• English
  • Login / Register

ಗ್ರಾಂಡ್ i10 ನಿಯೋಸ್‌ ನಲ್ಲಿ ಹೊಸ ವೆರಿಯೆಂಟ್ ನ ಪರಿಚಯಿಸಿದ ಹ್ಯುಂಡೈ..!

published on ಮಾರ್ಚ್‌ 11, 2023 08:17 pm by ansh for ಹುಂಡೈ ಗ್ರ್ಯಾಂಡ್ ಐ 10 ನಿಯೋಸ್

  • 16 Views
  • ಕಾಮೆಂಟ್‌ ಅನ್ನು ಬರೆಯಿರಿ

ಕೇವಲ ಒಂದು ಫೀಚರ್‌ನ ವ್ಯತ್ಯಾಸದೊಂದಿಗೆ ಸ್ಪೋರ್ಟ್ಝ್ ಟ್ರಿಮ್‌ನಿಂದ ಕೆಳಗಿನ ಸ್ಲಾಟ್‌ನಲ್ಲಿರಲಿದೆ ಈ ಹೊಸ ಸ್ಪೋರ್ಟ್ಝ್ ಎಕ್ಸಿಕ್ಯೂಟಿವ್ ಟ್ರಿಮ್

Hyundai Grand i10 Nios

  • ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಪಡೆಯುತ್ತಿದೆ ಹೊಸ ಸ್ಪೋರ್ಟ್ಝ್ ಎಕ್ಸಿಕ್ಯೂಟಿವ್ ಟ್ರಿಮ್.
  • ಮಿಡ್ ಸ್ಪೆಕ್ ಮ್ಯಾಗ್ನಾ ಮತ್ತು ಸ್ಪೋರ್ಟ್ಝ್ ಟ್ರಿಮ್‌ಗಳ ನಡುವಿನ ವೆರಿಯೆಂಟ್ ಇದಾಗಿದೆ.
  • ಈ ಹೊಸ ಟ್ರಿಮ್ ಇದೇ ರೀತಿಯಾದ ಸ್ಪೋರ್ಟ್ಝ್ ವೇರಿಯೆಂಟ್‍ಗಳಿಗೆ ಹೋಲಿಸಿದರೆ ರೂ 3,500 ರಷ್ಟು ಕಡಿಮೆ ಬೆಲೆ ಹೊಂದಿದೆ.
  • ಈ ಗ್ರ್ಯಾಂಡ್ i10 ನಿಯೋಸ್ 83PS ಮತ್ತು 114Nm ನಷ್ಟು ಉತ್ಪಾದಿಸುವ 1.2-ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿದೆ.
  • ಈ ಹ್ಯಾಚ್‌ಬ್ಯಾಕ್‌ನ ಬೆಲೆಯನ್ನು ರೂ 5.69 ಲಕ್ಷದಿಂದ ರೂ 8.46 ಲಕ್ಷದ ತನಕ ನಿಗದಿಪಡಿಸಲಾಗಿದೆ(ಎಕ್ಸ್-ಶೋರೂಂ).

ಗ್ರ್ಯಾಂಡ್ i10 ನಿಯೋಸ್‌ನ ನವೀಕೃತ ಆವೃತ್ತಿಯನ್ನು ಬಿಡುಗಡೆಗೊಳಿಸಿದ ನಂತರ ಹ್ಯುಂಡೈ ತನ್ನ ವೇರಿಯೆಂಟ್ ಲೈನ್‌ಅಪ್‌ನಲ್ಲಿ ಸಣ್ಣ ಬದಲಾವಣೆಯನ್ನು ಮಾಡಿದೆ. ಈ ಕಾರುತಯಾರಕ ಸಂಸ್ಥೆ ಈ ಹ್ಯಾಚ್‌ಬ್ಯಾಕ್‌ನ ಮಿಡ್ ಸ್ಪೆಕ್ ಮ್ಯಾಗ್ನಾ ಮತ್ತು ಸ್ಪೋರ್ಟ್ಝ್ ಟ್ರಿಮ್‌ಗಳ ನಡುವೆ ಹೊಸ ‘ಸ್ಪೋರ್ಟ್ಝ್ ಎಕ್ಸ್‌ಕ್ಯೂಟಿವ್‘ ಟ್ರಿಮ್ ಅನ್ನು ಪರಿಚಯಿಸಿದೆ.

ಬೆಲೆ

Hyundai Grand i10 Nios Side

ವೇರಿಯೆಂಟ್

ಸ್ಪೋರ್ಟ್ಝ್ ಎಕ್ಸಿಕ್ಯೂಟಿವ್

ಸ್ಪೋರ್ಟ್ಝ್

ವ್ಯತ್ಯಾಸ

MT

ರೂ 7.16 ಲಕ್ಷ

ರೂ 7.20 ಲಕ್ಷ

- ರೂ 3,500

AMT

ರೂ 7.70 ಲಕ್ಷ

ರೂ 7.74 ಲಕ್ಷ

- ರೂ 3,500

ಈ ಸ್ಪೋರ್ಟ್ಝ್ ಎಕ್ಸಿಕ್ಯೂಟಿವ್ ವೇರಿಯೆಂಟ್‌ಗಳು ಅವುಗಳ ಸ್ಪೋರ್ಟ್ಝ್ ಮ್ಯಾನುವಲ್ ಮತ್ತು  AMT ವೇರಿಯೆಂಟ್‌ಗಳಿಗೆ ಹೋಲಿಸಿದರೆ ರೂ 3,500 ರಷ್ಟು ಕಡಿಮೆ ಇದೆ. ಸ್ಪೋರ್ಟ್ಝ್ ಟ್ರಿಮ್‌ನಲ್ಲಿರುವ CNG ಮತ್ತು ಡ್ಯುಯಲ್ ಟೋನ್‌ ಆಯ್ಕೆಗಳು ಇದರಲ್ಲಿ ಇರುವುದಿಲ್ಲ.

