ್‌ಟೀರಿಯರ್ ನೋಟದಲ್ಲಿ ಸಂಪರ್ಕಿತ LED ಟೈಲ್‌ಲೈಟ್‌ಗಳು, ಒಂದು ದೊಡ್ಡದಾದ ಗ್ರಿಲ್ ಮತ್ತು ಚಂಕಿ ವ್ಹೀಲ್ ಆರ್ಚ್‌ಗಳನ್ನು ಕಾಣಬಹುದು.
  •  ವೈರ್‌ಲೆಸ್ ಫೋನ್ ಚಾರ್ಜಿಂಗ್, ದೊಡ್ಡದಾದ ಟಚ್‌ಸ್ಕ್ರೀನ್, ಮತ್ತು ADASನೊಂದಿಗೆ ಬರುವ ನಿರೀಕ್ಷೆ ಇದೆ.
  •  ಸಿಟಿಯಿಂದ ಬಲಿಷ್ಠ ಹೈಬ್ರಿಡ್ ಸೆಟಪ್ ಹೊಂದಿರುವ ಎರಡು ಪೆಟ್ರೋಲ್ ಇಂಜಿನ್ ಆಯ್ಕೆಗಳನ್ನು ಪಡೆದಿರಬಹುದು, 
  •  ಆರಂಭಿಕ ಬೆಲೆ ರೂ 11 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.

 ಈ ಕಾಂಪ್ಯಾಕ್ಟ್ SUV ತನ್ನ ಇನ್ನೊಬ್ಬ ಸದಸ್ಯನನ್ನು ಬರಮಾಡಿಕೊಳ್ಳಲಿದ್ದು, ಅದರ ಹೆಸರನ್ನು ಈಗಷ್ಟೇ ಹೋಂಡಾ ಎಲಿವೇಟ್ ಎಂದು ದೃಢಪಡಿಸಲಾಗಿದೆ. ಇದು ಇನ್ನಷ್ಟೇ ಬಿಡುಗಡೆಗೊಳ್ಳಬೇಕಿದೆ ಆದರೂ, ಕೆಲವು ಡೀಲರ್‌ಶಿಪ್‌ಗಳು ಮುಂಬರುವ ಈ  SUVಗಾಗಿ ಬುಕಿಂಗ್ ಸ್ವೀಕರಿಸಲು ಪ್ರಾರಂಭಿಸಿದ್ದಾರೆ.

 ಭಾರತದಲ್ಲಿ ಆರು ವರ್ಷಗಳಲ್ಲೇ ಹೋಂಡಾದ ಮೊದಲನೇ ಹೊಚ್ಚ ಹೊಸ ಮಾಡೆಲ್ ಆಗಿರುವ ಎಲಿವೇಟ್, ಮೊದಲು ಭಾರತದಲ್ಲಿ ಬಿಡುಗಡೆಗೊಳ್ಳಲಿದ್ದು ನಂತರ ಜಗತ್ತಿನಾದ್ಯಂತ ಮಾರಾಟಗೊಳ್ಳಲಿದೆ. “ಎಲಿವೇಟ್” ಎಂಬ ನಾಮಫಲಕದೊಂದಿಗೆ, ಈ ಕಾರುತಯಾರಕರು V ಯಲ್ಲಿ ಕೊನೆಗೊಳ್ಳುವ ಹೆಸರುಗಳ (ಉದಾಹರಣೆಗೆ CR-V, WR-V, ಮತ್ತು BR-V) ತಮ್ಮ ದೀರ್ಘ ಸಂಬಂಧಿತ ನಾಮಕರಣದ ಮಾದರಿಯನ್ನು ಕೈಬಿಟ್ಟಿದ್ದಾರೆ. ಅಲ್ಲದೇ ಇದು ಹೋಂಡಾದ ಹೊಸ ಯುಗದ ಮಾಡೆಲ್‌ಗಳ ಉದಯಕ್ಕೆ ಗುರುತಾಗಬಹುದು, ಕೆಲವೊಂದು ವಿದ್ಯುತ್‌ಚಾಲಿತವೂ ಆಗಿದೆ.

ಹೊಸ ಟೀಸರ್ ವಿವರಗಳು

 ಹೋಂಡಾ ಕಾರ್ ಇಂಡಿಯಾ ಹೊಸ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹಾಕಿದ್ದು, ಈ SUVಗೆ “ಎಲಿವೇಟ್” ಎಂಬ ನಾಮಫಲಕವನ್ನು ಅನಾವರಣಗೊಳಿಸಿದೆ. ಹೋಂಡಾ ಮೊನಿಕರ್‌ಗಿಂತ ವಿಶೇಷವಾಗಿ ಏನೂ ಕಾಣದಿದ್ದರೂ, ಇದು SUVಯ ಸಂಪರ್ಕಿತ LED ಟೈಲ್‌ಲೈಟ್‌ಗಳ ನೋಟವನ್ನು ಹೊಂದಿದೆ.

