Login or Register ಅತ್ಯುತ್ತಮ CarDekho experience ಗೆ
Login

Hyundai Creta Facelift ನ ವಿಮರ್ಶೆ: ಸಾಧಕ-ಬಾಧಕಗಳು ಇಲ್ಲಿವೆ

published on ಮಾರ್ಚ್‌ 26, 2024 07:51 am by ansh for ಹುಂಡೈ ಕ್ರೆಟಾ

ಈ ಅಪ್‌ಡೇಟ್‌ನೊಂದಿಗೆ, ಹ್ಯುಂಡೈ SUV ಇನ್ನಷ್ಟು ಉತ್ತಮವಾದ ಒಳಭಾಗ ಮತ್ತು ಹೊರಭಾಗವನ್ನು ಪಡೆಯುತ್ತದೆ, ಆದರೆ ಇದು ಕಡಿಮೆ ಉಪಯೋಗಿಸಬಹುದಾದ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾವನ್ನು 2024 ರ ಆರಂಭದಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ನಾವು ಈ ಕಾಂಪ್ಯಾಕ್ಟ್ SUV ಯ ಹೊಸ ವರ್ಷನ್ ಅನ್ನು ಈಗಾಗಲೇ ಡ್ರೈವ್ ಮಾಡಿದ್ದೇವೆ. ಹೊಸ ಕ್ರೆಟಾವು, ಉತ್ತಮ ಡಿಸೈನ್ ಮತ್ತು ಹೆಚ್ಚಿನ ಪ್ರೀಮಿಯಂ ಫೀಚರ್ ಗಳನ್ನು ನೀಡುತ್ತದೆ, ಆದರೆ ಕೆಲವು ಪ್ರಾಯೋಗಿಕ ಅಂಶಗಳು ಮತ್ತು ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿಲ್ಲ. ಹೊಸ ಕ್ರೆಟಾವನ್ನು ಡ್ರೈವ್ ಮಾಡಿದ ನಂತರ, ಅದನ್ನು ಖರೀದಿಸಲು ನಿರ್ಧರಿಸುವ ಮೊದಲು ನೀವು ಪರಿಗಣಿಸಬೇಕಾದ ಅದರ ಅನುಕೂಲಗಳು ಮತ್ತು ಅನಾನುಕೂಲಗಳ ಪಟ್ಟಿಯನ್ನು ನಾವು ಇಲ್ಲಿ ನೀಡಿದ್ದೇವೆ.

ಸಾಧಕ

ಸುಧಾರಿತ ಸ್ಟೈಲ್

ಈ ಫೇಸ್‌ಲಿಫ್ಟ್‌ನೊಂದಿಗೆ ಕ್ರೆಟಾ ಪ್ರಮುಖ ಡಿಸೈನ್ ಅಪ್ಡೇಟ್ ಅನ್ನು ಪಡೆದುಕೊಂಡಿದೆ, ಇದು ಈ SUV ಅನ್ನು ಇನ್ನಷ್ಟು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ. ಇದಕ್ಕೆ ಬೋಲ್ಡ್ ಲುಕ್ ಅನ್ನು ನೀಡಲು ಮುಂಭಾಗದಲ್ಲಿ ದೊಡ್ಡ ಗ್ರಿಲ್ ಮತ್ತು ಕನೆಕ್ಟೆಡ್ LED DRL ಅನ್ನು ನೀಡಲಾಗಿದೆ. ಹಿಂಭಾಗದಲ್ಲಿ ಕೂಡ ಕನೆಕ್ಟೆಡ್ LED ಟೈಲ್‌ಲೈಟ್‌ಗಳನ್ನು ನೀಡಲಾಗಿದೆ, ಇದು SUV ಅನ್ನು ಮೊದಲಿಗಿಂತ ಹೆಚ್ಚು ಬ್ಯಾಲೆನ್ಸ್ ಆಗಿಸುತ್ತದೆ. ಸೈಡ್ ಪ್ರೊಫೈಲ್ ಒಂದೇ ರೀತಿ ಕಂಡುಬಂದರೂ, ಹೊಸ ಕ್ರೆಟಾದ ಡಿಸೈನ್ ಒಟ್ಟಾರೆಯಾಗಿ ಹೆಚ್ಚು ಸೊಗಸಾಗಿ ಕಾಣುತ್ತದೆ.

