ಆಟೋ ಎಕ್ಸ್‌ಪೋದ ಮುಂಚಿತವಾಗಿಯೇ Hyundai Creta EV ಅನಾವರಣ; ವಿನ್ಯಾಸ, ಬ್ಯಾಟರಿ ಪ್ಯಾಕ್ ಮತ್ತು ರೇಂಜ್ ಬಹಿರಂಗ
ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಗಾಗಿ dipan ಮೂಲಕ ಜನವರಿ 02, 2025 08:32 pm ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ ಕ್ರೆಟಾ ಎಲೆಕ್ಟ್ರಿಕ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ 473 ಕಿ.ಮೀ.ವರೆಗೆ ರೇಂಜ್ ಅನ್ನು ಕ್ಲೈಮ್ ಮಾಡಬಹುದಾಗಿದೆ
ಕೊರಿಯನ್ ಕಾರು ತಯಾರಕ ಕಂಪೆನಿಯಾದ ಹ್ಯುಂಡೈನ ಭಾರತೀಯ ಕಾರುಗಳಲ್ಲಿ ಶೀಘ್ರದಲ್ಲೇ ಅತ್ಯಂತ ಕೈಗೆಟುಕುವ ಇವಿಯಾದ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಮುಂಬರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಬಿಡುಗಡೆಯಾಗಲಿದೆ ಎಂಬುದು ಎಲ್ಲೆಡೆ ಸುದ್ದಿಯಾಗಿತ್ತು. ಎಕ್ಸ್‌ಟೀರಿಯರ್ ಮತ್ತು ಇಂಟೀರಿಯರ್ ವಿನ್ಯಾಸ, ಅದರ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳು, ಕೆಲವು ಫೀಚರ್‌ಗಳು ಮತ್ತು ಅವುಗಳ ಕ್ಲೈಮ್‌ಡ್ ರೇಂಜ್ ಅನ್ನು ಪ್ರದರ್ಶಿಸುವ ಇವಿಯನ್ನು ಕಾರು ತಯಾರಕರು ಈಗ ಸಂಪೂರ್ಣವಾಗಿ ಅನಾವರಣಗೊಳಿಸಿದ್ದಾರೆ.
ಹೊಸ ಹುಂಡೈ ಕ್ರೆಟಾ ಇವಿಯು ಎಕ್ಸಿಕ್ಯುಟಿವ್, ಸ್ಮಾರ್ಟ್, ಪ್ರೀಮಿಯಂ ಮತ್ತು ಎಕ್ಸಲೆನ್ಸ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿರುತ್ತದೆ.
ಕ್ರೆಟಾ ತರಹದ ವಿನ್ಯಾಸ
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್‌ನ ಒಟ್ಟಾರೆ ವಿನ್ಯಾಸವು ಅದರ ICE-ಚಾಲಿತ ಕ್ರೆಟಾವನ್ನು ಹೋಲುತ್ತದೆ, ಅದೇ ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು, ಲಂಬವಾಗಿ ಜೋಡಿಸಲಾದ ಡ್ಯುಯಲ್-ಬ್ಯಾರೆಲ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಕನೆಕ್ಟೆಡ್ ಎಲ್‌ಇಡಿ ಟೈಲ್ ಲೈಟ್‌ಗಳನ್ನು ಒಳಗೊಂಡಿದೆ.
ಆದರೂ, ಕೆಲವು ಗಮನಾರ್ಹ ವ್ಯತ್ಯಾಸಗಳಿವೆ. ಮುಂಭಾಗವು ಕ್ರೆಟಾ ಎನ್ ಲೈನ್‌ನಂತೆಯೇ ಬ್ಲಾಂಕ್ಡ್-ಆಫ್ ಗ್ರಿಲ್ ಅನ್ನು ಹೊಂದಿದೆ ಮತ್ತು ಹೆಡ್‌ಲೈಟ್‌ಗಳ ನಡುವೆ ವಿಸ್ತರಿಸಿರುವ ಹೊಳಪು ಕಪ್ಪು ಘನಾಕೃತಿಯ ಅಂಶಗಳನ್ನು ಒಳಗೊಂಡಿದೆ. ಚಾರ್ಜಿಂಗ್ ಪೋರ್ಟ್ ಅನ್ನು ಹ್ಯುಂಡೈ ಲೋಗೋದ ಕೆಳಗೆ ಮಧ್ಯದಲ್ಲಿ ಇರಿಸಲಾಗಿದೆ.
ಕೆಳಗಿನ ಗ್ರಿಲ್ ಏರೋಡೈನಾಮಿಕ್ ಅನ್ನು ಹೆಚ್ಚಿಸಲು ಮತ್ತು ಎಲೆಕ್ಟ್ರಿಕ್ ಮೋಟಾರ್ ಮತ್ತು ಬ್ಯಾಟರಿ ಘಟಕಗಳನ್ನು ತಂಪಾಗಿಸಲು ನಾಲ್ಕು ಹಿಂತೆಗೆದುಕೊಳ್ಳುವ ಗಾಳಿ ದ್ವಾರಗಳನ್ನು ಹೊಂದಿದೆ. ಇವಿ ಮುಂಭಾಗದ ಫಾಗ್ ಲ್ಯಾಂಪ್‌ಗಳು ಮತ್ತು ಫಾಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಪಡೆಯುವುದಿಲ್ಲ.
17-ಇಂಚಿನ ಅಲಾಯ್ ವೀಲ್‌ಗಳು ಟಾಟಾ ನೆಕ್ಸಾನ್ ಇವಿಯಲ್ಲಿರುವಂತೆಯೇ ಏರೋಡೈನಾಮಿಕ್ ಆಗಿ ವಿನ್ಯಾಸಗೊಳಿಸಲಾಗಿದೆ. ICE ಆವೃತ್ತಿಯಲ್ಲಿನ ಸಿಲ್ವರ್ ವಿಂಡೋ ಅಪ್ಲಿಕ್ ಅನ್ನು ಬ್ಲ್ಯಾಕ್ಡ್-ಔಟ್ ಫಿನಿಶ್‌ನೊಂದಿಗೆ ಬದಲಾಯಿಸಲಾಗಿದೆ. ಸೈಡ್‌ನಲ್ಲಿ ಸಿಲ್ವರ್ ಸ್ಕಿಡ್ ಪ್ಲೇಟ್ ಕೂಡ ಇದೆ.
ಹಿಂಭಾಗದಲ್ಲಿ, ಟೈಲ್ ಲೈಟ್‌ಗಳು ರೆಗುಲರ್ ಕ್ರೆಟಾವನ್ನು ಹೋಲುತ್ತವೆ, ಆದರೆ ಇವಿಯು ಬೂಟ್ ಗೇಟ್ ಅಡಿಯಲ್ಲಿ ಕಪ್ಪು ಟ್ರಿಮ್ ಮತ್ತು ಪಿಕ್ಸೆಲ್ ತರಹದ ಅಂಶಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಬಂಪರ್ ಮತ್ತು ಫಾಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ: 2025ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ರೆನಾಲ್ಟ್ ಮತ್ತು ನಿಸ್ಸಾನ್ ಕಾರುಗಳ ಪಟ್ಟಿ..
ಹ್ಯುಂಡೈ ಕ್ರೆಟಾ ಇವಿ: ಇಂಟೀರಿಯರ್ ಮತ್ತು ಫೀಚರ್‌ಗಳು
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಡ್ಯುಯಲ್-ಟೋನ್ ಇಂಟೀರಿಯರ್ ಅನ್ನು ಹೊಂದಿರುತ್ತದೆ, ಅದರ ವಿನ್ಯಾಸವು ರೆಗುಲರ್ ಕಾರಿಗೆ ಹೆಚ್ಚು-ಕಡಿಮೆ ಹೋಲುತ್ತದೆ. ಆದರೆ, ಹ್ಯುಂಡೈ ಐಯೋನಿಕ್ 5 ರಂತೆಯೇ ಡ್ರೈವ್ ಸೆಲೆಕ್ಟರ್ ಲಿವರ್‌ನೊಂದಿಗೆ 3-ಸ್ಪೋಕ್ ಸ್ಟೀರಿಂಗ್ ವೀಲ್‌ನಂತಹ ಕೆಲವು ವ್ಯತ್ಯಾಸಗಳಿವೆ. ಎಲೆಕ್ಟ್ರಿಕ್ ಆವೃತ್ತಿಗಾಗಿ ಮಾರ್ಪಾಡು ಮಾಡಲಾದ ಕಂಟ್ರೋಲ್‌ಗಳೊಂದಿಗೆ ಕೆಳ ಸೆಂಟರ್ ಕನ್ಸೋಲ್ ವಿಭಿನ್ನವಾಗಿದೆ.
