Login or Register ಅತ್ಯುತ್ತಮ CarDekho experience ಗೆ
Login

Hyundai Creta N Line ಬಣ್ಣ ಆಯ್ಕೆಗಳ ವಿವರ

published on ಮಾರ್ಚ್‌ 14, 2024 10:02 pm by rohit for ಹುಂಡೈ ಕ್ರೇಟಾ ಎನ್ ಲೈನ್

ಕ್ರೆಟಾ ಎನ್ ಲೈನ್ ಎರಡು ಹೊಸ ವಿಶೇಷ ಪೇಂಟ್ ಆಯ್ಕೆಗಳನ್ನು ಪಡೆಯುತ್ತದೆ, ಅದನ್ನು ನಾವು ರೆಗುಲರ್‌ ಕ್ರೆಟಾ ಎಸ್‌ಯುವಿಯೊಂದಿಗೆ ಹೊಂದಲು ಸಾಧ್ಯವಿಲ್ಲ

  • ಕ್ರೆಟಾ ಎನ್ ಲೈನ್ ಭಾರತದಲ್ಲಿ ಹುಂಡೈನ ಮೂರನೇ ಎನ್ ಲೈನ್ ಮೊಡೆಲ್‌ ಆಗಿದೆ.
  • ಆಫರ್‌ನಲ್ಲಿರುವ ಮೊನೊಟೋನ್ ಬಣ್ಣಗಳು: ಟೈಟಾನ್ ಗ್ರೇ ಮ್ಯಾಟ್, ಅಬಿಸ್ ಬ್ಲ್ಯಾಕ್ ಮತ್ತು ಅಟ್ಲಾಸ್ ವೈಟ್.
  • ಡ್ಯುಯಲ್-ಟೋನ್ ಛಾಯೆಗಳು: ಥಂಡರ್ ಬ್ಲೂ, ಶ್ಯಾಡೋ ಗ್ರೇ ಮತ್ತು ಅಟ್ಲಾಸ್ ವೈಟ್, ಎಲ್ಲಾ ಬ್ಲ್ಯಾಕ್‌ ರೂಫ್‌ನೊಂದಿಗೆ.
  • 6-ಸ್ಪೀಡ್ ಮ್ಯಾನುಯಲ್‌ ಮತ್ತು 7-ಸ್ಪೀಡ್ ಡಿಸಿಟಿ ಆಯ್ಕೆಗಳೊಂದಿಗೆ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿದೆ.
  • ಬೋರ್ಡ್‌ನಲ್ಲಿರುವ ವೈಶಿಷ್ಟ್ಯಗಳಲ್ಲಿ ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್, 10.25-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು ಮತ್ತು ADAS ಸೇರಿವೆ.
  • ಭಾರತದಾದ್ಯಂತ ಇದರ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳು 16.82 ಲಕ್ಷ ರೂ.ನಿಂದ 20.30 ಲಕ್ಷ ರೂ.ವರೆಗೆ ಇದೆ.

ಭಾರತದಲ್ಲಿ ಹುಂಡೈ ಕ್ರೆಟಾ ಎನ್ ಲೈನ್‌ನ ಬೆಲೆಗಳು ಮತ್ತು ಬಣ್ಣಗಳ ಸಂಪೂರ್ಣ ಪಟ್ಟಿಯನ್ನು ಇದೀಗ ಬಹಿರಂಗಪಡಿಸಲಾಗಿದೆ. ಇದು i20 N ಲೈನ್ ಮತ್ತು ವೆನ್ಯೂ N ಲೈನ್ ಅನ್ನು ಅನುಸರಿಸಿ ಭಾರತದಲ್ಲಿ ಹ್ಯುಂಡೈನ ಮೂರನೇ N ಲೈನ್ ಕೊಡುಗೆಯಾಗಿದೆ. ನಿಮಗಾಗಿ ಕ್ರೆಟಾ ಎನ್ ಲೈನ್‌ ಅನ್ನು ಬುಕ್ ಮಾಡಲು ನೀವು ಯೋಜಿಸುತ್ತಿದ್ದರೆ, ಹ್ಯುಂಡೈ ಕ್ರೆಟಾದ ಸ್ಪೋರ್ಟಿಯರ್ ಆವೃತ್ತಿಯಲ್ಲಿ ಲಭ್ಯವಿರುವ ಆರು ಬಣ್ಣಗಳ ಆಯ್ಕೆಗಳು ಇವು:

ಮೊನೊಟೋನ್ ಆಯ್ಕೆಗಳು

ಟೈಟಾನ್ ಗ್ರೇ ಮ್ಯಾಟ್

  • ಆಬೀಸ್‌ ಬ್ಲ್ಯಾಕ್‌

  • ಅಟ್ಲಾಸ್ ವೈಟ್

ಡ್ಯುಯಲ್-ಟೋನ್ ಆಯ್ಕೆಗಳು

  • ಆಬೀಸ್‌ ಬ್ಲ್ಯಾಕ್‌ ರೂಫ್‌ನೊಂದಿಗೆ ಥಂಡರ್ ಬ್ಲೂ

  • ಆಬೀಸ್‌ ಬ್ಲ್ಯಾಕ್‌ ರೂಫ್‌ನೊಂದಿಗೆ ಶ್ಯಾಡೋ ಗ್ರೇ

ಆಬೀಸ್‌ ಬ್ಲ್ಯಾಕ್‌ ರೂಫ್‌ನೊಂದಿಗೆ ಅಟ್ಲಾಸ್ ವೈಟ್

ಕಾರು ತಯಾರಕರು ಮ್ಯಾಟ್ ಫಿನಿಶ್ ಆಯ್ಕೆಯೊಂದಿಗೆ ಜನಪ್ರಿಯ ಮೊಡೆಲ್‌ ಅನ್ನು ನೀಡುತ್ತಿರುವುದು ಇದೇ ಮೊದಲು. ಕ್ರೆಟಾ ಎನ್ ಲೈನ್‌ನ ಕೆಲವು ಕಲರ್‌ಗಳನ್ನು ರೆಗುಲರ್‌ ಮೊಡೆಲ್‌ಗಳಲ್ಲಿಯೂ ನೀಡಲಾಗಿದೆ. ಉದಾಹರಣೆಗೆ ಅಬಿಸ್ ಬ್ಲ್ಯಾಕ್ ಮತ್ತು ಅಟ್ಲಾಸ್ಟ್ ವೈಟ್ ವಿತ್ ಅಬಿಸ್ ಬ್ಲ್ಯಾಕ್ ರೂಫ್. ಅಬಿಸ್ ಬ್ಲ್ಯಾಕ್ ರೂಫ್ ಪೇಂಟ್ ಆಯ್ಕೆಯೊಂದಿಗೆ ಥಂಡರ್ ಬ್ಲೂ ಕ್ರೆಟಾ ಎನ್ ಲೈನ್‌ ನಲ್ಲಿ ಎಕ್ಸ್‌ಕ್ಲೂಸಿವ್‌ ಆಗಿದೆ. ಆದರೆ ಇತರ ಎನ್ ಲೈನ್ ಮೊಡೆಲ್‌ಗಳಲ್ಲಿಯು ಕಂಡುಬರುತ್ತದೆ. ಈ ಎಲ್ಲಾ ಬಣ್ಣದ ಆಯ್ಕೆಗಳು ಸ್ಪೋರ್ಟಿಯರ್-ಲುಕಿಂಗ್ ಹ್ಯುಂಡೈ ಎಸ್‌ಯುವಿಯ ಯ ಹೊರಭಾಗದ ಸುತ್ತಲೂ ಕೆಂಪು ಎಕ್ಸೆಂಟ್‌ಗಳನ್ನು ಪಡೆಯುತ್ತವೆ.