 ಫೀಚರ್ ವ್ಯತ್ಯಾಸಗಳು

Hyundai Grand i10 Nios Automatic Climate Control

ಈ ಹೊಸ ಸ್ಪೋರ್ಟ್ಝ್‌ನಲ್ಲಿ ಇಲ್ಲದಿರುವ ಒಂದೇ ಒಂದು ಫೀಚರ್ ಎಂದರೆ, ಆಟೋ ಕ್ಲೈಮೇಟ್ ಕಂಟ್ರೋಲ್, ಇದಕ್ಕೆ ಬದಲಾಗಿ ಮ್ಯಾನುವಲ್ AC ಅನ್ನು ಹೊಂದಿದೆ. ಉಳಿದಂತೆ ಎಲ್ಲಾ ಫೀಚರ್‌ಗಳು ಎರಡಕ್ಕೂ ಒಂದೇ ಆಗಿವೆ. ಎರಡರಲ್ಲಿಯೂ ಎಂಟು ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್, ಇದರೊಂದಿಗೆ ಆ್ಯಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್‌ಪ್ಲೇ, ರಿಯರ್ AC ವಾತಾಯನಗಳು, ಕ್ರ್ಯೂಸ್ ಕಂಟ್ರೋಲ್, ನಾಲ್ಕು ಏರ್‌ಬ್ಯಾಗ್‌ಗಳು (ಆರು ಏರ್‌ಬ್ಯಾಗ್‌ಗಳು ಟಾಪ್ ಎಂಡ್‌ಗೆ ಮಾತ್ರ ಸೀಮಿತವಾಗಿದೆ), EBDಯೊಂದಿಗಿನ ABS, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಹೊಂದಿದೆ.

ಇದನ್ನೂ ಓದಿ: ಹ್ಯುಂಡೈ ಬಹಿರಂಗಪಡಿಸುತ್ತಿದೆ ಹೊಸ 1.5-ಲೀಟರ್ ಟರ್ಬೋ-ಪೆಟ್ರೋಲ್ ಅಲ್ಕಾಝರ್ ವೇರಿಯೆಂಟ್‌ಗಳ ಬೆಲೆಗಳು

ಪವರ್‍ ಟ್ರೇನ್

Hyundai Grand i10 Nios

ಈ ಗ್ರ್ಯಾಂಡ್ i10 ನಿಯೋಸ್ 83PS/114Nm ಅನ್ನು ಉತ್ಪಾದಿಸುವ 1.2-ಪೆಟ್ರೋಲ್ ಇಂಜಿನ್‌ನೊಂದಿಗೆ ಬರುತ್ತಿದ್ದು ಫೈವ್-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ ಫೈವ್-ಸ್ಪೀಡ್ AMT ಯೊಂದಿಗೆ ಇದನ್ನು ಜೋಡಿಸಲಾಗಿದೆ. CNG ವೇರಿಯೆಂಟ್‌ಗಳು 69PS ಮತ್ತು 95.2Nmನಷ್ಟು ಕಡಿಮೆ ಉತ್ಪಾದಿಸುವ ಅದೇ ಇಂಜಿನ್ ಹೊಂದಿದ್ದು, ಇದನ್ನು ಕೇವಲ ಫೈವ್-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರವೇ ಜೋಡಿಸಲಾಗಿದೆ. ಆದಾಗ್ಯೂ, ಈ ಹೊಸ ಸ್ಪೋರ್ಟ್ಝ್ ವೇರಿಯೆಂಟ್‌ಗಳು CNG ಆಯ್ಕೆಯನ್ನು ಹೊಂದಿರುವುದಿಲ್ಲ.

 ಪ್ರತಿಸ್ಪರ್ಧಿಗಳು

Hyundai Grand i10 Nios Rear 

ರೂ 5.69 ಲಕ್ಷದಿಂದ ರೂ 8.46 ಲಕ್ಷದ (ಎಕ್ಸ್‌-ಶೋರೂಂ) ನಡುವೆ ಬೆಲೆ ನಿಗದಿಪಡಿಸಲಾಗಿದ್ದು, ಈ ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಮಾರುತಿ ಸ್ವಿಫ್ಟ್ ಮತ್ತು ರೆನಾಲ್ಟ್ ಟ್ರೈಬರ್‌ಗೆ ಪ್ರತಿಸ್ಪರ್ಧಿಯಾಗಿದೆ 

 ಇದನ್ನೂ ಓದಿ: 490 ಕಿಮೀ ರೇಂಜ್‌ ತನಕದ ಎರಡನೇ ಪೀಳಿಗೆ ಹ್ಯುಂಡೈ ಕೋನಾ ಇಲೆಕ್ಟ್ರಿಕ್ ಅನಾವರಣಗೊಳಿಸಲಾಗಿದೆ 

 ಇನ್ನಷ್ಟು ಓದಿ : ಗ್ರ್ಯಾಂಡ್ i10 ನಿಯೋಸ್ AMT

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹುಂಡೈ Grand ಐ10 Nios

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience