ಮತ್ತೆ ಭಾರತದಲ್ಲಿ ಪರೀಕ್ಷೆಯ ವೇಳೆ ಪತ್ತೆಯಾದ Hyundai Creta EV, ಹೊಸ ವಿವರಗಳು ಬಹಿರಂಗ
ಹುಂಡೈ ಕ್ರೆಟಾ ಗಾಗಿ shreyash ಮೂಲಕ ಫೆಬ್ರವಾರಿ 08, 2024 03:56 pm ರಂದು ಪ್ರಕಟಿಸಲಾಗಿದೆ
- 31 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈ ಕ್ರೆಟಾ ಇವಿಯು 400 ಕಿ.ಮೀ ಗಿಂತಲೂ ಹೆಚ್ಚು ಕ್ಲೈಮ್ ಮಾಡಲಾದ ಬ್ಯಾಟರಿ ರೇಂಜ್‌ನ್ನು ನೀಡುವ ನಿರೀಕ್ಷೆಯಿದೆ
- ಹುಂಡೈ ಕ್ರೆಟಾ ಇವಿಯು ಫೇಸ್‌ಲಿಫ್ಟೆಡ್ ಕ್ರೆಟಾವನ್ನು ಆಧರಿಸಿದೆ.
- ಪರೀಕ್ಷಾ ಆವೃತ್ತಿಯನ್ನು ಹೊಸ ಅಲಾಯ್ ವೀಲ್‌ಗಳೊಂದಿಗೆ ನೋಡಲಾಯಿತು, ಇದರೊಂದಿಗೆ ನಾವು ಡ್ಯಾಶ್‌ಬೋರ್ಡ್‌ನ ಒಂದು ನೋಟವನ್ನು ಕಂಡಿದ್ದೇವೆ.
- ಇದು ಡ್ಯುಯಲ್ 10.25-ಇಂಚಿನ ಸ್ಕ್ರೀನ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಪಡೆಯುತ್ತದೆ.
- ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ (ADAS) ಬರಬಹುದೆಂದು ನಿರೀಕ್ಷಿಸಲಾಗಿದೆ.
- ಇದರ ಎಕ್ಸ್ ಶೋ ರೂಂ ಬೆಲೆಗಳು 20 ಲಕ್ಷ ರೂ.ನಿಂದ ಪ್ರಾರಂಭವಾಗಬಹುದು.
ಫೇಸ್‌ಲಿಫ್ಟೆಡ್ ಹ್ಯುಂಡೈ ಕ್ರೆಟಾವನ್ನು ಇತ್ತೀಚೆಗೆ ರಿಫ್ರೆಶ್ ಲುಕ್ ಮತ್ತು ಸಮಗ್ರ ವೈಶಿಷ್ಟ್ಯಗಳ ಪಟ್ಟಿಯೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಲಾಯಿತು.ಅದರೆ, ಇದೀಗ ಕ್ರೆಟಾ ಇವಿ ಎಂದು ನಂಬಬಹುದಾದ ಮರೆಮಾಚಲ್ಪಟ್ಟ ಕ್ರೆಟಾವನ್ನು ಪರೀಕ್ಷೆಯ ವೇಳೆಯಲ್ಲಿ ನೋಡಲಾಗಿದೆ. ಹೊಸ ರಹಸ್ಯ ಫೋಟೊಗಳಿಂದ, ಹುಂಡೈ ಕ್ರೆಟಾ ಇವಿಯು ಕ್ರೆಟಾ ಫೇಸ್‌ಲಿಫ್ಟ್ ಅನ್ನು ಆಧರಿಸಿದೆ ಎಂಬುದು ಖಚಿತವಾಗಿದೆ.
ಗಮನಿಸಿದ ಹೊಸ ವಿವರಗಳು
ಕ್ರೆಟಾ ಇವಿಯ ಪರೀಕ್ಷಾ ಆವೃತ್ತಿಯು ಭಾರೀ ಮರೆಮಾಚುವಿಕೆಯನ್ನು ಹೊಂದಿದ್ದರೂ, ಅದರ ಆಂತರಿಕ ದಹನಕಾರಿ ಎಂಜಿನ್ (ICE) ಪ್ರತಿರೂಪದೊಂದಿಗೆ ಇದು ಸ್ಪಷ್ಟವಾಗಿ ಹೋಲಿಕೆಯನ್ನು ಹೊಂದಿದೆ. ಈ ಪರೀಕ್ಷಾ ಆವೃತ್ತಿಯು ಇವಿಯೇ ಎಂದು ಹೇಳುವ ಮತ್ತೊಂದು ಸಂಗತಿ ಎಂದರೆ ಅದರ ಅಲಾಯ್ ವೀಲ್‌ಗಳು, ಇದು ಸಾಮಾನ್ಯ ಕ್ರೆಟಾದಲ್ಲಿ ನೀಡಲಾದವುಗಳಿಗಿಂತ ಭಿನ್ನವಾಗಿರುವುದು ಮಾತ್ರವಲ್ಲದೆ, ಅದು EV-ನಿರ್ದಿಷ್ಟ ಏರೋಡೈನಾಮಿಕ್ ವಿನ್ಯಾಸವನ್ನು ಸಹ ಹೊಂದಿದೆ.