ಕ್ರೆಟಾ ಎನ್ ಲೈನ್ ಪವರ್‌ಟ್ರೇನ್

ವಿಶೇಷತೆ

1.5-ಲೀಟರ್ ಟರ್ಬೊ-ಪೆಟ್ರೋಲ್

ಪವರ್‌

160 ಪಿಎಸ್

ಟಾರ್ಕ್

253 ಎನ್ಎಂ

ಟ್ರಾನ್ಸ್‌ಮಿಷನ್‌

6-ಸ್ಪೀಡ್ ಮ್ಯಾನುಯಲ್‌, 7-ಸ್ಪೀಡ್ ಡಿಸಿಟಿ*

ಘೋಷಿಸಿರುವ ಇಂಧನ ದಕ್ಷತೆ

ಪ್ರತಿ ಲೀ.ಗೆ 18 ಕಿ.ಮೀ, ಪ್ರತಿ ಲೀ.ಗೆ 18.2 ಕಿ.ಮೀ

*DCT- ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌

ಸಂಬಂಧಿತ: Hyundai Creta N Line ವರ್ಸಸ್‌ ಟರ್ಬೊ-ಪೆಟ್ರೋಲ್ ಎಂಜಿನ್‌ ಹೊಂದಿರುವ ಪ್ರತಿಸ್ಪರ್ಧಿಗಳು: ಇಂಧನ ದಕ್ಷತೆಯ ಹೋಲಿಕೆ

ಕ್ರೆಟಾ ಎನ್ ಲೈನ್ ವೈಶಿಷ್ಟ್ಯಗಳು ಮತ್ತು ಸುರಕ್ಷತಾ ಪ್ಯಾಕೇಜ್‌

ಹುಂಡೈ ಕ್ರೆಟಾ ಎನ್ ಲೈನ್ ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು (ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಇನ್‌ಸ್ಟ್ರುಮೆಂಟೇಶನ್‌ಗಾಗಿ), ಪನರೋಮಿಕ್‌ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಇದರ ಸುರಕ್ಷತಾ ಜಾಲವು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ.

ಇದನ್ನು ಸಹ ಓದಿ: Hyundai Creta N Line ವರ್ಸಸ್ Hyundai Creta: ವ್ಯತ್ಯಾಸಗಳ ವಿವರ ಇಲ್ಲಿದೆ

ಕ್ರೆಟಾ ಎನ್ ಲೈನ್ ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

ಭಾರತದಾದ್ಯಂತ ಹ್ಯುಂಡೈ ಕ್ರೆಟಾ ಎನ್ ಲೈನ್‌ನ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳು 16.82 ಲಕ್ಷ ರೂ.ನಿಂದ 20.30 ಲಕ್ಷ ರೂ.ವರೆಗೆ ಇದೆ. ಇದು ಕಿಯಾ ಸೆಲ್ಟೋಸ್ ಜಿಟಿಎಕ್ಸ್+ ಮತ್ತು ಎಕ್ಸ್-ಲೈನ್, ಫೋಕ್ಸ್‌ವ್ಯಾಗನ್ ಟೈಗುನ್ ಜಿಟಿ ಲೈನ್ ಮತ್ತು ಸ್ಕೋಡಾ ಕುಶಾಕ್ ಮತ್ತು ಎಂಜಿ ಆಸ್ಟರ್‌ನ ಟಾಪ್‌-ಎಂಡ್‌ ವೇರಿಯೆಂಟ್‌ಗಳ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ.

ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾ ಎನ್ ಲೈನ್ ಆನ್‌ರೋಡ್‌ ಬೆಲೆ

r
ಅವರಿಂದ ಪ್ರಕಟಿಸಲಾಗಿದೆ

rohit

  • 44 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ ಕ್ರೆಟಾ n Line

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