 ಇದನ್ನೂ ಓದಿ: ಭಾರತದಲ್ಲಿ ದಶಕವನ್ನು ಪೂರೈಸಿದ ಹೋಂಡಾ ಅಮೇಝ್: ಅದರ ಪ್ರಮುಖ ಸಂಖ್ಯೆಗಳ ನೋಟ ಇಲ್ಲಿದೆ

ಈ ತನಕ ತಿಳಿದಿರೋ ಸಂಗತಿಗಳು

Honda Elevate teaser image

 ಈ ಕಾರುತಯಾರಕರು ಹಂಚಿಕೊಂಡ ಈ ಹಿಂದಿನ ಟೀಸರ್‌ನಲ್ಲಿ ಈಗಾಗಲೇ ಎಲಿವೇಟ್ SUVಯ ಸಿಲ್ಹೋಟ್‌ನಲ್ಲಿ LED ಹೆಡ್‌ಲೈಟ್‌ಗಳು, DRLಗಳು ಮತ್ತು ಫಾಗ್‌ ಲ್ಯಾಂಪ್‌ಗಳಿಗೆ LED ಇರುವುದನ್ನು ಕಾಣಬಹುದು. ಈ SUVಯ ಹಿಂದಿನ ಸ್ಪೈ ಶಾಟ್‌ಗಳು ಚಂಕಿ ವ್ಹೀಲ್ ಆರ್ಚ್‌ಗಳು, ರೂಫ್ ರೇಲ್‌ಗಳು ಮತ್ತು ದೊಡ್ಡದಾದ ಗ್ರಿಲ್ ಹೊಂದಿರುವುದನ್ನೂ ತೋರಿಸಿದೆ.

ನಿರೀಕ್ಷಿತ ವೈಶಿಷ್ಟ್ಯಗಳ ಪಟ್ಟಿ

 ಸಿಟಿಯ 8-ಇಂಚು ಯೂನಿಟ್‌ಗೆ ಹೋಲಿಸಿದರೆ, ಎಲಿವೇಟ್ SUV ದೊಡ್ಡ ಟಚ್ ಸ್ಕ್ರೀನ್ ಅನ್ನು ಹೊಂದಿದ್ದು, ಸಿಂಗಲ್-ಪೇನ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ವಾತಾಯನದ ಫ್ರಂಟ್‌ ಸೀಟುಗಳನ್ನು ಪಡೆದಿದೆ. 

 ಆರು ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮರಾ ಪ್ರಯಾಣಿಕ ಸುರಕ್ಷತೆಯ ಕಾಳಜಿ ವಹಿಸಿದೆ. ಇದು ಹಲವಾರು ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಅನ್ನು ನೀಡುವ ನಿರೀಕ್ಷೆ ಇದೆ. 

ಡೀಸೆಲ್ ಆಯ್ಕೆ ಇರುವುದಿಲ್ಲ

Honda City Hybrid's strong-hybrid powertrain

  ಸಿಟಿಯಂತೆ ಎಲಿವೇಟ್ SUVನಲ್ಲೂ ಕೇವಲ ಪೆಟ್ರೋಲ್ ಇಂಜಿನ್ ಮಾತ್ರವೇ ಇರುತ್ತದೆ. ಸಿಟಿಯಲ್ಲಿರುವ 1.5-ಲೀಟರ್‌ನ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಪೆಟ್ರೋಲ್ ಇಂಜಿನ್ ಅನ್ನೇ ಇದು ಪಡೆದಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು CVT ಆಟೋಮ್ಯಾಟಿಕ್ ಆಯ್ಕೆಗಲನ್ನು ಹೊಂದಿದೆ. ಹೋಂಡಾದ ಆ ಕಾಂಪ್ಯಾಕ್ಟ್ SUV ಸಿಟಿ ಹೈಬ್ರಿಡ್‌ನ ಸ್ಟ್ರಾಂಗ್-ಪವರ್ ಹೈಬ್ರಿಡ್ ಪವರ್‌ಟ್ರೇನ್ (126PS ಜೋಡಿಸಿದ) ಅನ್ನು ಹೊಂದಿರುವ ನಿರೀಕ್ಷೆ ಇದೆ.

 ಇದನ್ನೂ ಓದಿ: ಆಧುನಿಕ ಇಂಜಿನ್ ಬ್ರೇಕ್-ಇನ್ ವಿಧಾನದ ಕುರಿತ ಮಿಥ್ಯೆಗಳ ಅನಾವರಣ   

 ಬೆಲೆ ಮತ್ತು ಸ್ಪರ್ಧೆ

 ಈ ಎಲಿವೇಟ್‌ಗೆ ಹೋಂಡಾ ರೂ 11 ಲಕ್ಷದ ಆರಂಭಿಕ ಬೆಲೆಯನ್ನು ನಿಗದಿಪಡಿಸಿ ಆಗಸ್ಟ್‌ನಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಈ SUVಯು  MG ಆ್ಯಸ್ಟರ್, ಟೊಯೋಟಾ ಅರ್ಬನ್ ಕ್ರ್ಯೂಸಿಯರ್ ಹೈರೈಡರ್, ಹ್ಯುಂಡೈ ಕ್ರೆಟಾ, ಫೋಕ್ಸ್‌ವಾಗನ್ ಟೈಗನ್, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಸಿಟ್ರಾನ್ C3 ಏರ್‌ಕ್ರಾಸ್ ಮತ್ತು ಸ್ಕೋಡಾ ಕುಶಕ್‌ಗೆ ಪ್ರತಿಸ್ಪರ್ಧಿಯಾಗಲಿದೆ.

 

 

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹೋಂಡಾ ಇಲೆವಟ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience