ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ತನ್ನ ಬಿಡುಗಡೆಗೆ ಮುಂಚೆ ಡೀಲರ್‌ಶಿಪ್‌ಗಳನ್ನು ತಲುಪಿದೆ
ಹುಂಡೈ ಕ್ರೆಟಾ ಗಾಗಿ shreyash ಮೂಲಕ ಜನವರ ಿ 15, 2024 06:55 pm ರಂದು ಪ್ರಕಟಿಸಲಾಗಿದೆ
- 145 Views
- ಕಾಮೆಂಟ್ ಅನ್ನು ಬರೆಯಿರಿ
2024 ಹ್ಯುಂಡೈ ಕ್ರೆಟಾವನ್ನು ಅಟ್ಲಾಸ್ ವೈಟ್ ಎಕ್ಸ್ಟೀರಿಯರ್ ಶೇಡ್ ನಲ್ಲಿ ಡೀಲರ್‌ಶಿಪ್‌ನಲ್ಲಿ ಸ್ಪಾಟ್ ಮಾಡಲಾಗಿದೆ ಮತ್ತು ಇದು SUV ಯ ಟಾಪ್ ಲೋಡ್ ವೇರಿಯಂಟ್ ಎಂದು ಅನಿಸುತ್ತದೆ
-
ಫೇಸ್‌ಲಿಫ್ಟ್ ಆಗಿರುವ ಕ್ರೆಟಾದ ಬುಕಿಂಗ್ ಅನ್ನು ರೂ.25,000 ಪಾವತಿಸುವ ಮೂಲಕ ಮಾಡಬಹುದು.
-
ಕನೆಕ್ಟೆಡ್ ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳು ಮತ್ತು ತಾಜಾ ಅಲಾಯ್ ವೀಲ್ ಗಳನ್ನು ಪಡೆಯುವ ಮೂಲಕ ಹೊರಭಾಗವು ರಿವೈಸ್ ಆಗಿದೆ.
-
ಒಳಭಾಗದಲ್ಲಿ, ಇದು ಡ್ಯುಯಲ್ ಇಂಟಿಗ್ರೇಟೆಡ್ ಡಿಸ್ಪ್ಲೇ ಮತ್ತು ರೀಡಿಸೈನ್ ಮಾಡಲಾಗಿರುವ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಪಡೆದಿದೆ.
-
ಹೊಸ ಫೀಚರ್ ಗಳಲ್ಲಿ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ADAS ಮತ್ತು ಡ್ಯುಯಲ್-ಝೋನ್ AC ಸೇರಿವೆ.
-
ಇದನ್ನು ಮೂರು ಎಂಜಿನ್‌ಗಳು ಮತ್ತು ಐದು ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ನೀಡಲಾಗುವುದು.
-
ಬೆಲೆಯು 11 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.
ಅದರ ಅಪ್ಡೇಟ್ ಆಗಿರುವ ಡಿಸೈನ್ ಮತ್ತು ರಿವೈಸ್ ಆಗಿರುವ ಕ್ಯಾಬಿನ್ ಅನ್ನು ತೋರಿಸುವ ಮೂಲಕ 2024 ಹ್ಯುಂಡೈ, ಕ್ರೆಟಾವನ್ನು ಪೂರ್ತಿ ವಿವರಗಳೊಂದಿಗೆ ಅನಾವರಣಗೊಳಿಸಿದೆ. ಇದರ ಬುಕಿಂಗ್ ಈಗಾಗಲೇ ಶುರುವಾಗಿದೆ ಮತ್ತು 25,000 ರೂಪಾಯಿಗಳ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಮಾಡಬಹುದು, ಆದರೆ ಬೆಲೆಗಳನ್ನು ಜನವರಿ 16 ರಂದು ಘೋಷಿಸಲಾಗುವುದು. ಅದರ ಅಧಿಕೃತ ಬಿಡುಗಡೆಗೆ ಮುಂಚಿತವಾಗಿ, 2024 ಕ್ರೆಟಾದ ಕೆಲವು ಯೂನಿಟ್ ಗಳು ಡೀಲರ್‌ಶಿಪ್‌ಗಳನ್ನು ತಲುಪಿವೆ.
ಅಪ್ಡೇಟ್ ಆಗಿರುವ ಮುಂಭಾಗ ಮತ್ತು ಹಿಂಭಾಗದ ಲುಕ್
ಅಟ್ಲಾಸ್ ವೈಟ್ ಎಕ್ಸ್ಟೀರಿಯರ್ ಶೇಡ್ ನಲ್ಲಿರುವ ಕಾರನ್ನು ಡೀಲರ್‌ಶಿಪ್‌ನಲ್ಲಿ ಸ್ಪಾಟ್ ಮಾಡಲಾಯಿತು. ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಗಾಗಿ ರಾಡಾರ್ ಅನ್ನು ಮುಂಭಾಗದ ಬಂಪರ್‌ನಲ್ಲಿ ಕಾಣಬಹುದು, ಹಾಗಾಗಿ ಇದು SUV ಯ ಟಾಪ್- ಸ್ಪೆಕ್ ಆಗಿರುವ ವೇರಿಯಂಟ್ ಎಂದು ಅನಿಸುತ್ತದೆ. ಇದರ ಫಾಸಿಯಾವನ್ನು ಸಂಪೂರ್ಣವಾಗಿ ರಿವೈಸ್ ಮಾಡಲಾಗಿದೆ ಮತ್ತು ಇದು ಈಗ ರೀಡಿಸೈನ್ ಮಾಡಲಾಗಿರುವ ಗ್ರಿಲ್ ಅನ್ನು ಹೊಂದಿದೆ (ಹೊಸ ವೆನ್ಯೂನಲ್ಲಿ ಇರುವಂತೆ), ಮತ್ತು ಬಾನೆಟ್‌ನ ಅಗಲವನ್ನು ವ್ಯಾಪಿಸಿರುವ ತಲೆಕೆಳಗಾದ L-ಆಕಾರದ ರೀತಿಯಲ್ಲಿ LED DRL ಸ್ಟ್ರಿಪ್ ಅನ್ನು ಹೊಂದಿದೆ. ಹೆಡ್‌ಲೈಟ್‌ಗಳನ್ನು ಈಗ ಚೌಕಾಕಾರದ ಹೌಸಿಂಗ್‌ಗೆ ಸಂಯೋಜಿಸಲಾಗಿದೆ ಮತ್ತು ದೊಡ್ಡದಾದ ಸಿಲ್ವರ್ ಸ್ಕಿಡ್ ಪ್ಲೇಟ್ ಅದಕ್ಕೆ ಅದ್ಭುತವಾದ ಲುಕ್ ಅನ್ನು ನೀಡುತ್ತದೆ.
ಇದನ್ನು ಕೂಡ ಓದಿ: ಹೊಸ ಮಹೀಂದ್ರ XUV400 EL ಪ್ರೊ ವೇರಿಯಂಟ್ ಅನ್ನು 15 ಚಿತ್ರಗಳಲ್ಲಿ ವಿವರಿಸಲಾಗಿದೆ
ಹೊಸದಾದ ಅಲಾಯ್ ವೀಲ್ ಗಳನ್ನು ಹೊರತುಪಡಿಸಿ, 2024 ಕ್ರೆಟಾದ ಪ್ರೊಫೈಲ್ ಒಟ್ಟಾರೆಯಾಗಿ ಯಾವುದೇ ಬದಲಾವಣೆಗಳನ್ನು ಪಡೆದಿಲ್ಲ. ಹಿಂಭಾಗದ ಡಿಸೈನ್ ನಲ್ಲಿ, ಫೇಸ್‌ಲಿಫ್ಟ್ ಆಗಿರುವ SUV ಯು ಮುಂಭಾಗದಲ್ಲಿ ಇರುವಂತೆಯೇ ತಲೆಕೆಳಗಾದ L-ಆಕಾರದ ಸಿಗ್ನೇಚರ್‌ನೊಂದಿಗೆ ಕನೆಕ್ಟೆಡ್ LED ಟೈಲ್‌ಲ್ಯಾಂಪ್‌ಗಳನ್ನು ಪಡೆದಿದೆ. ಇದರ ಹಿಂಭಾಗದ ಬಂಪರ್ ಅನ್ನು ಕೂಡ ರೀಡಿಸೈನ್ ಮಾಡಲಾಗಿದೆ ಮತ್ತು ಇದರಲ್ಲಿ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಕೂಡ ನೀಡಲಾಗಿದೆ.