ಇದನ್ನೂ ಪರಿಶೀಲಿಸಿ: ಹೊಸದಾಗಿ ಪರಿಚಯಿಸಲಾದ ಹ್ಯುಂಡೈ i20 ಸ್ಪೋರ್ಟ್ಜ್ (ಒಪ್ಶನಲ್) ಆವೃತ್ತಿಯು ಈ 10 ರಿಯಲ್ ಲೈಫ್ ಚಿತ್ರಗಳಲ್ಲಿ ಹೇಗೆ ಕಾಣುತ್ತದೆ ಎಂಬುದು ಇಲ್ಲಿದೆ
ನಿಮ್ಮ ಬಾಕಿ ಇರುವ ಚಲನ್ ಪರಿಶೀಲಿಸಿ
ನಿರೀಕ್ಷಿತ ವೈಶಿಷ್ಟ್ಯಗಳು
ರಹಸ್ಯ ಫೋಟೋಗಳಲ್ಲಿ ನೋಡಿದಂತೆ, ಕ್ರೆಟಾ ಇವಿಯ ಸಾಮಾನ್ಯ ಕ್ರೆಟಾದಂತೆ ಡ್ಯುಯಲ್ 10.25-ಇಂಚಿನ ಡಿಜಿಟಲ್ ಸ್ಕ್ರೀನ್‌ಗಳೊಂದಿಗೆ (ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಡ್ರೈವರ್‌ನ ಡಿಸ್‌ಪ್ಲೇಗಾಗಿ) ಅದೇ ನವೀಕರಿಸಿದ ಡ್ಯಾಶ್‌ಬೋರ್ಡ್ ಅನ್ನು ಹೊಂದಿರುತ್ತದೆ. ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿನ ಇತರ ವೈಶಿಷ್ಟ್ಯಗಳು ಡ್ಯುಯಲ್-ಜೋನ್ ಎಸಿ, ಪ್ಯಾನೋರೋಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಒಳಗೊಂಡಿರಬಹುದು.
ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಎಮೆರ್ಜೆನ್ಸಿ ಬ್ರೇಕಿಂಗ್ ನಂತಹ ಸುಧಾರಿತ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್‌ಗಳು (ಎಡಿಎಎಸ್) ವೈಶಿಷ್ಟ್ಯಗಳೊಂದಿಗೆ ನೀಡಲಾಗುವುದು.
ನಿರೀಕ್ಷಿತ ಎಲೆಕ್ಟ್ರಿಕ್ ಪವರ್‌ಟ್ರೇನ್
ಕ್ರೆಟಾ ಇವಿಯ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟರ್ ಬಗ್ಗೆ ವಿವರಗಳು ಸದ್ಯಕ್ಕೆ ವಿರಳವಾಗಿದ್ದರೂ, ಕ್ರೆಟಾ ಇವಿ ಯನ್ನು 400 ಕಿ.ಮೀ ಗಿಂತ ಹೆಚ್ಚು ಕ್ಲೈಮ್ ಮಾಡಲಾದ ಬ್ಯಾಟರಿ ರೇಂಜ್‌ನೊಂದಿಗೆ ನೀಡಲಾಗುವುದು ಎಂದು ನಾವು ನಂಬುತ್ತೇವೆ.
ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ
ಹುಂಡೈಯು 2025 ರ ವೇಳೆಗೆ ಭಾರತದಲ್ಲಿ ಕ್ರೆಟಾ ಇವಿಯನ್ನು ಬಿಡುಗಡೆಗೊಳಿಸಬಹುದು. ಇದರ ಎಕ್ಸ್ ಶೋರೂಂ ಬೆಲೆ ಸುಮಾರು 20 ಲಕ್ಷ ರೂ. ನಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಎಮ್‌ಜಿ ಜೆಡ್‌ಎಸ್ ಇವಿ ಮತ್ತು ಟಾಟಾ ಕರ್ವ್ ಇವಿಗೆ ನೇರ ಪ್ರತಿಸ್ಪರ್ಧಿಯಾಗಲಿದೆ, ಆದರೆ ಮಹೀಂದ್ರಾ ಎಕ್ಸ್‌ಯುವಿ400 ಇವಿ ಮತ್ತು ಟಾಟಾ ನೆಕ್ಸಾನ್ ಇವಿಗೆ ಪ್ರೀಮಿಯಂ ಪರ್ಯಾಯವಾಗಿದೆ.
ಇನ್ನಷ್ಟು ಓದಿ: ಕ್ರೆಟಾ ಆನ್ ರೋಡ್ ಬೆಲೆ