ಇದು ಡ್ಯಾಶ್‌ಬೋರ್ಡ್‌ನಲ್ಲಿ ಸಾಮಾನ್ಯ ಕ್ರೆಟಾದಂತೆ ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳನ್ನು ಪಡೆಯುತ್ತದೆ ಮತ್ತು ಪನೋರಮಿಕ್ ಸನ್‌ರೂಫ್, ವೆಹಿಕಲ್-ಟು-ಲೋಡ್ (V2L) ಮತ್ತು ಡ್ರೈವ್ ಮೋಡ್‌ಗಳಂತಹ ಫೀಚರ್‌ಗಳನ್ನು ಪಡೆಯುತ್ತದೆ.
ಸುರಕ್ಷತೆಗಾಗಿ, ಇದು ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್-2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ಫೀಚರ್‌ಗಳನ್ನು ನೀಡುವ ನಿರೀಕ್ಷೆಯಿದೆ.
ಹುಂಡೈ ಕ್ರೆಟಾ ಇವಿ: ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳು
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಅನ್ನು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ನೀಡಲಾಗುವುದು, ಮೊದಲನೆಯದು, 390 ಕಿಮೀ ARAI-ರೇಟೆಡ್ ರೇಂಜ್ ಅನ್ನು ಹೊಂದಿರುವ 42 ಕಿ.ವ್ಯಾಟ್ ಪ್ಯಾಕ್ ಮತ್ತು ಏರಡನೆಯದು, 473 ಕಿಮೀ ಕ್ಲೈಮ್ ಮಾಡಬಹುದಾದ ದೊಡ್ಡದಾದ 51.4 ಕಿ.ವ್ಯಾಟ್ ಪ್ಯಾಕ್ ಆಗಿದೆ. ಎಲೆಕ್ಟ್ರಿಕ್ ಮೋಟಾರ್ ವಿಶೇಷಣಗಳ ಬಗ್ಗೆ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ, ಕ್ರೆಟಾ ಇವಿ 7.9 ಸೆಕೆಂಡುಗಳಲ್ಲಿ 0 ರಿಂದ 100kmph ವರೆಗೆ ವೇಗವನ್ನು ಪಡೆಯಬಹುದು ಎಂದು ಹ್ಯುಂಡೈ ಇಂಡಿಯಾ ಹೇಳಿಕೊಂಡಿದೆ.
ಡಿಸಿ ಫಾಸ್ಟ್ ಚಾರ್ಜರ್‌ನೊಂದಿಗೆ ಇವಿಯನ್ನು 58 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು ಎಂದು ಕಾರು ತಯಾರಕರು ಹೇಳಿದ್ದಾರೆ, ಆದರೆ 11 ಕಿ.ವ್ಯಾಟ್ ಎಸಿ ಚಾರ್ಜರ್ ಬ್ಯಾಟರಿಯನ್ನು 4 ಗಂಟೆಗಳಲ್ಲಿ 10 ಪ್ರತಿಶತದಿಂದ ಪೂರ್ಣವಾಗಿ ಚಾರ್ಜ್ ಮಾಡಬಹುದು.
ಇದನ್ನೂ ಓದಿ: 2025ರಲ್ಲಿ ಮಾರಾಟವಾಗಬಹುದಾದ ಎಲ್ಲಾ ಟಾಟಾ ಕಾರುಗಳ ಮಾಹಿತಿ ಇಲ್ಲಿದೆ
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್‌ನ ಬೆಲೆಗಳು 20 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ಸಾಧ್ಯತೆಯಿದೆ. ಇದು ಮಹೀಂದ್ರಾ ಬಿಇ 6, ಎಮ್‌ಜಿ ಜೆಡ್‌ಎಸ್ ಇವಿ, ಟಾಟಾ ಕರ್ವ್ ಇವಿ ಮತ್ತು ಮುಂಬರುವ ಮಾರುತಿ ಇ ವಿಟಾರಾಗೆ ಪ್ರತಿಸ್ಪರ್ಧಿಯಾಗಲಿದೆ.
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.