ಇದನ್ನು ಕೂಡ ಓದಿ: ಟಾಟಾ ಪಂಚ್ EV ಇಂಟೀರಿಯರ್ ಅನ್ನು ಬಹಿರಂಗಪಡಿಸಲಾಗಿದೆ, ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಸ್ ಮತ್ತು ಅಪ್ಡೇಟ್ ಆಗಿರುವ ಸೆಂಟರ್ ಕನ್ಸೋಲ್ ಅನ್ನು ಪಡೆದಿದೆ
-
ನಿಮ್ಮ ಬಾಕಿ ಇರುವ ಚಲನ್ ಅನ್ನು ಪರಿಶೀಲಿಸಿ
-
ಉಪಯೋಗಿಸಿದ ಕಾರಿನ ಮೌಲ್ಯಮಾಪನ
ಹೊಸ ಕ್ಯಾಬಿನ್ ಮತ್ತು ಫೀಚರ್ ಗಳು
2024 ಹ್ಯುಂಡೈ ಕ್ರೆಟಾ ತನ್ನ ಒಳಭಾಗದಲ್ಲಿ, ಸಂಪೂರ್ಣವಾಗಿ ರಿವೈಸ್ ಆಗಿರುವ ಡ್ಯಾಶ್‌ಬೋರ್ಡ್ ಅನ್ನು ಪಡೆದಿದೆ, ಇದು ಈಗ ಡ್ಯುಯಲ್ ಇಂಟಿಗ್ರೇಟೆಡ್ ಸ್ಕ್ರೀನ್ ಸೆಟಪ್ ಅನ್ನು ಹೊಂದಿದೆ (10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ). ಹ್ಯುಂಡೈ ಈಗ, ಕಿಯಾ ಸೆಲ್ಟೋಸ್‌ನಲ್ಲಿ ಇರುವ ಡ್ಯುಯಲ್-ಝೋನ್ ಫಂಕ್ಶಾನಾಲಿಟಿಯ (ಮೊದಲ ಬಾರಿಗೆ ನೀಡಲಾಗಿದೆ) ಟಚ್-ಎನೇಬಲ್ ಆಗಿರುವ ಕಂಟ್ರೋಲ್ ಗಳೊಂದಿಗೆ ಹೊಸ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಕೂಡ ಒದಗಿಸುತ್ತಿದೆ. ಪ್ಯಾಸೆಂಜರ್ ಬದಿಯಲ್ಲಿರುವ ಡ್ಯಾಶ್‌ಬೋರ್ಡ್‌ನ ಟಾಪ್ ಸೆಕ್ಷನ್ ಈಗ ಪಿಯಾನೋ ಬ್ಲ್ಯಾಕ್ ಪ್ಯಾನೆಲ್ ಅನ್ನು ಒಳಗೊಂಡಿದೆ, ಮತ್ತು ಅದು ಸೈಡ್ AC ವೆಂಟ್ ಅನ್ನು ಕವರ್ ಮಾಡುತ್ತದೆ.
ಫೀಚರ್ ಗಳ ಕುರಿತು ನೋಡುವುದಾದರೆ, 2024 ಕ್ರೆಟಾವು 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, 8-ವೇ ಪವರ್-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಹೊಂದಿದೆ. ಇದರ ಸುರಕ್ಷತಾ ಕಿಟ್‌ನಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಮತ್ತು 19 ಲೆವೆಲ್-2 ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಇವೆ, ಇವೆಲ್ಲವುಗಳ ಪರಿಚಯದೊಂದಿಗೆ ಈಗ ಸುರಕ್ಷತಾ ಮಟ್ಟವನ್ನು ಇನ್ನಷ್ಟು ಹೆಚ್ಚಿಸಲಾಗಿದೆ.
ಪವರ್ಟ್ರೇನ್ ಆಯ್ಕೆಗಳು
ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್‌ನಲ್ಲಿ ಅದರ ಸ್ಥಗಿತಗೊಳ್ಳುತ್ತಿರುವ ಹಳೆಯ ಮಾಡೆಲ್ ನ ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್ ಆಯ್ಕೆಗಳನ್ನು ಉಳಿಸಿಕೊಂಡಿದೆ: 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (115 PS / 144 Nm) - ಇದು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ CVT ಜೊತೆಗೆ ಲಭ್ಯವಿದೆ, ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ (116 PS / 250 Nm) - ಇದನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಫೇಸ್‌ಲಿಫ್ಟ್‌ನೊಂದಿಗೆ, ಹ್ಯುಂಡೈ ತನ್ನ SUV ಅನ್ನು ಈಗ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 PS / 253 Nm) ಆಯ್ಕೆಯೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ಗೆ ಜೋಡಿಸುತ್ತಿದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
2024 ಹ್ಯುಂಡೈ ಕ್ರೆಟಾ ಬೆಲೆಯು 11 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಇದು ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ಹೋಂಡಾ ಎಲಿವೇಟ್‌ಗಳಂತಹ ಕಾರುಗಳೊಂದಿಗೆ ಸ್ಪರ್ಧಿಸಲಿದೆ.
ಇನ್ನಷ್ಟು ಓದಿ: ಕ್ರೆಟಾ ಆಟೋಮ್ಯಾಟಿಕ್
0 out of 0 found this helpful