ಸುಧಾರಿತ ಗುಣಮಟ್ಟದೊಂದಿಗೆ ಉತ್ತಮ ಕ್ಯಾಬಿನ್

ಕ್ರೆಟಾದ ಒಳಭಾಗವನ್ನು ಸಂಪೂರ್ಣವಾಗಿ ರೀಡಿಸೈನ್ ಗೊಳಿಸಲಾಗಿದೆ, ಈಗ ಅದು ಇನ್ನಷ್ಟು ಸರಳವಾಗಿ ಕಾಣುತ್ತದೆ. ಡ್ಯುಯಲ್-ಇಂಟಿಗ್ರೇಟೆಡ್ ಡಿಸ್ಪ್ಲೇಗಳು ಇಲ್ಲಿ ನಿಮ್ಮ ಗಮನವನ್ನು ಸೆಳೆಯುತ್ತವೆ. ಹ್ಯುಂಡೈ ಗ್ಲೋಸ್ ಬ್ಲಾಕ್ ಫಿನಿಶ್ ಅನ್ನು ಕ್ಯಾಬಿನ್ ನ ಕೆಲವು ಭಾಗಗಳಿಗೆ ನೀಡಿದೆ. ಇಲ್ಲಿ, ಡಿಸೈನ್ ನ ಬದಲಾವಣೆ ಜೊತೆಗೆ ಪ್ಲಾಸ್ಟಿಕ್‌ಗಳು, ಪ್ಯಾಡಿಂಗ್ ಮತ್ತು ಲೆಥೆರೆಟ್ ಫಿನಿಶ್‌ಗಳನ್ನು ನೀಡುವ ಮೂಲಕ ಕ್ಯಾಬಿನ್‌ನ ಒಳಗಿನ ಮೆಟೀರಿಯಲ್ ಗುಣಮಟ್ಟವನ್ನು ಉತ್ತಮಗೊಳಿಸಲಾಗಿದೆ. ಇದು ಹೊಸ ಕ್ರೆಟಾದ ಕ್ಯಾಬಿನ್‌ನೊಳಗೆ ಉತ್ತಮ ಮತ್ತು ಹೆಚ್ಚು ಪ್ರೀಮಿಯಂ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ.

ಫೀಚರ್ ಗಳನ್ನು ಲೋಡ್ ಮಾಡಲಾಗಿದೆ

ಫೇಸ್‌ಲಿಫ್ಟ್‌ನೊಂದಿಗೆ, ನಿಮ್ಮ ಡ್ರೈವ್ ಅನುಭವವನ್ನು ಸುಧಾರಿಸುವ ಬಹಳಷ್ಟು ಹೊಸ ಫೀಚರ್ ಗಳನ್ನು ಕ್ರೆಟಾಗೆ ನೀಡಲಾಗಿದೆ. ಡ್ಯುಯಲ್ 10.25-ಇಂಚಿನ ಡಿಸ್ಪ್ಲೇ ಜೊತೆಗೆ, ಕ್ರೆಟಾ ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಕ್ರೆಟಾ ಪಡೆಯುತ್ತದೆ. ಈ ಕೆಲವು ಫೀಚರ್ ಗಳು ಹಿಂದಿನ ವರ್ಷನ್ ನಲ್ಲಿ ಈಗಾಗಲೇ ಲಭ್ಯವಿದ್ದರೂ, ಒಂದೆರಡು ಹೊಸ ಫೀಚರ್ ಗಳನ್ನು ಸೇರಿಸುವ ಮೂಲಕ ಕ್ರೆಟಾವನ್ನು ಈಗ ಸಂಪೂರ್ಣವಾಗಿ ಲೋಡ್ ಮಾಡಲಾಗಿದೆ.

ಇದನ್ನು ಕೂಡ ಓದಿ: ಹುಂಡೈ ವೆನ್ಯೂ E ವರ್ಸಸ್ ಕಿಯಾ ಸೋನೆಟ್ HTE: ಯಾವ ಎಂಟ್ರಿ ಲೆವೆಲ್ SUVಯನ್ನು ನೀವು ಖರೀದಿಸಬೇಕು?

ಕ್ರೆಟಾಗೆ ಮತ್ತೊಂದು ಗಮನಾರ್ಹ ಸೇರ್ಪಡೆಯೆಂದರೆ ಲೆವೆಲ್ 2 ADAS (ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್). ಈ ಸುರಕ್ಷತಾ ಕಿಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಹಲವಾರು ಫೀಚರ್ ಗಳನ್ನು ಒಳಗೊಂಡಿದೆ. ADAS ಜೊತೆಗೆ, ಕ್ರೆಟಾ 360-ಡಿಗ್ರಿ ಕ್ಯಾಮೆರಾದೊಂದಿಗೆ ಕೂಡ ಬರುತ್ತದೆ.

ಸಾಧಕ

ಕಡಿಮೆ ಬೂಟ್ ಸ್ಪೇಸ್

ಹೊಸ ಕ್ರೆಟಾವು ಪ್ರಿ-ಫೇಸ್‌ಲಿಫ್ಟ್ ವರ್ಷನ್ ನಲ್ಲಿ ಇರುವ ಅದೇ 433-ಲೀಟರ್‌ಗಳ ಬೂಟ್ ಲೋಡಿಂಗ್ ಸಾಮರ್ಥ್ಯದೊಂದಿಗೆ ಬರುತ್ತದೆ. ಈ ಬೂಟ್ ಸ್ಪೇಸ್ ಕೆಲವು ದೊಡ್ಡ ಸೂಟ್‌ಕೇಸ್‌ಗಳನ್ನು ಇಡಲು ಸಾಕಾಗುತ್ತದೆ, ಆದರೆ ಸೀಮಿತವಾಗಿರುವ ಡಿಸೈನ್ ನ ಕಾರಣ, ದೊಡ್ಡ ಸೂಟ್‌ಕೇಸ್‌ಗಳನ್ನು ಸುಲಭವಾಗಿ ಇಡಲು ಕಷ್ಟವಾಗಬಹುದು. ದೀರ್ಘ ಪ್ರಯಾಣಗಳಿಗಾಗಿ, ಕ್ಯಾಬಿನ್ ಲಗೇಜ್‌ಗಾಗಿ ನೀವು ಬಳಸುವಂತಹ ಹಲವಾರು ಸಣ್ಣ ಗಟ್ಟಿಯಾದ ಸೂಟ್‌ಕೇಸ್‌ಗಳನ್ನು ಬಳಸುವುದು ಉತ್ತಮ. ಈ ರೀತಿಯಾಗಿ, ನಿಮ್ಮ ಸಾಮಾನುಗಳನ್ನು ನೀವು ಯಾವುದೇ ತೊಂದರೆಯಿಲ್ಲದೆ ವ್ಯವಸ್ಥಿತವಾಗಿ ಇರಿಸಬಹುದು.

ಆಟೋಮ್ಯಾಟಿಕ್ ಮತ್ತು ಟರ್ಬೊ ವೇರಿಯಂಟ್ ಗಳಲ್ಲಿ ಹೆಚ್ಚು ಆಯ್ಕೆಗಳಿಲ್ಲ

ನೀವು ಕ್ರೆಟಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಖರೀದಿಸಲು ನೋಡುತ್ತಿದ್ದರೆ, ನಿಮಗೆ ಇಲ್ಲಿ ಹೆಚ್ಚು ಆಯ್ಕೆಗಳು ಲಭ್ಯವಿಲ್ಲ. ಇದರಲ್ಲಿ ಮೂರು ಎಂಜಿನ್ ಆಯ್ಕೆಗಳು ಇವೆ: 1.5-ಲೀಟರ್ ಪೆಟ್ರೋಲ್ CVT ಅನ್ನು ಕೇವಲ 3 ವೇರಿಯಂಟ್ ಗಳಲ್ಲಿ - (S(O), SX ಟೆಕ್ ಮತ್ತು SX (O)), 1.5-ಲೀಟರ್ ಡೀಸೆಲ್ 6-ಸ್ಪೀಡ್ ಆಟೋಮ್ಯಾಟಿಕ್ ಕೇವಲ 2 ವೇರಿಯಂಟ್ ಗಳಲ್ಲಿ - (S(O) ಮತ್ತು SX(O)) ನೀಡಲಾಗಿದೆ ಮತ್ತು DCT ಯೊಂದಿಗೆ ಮಾತ್ರ ಬರುವ ಹೊಸ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಒಂದೇ ಟಾಪ್-ಸ್ಪೆಕ್ ವೇರಿಯಂಟ್ ಆದ (SX(O)) ನಲ್ಲಿ ಮಾತ್ರ ಲಭ್ಯವಿದೆ.

ಇದನ್ನು ಕೂಡ ಓದಿ: ಹ್ಯುಂಡೈ ಕ್ರೆಟಾ ಮತ್ತು ವೆರ್ನಾ ಪೆಟ್ರೋಲ್-CVT ಯೂನಿಟ್ ಗಳನ್ನು ವಾಪಾಸ್ ಮಾಡಲು ಹೇಳಲಾಗಿದೆ

ಇವು ಫೇಸ್‌ಲಿಫ್ಟ್ ಹ್ಯುಂಡೈ ಕ್ರೆಟಾದ ಪ್ರೋಸ್ ಮತ್ತು ಕಾನ್ಸ್ ಗಳಾಗಿವೆ. ಇದರ ಬೆಲೆಯು ರೂ 11 ಲಕ್ಷದಿಂದ ರೂ 20.15 ಲಕ್ಷದವರೆಗೆ (ಎಕ್ಸ್ ಶೋರೂಂ) ಇದೆ, ಮತ್ತು ಇದು ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್‌ಗೆ ಪ್ರತಿಸ್ಪರ್ಧಿಯಾಗಿದೆ.

ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾ ಆನ್ ರೋಡ್ ಬೆಲೆ

a
ಅವರಿಂದ ಪ್ರಕಟಿಸಲಾಗಿದೆ

ansh

  • 31 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ ಕ್ರೆಟಾ

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